ಶಿವಪ್ಪ ಕಾಯೋ ತಂದೆ!
ಚಿತ್ರ
ದಿಗಿಲಿಂ ಬೇಡಿರಲಾ ಭಗೀರಥ ಮೊದಲ್ ಶ್ರೀವಿಷ್ಣು ಪಾದಂಗಳಿಂ
ಮುಗಿಲಿಂ ಬೀಳ್ವೊಡೆ ಗಂಗೆಯಾರ್ಭಟವನುಂ ಸಂತೈಸುತುಂ
ತಾಳ್ಮೆಯಿಂ ಸೊಗದೊಳ್ ಮಾಣಿಸುತಾಕೆಯಂ ನಲುಮೆಯಿಂ ಕಾಪಿಟ್ಟೆ ಭೂಲೋಕಮಂ
ಮಗುವೆಂದೆನ್ನುತಲೆನ್ನ ಕಾಯೊ ಶಿವನೇ ತಪ್ಪೆಲ್ಲಮಂ ಮನ್ನಿಸಿ!
-ಹಂಸಾನಂದಿ
ಕೊ: ಶಿವರಾತ್ರಿಯ ಸಮಯಕ್ಕೆ, ಹಿಂದೆ ಬರೆದಿದ್ದ ಒಂದು ಪದ್ಯವನ್ನು ಸ್ವಲ್ಪ ಬದಲಿಸಿ ಬರೆದಿದ್ದೇನೆ
ಚಿತ್ರ ಕೃಪೆ: ಕೆ. ವೆಂಕಟಾಚಾರಿ ಅವರ ವರ್ಣ ಚಿತ್ರ
http://hinduism.about.com/od/lordshiva/ss/http://hinduism.about.com/od/l...
Rating
Comments
ಉ: ಶಿವಪ್ಪ ಕಾಯೋ ತಂದೆ!
ಶಿವನಿಗೆ ಬಿನ್ನಹದ ರೀತಿ ಮುದ ನೀಡುತ್ತದೆ.