ಶ್ರೀಕೃಷ್ಣದೇವರಾಯನೂ ಪು.ದಾಸರೂ

ಶ್ರೀಕೃಷ್ಣದೇವರಾಯನೂ ಪು.ದಾಸರೂ

ಶ್ರೀಕೃಷ್ಣದೇವರಾಯನು ಪುರಂದರದಾಸರನ್ನ ಒಮ್ಮೆ ಭೆಟ್ಟಿಯಾದನಂತೆ . ಆಗ ಅವರು ತಮ್ಮಿಬ್ಬರ ಭಾಗ್ಯವನ್ನು ಹೋಲಿಸಿಕೊಂಡು ಒಂದು ರಚನೆ ಮಾಡಿದರಂತೆ . ಕೃ.ರಾಯನು ನಕ್ಕನಂತೆ . ಆ ರಚನೆ ಇಲ್ಲ್ಲಿದೆ. ( http://haridasa.sampada.net/%E0%B2%A6%E0%B2%BE%E0%B2%B8%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF/%E0%B2%A8%E0%B2%BF%E0%B2%AE%E0%B3%8D%E0%B2%AE-%E0%B2%AD%E0%B2%BE%E0%B2%97%E0%B3%8D%E0%B2%AF-%E0%B2%A6%E0%B3%8A%E0%B2%A1%E0%B3%8D%E0%B2%A1%E0%B2%A6%E0%B3%8B-%E0%B2%A8%E0%B2%AE%E0%B3%8D%E0%B2%AE-%E0%B2%AD%E0%B2%BE%E0%B2%97%E0%B3%8D%E0%B2%AF-%E0%B2%A6%E0%B3%8A%E0%B2%A1%E0%B3%8D%E0%B2%A1%E0%B2%A6%E0%B3%8A/1193 ) ಇದು ಡಿಜಿಟಲ್ ಲೈಬ್ರರಿಯಿಂದ ನಾನು ಇಳಿಸಿಕೊಂಡ ಪುರಂದರ ಪರಿಮಳ ಅನ್ನೋ ಪುಸ್ತಕದಲ್ಲಿ ಸಿಕ್ತು . ಆ ಪುಸ್ತಕದಲ್ಲಿ ಈತನಕ ನಾನು ಓದಿದ್ದರಲ್ಲಿ ನನಗೆ ಹೊಸದಾಗಿ ತಿಳಿದುಬಂದ ಕೆಲವು ವಿಷಯಗಳು ಹೀಗಿವೆ . ಪು.ದಾಸರು ನಾರದರ ಅವತಾರ ಎಂಬ ನಂಬಿಗೆ ಇದೆಯಂತೆ . ಅವರು ನಾಲ್ಕು ಲಕ್ಷ ೭೫ ಸಾವಿರ ರಚನೆಗಳನ್ನ್ನು ತಮ್ಮ ಸುದೀರ್ಘ ಜೀವಿತಾವಧಿಯಲ್ಲಿ ಮಾಡಿದರು . ಅದರ ಬ್ರೆಕ್-ಅಪ್ ಅನ್ನ ಒಂದು ರಚನೆಯಲ್ಲಿ ಕೊಟ್ಟಿದ್ದಾರೆ. ( ಯಾರೋ ಅದು ಸಾಧ್ಯವೇ ಅಂತ ಆಶ್ಚರ್ಯ / ಅನುಮಾನ ಪಟ್ಟಿದ್ದರು - ನನಗೆ ಸಾಧ್ಯ ಅಂತ ಅನ್ನಿಸುತ್ತದೆ . ಇರಲಿ) ಅಷ್ಟಾದರೂ ಅವರಿಗೆ ತೃಪ್ತಿ ಇರಲಿಲ್ಲವಂತೆ. ನಾನು ಇನ್ನೂ 25 ಸಾವಿರ ರಚನೆ ಮಾಡುವದಿತ್ತು . ಅವನ್ನ ನೀನು ಮಾಡು ಅಂತ ಮಗನಿಗೆ ಕೊನೆಗಾಲದಲ್ಲಿ ಹೇಳಿದರಂತೆ. ಆ ಮಗನು ಮತ್ತೊಂದು ಹುಟ್ಟಿನಲ್ಲಿ ವಿಜಯದಾಸರಾಗಿ ೨೫೦೦೦ ಸಾವಿರ ರಚನೆ ಮಾಡಿದರಂತೆ. ಆಕಾಲದಲ್ಲೂ ಭಾಷೆಯ ಬಗ್ಗೆ ಜಗಳ ಇತ್ತಂತೆ . ಪು.ದಾಸರ ಕನ್ನಡ ಪುಸ್ತಕವನ್ನ ( 'ಒಬ್ಬ ಚಿನಿವಾಲ ಬರೆದದ್ದು , ಅದೂ ಕನ್ನಡ !' ) ಸಂಸ್ಕೃತದ ಸರ್ವಮೂಲಾದಿ ಗ್ರಂಥ ಜತೆ ಇಡಬಹುದೇ ? ಅಂತ ! ಅಂದ ಹಾಗೆ ಹರಿದಾಸ.ಇನ್ ಗೆ ಸೇರಿಸಲು ಉಳಿದಿರೋ ಪು.ದಾಸರ ರಚನೆಗಳು ಒಂದ್ ಮೂವತ್ತು ಮಾತ್ರ . ಸೊಲ್ಪ ಬೇಜಾರಾಗಿ ನಿಧಾನ ಆಗಿದೆ . ಕೆಲವಂತೂ ತುಂಬಾ ದೊಡ್ಡವು . ಆದರೂ ಪರವಾಗಿಲ್ಲ . ಹಿಡಿದ ಕೆಲಸವನ್ನ ಮಾಡಿ ಮುಗಿಸ್ತೀನಿ. ಇದರಿಂದಾಗಿ ಹಿಂದೆ ಬಿದ್ದಿದ್ದ ಪುಸ್ತಕ ಓದನ್ನ ಮತ್ತೆ ಶುರು ಹಚ್ಕೊಂಡಿದ್ದೀನಿ ! ಭರಮಪ್ಪನ ಭೂತ ಅನ್ನೋ ಪ್ರಾರಂಭಕಾಲದ ಪತ್ತೇದಾರಿ ಪುಸ್ತಕ ಒಂದು ಡಿಜಿಟಲ್ ಲೈಬ್ರರಿಯಲ್ಲಿ ಸಿಕ್ಕಿತು . ಅದನ್ನೂ ಓದ್ತಿದೀನಿ . ಅದು ಶ್ರೀರಂಗರದು . ಜೀ.ಪಿ.ರಾಜರತ್ನಂ ಅವರ ಬೌದ್ಧಸಾಹಿತ್ಯದ 'ಹತ್ತು ಮಕ್ಕಳ ತಾಯಿ' ಅನ್ನೋ ಒಂದು ಒಳ್ಳೇ ಪುಸ್ತಕವನ್ನೂ ಓದುತ್ತಿದ್ದೀನಿ. ಡಿಜಿಟಲ್ ಲೈಬ್ರರಿಯಿಂದ ಓದಬೇಕಂತ ಇಳಿಸಿಕೊಂಡಿರೋದು ಮೂವತ್ತು ಪುಸ್ತಕ ಬಾಕಿ ಇವೆ . ದಿನಕ್ಕೊಂದು ಪುಸ್ತಕ ಓದಬೇಕಂತ ಅಂದ್ಕೊಂಡಿರೋ ನಾನು , ಹರಿದಾಸ.ಇನ್ ಗೆ ಪು.ದಾಸರ ಹಾಡು ಸೇರಿಸೋ ಭರಾಟೆ ನಡುವೆಯೂ ಕಳೆದ ಇಪ್ಪತ್ತು ದಿನದಲ್ಲಿ ಹತ್ತು ಪುಸ್ತಕ ಓದಿದೀನಿ ಅಂದರೆ ಪರವಾಗಿಲ್ಲ ಅಲ್ಲವೇ . ಮಾರ್ಚ್ ಮೂರರ ನಂತರ ಓದಿದ ಪುಸ್ತಕಗಳ ಬಗ್ಗೆ ಬೇಗ ಬರೀತೀನಿ .

Rating
No votes yet