"ಸಂಗಾತಿ"
ಚಿತ್ರ
ಎಲ್ಲೋ ಹುಟ್ಟಿದೆ ನೀನು ನನಗಾಗಿ,
ಇಬ್ಬರು ಒಂದಾದೆವು ಇಂದು ಈ ಜನ್ಮದಲ್ಲಿ,
ನಮ್ಮಿಬ್ಬರ ಬಂಧನ ಜನ್ಮ ಜನ್ಮದ ಅನುಬಂಧ ,
ಈ ಜನ್ಮದಲ್ಲಿ ಆಯಿತು ಮದುವೆಯ ಬಂಧನ,
ಸಂಗಾತಿ ನೀ ಆಗು ಮುಸ್ಸಂಜೆಯ ತಂಪಿನ ಹಾಗೆ,
ಸಂಗಾತಿ ನೀ ಇರು ಎಂದೂ ಬಾಡದ ಹೂವಿನ ಹಾಗೆ ,
ಸಂಗಾತಿ ನಿನ್ನ ಮಾತು ಬಲು ಚಂದ,
ಸಂಗಾತಿ ನೀ ಹೇಗೆ ಇದ್ದರು ಚಂದ,
ಸಂಗಾತಿ ನೀ ಇರದೆ ಜೀವನ ನಡೆಯುವುದು ಹೇಗೆ ?
ಸಂಗಾತಿ ನೀ ನೊಂದರೆ ಆಗುವುದು ಹೃದಯಕ್ಕೆ ನೋವು,
ಸಂಗಾತಿ ನೀ ನಗುತ್ತಿದ್ದರೆ ನನ್ನ ಮನಸ್ಸಿಗೂ ನಲಿವು,
ನನ್ನ ಕನಸನ್ನು ಆವರಿಸಿರುವ ಸ್ವಪ್ನ ಸುಂದರಿ ನೀನು,
ನನ್ನ ಹೃದಯಮಂದಿರದ ಭುವನ ಸುಂದರಿ ನೀನು,
ಈ ನಮ್ಮ ಸಂಸಾರದ ಗಾಲಿ ತಿರಗಲು ಬೇಕು ,ಈ ಸಂಗಾತಿ,
ಪ್ರತಿ ಜನ್ಮದಲ್ಲಿಯೂ ಆಗು ನೀ ನನ್ನ ಸಂಗಾತಿ.
Rating
Comments
ಉ: "ಸಂಗಾತಿ"
ಶುಭಾಶಯಗಳು!
In reply to ಉ: "ಸಂಗಾತಿ" by kavinagaraj
ಉ: "ಸಂಗಾತಿ"
ನಮಸ್ಕಾರಗಳು ಸರ್,
ತಮಗೂ ಶುಭಾಷಯಗಳುಲ.