ಸಂಗಾತಿ

ಸಂಗಾತಿ

ಮುಸುಕಿದ ಮಬ್ಬಿನಲಿ ಬೀಸುತಿದೆ ತಂಗಾಳಿ,
ಹುಚ್ಚೆದ್ದ ಮನಕಿಲ್ಲಿ ಇಡುತಲಿದೆ ಕಚಗುಳಿ,
ಮನಸಲ್ಲಿ ನೂರಾರು ಭಾವನೆಗಳರಲಿ,
ಏಕಾಂತವೆ ತುಂಬಿದೆ, ನೀನಿಲ್ಲದೆ ಸಂಗಾತಿ.

ಕಾಮನ ಬಿಲ್ಲೇರಿ ಆಡುವ ಬಾ ಜೋಕಾಲಿ,
ಕಟ್ಟುವ ಮನೆಯೊಂದ ಮೋಡಗಳ ಮರೆಯಲ್ಲಿ,
ಆಗಸದ ತುಂಬೆಲ್ಲ ಕುಣಿಯೋಣ ಹಾಡುತಲಿ,
ಒಣ ಆಸೆಯೇ ತುಂಬಿಹೊಯ್ತು, ನೀನಿಲ್ಲದೆ ಸಂಗಾತಿ.

ಹೃದಯಕೆ ಮೊಳೆ ಹೊಡೆದು, ನಿನ್ನ ಚಿತ್ರಪತವನೆ ತೂಗಿ.
ಆಡುವ ಉಸಿರೆಲ್ಲ ನಿನ್ನ ಹೆಸರನೆ ಕೂಗಿ,
ಬಿದ್ದೆನಾ ಪ್ರೆಮಸಾಗರದಲಿ, ನಿನ್ನ ಹುಡುಕಹೋಗಿ,
ಈ ಬದುಕೆ ಇಲ್ಲದಂತೆ, ನೀನಿಲ್ಲದೆ ಸಂಗಾತಿ.

ಭಾವನೆಯೆ ದಾರ ಹೊಸೆದು ನೆನೆಪುಗಳೆಲ್ಲವ ಪೋಣಿಸಿ,
ಗುಲಾಬಿಯ ದಳಗಳಲಿ ನಿನ್ನ ರೂಪವನ್ನು ಕೆತ್ತಿಸಿ,
ಎದೆಯ ಗುಡಿಯೊಳಗೆ ಆ ಪ್ರತಿಮೆಯ ಕುಳ್ಳರಿಸಿ,
ಕಾಯುತಲೆ ಕುಳಿತಿರುವೆ, ನೀ ಬಾರೆ ಸಂಗಾತಿ.

Rating
No votes yet