'ಸಂಗೀತ ಸ ರಿ ಇ ಲ ಪಾ'
ನಿರೂಪಕಿ : “ನಿಮ್ಮೆಲ್ಲರ ಅಚ್ಚುಮೆಚ್ಚಿನ ಕಾರ್ಯಕ್ರಮ-‘ಬ್ಲೇಡ್ ಬ್ಯಾಂಕ್’ ನಡೆಸಿ ಕೊಡುವ
‘ಸಂಗೀತ ಸ ರಿ ಇ ಲ್ಲ ಪ್ಪಾ’ ಸ್ಪರ್ಧೆಗೆ ಸ್ವಾಗತ, ಸ್ವಾಗತ, ಸ್ವಾಗತ.
ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಬ್ಲೇಡ್ ಬ್ಯಾಂಕಲ್ಲಿ ಕಳೆಯಿರಿ ಎಂದು ಹೇಳುತ್ತಾ, ಈದಿನದ ೩ ಜನಪ್ರಿಯ ಜಡ್ಜ್‌ಗಳನ್ನು ಆಹ್ವಾನಿಸುತ್ತಿದ್ದೇನೆ... ..
ಈಗ ಸ್ಪರ್ಧಿ ನಂ. ೧ .. .. .."
ಸ್ಪರ್ಧಿ ನಂ ೧ ಬಂದು ಹಾಡಲು ಸುರುಮಾಡುವರು.
ಹಾಡು ಅರ್ಧ ಸಾಗುತ್ತಿರುವಾಗಲೇ..
ಜಡ್ಜ್೧ : ‘ಕ್ಷಮಿಸಿ. ಯಾವ ಒಂದು ಕಾರ್ಯಕ್ರಮ ಬಾಹುಳ್ಯದಿಂದಾಗಿ, ಈ ನಿಮ್ಮ ಹಾಡನ್ನು ಪೂರ್ತಿ ಕೇಳಲು ಸಾಧ್ಯವಾಗುತ್ತಿಲ್ಲ. ನಿಮ್ಮ ಹಾಡು ಕೇಳುವಾಗಲೇ ನಿಮಗೆ ಬಡಜನರ ಬಗ್ಗೆ ಇರುವ ಯಾವ ಒಂದು ಪ್ರೀತಿಯ ಅರಿವಾಯಿತು.ನನ್ನ ಮುಂದಿನ ಗ್ರಾಮವಾಸ್ತವ್ಯವನ್ನು ನಿಮ್ಮ ಮನೆಯಲ್ಲಿಯೇ ಮಾಡುವೆ.ಆಗ ಈ ಹಾಡನ್ನು ಪೂರ್ತಿಗೊಳಿಸಿ.
ನಿಮಗೆ ನಾನು ಆ...’
ನಿರೂಪಕಿ : 'ಟೆನ್ points.(ಡ್ಯಾನ್ಸ್ ಮಾಡುವಳು) ಈಗ ಜಡ್ಜ್ ೨ ಅವರು ತಮ್ಮ ಅಭಿಪ್ರಾಯ ತಿಳಿಸುವರು..’
ಜಡ್ಜ್ ೨ : ‘ಳ್‌ಬಕ್ ಡಬ್ ಬಳಕ್ ಬಳಬಕ್..ಬಳಬಳ (ಕಣ್ಣೀರು) ಳಬಡಕಾಡ (ಕಣ್ಣೀರು).. .. .. ..’ ಕೊನೆಯಲ್ಲಿ ಕೈ ಎತ್ತಿದರು.
ನಿರೂಪಕಿ : (ಎನೂ ಅರ್ಥವಾಗದಿದ್ದರೂ ಎತ್ತಿದ ಕೈಯ ಬೆರಳುಗಳನ್ನು ಎಣಿಸಿ) ‘೫ points’ ಎಂದಳು.
“ಈಗ ಜಡ್ಜ್ ೩ ತಮ್ಮ ಅಭಿಪ್ರಾಯವನ್ನು ತಿಳಿಸಬೇಕು...
ಸರ್..
...
ಸಾರ್..
...
..ರಿಗೆ ಜಯವಾಗಲಿ..
ಎಲ್ಲರೂ ನನ್ನೊಂದಿಗೆ ಜೋರಾಗಿ ಹೇಳಿ ‘... ರಿಗೆ ಜಯವಾಗಲೀ’..”
ಕೂಡಲೇ ಜಡ್ಜ್ ೩ ಕಣ್ಣುತೆರೆಯದಿದ್ದರೂ ಕೈಎತ್ತಿದರು.
ನಿರೂಪಕಿ : (ಬೆರಳೆಣಿಸಿ) ‘೨ points. ಒಟ್ಟು ೧೭ points. ಸ್ಪರ್ಧಿ ನಂ.೧ಗೆ ಅಭಿನಂದನೆಗಳು. ಬಿಡುವಿಲ್ಲದ ಕಾರ್ಯಕ್ರಮದ ನಡುವೆ ಬಿಡುವು ಮಾಡಿಕೊಂಡು
ಬಂದ ೩ ಜಡ್ಜ್‌ಗಳಿಗೂ ಅಭಿನಂದನೆಗಳು. ಮುಂದಿನ ಹಾಡಿಗೆ ಜಡ್ಜ್‌ಗಳಾಗಿ ಬರುವವರು ಸಂಪದ ಬಳಗದ ೩ ಗಣ್ಯರು. ಅವರು...ಅವರೂ...
ಯಾರೆಂದು ಕುತೂಹಲವಾ..? ನಿರೀಕ್ಷಿಸಿ..
ತಾವೆಲ್ಲಾ ಎಲ್ಲೂ ಹೋಗಬೇಡಿ..
ಈಗ ಒಂದು ಸಣ್ಣ ಬ್ರೇಕ್..