ಸಬ್ಬಕ್ಕಿ/ಶಾಬಕ್ಕಿ/ಸೀಮೆಅಕ್ಕಿ ತಯಾರಿಕೆ
ಕೆಲದಿನಗಳ ಹಿಂದೆ [http://vikasavada.blogspot.com/2008/07/blog-post_17.html|ನನ್ನ ಬ್ಲಾಗ್] ನಲ್ಲಿ ’ಸಬ್ಬಕ್ಕಿ’ ಬಗ್ಗೆ ಬರೆದಿದ್ದೆ. ಬಹಳಷ್ಟು ಜನರಿಗೆ ಈ ವಿಷಯ ಗೊತ್ತಿರಲಿಲ್ಲವೆಂದು ಅದಕ್ಕೆ ಬಂದ ಪ್ರತಿಕ್ರಿಯೆಗಳಿಂದ ತಿಳಿಯಿತು. ಆದ್ದರಿಂದ ಸಂಪದದ ಸದಸ್ಯರೊಡನೆಯೂ ಈ ಮಾಹಿತಿ ಹಂಚಿಕೊಳ್ಳುತ್ತಿದ್ದೇನೆ.
ಸಬ್ಬಕ್ಕಿ ಮತ್ತು ಸಬ್ಬಕ್ಕಿ ತಯಾರಿಕೆಯ ಮಾಹಿತಿಗಳು ಇಂತಿವೆ. ಗೊತ್ತಿಲ್ಲದವರು ತಿಳಿದುಕೊಳ್ಳಿ. ಗೊತ್ತಿದ್ದವರು ತಪ್ಪಿದ್ದರೆ ತಿದ್ದಿ.
ಸಬ್ಬಕ್ಕಿ ತಯಾರಿಸುವುದು ಮರಗೆಣಸಿನಿಂದ.
ಭಾರತದಲ್ಲಿ ೯೫% ಸಬ್ಬಕ್ಕಿಯನ್ನು ತಮಿಳುನಾಡಿನಲ್ಲಿ (ಸೇಲಂನಲ್ಲಿ ಹೆಚ್ಚು) ತಯಾರಿಸಲಾಗುತ್ತದೆ.
ತಯಾರಿಕೆಯ ವಿಧಾನ:
* ಮೊದಲು ರಾಶಿರಾಶಿ ಗೆಣಸುಗಳನ್ನು ತೊಳೆದು ಸಿಪ್ಪೆ ಸುಲಿಯಲಾಗುತ್ತದೆ.
* ನಂತರ ಅವುಗಳನ್ನು crusherಗಳಲ್ಲಿ ಹಿಸುಕಲಾಗುತ್ತದೆ. ಈ crushing ಪ್ರಕ್ರಿಯೆಯಲ್ಲಿ ನಾರಿನ ಭಾಗವು ಬೇರೆಯಾಗುತ್ತದೆ.
* ಹಿಸುಕಿದಾಗ ಬಂದ ಹಾಲಿನಂತ ದ್ರವವನ್ನು ಟ್ಯಾಂಕ್ ಗಳಲ್ಲಿ ಶೇಖರಿಸಿ ೨-೮ ತಾಸಿನವರೆಗೆ settle ಆಗಲು ಬಿಡಲಾಗುತ್ತದೆ.
Settle ಆಗಲು ಬಿಟ್ಟ ಹಾಲಿನಲ್ಲಿ impurityಗಳು ಮೇಲೆ ತೇಲುತ್ತವೆ ಮತ್ತು ಕೆಳಗೆ ಪೇಸ್ಟಿನಂತಹ starch(ಪಿಷ್ಟ,ಹಿಟ್ಟು) ವಸ್ತುವು ಉಳಿಯುತ್ತದೆ.
* ತೇಲುವ ಕೊಳೆ ಇತ್ಯಾದಿಗಳನ್ನು ತೆಗೆದ ನಂತರ ಉಳಿದ ಪೇಸ್ಟನ್ನು ಭಾಗಶಃ ಒಣಗಿಸಿ cakes ಪಡೆಯಲಾಗುತ್ತದೆ.
* ನಂತರ ತೂತುಗಳುಳ್ಳ ಉಕ್ಕಿನ ಹಾಳೆ ಅಥವಾ ಯಂತ್ರಗಳನ್ನು ಬಳಸಿ ಬೇಕಾದ ಗಾತ್ರದಲ್ಲಿ ಸಣ್ಣ ಸಣ್ಣ ಗುಂಡುಗಳ ಆಕಾರಕ್ಕೆ ತರಲಾಗುತ್ತದೆ.
* ಅವುಗಳನ್ನು ೧೦೦ ಡಿಗ್ರಿ ಸೆಲಿಷಿಯಸ್ ಬಿಸಿಯಲ್ಲಿ ೬-೮ ನಿಮಿಷಗಳು ಹುರಿಯಲಾಗುತ್ತದೆ(roasting).
* ಸೂರ್ಯನ ಬೆಳಕಿನಲ್ಲಿ ೮-೧೨ ಗಂಟೆಗಳ ಕಾಲ ಒಣಗಿಸಲಾಗುತ್ತದೆ.
* ಕೊನೆಯದಾಗಿ polishing ಮಾಡಿದ ಮೇಲೆ ಸಬ್ಬಕ್ಕಿ ತಯಾರಾಗುತ್ತದೆ.
Comments
ಉ: ಸಬ್ಬಕ್ಕಿ/ಶಾಬಕ್ಕಿ/ಸೀಮೆಅಕ್ಕಿ ತಯಾರಿಕೆ
ಉ: ಸಬ್ಬಕ್ಕಿ/ಶಾಬಕ್ಕಿ/ಸೀಮೆಅಕ್ಕಿ ತಯಾರಿಕೆ