ಸಮಾಜದ ಇಂದಿನ ರೀತಿ

ಸಮಾಜದ ಇಂದಿನ ರೀತಿ

ನಾನು ತುಂಬಾ ಚಿಕ್ಕವನಿದ್ದಾಗಿನಿಂದ ನೊಡುತ್ತಿದ್ದೀನಿ ಕಾಲ ಬದಲಾವಣೆ ನಮ್ಮ ಮನಸ್ಸಿಗೆ ಗೊತ್ತಿಲ್ಲದಂತೆ ಬದಲಾವಣೆ ಅಗುತ್ತಿದೆ ಅ ಹಿಂದಿನ ಮತ್ತು ಇಂದಿನ ಕಾಲಕ್ಕೆ ಉಡುಗೆ ತೊಡುಗೆ ಭಾವನೆ ಮನಸ್ಸಿನ ಪರಿಕಲ್ಪನೆ ಮಾನವ ಜಗತ್ತಿನ ಹೊಂದಾಣಿಕೆ ಕೇವಲ ಯಂತ್ರದಂತೆ ಬದಲಾಗುತ್ತಿದೆ ನಾವು ಮೊದಲಿನಂತೆ ಎಂದರೆ ನಮ್ಮ ಹಿಂದಿನ ತಲೆಮಾರಿನ ಜೀವನದ ಕಲ್ಪನೆಯನ್ನು ಸಹ ಮಾಡಿಕೊಳ್ಳುವುದು ಅಸಾಧ್ಯ ಎನಿಸುವ ಮಟ್ಟಿಗೆ ಯಾಂತ್ರಿಕ ಪ್ರಪಂಚಕ್ಕೆ ಸೇರಿಕೊಂಡುಬಿಟ್ಟಿದ್ದೇವೆ ಸಮಾಜಿಕ ವ್ಯವಸ್ಟೆ ಮಾನವ ಕೇವಲ ಯಂತ್ರ ಬದಲಾವಣೆಯ ಒಂದು ಭಾಗದಂತೆ ರೂಪದಂತೆ ಕಾಣಿಸುತ್ತಿದೆ ನಾನು ನನ್ನದು ಎನ್ನುವ ಯಾರಿಗೂ ಮಾನವೀಯತೆ ಅದರ ಗಮನ ಸಹ ಇಲ್ಲದಂತೆ ಅಗಿದೆ ಇಲ್ಲಿ ನಾನು ಸಹ ನನ್ನ ಜೀವನದ ಮೆಲುಕು ಹಾಕುತ್ತಿದ್ದರೆ ಇನ್ನೆಲ್ಲಿಯ ಹಳೆಯಕಾಲ ಎಂದು, ಅದರ ಸುಖ ಮರೆಯಲು ಸಾದ್ಯವಿಲ್ಲ ಎಂದು ಕೊರಗಿದ್ದುಂಟು. ಕೇವಲ ಹತ್ತು ವರುಷದಲ್ಲಿ ಎಂಥ ಬದಲಾವಣೆ ಎಲ್ಲವು ಯಂತ್ರಮಯ ,ಬೆಳಕು ಅಗುವುದು ತಿಳಿಯುವುದಿಲ್ಲ ,ಕತ್ತಲಾಗುವುದು ಯಾವಗ ?ಎಂಬ ಅರಿಹು ಅಗುವುದಿಲ್ಲ .ವಾಹ್ ಎಂತಹ ಬದಲಾವಣೆ. ನೀವು ಯಾವಾಗಲಾದರು ಒಮ್ಮೆ ಒತ್ತಡವಿಲ್ಲದೆ ಇರಲು ಸಾದ್ಯವೆ ಎನ್ನುವ ಮಟ್ಟಿಗೆ ಜೀ ವನ ಬದಲಾಗಿ ಅದರೊಟ್ಟಿಗೆ ನಾವು ಸಹ ಒತ್ತಡಕ್ಕೆ ಹೊಂದಿಕೊಂಡು ಜೀವನ ನಡೆಸುವ ಹಂತ ತಲುಪಿ ಮನಸ್ಸನ್ನು ಅದರ ಒತ್ತಡಕ್ಕೆ ನೀಡಿ ಮನದ ನೆಮ್ಮದಿ ಇಲ್ಲದಂತೆ ಯಾಂತ್ರಿಕತೆಯ ಪರಮಾವಧಿ ತಲುಪಿ ಕಂಪಿನ ಜೀವನದಲ್ಲಿ ತಂಪಿಲ್ಲದಂತೆ ಸಹನೆ ಹೊಂದಾಣಿಕೆ ಪ್ರೀತಿ ತ್ಯಾಗ ಮರೆತು ಜೀವನ ನಡೆಸುವ ಮಟ್ಟಿಗೆ ನಮ್ಮ ಜೀವನ ಬದಲಾವಣೆ ಮಾಡಿಕೊಂಡು ಮುಂದುವರಿದ ಇಂಥ ದಿನದಲ್ಲಿ ವೇ ಗವಾಗಿ ಮುಳುಗುತ್ತಿದ್ದೇವೆ ನಮಗೆ ಅರಿವಿಲ್ಲದಂತೆ .

Rating
No votes yet