ಸರ್ಕಾರದ ವಿವೇಚನೆ ಇಲ್ಲದ ಕ್ರಮಗಳು.

ಸರ್ಕಾರದ ವಿವೇಚನೆ ಇಲ್ಲದ ಕ್ರಮಗಳು.

ನಮ್ಮ ಈ ಸರ್ಕಾರಕ್ಕೆ ಏನಾಗಿದೆ ಅಂತ ನಿಮಗೆನಾದರೂ ಗೊತ್ತೆ? ಗೊತ್ತಿದ್ದರೆ ಸ್ವಲ್ಪ ತಿಳಿಸಿ ಕೊಡುತ್ತಿರಾ!.
ಇದೆನಪ್ಪಾ ಇವರು ಈ ತರಹ ಕೇಳುತ್ತಿದ್ದಾರೆ ಎಂದುಕೊಳ್ಳಬೇಡಿ, ವಿಷಯವೇ ಹೇಳದೆ ಇವರು ಈ ರೀತಿ ನಮ್ಮನ್ನು ತಬ್ಬಿಬ್ಬುಗೊಳ್ಳಿಸುತ್ತಿದ್ದಾರೆ ಎಂದುಕೊಳ್ಳಬೇಡಿ.
ವಿಷಯ ಏನಪ್ಪಾ ಎಂದರೆ ನೀವು ಬೆಂಗಳೂರಿನವರಾಗಿದ್ದರೆ ಅಥವಾ ಕ್ರಮಬದ್ದವಾಗಿ ದಿನಪತ್ರಿಕೆ ಯಾ ಟಿ.ವಿ. ನೋಡುತ್ತಿದ್ದರೆ ನಮ್ಮ ಘನ ಬಿ ಬಿ ಎಂ ಪಿ ಯವರು ತಮ್ಮ ಸ್ಥಳದಲ್ಲಿ ಅತಿಕ್ರಮ (ಆಕ್ರಮ)ವಾಗಿ ಕಟ್ಟಿದ ಎಷ್ಟೋ ಕಟ್ಟಡಗಳನ್ನು ಕೆಡುವುತ್ತಿದ್ದಾರೆ. ಇವರು ನಿದ್ದೆಯಿಂದ ಎದ್ದೇಳಬೇಕಾದರೆ ಎಷ್ಟೋ ವರುಷಗಳೆ ಬೇಕು. ಅಂಥಹದರಲ್ಲಿ ಕಟ್ಟಿ ತುಂಬಾ ವರ್ಷವಾದ ಮೇಲೆ ಇವರ ಆಸ್ಥಿಯನ್ನು ಪತ್ತೆ ಹಚ್ಚಿ, ಅಲ್ಲಿರುವ ಕಟ್ಟಡಗಳನ್ನು ಬಹಳಷ್ಟು ಆರಕ್ಷಕರ ಸಹಾಯದಿಂದ ಕೆಡವಿ ಹಾಕಿ ಅದನ್ನು ನಾವು ವಶಪಡಿಸಿಕೊಂಡಿದ್ದೇವೆ ಎಂದು ಮಾಧ್ಯಮಗಳಲ್ಲಿ ದೊಡ್ಡದಾಗಿ ಪೋಸ್ ಕೊಡುವುದನ್ನು ನೀವೆಲ್ಲಾ ನೋಡೆ ಇರುತ್ತಿರಿ.
ಈ ಒಂದು ಎಲ್ಲಾ ಪ್ರಹಸನಕ್ಕೆ ನನ್ನ ಕೆಲವೊಂದು ಪ್ರಶ್ನೆಗಳು
೧ ಕಟ್ಟಡಗಳನ್ನು ನಿರ್ಮಿಸಲು ಬಿ ಬಿ ಎಂ ಪಿ ಯವರು ಮಾಲೀಕನಿಗೆ ಈ ಜಾಗಕ್ಕೆ ಎನ್ ಓ ಸಿ ಕೊಡುತ್ತಾರೆ. ಆ ರೀತಿ ಕೊಡಬೇಕಾದರೆ ಕೊಡುವ ಆಧಿಕಾರಿಗೆ ಆ ಜಾಗದ ಬಗ್ಗೆ ಗೊತ್ತಿರುವದಿಲ್ಲವೇ?
೨ ಕಟ್ಟಡ ಕಟ್ಟಿದನಂತರ ಆ ಕಟ್ಟಡಕ್ಕೆ ನೀರು , ಕರೆಂಟ್ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಯಾ ಇಲಾಖೆಯವರು ಎನ್ ಓ ಸಿ ಕೇಳುತ್ತಾರೆ. ಆಗ ಸಂಬಂಧ ಪಟ್ಟ ಇಲಾಖೆಯವರ ಅನುಮತಿಯು ಬೇಕಾಗುತ್ತದೆ. ಆಗ ಜಾಗ ಯಾರ ಹೆಸರಲ್ಲಿದೆ ಎನ್ನುವ ಪರಿಜ್ಞಾನವು ಈ ಭ್ರಷ್ಟ ಅದಿಕಾರಿಗಳಿಗಿರುವುದಿಲ್ಲವೇ?
೩ ಪ್ರತಿ ಸಾರಿಯೂ ಕಂದಾಯ ಕಟ್ಟಬೇಕಾದರೆ ಯಾವ ಜಾಗಕ್ಕೆ ಆತ ಕಂದಾಯ ಕಟ್ಟಿದ್ದು ಎಂದು ಅವರಿಗೆ ಗೊತ್ತಿರುವುದಿಲ್ಲವೆ?
೪ ಆ ಜಾಗವನ್ನು ಕಳ್ಳ ದಾರಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆಧಿಕಾರಿಗಳು ಇದಕ್ಕೆ ಹೊಣೆಯಲ್ಲವೇ? ಆಗ ಆ ಜಾಗದಲ್ಲಿದ್ದ ಆಧಿಕಾರಿಗೆ ಯಾವ ರೀತಿಯ ಶಿಕ್ಷೆ?
೫ ಇನ್ನು ಕಟ್ಟಿದ ಕಟ್ಟಡವನ್ನು ಈ ಮಹಾನ್ ಅಧಿಕಾರಿಗಳು ಪತ್ತೆ ಹಚ್ಚಿ ಅದನ್ನು ವಶಪಡಿಸಿಕೊಳ್ಳುತ್ತಾರಲ್ಲ , ಆಗ ಆ ಕಟ್ಟಡವನ್ನು ಕೆಡವಲು ಭದ್ರತೆಗೆ ಎಷ್ಟೊಂದು ಆರಕ್ಷಕ ಸಿಬ್ಬಂದಿ ಮತ್ತು ಎಷ್ಟೊಂದು ಬುಲ್ಡೋಜರ್ ಗಳು.
೬ ಹೀಗೆ ಸುಮ್ಮನೆ ಇರುವ ಕಟ್ಟಡವನ್ನು ಕೆಡವಿ ಹಾಕುವುದರ ಬದಲು ಅದೇ ಕಟ್ಟಡವನ್ನು ಹೇಗಿದೆಯೋ ಹಾಗೆ ವಶಪಡಿಸಿಕೊಂಡು ಅದನ್ನು ಬೇರೆಯವರಿಗೆ ಅಥವಾ ಸರ್ಕಾರಕ್ಕೆ ಸೇರಿದ ಯಾವುದಾದರು ಇಲಾಖೆಗೆ ಬಾಡಿಗೆ ಕೊಡಬಹುದಲ್ಲವೆ?
೭ ಪಾಪ ಆ ಕಟ್ಟಡವನ್ನು ಕಟ್ಟಲು ಆ ಮಾಲೀಕನಿಗೆ ಖರ್ಚಾದ ಹಣವು ನಷ್ಟ. ( ಇದು ಸರ್ಕಾರಕ್ಕೂ ನಷ್ಟ). ಅದರ ಬದಲು ಆ ಮಾಲೀಕನಿಗೆ ಆ ಕಟ್ಟಡಕ್ಕೆ ಒಂದು ಬೆಲೆ ಕಟ್ಟಿ ಆ ಹಣವನ್ನು ಕೊಟ್ಟರೆ ಅವನಿಗೂ ಒಂದು ರೀತಿಯಲ್ಲಿ ನಷ್ಟ ತುಂಬಿ ಕೊಟ್ಟಂತೆ ಆಗುತ್ತದೆಯಲ್ಲವೇ?(ಕೆಲವರು ಅದನ್ನು ಬೇರೆಯವರ ಮುಖಾಂತರ ಕೊಂಡು ಕೊಳ್ಳುತ್ತಾರೆ ಅವರನ್ನು ಕೆಲ ಖದೀಮರು ಸೇರಿಕೊಂಡು ನಯವಾಗಿ ವಂಚಿಸಿರುತ್ತಾರೆ.)
೮ ಅದಕ್ಕಿಂತ ಇರುವ ಕಟ್ಟಡವನ್ನು ಹಾಗೇ ಉಳಿಸಿಕೊಂಡು ಅದನ್ನು ಉಪಯೋಗಿಸಬಹುದಲ್ಲವೇ?
ಇದನ್ನು ನೋಡಿದವರು ನನ್ನ ಈ ಪ್ರಶ್ನೆಗಳಿಗೆ ಉತ್ತರಿಸಿಯಾರೇ?

Rating
No votes yet

Comments