ಸಾಂಸ್ಕೃತಿಕ ಅನಾಥರು.......

ಸಾಂಸ್ಕೃತಿಕ ಅನಾಥರು.......

ನನ್ನ ಸ್ನೇಹಿತೆ ಒಬ್ರು ಅವರ college ನಲ್ಲಿ ಹಾಡಿನ ಸ್ಪರ್ಧೆಗೆ ಹಾಡಿನ ಸಾಹಿತ್ಯ ಬೇಕು ಎಲ್ಲಿ ಸಿಗುತ್ತೆ? ಅಂತ ನನ್ನ ವಿಚಾರಿಸಿದರು. ಸರಿ, ನಾನು ಅವರಿಗೆ ಸಹಾಯ ಮಾಡೋಣ ಅಂತ ಹುಡುಕೋಕ್ಕೆ ಶುರು ಮಾಡಿದೆ.. ಬರಿ ಎರಡೇ ತಾಣ ಇರೋದು ಕನ್ನಡ ಹಾಡಿನ ಸಾಹಿತ್ಯದ್ದು ಅಂತ ಮತ್ತೊಮ್ಮೆ ತಿಳಿದು ಬೇಸರ ಆಯ್ತು ಯಾಕಂದ್ರೆ ಮೊದಲಿನಿಂದಲೂ ನಾ ಕಂಡಂತೆ ಕನ್ನಡಿಗರಲ್ಲಿ ಕನ್ನಡಕ್ಕೋಸ್ಕರ contibution ಕಮ್ಮಿ ಆದ್ರೆ ಯಾಚಿಸೋದು ಜಾಸ್ತಿ.. ಅಂದ್ರೂ ಸಹ ಬೇರೆದು ಸಿಗಬಹುದೇನೋ ಅನ್ನೋ ಛಲ ಇಟ್ಕೊಂಡು ಕೆದಕಿ, ಕೆದಕಿ ಸುಸ್ತಾದೆ ಹೊರತು ಫಲ ಮಾತ್ರ ಬದಲಾಗಲಿಲ್ಲ. ಆಮೇಲೆ ಹಿಂಗೆ ಒಂದು ತಾಣದ ಕೊಂಡಿಯನ್ನು ನೋಡ್ತಿರಬೇಕಾದ್ರೆ ಅದೇ ತಾಣದ ಮತ್ತೊಂದು ಕೊಂಡಿ ನನ್ನ ಕಣ್ಣು ಕುಕ್ಕಿತು.... ಅದರ ಶೀರ್ಷಿಕೆ, "ಕನ್ನಡ ಕಲಿಕೆ" :-) . ನಾನು ಏನಪ್ಪಾ ನಡೆಸ್ತಿದಾರೆ ಇಲ್ಲಿ ಭಾಮಾಮಣಿಗಳು ಅನ್ನೋ ಕುತೂಹಲದಿಂದ ಆ forum ನಲ್ಲಿನ thread ಓದಲು ಶುರು ಮಾಡಿದೆ... ಆ ತಾಣ, ಕೇವಲ ಹೆಂಗಸರಿಗೆ ಮಾತ್ರ ಸದಸ್ಯತ್ವವನ್ನ ಮೀಸಲು ಮಾಡಿದೆ ಅನ್ಸ್ತು ಆದ್ರೆ ಮಾಹಿತಿ ಯಾರಾದ್ರೂ ನೋಡಬಹುದಿತ್ತು ಹಾಗಾಗಿ ಆ ಕಡೆ ಹೆಜ್ಜೆ ಹಾಕಿದೆ. ಈ ಕನ್ನಡ ಕಲಿಕೆ ಅನ್ನೋದು ಓದೋಕ್ಕೆ ಶುರು ಮಾಡಿದೆ, ಏನ್ ನಡೀತಿದೆ? ಏನ್ ನಡೆಸ್ತಿದಾರೆ? ಶುರುವಿನಲ್ಲಿ josh ಅಲ್ಲಿ ಬರದು ಬರದು ಕೊನೆಗೆ ಆ thread ತಟ್ಟಸ್ಥ ಆಗಿರುತ್ತೆ ಅಂತ ಏನೇನೋ ಪೂರ್ವಾಗ್ರಹ ಇಟ್ಕೊಂಡು ಓದ್ತಾ ಇದ್ದೆ. ಅಲ್ಲಿನ ಸದಸ್ಯರ ಊರು, ಸೇರಿದ ದಿನ ಎಲ್ಲ ನೋಡಿ ಖುಷಿ ಆಯ್ತು ಯಾಕಂದ್ರೆ ಅವರೆಲ್ಲ ಜಗತ್ತಿನ್ನ ನಾನಾ ಮೂಲೆಯಲ್ಲಿ ಇರೋರು.. ಆದರೂ ಈ ಪುಟ್ಟ ಲೋಕವೆಂಬ ಅಂತರ್ಜಾಲದಲ್ಲಿ ಚಟ ಪಟ ಮಾತು ಹುರಿತಿದಾರೆ :-) . ಅದ್ರಲ್ಲಿ ಕಲ್ಯಾಣಿ ಭಾಸ್ಕರ್ ಅನ್ನೋರು ಶುರು ಮಾಡಿರೋ ಈ thread ನಲ್ಲಿ ತಮಿಳರೋಬ್ಬರನ್ನು ಸಹ ಕಂಡೆ... ಕನ್ನಡದ ಕಂಪು ಹರಿಸೋ ಈ ಸಣ್ಣ ಪ್ರಯತ್ನ ನೋಡಿ ತುಂಬಾನೆ ಖುಷಿ ಆಯ್ತು. ಯಾಕಂದ್ರೆ ಸಾಮಾನ್ಯವಾಗಿ ಹುಡುಗೀರು ಆಸಕ್ತಿ ಇದ್ರೂ ಸಹ ಮುಂದೆ ಬರೋಲ್ಲ, ಅದು ಯಾಕೋ ಅವರಿಗೆ ಗೊತ್ತಿರಬೇಕು ನಂಗಂತೂ ಗೊತ್ತಿಲ್ಲ (ನನ್ನ ಅನುಭವ ತಪ್ಪು ಇರಬಹುದು ಆದರೂ ನಂಗೆ ಅನ್ಸಿದ್ದು ಹೇಳ್ದೆ ಅಷ್ಟೆ).. ಹ್ಮ್ಮ್ ಆ ವಿಚಾರ ಇರಲಿ ಬಿಡಿ...
ಮತ್ತೊಂದು ವಿಷಯ ನಾನು ಗಮನಿಸಿದ್ದು ಅಂದ್ರೆ, ನಾನು ಮೊದಲೇ ಹೇಳಿದ್ನಲ್ಲ ನಾನು ಹಾಡಿನ ಸಾಹಿತ್ಯ ಹುಡುಕಿಕೊಂಡು ಆ ತಾಣಕ್ಕೆ ಭೇಟಿ ಕೊಟ್ಟಿದ್ದು ಅಂತ, ಅದರ ಸಂಭಂದಿತ ಒಂದು thread ನಲ್ಲಿ ಒಬ್ರು ಮಕ್ಕಳ ಹಾಡಿನ ಸಾಹಿತ್ಯ ಬೇಕು ಯಾರಾದ್ರೂ ಸಹಾಯ ಮಾಡ್ತೀರ ಅಂತ ಕೇಳಿದ್ರು... ಅದಕ್ಕೆ ಉತ್ತರವಾಗಿ ಒಬ್ರು ಮಹಾತಾಯಿ... ಹ್ಮ್ಮ್ ನಂಗೊತ್ತು ಕೆಲವು ಆದ್ರೆ ಸಂಪೂರ್ಣ ಸಾಹಿತ್ಯ ಗೊತ್ತಿಲ್ಲ ನನ್ ಮಕ್ಳಿಗೆ ನನ್ನ ಅಪ್ಪ ಅಮ್ಮ ಹಾಡ್ತಿದ್ರು. ನಂಗೆ ಕನ್ನಡ ಹಾಡಿನ ಸಾಹಿತ್ಯ ಅಷ್ಟು ನೆನಪಿಲ್ಲ ಅಲ್ದೆ ಹಿಂದಿ ಹಾಡುಗಳು ಇದೆಯಲ್ಲ ಅದರಲ್ಲೇ "adjust" ಮಾಡಿಕೊಂಡರೆ ಆಯ್ತಲ್ಲ ಅಂತ ಹೇಳಿದ್ರು... ಈ ಮಾತು ಎಷ್ಟು ಸರಿ?? ಇಂತಹ ಧೋರಣೆ ಅವರೊಬ್ಬರದೇ ಅಲ್ಲ ಅಂತ ಗೊತ್ತು. ಹೆಚ್ಚು ಜನ ಅದೇ ವರ್ಗಕ್ಕೆ ಸೇರಿರ್ತಾರೆ ಅಂತಾನೆ ಇಲ್ಲಿ ಅದರ ವ್ಯಾಖ್ಯಾನ ಮಾಡ್ಬೇಕು ಅಂತ ಬಯಸಿದ್ದು. ನಮ್ಮ ಮಕ್ಕಳನ್ನ ಬೆಳೆಸುವಾಗ ಪರಭಾಷೆಗೆ ಮೊರೆ ಹೋದರೆ ನಮ್ಮ ಮಕ್ಕಳಿಗೆ ನಮ್ಮ ಭಾಷೆಯ ಮೇಲೆ ಅಭಿಮಾನ, ಅಕ್ಕರೆ, ಪ್ರೀತಿ ಹುಟ್ಟಲು ಸಾಧ್ಯವೇ? ಆ ಥರ ಬೆಳೆದ ಮೇಲೆ ಅವ್ರ ಮಕ್ಕಳ ಗತಿ ಏನು?? ಎಲ್ಲಾ ಇದ್ರೂ ಸಹ ಸಾಂಸ್ಕೃತಿಕವಾಗಿ ಅವರು ಅನಾಥರಾಗೊಲ್ವ?ನಮ್ಮ ಭಾಷೆ ನಮ್ಮ ಸಂಸ್ಕೃತಿ ಬಗ್ಗೆ ಅರಿವಿಲ್ಲದೆ ಬೆಳೆದರೆ ಪ್ರೀತಿ ಉಕ್ಕೊದಾದ್ರು ಹೇಗೆ? ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ!! ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಅನ್ನೋ ಸಂಸ್ಕೃತಿ ನಮ್ಮಲ್ಲಿ ಎಲ್ಲಿವರ್ಗು ಇರುತ್ತೋ ಅಲ್ಲಿಯವರೆಗೂ ಮುಂಬರುವ ಪೀಳಿಗೆಯವರಿಗೆ ಭಾಷಾಭಿಮಾನ ಇರುತ್ತೆ, ಎಂದು ಅದು ಹೋಯ್ತೋ ಅವರು ಸಾಂಸ್ಕೃತಿಕವಾಗಿ ಅನಾಥರಾಗುತ್ತಾರೆ.............

http://www.indusladies.com/forums/bangalore/40997-kannada-kalike.html

Rating
No votes yet