ಸಾಯುವ ಆಸೆ ಇಲ್ಲದಿರುವುದರಿಂದಲೇ ಅದರಾಚೆಗಿನದು ಎಂದಿಗೂ ನಿಗೂಢಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೩

ಸಾಯುವ ಆಸೆ ಇಲ್ಲದಿರುವುದರಿಂದಲೇ ಅದರಾಚೆಗಿನದು ಎಂದಿಗೂ ನಿಗೂಢಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೩

(೨೭೧) ಒಮ್ಮೆಲೆ ಅತ್ಯಂತ ಸಂತಸದಿಂದಿರುವ ಮತ್ತು ದುಃಖಿತನಾಗಿರುವ ಕನಿಷ್ಠಪಕ್ಷ ಒಬ್ಬ ವ್ಯಕ್ತಿಯಾದರೂ ನನಗೆ ಗೊತ್ತುಃ ಕ್ರಮಬದ್ಧವಾಗಿ ಆ ವ್ಯಕ್ತಿ ’ಮತ್ತೊಬ್ಬರ ಪ್ರಕಾರದ’ ನೀವು ಮತ್ತು ’ನಿಮ್ಮ ಪ್ರಕಾರದ’ ನೀವು. ಇದು ತಿರುವು ಮರುವಾದರೆಷ್ಟು ಚೆನ್ನ!


(೨೭೨) "ನನಗೆ ಗೊತ್ತಿಲ್ಲ ಎಂಬುದು ನನಗೆ ತಿಳಿದಿದೆ" ಎಂಬ ಮನೋಭಾವಕ್ಕಿಂತಲೂ "ನನಗೆ ಗೊತ್ತಿದೆ ಎಂಬುದು ನನಗೆ ತಿಳಿದೇ ಇರಲಿಲ್ಲ" ಎಂಬ ಮನೋಭಾವವು ಹೆಚ್ಚೋ, ಕಡಿಮೆಯೋ ಎಂಬುದನ್ನು ನಿರ್ಧರಿಸುವುದು ಹೇಗೆ ಎಂಬುದು ನನಗೆ ಗೊತ್ತಿದೆಯೋ ಇಲ್ಲವೋ ತಿಳಿಯದಾಗಿದೆ!


(೨೭೩) ಯಾರಿಗೂ ಸಾಯುವ ಇಚ್ಛೆ ಇಲ್ಲದಿರುವುದರಿಂದಲೇ ಅದರಾಚೆ ಏನಿದೆ ಎಂಬುದು ನಮಗಿನ್ನೂ ತಿಳೀಯದಾಗಿರುವುದು!


(೨೭೪) ಎಲ್ಲರಿಗೂ ಬದುಕುವ ಆಸೆ. ಆದ್ದರಿಂದಲೇ ಅದು ಅಷ್ಟೊಂದು ಗೋಜಲಾಗಿರುವುದು.


(೨೭೫) ದುರಹಂಕಾರಿಃ ಎಲ್ಲಾದರೂ ಒಬ್ಬ ನಿಯತ್ತಿನ ಮನುಷ್ಯನಿದ್ದರೆ ತೋರಿಸಿ. ಆ ಕೂಡಲೇ ಅದು ನಾನೇ ಎಂದು ನಿರೂಪಿಸಿಬಿಡುತ್ತೇನೆ!

Rating
No votes yet