ಸಾರಾಂಶ

ಸಾರಾಂಶ

ಇದು ನನ್ನ ಮೊದಲ ಪ್ರಕಟಿತ ಕವನ.ಗೆಳೆಯ ಎ.ಜಿ. ಅಬ್ದುಲ್ ರೆಹಮಾನ್ ಮಹಾಲ್ ದಾರ್ (ಗದಗ ದವರು)

ಒಂದು ಕವಿತಾ ಸಂಕಲನ ಹೊರ ತಂದಿದ್ದರು. ಸುಮಾರು ೧೯೯೦ ಇರಬೇಕು. ನನ್ನ ಕವನ ಅದರಲ್ಲಿ ಪ್ರಕಟಿಸುವ

ಕರುಣೆ ಮಾಡಿದ್ದರು. ಆ ಕವನ ಈಗ ಸಂಪದಿಗರಿರಗಾಗಿ....

ಸಾರಾಂಶ
-----------

ಉಷೆ ಹೊಂಬಣ್ಣದ ಓಕುಳಿ ಭುವಿ ಮೇಲೆಲ್ಲ
ಚೆಲ್ಲಾಡಿದಾಗ ಬಂದ ಸೂರ್ಯ ನನ್ನ ಕಂಡು
ಮುಗುಳ್ನಕ್ಕ
ಆತನ ಕೆಂಪು ಮೊಗದಲ್ಲಿ ನನ್ನ ಅನೇಕ
ಕನಸುಗಳ ಪ್ರತಿಬಿಂಬ ಕಂಡೆ....
ಮುಂಜಾವು ಹಲವು ಕದ ತೆರೆದಿತ್ತು ಬಾಳಿಗೆ
ಸೂರ್ಯ ಆಶ್ವಾಸನೆಯ ಮುಗುಳ್ನಗೆ
ಬೀರುತ್ತಿದ್ದ........

ಯಾಮಿನಿ ಹೊಸಿಲ ಹಿಂದೆ
ಚಡಪಡಿಸುತ ನಿಂತಿದ್ದಳು....
ಬಂದ ಸೂರ್ಯ ಕುಂದಿದ್ದ ಸೊರಗಿದ್ದ
ಆ ಕೆಂಪು ಮುಖದಲ್ಲಿ ನನ್ನ ಕನಸು ಗಳ
ಬೆಂದ ವಾಸನೆ.
ನಗು ತೇಲಿತು ಮೊಗದಲ್ಲಿ
ಜೀವನವಿದು ಮುಂಜಾನೆ ಕೆಂಪಂತೆ
ಸ್ಫಟಿಕವೂ ಹೌದು
ಸಂಜೆಗೆಂಪಂತೆ ನೀರಸವೂ ಹೌದು !

Rating
No votes yet