ಸಿಂಧು ಭೈರವಿ

ಸಿಂಧು ಭೈರವಿ

೧೯೮೫ ರಲ್ಲಿ ಒಂದು ತಮಿಳು ಚಿತ್ರ ತೆರೆಕಂಡಿತ್ತು. ಅದರ ಹೆಸರು ಸಿಂಧು ಭೈರವಿ.

ತಮಿಳು ಅರ್ಥವಾಗುವರ ಸಂಖ್ಯೆ ಬಹಳ ಕಡಿಮೆ ಇದ್ದ ನಮ್ಮೂರಿನಲ್ಲೂ ಈ ಚಿತ್ರ  ಕೆಲವು ವಾರ ಹೌಸ್‍ಫುಲ್ ಪ್ರದರ್ಶನ ಕಂಡಿತ್ತು ಎಂದರೆ ಚಿತ್ರ ಬಹಳ ಯಶಸ್ವಿಯಾಗಿತ್ತೆಂದು ನೀವು  ಊಹಿಸಿರುತ್ತೀರಿ.

ಕೆ.ಬಾಲಚಂದರ್ ಅವರ ಈ ಚಿತ್ರದ ಸಂಗೀತಕ್ಕೆ ಇಳೈಯರಾಜ ಅವರಿಗೆ ಹಿನ್ನಲೆ ಹಾಡಿಗೆ ಚಿತ್ರಾ ಅವರಿಗೆ, ಮತ್ತೆ ಅತ್ಯುತ್ತಮ ನಟಿ ಎಂದು ಸುಹಾಸಿನಿ ಅವರಿಗೆ ಸ್ವರ್ಣಕಮಲ ಪ್ರಶಸ್ತಿ ಬಂದಿತ್ತು.

ಒಂದು ರಾಗದ ಹೆಸರಿರುವ ಈ ಚಿತ್ರದಲ್ಲಿ ಸಂಗೀತ ಒಂದು  ಪ್ರಧಾನ ಪಾತ್ರ ವಹಿಸಿದ್ದರಲ್ಲಿ ಆಶ್ಚರ್ಯವಿಲ್ಲ.

ಆದರೆ, ಆಶ್ಚರ್ಯವೆಂದರೆ ಈ ಸಿನಿಮಾದಲ್ಲಿ ಸಿಂಧು ಭೈರವಿ ರಾಗದ ಯಾವುದೂ ಹಾಡಿರಲಿಲ್ಲ.

ಇದೆಲ್ಲ ಇಲ್ಲಿ ಏಕೆ ಗಳಹುತ್ತಿದ್ದೇನೆ?

ಸಿಂಧು ಬೈರವಿ ರಾಗದ ಬಗ್ಗೆ ಬರೆಯೋಣ ಎಂದುಕೊಂಡೆ. ಅದಕ್ಕೆ ಮೊದಲು ಸ್ವಲ್ಪ ಅಸಂಬದ್ಧ ಪೀಠಿಕೆ ಇದಷ್ಟೇ  :)  :)  :)

-ಹಂಸಾನಂದಿ

Rating
No votes yet