ಸುಧಿ ಕೈಯಲ್ಲಿ ಹಾವು

ಸುಧಿ ಕೈಯಲ್ಲಿ ಹಾವು

ನಿಟ್ಟೆಯಲ್ಲಿ ದಿನವೆಲ್ಲ ಮೈಕ್ ತೆಗೆದುಕೊಂಡು ಮಾತನಾಡಲು ನಾಚಿಕೊಳ್ಳುತ್ತಿದ್ದ [:user/sudhimail|ಸುಧೀಂದ್ರ], ರವೀಂದ್ರನಾಥ ಐತಾಳರ ಕೈಲಿದ್ದ ಹಾವನ್ನು ತೆಗೆದುಕೊಳ್ಳಲು ಹಿಂಜರೆಯದಿದ್ದದ್ದು ನೋಡಿ ನಮಗೆಲ್ಲ ಸಿಕ್ಕಾಪಟ್ಟೆ ಆಶ್ಚರ್ಯ:

ಎದುರಿಗೆ ಹಾವಿದ್ದರೂ ಕಾಮತ್ ಬಹುಶಃ  ಕ್ಯಾಮೆರಾದಲ್ಲಿರುವ ಸಾಫ್ಟ್ವೇರ್ ಚೆಕ್ ಮಾಡ್ತಿದ್ದ!

ಈ ಹಾವು ಹಿಡಿದು ಒಂದೆರಡು ನಿಮಿಷಗಳಿಗೆ ಸುಧಿ ಒಮ್ಮೆಲೇ "ವಾಯ್" ಎಂದು ಥೇಟ್ ಮಂಗಳೂರು ಸ್ಟೈಲಿನಲ್ಲಿ ಜಂಪ್ ಮಾಡಿ ಎಲ್ಲರಿಗೂ ಶಾಕ್ ಕೊಟ್ಟುಬಿಟ್ಟ. ನಾವೆಲ್ಲ ಕಚ್ಚಿಸಿಕೊಂಡೇಬಿಟ್ಟನೇನೋ ಮಾರಾಯ ಅಂದುಕೊಂಡೆವು. ನಮ್ಮ ಶಿವಮೊಗ್ಗದ ಹುಡುಗನಿಗೆ ಹೀಗಾಗಬಾರದಿತ್ತು ಅಂತ ಆಗಲೇ ಅರೆಕ್ಷಣ ನನಗೆ ಅನಿಸಿದ್ದುಂಟು. ;-) ಹಾವೇನಾದರೂ ಅತ್ತಿತ್ತ ಬಿದ್ದುಬಿಟ್ಟಿತೇನೊ ಅಂತ ನಾವೆಲ್ಲರೂ ಅತ್ತಿತ್ತ ನೋಡುವಂತೆ ಮಾಡಿಬಿಟ್ಟು ಅಷ್ಟೇ ನಿರಾಳವಾಗಿ "ಏನೂ ಆಗಲಿಲ್ಲ, ಸ್ವಲ್ಪ ಅಲುಗಾಡಿತು" ಅಂದ ಸುಧಿ. ಕ್ಯಾಮೆರ ಹಿಡಿದ ಕೈಗಳು ಕ್ಯಾಮೆರ ಮರೆತಿದ್ದವು, ಐತಾಳರು ಎಲ್ಲರಿಗೂ "ಅದೇನೂ ಮಾಡೋಲ್ಲ" ಅನ್ನುತ್ತ reassuring ಸ್ಮೈಲ್ ಕೊಟ್ಟರು! :-)

Rating
No votes yet

Comments