ಸೂಕರ ಸಂತತಿ
ಸೂಕರ ಸಂತತಿ
ತಿರುಪತಿಯ ಬೆಟ್ಟದ ತಪ್ಪಲಲ್ಲಿ ಒಂದು ಸಾಧುವಾದ, ಪುಣ್ಯಕೋಟಿಯಂಥ ಹಸು ತನ್ನ ಕರುವಿನೊಡನೆ ಕೊಟ್ಟಿಗೆಯೊಂದರಲ್ಲಿ ವಾಸಿಸುತ್ತಿತ್ತು. ಒಂದು ದಿನ ಧಾರಾಕಾರ ಮಳೆಯಲ್ಲಿ ತುಂಬುಗರ್ಭಿಣಿಯಾದ ಹಂದಿಯೊಂದು ನೆನೆಯುತ್ತಾ ಸಂಕಷ್ಟಪಡುವುದನ್ನು ನೋಡಿದ ಆ ಸಾಧುಹಸು, ತುಂಬ ಕರುಣೆಯಿಂದ ಆ ಗರ್ಭಿಣಿ ಹಂದಿಗೆ ತನ್ನ ಕೊಟ್ಟಿಗೆಯಲ್ಲಿ ಆಶ್ರಯ ನೀಡಿತು. ಸೈತಾನ(ಸ)ನ ಅನುಗ್ರಹದಿಂದ ಆ ಹಂದಿ ಒಮ್ಮೆಗೇ 49 ಮರಿಗಳಿಗೆ ಜನ್ಮವಿತ್ತಿತು.
ಸೂತೇ ಸೂಕರಯುವತಿಃ ಸುತಶತಂ ದುರ್ಭಗಂ ಝಟಿತಿ |
ಕರಿಣೀ ಚಿರಾಯ ಸೂತೇ ಶೂರಮಹೀಪಾಲಲಾಲಿತಂ ಕಲಭಮ್ ||
(ಕೊಳಕು ಹಂದಿಯು ಅನತಿಕಾಲದಲ್ಲಿ ನೂರಾರು ಮರಿಗಳನ್ನು ಹೆರುತ್ತದೆ. ಆದರೆ ಆನೆಯು ರಾಜರಿಂದ ಆದರಿಸಲ್ಪಡುವ ಒಂದೇ ಒಂದು ಮರಿಯನ್ನು ದೀರ್ಘಾವಧಿಯಲ್ಲಿ ಹೆರುತ್ತದೆ. ಇದು ವೇದಾಂತ ದೇಶಿಕರು ಶತಮಾನಗಳ ಹಿಂದೆಯೇ ಹೇಳಿದ ಮಾತು!)
ಹೀಗೆ 49 ಹಂದಿ ಮರಿಗಳ ಹಿಂಡಿನಿಂದ ಸಾಧುಹಸುವಿನ ಕೊಟ್ಟಿಗೆ ತುಂಬಿಹೋಯಿತು ಮಾತ್ರವಲ್ಲ, ಹಂದಿಗಳ ಹೊಲಸನ್ನು ಸಹಿಸುವುದು ಸಾಧುಹಸುವಿಗೆ ಅಸಾಧ್ಯವಾಯಿತು. ದಯವಿಟ್ಟು ನಿನ್ನ ಮರಿಗಳನ್ನು ಕರೆದುಕೊಂಡು ನಿನ್ನ ರೊಪ್ಪಕ್ಕೆ ಹೊರಡು ಎಂದು ಆ ಹೊಲಸು ಹಂದಿಯನ್ನು ಬೇಡಿಕೊಂಡಿತು ನಮ್ಮ ಸಾಧುಹಸು.
ಕಣ್ಣು ಕೆಕ್ಕರಿಸಿಕೊಂಡು ಆ ಪುಣ್ಯಕೋಟಿಯನ್ನು ಬೆದರಿಸುತ್ತಾ, “ನಾವು ಇಲ್ಲಿ ಹುಟ್ಟಿದ್ದೇವೆ ಎಂದ ಮೇಲೆ ಇದು ನಮ್ಮದೇ ಜಾಗ. ನಾವಿಲ್ಲಿ ಯುದ್ಧವಿದ್ಯಾಲಯವೊಂದನ್ನು ಕಟ್ಟಲಿದ್ದೇವೆ. ನೀನು ಬೇಕಾದರೆ ನಿನ್ನ ಕರುವಿನೊಂದಿಗೆ ಇಲ್ಲೇ ಮೂಲೆಯಲ್ಲಿರು. ನಮ್ಮ ತಂಟೆಗೇನಾದರೂ ಬಂದರೆ, ಅಬ್ಬೇಪಾರಿಗಳಿಗೆ ಕಿರುಕುಳ ಕೊಡುತ್ತಿದ್ದೀಯೆ ಎಂದು ನಿನ್ನ ಮೇಲೇ ಮೃಗೀಯಸರ್ಕಾರಕ್ಕೆ ದೂರು ಕೊಡುತ್ತೇನೆ” ಎಂದಿತು ಆ ಹೊಲಸು ಹಂದಿ.
ಕರುಣೆತೋರಿ ಆಶ್ರಯ ನೀಡಿದ ಸಾಧುಹಸು ದಿಗ್ಭ್ರಾಂತವಾಯಿತು! ಅದರ ಮುಂದೆ ಉಳಿದದ್ದು ಎರಡೇ ಆಯ್ಕೆಗಳು. ಒಂದೋ, ಆ ಹಂದಿಗಳ ಹೊಲಸನ್ನು ಸಹಿಸಿಕೊಂಡು ನರಳುತ್ತಾ ಅಲ್ಲೇ ಸಾಯುವುದು ಅಥವಾ ಈ 49 ಹೊಲಸು ಹಂದಿಗಳು ಹಾಗೂ ಅವುಗಳ ಭವಿಷ್ಯತ್ ಸಂತತಿಗಳು ಆಕ್ರಮಿಸದಿರುವಷ್ಟು ದೂರದ ಇನ್ನಾವುದಾದರೂ ಶಾಂತ ನೆಲೆಯನ್ನು ಹುಡುಕಿಕೊಳ್ಳುವುದು !
ನಿರ್ಧರಿಸಲಾಗದೆ ತೊಳಲುತ್ತಾ, ಹೊರಗೆ ಮಳೆಯಲ್ಲಿ ನೆನೆಯುತ್ತಾ ಕರುವಿನೊಂದಿಗೆ ನಿಂತಿತು ಸಾಧುಹಸು !
ನೀತಿ: ಓದುಗರ ವಿವೇಚನೆಗೇ ಬಿಟ್ಟಿದೆ.
*****
03-08-2014 - ಎಸ್ ಎನ್ ಸಿಂಹ, ಮೇಲುಕೋಟೆ
(ಹೊಸದಿಗಂತ 2014 ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಿತ)
Comments
ಉ: ಸೂಕರ ಸಂತತಿ
ಇಲ್ಲಿ ಪುಣ್ಯಕೋಟಿ ಕರೆದು ಹಂದಿಗೆ ಜಾಗ ಕೊಡಲಿಲ್ಲ.. ಬದಲಾಗಿ ಹಂದಿಗಳೇ ಆಕ್ರಮಣ ಮಾಡಿ ಕೊಟ್ಟಿಗೆಯಲ್ಲಿ ಜಾಗ ಪಡೆದವು. ಪುಣ್ಯಕೋಟಿ ಇತರೆ ದನಗಳ ಜೊತೆ ಒಟ್ಟಿಗೆ ಸಾಮರಸ್ಯದಿಂದ ಬದುಕಿದ್ದರೆ ಹಂದಿಗಳು ಕೊಟ್ಟಿಗೆಗೆ ಬರುವ ಧೈರ್ಯ ಮಾಡುತ್ತಿರಲಿಲ್ಲ.. ಪುಣ್ಯಕೋಟಿಯ ದಡ್ಡತನಕ್ಕೆ ಹಂದಿಗೇಕೆ ಅಪವಾದ...
ಉ: ಸೂಕರ ಸಂತತಿ
ಸಭ್ಯರು ದೂಷಣೆಗೆ ಒಳಗಾದರೆ ಕನಿಕರಿಸುವವರು ಬೆರಳೆಣಿಕೆಯಷ್ಟು. ದುಷ್ಟರು ದುಷ್ಟತನವನ್ನಲ್ಲದೆ ಬೇರೆ ಏನು ಮಾಡಿಯಾರು ಎಂದು ದುಷ್ಟರನ್ನು ಸಮರ್ಥಿಸುವವರು ಸಾಕಷ್ಟು ಸಿಗುತ್ತಾರೆ.
In reply to ಉ: ಸೂಕರ ಸಂತತಿ by kavinagaraj
ಉ: ಸೂಕರ ಸಂತತಿ
>>ದುಷ್ಟರು ದುಷ್ಟತನವನ್ನಲ್ಲದೆ ಬೇರೆ ಏನು ಮಾಡಿಯಾರು ಎಂದು ದುಷ್ಟರನ್ನು ಸಮರ್ಥಿಸುವವರು ಸಾಕಷ್ಟು ಸಿಗುತ್ತಾರೆ.
+೧
ನೀತಿಕತೆ ಚೆನ್ನಾಗಿದೆ ಸಿಂಹ ಅವರೆ.