ಸೂರ್ಯಕಾಂತಿ ಏಕೆ ಸೂರ್ಯನೆಡೆಗೇ ಯಾವಾಗಲೂ ಮುಖ ಮಾಡಿರುತ್ತದೆ?

ಸೂರ್ಯಕಾಂತಿ ಏಕೆ ಸೂರ್ಯನೆಡೆಗೇ ಯಾವಾಗಲೂ ಮುಖ ಮಾಡಿರುತ್ತದೆ?

ಶ್ರವಣಿಕಾ ಮುಣಿಗಳ ಆಶ್ರಮದಲ್ಲಿ, ಮುನಿಗಳ ಶಿಶ್ಯಂದಿರು, ನಾರದರಿಗೆ ಒಂದು ಪ್ರಶ್ನೆ ಕೇಳಿದರು, ಸೂರ್ಯಕಾಂತಿಯೇಕೆ ಸೂರ್ಯನೆಡೆಗೆ ಯಾವಾಗಲೂ ಮುಖ ಮಾಡಿರುತ್ತದೆ? ಆಗ ನಾರದ ಮುನಿಗಳು, ಅದರ ಹಿಂದಿನ ಕತೆಯನ್ನು ಹೇಳಿದರು.

ಯುಗ ಯುಗಾಂತರಗಳ ಹಿಂದೆ, ಸೂರ್ಯಕಾಂತಿಯು ಸೂರ್ಯನಂತೆಯೇ ಕಾಂತಿವಲಯದ ಬಗೆಯಲ್ಲಿ ಪಕಳೆಗಳನ್ನು ಹೊಂದಿರುವದರಿಂದ, ಅದನ್ನು ಎಲ್ಲರೂ ’ಸೂರ್ಯ’ ಅಂತಲೇ ಕರೆಯುತ್ತಿದ್ದರು. ಆಗೆಲ್ಲ ತಾನು ಸೂರ್ಯನಿಗೆ ಸರಿ ಸಮಾನ ಅಂತ ತಿಳಿದು ಸೂರ್ಯಕಾಂತಿ ಬೀಗುತ್ತಿತ್ತು. ಕಾಲಾಂತರದಲ್ಲಿ ಸೂರ್ಯಕಾಂತಿ ಸೂರ್ಯನಿರುವದನ್ನೇ ಮರೆತು, ತಾನೇ ಸೂರ್ಯ ಅಂದುಕೊಳ್ಳತೊಡಗಿತು.

ಇದನ್ನು ತಿಳಿದ ದೇವರು, ಸೂರ್ಯಕಾಂತಿಗೆ ದಿಟ ಸೂರ್ಯ ಯಾರು ಎಂಬುದನ್ನು ತೋರಲು, ’ಯಾವಾಗಲೂ ಸೂರ್ಯನನ್ನೇ ನೋಡುತ್ತಿರು’ ಅಂತ ಅಪ್ಪಣೆ ಕೊಟ್ಟನು. ಆಗಿಂದ ಸೂರ್ಯ ಬಂದಾಗಲೆಲ್ಲ ಸೂರ್ಯನನ್ನು ನೋಡಿ, ತಾನು ಸೂರ್ಯನಲ್ಲ, ಅವನಂತೆಯೇ ಇರುವ ಒಂದು ಹೂವು ಅಸ್ಟೇ ಅಂಬುದನ್ನು ಮನನ ಮಾಡಿಕೊಳ್ಳುತ್ತಿರುತ್ತದೆ. ಅದು ಸೂರ್ಯನನ್ನು ಸೇವಿಸುತ್ತದೆಯಾದ್ದರಿಂದ ಅವತ್ತಿನಿಂದ ಸೂರ್ಯಕಾಂತಿಗೆ ’ಸೂರ್ಯಪಾನ’ ಅನ್ನುವ ಮತ್ತೊಂದು ಹೆಸರು ಬಂತು.

:[:)]

Rating
No votes yet

Comments