ಸೇದು, ಸಲೀಸು...ಮತ್ತು ಇತರೆ ಒರೆಗಳು

ಸೇದು, ಸಲೀಸು...ಮತ್ತು ಇತರೆ ಒರೆಗಳು

ನನಗೆ ಹಾಗೆ ಈ ಒರೆಗಳ ಬಳಕೆ ಬಲು ಸೋಜಿಗ ಅನ್ನಿಸಿತು. ಅದಕ್ಕಾಗಿ ಹಂಚಿಕೊಳ್ಳುತ್ತಿದ್ದೀನಿ

ಸೇದು ( Ka. sēdu, sēndu to draw up (water from a well), pull in (as string of kite), draw in with the mouth, draw in with the breath (snuff, etc.), draw or smoke (pipe or cheroot, etc.), pull along, drag; sēdu drawing, etc)

೧.  ಅವನು ಬೀಡಿ ಸೇದುತ್ತಾನೆ/ಸೇಯುತ್ತಾನೆ/ಸೇಯ್ತಾನೆ.

೨.  ಅವಳು ಬಾವಿಯಿಂದ ನೀರನ್ನು ಸೇದುತ್ತಾಳೆ/ಸೇಯುತ್ತಾಳೆ/ಸೇಯ್ತಳೆ.

ಬೀಡಿಗೂ <--> ಬಾವಿಗೂ ಎತ್ತಣಿಂದೆತ್ತ ನಂಟಯ್ಯಾ? ಎರಡಕ್ಕೂ ಒಂದೆ "ಸೇದು"...:)  ಇದು ಅಣ್ಣೆ(ಅಚ್ಚ) ಒರೆ. :)

ಸಲೀಸು

 = ಸುಲಭ, ಸರಾಗ....ಇದು ಪಾರ್ಸಿಯಿಂದ ಬಂದಿರುವ ಒರೆಯೆ?? ಬಲ್ಲವರು ತಿಳಿಸಿ

 ಅವನು ಗುಂಡ್ ಕಲ್ನ ಏನ್ ಸಲೀಸಾಗಿ ಎತ್ದ ಮಾರಾಯ!!  ಅನ್ನುವುದುಂಟು

ಅನಾಮತ್ತು

= ಒಂದೇ ಸರಿ, ಒಂದೇ ಸಲ, ಒಂದೇ ಏಟಿಗೆ...ಹೀಗೆ ಬಳಕೆಯಿಲ್ಲಿದೆ.....ಈ ಒರೆ ಎಲ್ಲಿಂದ ಬಂತು??? :

 ಅವನು ಅಷ್ಟು ತೂಕದ ಕಲ್ಲನ್ನು ಅನಾಮತ್ತಾಗಿ ಎತ್ತಿ ಬಿಸಾಡಿದ !!  ಅನ್ನುವುದುಂಟು

Rating
No votes yet