ಸೈಕಲ್ ಪಯಣ

ಸೈಕಲ್ ಪಯಣ

ಅವನು ಹೊಸದಾಗಿ ಸೈಕಲ್ ತಗೊಂಡಿದ್ದ . ಹೊಸ ಸೈಕಲ್ ನಲ್ಲಿ ಎಲ್ಲರ ಮುಂದೆ shine ಮಾಡಬೇಕೆಂದು ಒಂದು ರೌಂಡ್ ಹೊರಟ. ಸೈಕಲ್ ನ ಮೇಲಿನ ಗಮನಕ್ಕಿಂತ ಅವನ ಗಮನ ಸುತ್ತ ಮುತ್ತ ಇರುವ ಜನರ ಮೇಲಿತ್ತು. ಎಲ್ಲರೂ ನನ್ನನ್ನೇ ನೋಡುತ್ತಿದ್ದಾರ ಎಂಬ ಆಲೋಚನೆ ಯಲ್ಲೇ ಇದ್ದ. ಆದರೆ ಅಲ್ಲಿ ಯಾರೂ ಅವನನ್ನು ನೋಡ್ತಾ ಇರ್ಲಿಲ್ಲ. ಅವ್ನಿಗೆ ಬೇಸರ ತರಿಸಿತ್ತಾದರು. ಅದರಲ್ಲಿ ತನ್ನನ್ನು ಗೊತ್ತಿರೋರು ಯಾರೂ ಇಲ್ಲ ಎಂದು ಮುಂದೆ ಹೋಗುತ್ತಿದ್ದ. ರಸ್ತೆಯ ಕೊನೆಯ ವರೆಗೂ ಬಂದ ಈಗ ಆ ಸುತ್ತ ಮುತ್ತ ಯಾರೂ ಇರಲಿಲ್ಲಿ. ಅಲ್ಲಿ ನಿಲ್ಲಿಸಿ ಒಮ್ಮೆ ತನ್ನ ಸೈಕಲ್ ನ ಚೆಂದ ದೂರದಿಂದ ನೋಡಿದ, ಸ್ಟೈಲ್ ಆಗಿ ಎರಡು ಮೂರು ಭಂಗಿಯಲ್ಲಿ ಸೈಕಲ್ ಏರಿದ. ಮತ್ತೆ ಹಾಗೆ ಕಾಲೆತ್ತೋಣ ವೆನ್ನುವಷ್ಟರಲ್ಲಿ ದೂರದಲ್ಲಿ ಒಬ್ಬ ಹುಡುಗಿ ಬರುವುದನ್ನು ಗಮನಿಸಿ ಸುಮ್ಮನಾಗಿ ಹಾಗೆ ಮೆಲ್ಲ ಸೈಕಲ್ ಏರಿ ತುಳಿತಾ ಹೊರಟ. ಹುಡುಗಿ ಪಕ್ಕ ಬರುತ್ತಿದ್ದಂತೆ ಅವನ ತುಳಿತದ speed ಹೆಚ್ಚಿತು. ಅವಳು ಅವನನ್ನೇ ನೋಡುತ್ತಿದ್ದಳು. ಅವನ ಹೃದಯಬಡಿತ ಹೆಚ್ಚಿತು. ಹುಡುಗಿಯ ಮುಖ ನೋಡಿ ತುಳಿದಾಗ ಮುಂದೆ ಇರುವ ಕಲ್ಲುಗಳನ್ನು ಗಮನಿಸಲೇ ಇಲ್ಲ. ಡಮಾರ್ .!!! ಬಿದ್ದೆ ಬಿಟ್ಟ. ಛೆ, ಆಗ ಅವನಿಗಾದ ನಾಚಿಕೆ ಅಷ್ಟಿಷ್ಟಲ್ಲ. ಬಿದ್ದು ಕೈಗೆ ಏಟಾಗಿತ್ತು ಆದರೂ ಹುಡುಗಿಯ ಮುಂದೆ ಅದು ತೋರಿಸಬಾರದೆಂದು ಎದ್ದ ಸಾಧ್ಯವಾಗಲೇ ಇಲ್ಲ. ಹುಡುಗಿಯ ಪುಟ್ಟ ಹೆಜ್ಜೆಯ ವೇಗ ಕೊಡಿ, ಅವನ ಸಹಾಯ ಮಾಡಲು ಓಡಿ ಬಂದಳು. ಮೊದಲು ಸೈಕಲ್ ಎತ್ತಿ ಸರಿ ಇಟ್ಟಳು. ಬಳಿಕ ಅವನ ಬಳಿ ಹೋದಾಗ ಅವನೇ ಪ್ರಯತ್ನ ಮಾಡಿ ಎದ್ದ. ಆದ್ರೆ ಸೈಕಲ್ ಜೊತೆ ಮನೆಗೆ ತಲುಪುವಷ್ಟು ಶಕ್ತಿ ಅವನಿಗಿರಲಿಲ್ಲ. ಇದು ತಿಳಿದ ಹುಡುಗಿ ಅವನನ್ನು ಹಿಂದೆ ಕೂರಿಸಿ ಸ್ವತಹ ಸೈಕಲ್ ತುಳಿದಳು. ಅವರಿಬ್ಬರೂ ಅಂದಿನಿಂದ ಜೀವನ ಪೂರ್ತಿ ಜೊತೆಗೆ ಪಯಣಿಸಿದರು. ಕೆಲವೊಮ್ಮೆ ಅವನು ಸೈಕಲ್ ತುಳಿಯ ಬೇಕಿತ್ತು ಕೆಲವೊಮ್ಮೆ ಅವಳೂ ...

--

Rating
No votes yet

Comments