ಸ್ನೇಹಿತನ ಮನೇಲಿ 4-ವ್ಹೀಲರ್?!
ದಿಲೀಪ ಫೋನ್ ಮಾಡಿದ್ದ.. ನಾನೋ ಅವನೋ ಒಟ್ಟಿಗೆ ದಿನಕ್ಕೊಮ್ಮೆಯಾದರೂ ಸಿಲ್ಲಿ ಸಿಲ್ಲಿ ವಿಷಯಕ್ಕಾದರೂ ಫೋನ್ ಮಾಡ್ತಾನೆ ಇರ್ತೀವಿ.
ಹಾಗೆ ಮಾತಾಡ್ತಾ ಮಾತಾಡ್ತಾ ನನಗೊಂದು ಶಾಕ್ ಕೊಟ್ಟ. ಸಕತ್ ಶಾಕ್ ..
ಲೋಕರ ಮನೇಲಿ ಇವತ್ತು "೪ ವ್ಹೀಲರ್" ....ಅಂದ. ನನಗಂತೂ ಫುಲ್ ಶಾಕ್!!.
ಅಲಾ ಗೌಡ ...ಅಲಾ ಟಗರೂ.. ವಾರಕ್ಕೆ ಹತ್ತದಿನೈದು ಸರೀನದ್ರೂ ಫೋನ್ ಮಾಡ್ತಾ ಇರ್ತೀಯ... ನಿನ್ನ ಮದ್ವೆಗೆ ನಾನೇ ಫೋಟೋ ಗ್ರಾಪರ್. ನಿನ್ನ ಎಂಗೇಜ್ಮೆಂಟ್ ಲ್ಲಿ ಓಡಾಡಿದ್ದೇ ನಾನು ಮತ್ತು ದಿಲೀಪ. ನಂಗೆ ಹೇಳಿಲ್ವ ೪ ವ್ಹೀಲರ್ ತಗೊಂಡಿದ್ದು ... ತಡೀ ಮಗನೆ ಫೋನ್ ಮಾಡ್ತೀನಿ .. ಇನ್ನೂ ಏನೇನೋ ಯೋಚನೆಗಳು ಅರ್ದ ಸೆಕೆಂಡುಗಳಲ್ಲಿ ಬಂದು ಹೋದವು.
ತುಂಬಾ ಹಿಂದೆ ಹೀಗೆ ಒಮ್ಮೆ ೪ ವ್ಹೀಲರ್ ತೊಗೊಳ್ಳೋ ಯೋಚನೆ ಐತಿ ಅಂದಿದ್ದ. ಆದರೆ ಸಧ್ಯಕ್ಕೆ ಅವನ ಕೈಯಲ್ಲಿ ಆಗಲ್ಲ ಅಂದುಕೊಂಡಿದ್ದೆ. ಇವತ್ತು ನೋಡಿದ್ರೆ.. ಆಗಲೇ ಅವರ ಮನೇಲಿ ೪ ವ್ಹೀಲರ್! ...
ಸಾಮಾನ್ಯವಾಗಿ ನನ್ನ ಕಿವಿ ಮೇಲೆ ಹಾಕದೆ ಇಂತ ಕೆಲಸ ಯಾವತ್ತೂ ಮಾಡದ ಇವ್ನು ಈ ಸರಿ ಯಾಕೆ ಮಾಡಿದ.... ಯಾಕೆ .. ಯಾಕೆ? ... ತಲೇಲಿ ೧ ನಿಮಿಷ ಸಣ್ಣ ಹುಳ ...
ಎಲ್ಲ್ಲಿವರಗೆ ?
ಕೊನೆಗೆ ನಮ್ಮ ದಡಿಯ ಸಸ್ಪೆನ್ಸ್ ಬಿಡ್ಸೊವರ್ಗೂ ಏನೇನು ಆವಾಜ್ ಹಾಕಬೇಕು ಅಂತ ಪ್ರಿಪೇರ್ ಆಗಿದ್ದೆ ಆಗಿದ್ದು.. ಅವನಿಗೂ ಅದನ್ನ ಹೇಳಿದ್ದೆ ಹೇಳಿದ್ದು. ....
ಕೊನೆಗೆ ನಂಗೆ ಗೊತ್ತಾಗಿದ್ದು ...
ಅವರ ಮನೇಲಿ 4-ವ್ಹೀಲರ್ ಅಂದ್ರೆ "ಕುರಿ" ಅಂತೆ.
ಕೋಳಿಗೆ 2-ವ್ಹೀಲರ್ ಅಂತಾರೆ ಅಂತ ಎಕ್ಸ್ಟ್ರಾ ಇನ್ಫಾರ್ಮೆಷನ್ನು!
Comments
ಉ: ಸ್ನೇಹಿತನ ಮನೇಲಿ 4-ವ್ಹೀಲರ್?!
In reply to ಉ: ಸ್ನೇಹಿತನ ಮನೇಲಿ 4-ವ್ಹೀಲರ್?! by ಪಂಚರಂಗಿ
ಉ: ಸ್ನೇಹಿತನ ಮನೇಲಿ 4-ವ್ಹೀಲರ್?!
In reply to ಉ: ಸ್ನೇಹಿತನ ಮನೇಲಿ 4-ವ್ಹೀಲರ್?! by savithru
ಉ: ಸ್ನೇಹಿತನ ಮನೇಲಿ 4-ವ್ಹೀಲರ್?!