ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?

ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?

ಭಾರತದ ಸ್ವಾತಂತ್ರ್ಯ ಸಂಗ್ರಾಮದ ವಿಷಯವನ್ನು ಪ್ರಸ್ತಾಪಿಸುವಾಗಲೆಲ್ಲ ನಾವು ಮಾಡುವ ಹೆದ್ದಪ್ಪು ಎಂದರೆ ’ಸ್ವಾತಂತ್ರ್ಯ ಸಿಕ್ಕಿತು’ ಎಂದು ಹೇಳುವುದು. ನಾವು ತಿದ್ದಿಕೊಳ್ಳಲೇಬೇಕಾದ ಅಂಶ ಒಂದಿದೆ: ನಮಗೆ ಸ್ವಾತಂತ್ರ್ಯ ಸಿಕ್ಕಿದ್ದಲ್ಲ, ನಾವು ಸ್ವಾತಂತ್ರ್ಯವನ್ನು ಪಡೆದುಕೊಂಡೆವು.

ಹಾಗಾದರೆ ನಾವು ಸ್ವಾತಂತ್ರ್ಯ ಕಳೆದುಕೊಂಡದ್ದು ಯಾವಾಗ?

ಈ ಪ್ರಶ್ನೆಗೆ ಬಹುಪಾಲು ಜನರಿಂದ ನಮಗೆ ಸಿಗುವ ಉತ್ತರವು ಇತಿಹಾಸದ ಕಾಲಖಂಡದಲ್ಲಿ ಇಂದಿನಿಂದ ೧೫೦ ವರ್ಷಗಳನ್ನು ದಾಟಿ ಆಚೆ ಹೋಗಲಾರದು. [Jhansi LakshmiBhai, Kitturu Chennamma, Bhagat Singh, Gandhiji, Netaji, etc.. ನಮಗೆ ಚಿರಪರಿಚಿತವಾದ ಹೆಸರುಗಳು.]

ಇದಕ್ಕೆ ಕಾರಣ ನಮಗೆ ಸಂಕುಚಿತವಾಗಿ ೪೦ ಪುಠಗಳ ಪಠ್ಯಪುಸ್ತಕದಿಂದ ಬೋಧಿಸಿಲಾದ ಇತಿಹಾಸ ಆಗಿದ್ದರೂ ಬಹಳಷ್ಟುಮಟ್ಟಿಗೆ ರಾಜಕೀಯ ಕಾರಣವೂ ಹೌದು. [Dr SL Bhairappa ಅವರು ಹೇಳುವಂತೆ NCERT Text book committe was politically influenced]

ಈ ಪಠ್ಯಪುಸ್ತಕಗಳ ಪ್ರಕಾರ ಬ್ರಿಟೀಷರು, ಪೋರ್ಚುಗೀಸರು, ಡಚ್ಚರು ಮಾತ್ರ ಹಾವಳಿದಾರರು. ಹಾಗಾದರೆ ೧೦೦೦ ವರ್ಷಗಳ ಹಿಂದೆ ಬಂದ ಮುಘಲರು ನಮ್ಮ ಬೀಗರೆ?

[Unfortunately, our history text books call it 'The Advent of Mughals'. Advent ಎಂದರೆ ’ಆಗಮನ’ ಎಂದರ್ಥ. ಸಂದರ್ಭಕ್ಕೆ ಒಗ್ಗದ ಪದ ಹಾಗು ಶುದ್ಧ ಅಸತ್ಯ ... ]

ಸೂಕ್ಷ್ಮವಾಗಿ ನೋಡಿದರೆ, ನಾವು ಸ್ವಾತಂತ್ರ್ಯ ಕಳೆದುಕೊಂಡದ್ದು ಯಾವಾಗ ಎಂಬ ಪ್ರಶ್ನೆಗೆ ನಿಷ್ಪಕ್ಷಪಾತವಾದ ಉತ್ತರ: ’೧೦೦೦ ಕ್ಕೂ ಹೆಚ್ಚು ವರ್ಷಗಳ ಹಿಂದೆ; MUGHAL ದಾಳಿಯಿಂದ ಹಾಗು ಅದರ ನಂತರ ಸಂಭವಿಸಿದ EUROPEAN ದಾಳಿಯಿಂದ. ’

ಘಟಾನುಘಟಿಗಳಾದ ರಜಪುತರು ಮುಘಲರನ್ನು ಹೊರದಬ್ಬಲು ತಮ್ಮ ಪ್ರಾಣವನ್ನೇ ತ್ಯಜಿಸಿದ ಆ ದಿನಗಳು ಸ್ವಾತಂತ್ರ ಸಂಗ್ರಾಮದ ಪ್ರಾತ:ಕಾಲವೆಂದರೆ ತಪ್ಪಾಗಲಾರದು. ನಂತರ ಹುಟ್ಟಿದ ಮರಾಠರೂ ಅಷ್ಟೇ ತ್ಯಾಗಿಗಳು.

ಹಾಗಾಗಿ ನಾವು ತಿದ್ದಿಕೊಳ್ಳಬಹುದಾದ ಅಂಶವೆಂದರೆ "ನಮಗೆ ಸ್ವಾತಂತ್ರ ಸಿಕ್ಕಿದ್ದಲ್ಲ. ನಾವು ಸ್ವಾತಂತ್ರವನ್ನು ಪಡೆದುಕೊಂಡೆವು. ಅದಕ್ಕಾಗಿ ನಡೆದ ಸಂಗ್ರಾಮ ೧೦೦೦ ಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ಶುರುವಾದದ್ದು"

 

**************************************************************

ಡಾ ಜಿ.ಬಿ ಹರೀಶ ಅವರು ಬಸವನಗುಡಿಯ ಗೋಖಲೆ ಸಂಸ್ಥೆಯಲ್ಲಿ ಇಂದು ಸಂಜೆ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ನೀಡಿದ ಅಮೂಲ್ಯ ಮಾಹಿತಿಯಿಂದ ಈ ಸಂಚಿಕೆ ಬರೆಯಲು ಕಾರಣವಾಯಿತು.

***************************************************************

Rating
No votes yet

Comments