ಹಣೆಯಲ್ಲಿ ಬರೆದದ್ದು
ತಾನೆ ಲೋಕಕ್ಕೊಡೆಯ ಮಾವ ಬೆಟ್ಟಗಳೊಡೆಯ
ಗೆಳೆಯನೋ ಸಿರಿಗೊಡೆಯ ಮಗ ಗಣಗಳೊಡೆಯ
ಅದಕೇನು? ತಿರಿದು ತಿಂಬುದು ತಪ್ಪಲಿಲ್ಲವು ಶಿವಗೆ
ಅದಕೆ ಹೇಳುವೆನಿಂದು ವಿಧಿಯೆ ಬಲವೆಂದು!
ಮೂಲ ಸಂಸ್ಕೃತ ಪದ್ಯ ಹೀಗಿದೆ:
ಸ್ವಯಂ ಮಹೇಶಃ ಶ್ವಶುರಃ ನಗೇಶಃ ಸಖಾ ಧನೇಶಃ ತನಯಃ ಗಣೇಶಃ |
ತಥಾಪಿ ಭಿಕ್ಷಾಟನಮೇವ ಶಂಭೋಃ ಬಲೀಯಸೀ ಕೇವಲಮೀಶ್ವರಿಚ್ಛಾ! ||
-ಹಂಸಾನಂದಿ
Rating
Comments
ಉ: ಹಣೆಯಲ್ಲಿ ಬರೆದದ್ದು
In reply to ಉ: ಹಣೆಯಲ್ಲಿ ಬರೆದದ್ದು by ಸಂಗನಗೌಡ
ಉ: ಹಣೆಯಲ್ಲಿ ಬರೆದದ್ದು