ಹಿಂದೂ ದೇವರುಗಳ ಮೇಲೆ ಏಕೆ ಈ ರೀತಿ?

ಹಿಂದೂ ದೇವರುಗಳ ಮೇಲೆ ಏಕೆ ಈ ರೀತಿ?

ಇತ್ತೀಚಿಗೆ ನಾನು ಕಂಡಂತೆ ಬಹಳಷ್ಟು ಸಂಗತಿಗಳು ಹಿಂದೂ ದೇವರುಗಳನ್ನು ಹೀಯಾಳಿಸುವುದು, ಹಿಂದೂ ದೇವರುಗಳ ಚಿತ್ರಗಳನ್ನು ಕೆಟ್ಟದಾಗಿ ಬಳಸಿಕೊಳ್ಳುವುದು ನಡೆಯುತ್ತಿದೆ. ಯಾಕೆ ಈ ರೀತಿ. ಅಲ್ಲೊಬ್ಬ ವಿಕೃತ ಮನಸ್ಕ ಚಿತ್ರಕಾರಿ ಹಿಂದೂ ದೇವರುಗಳನ್ನು ನಗ್ನವಾಗಿ ಚಿತ್ರಿಸಿ ವಿ(ಕು)ಖ್ಯಾತನಾಗಿ ಜನಕ್ಕೆ ಹೆದರಿ ದೇಶ ಬಿಟ್ಟು ಹೋಗಿ ಎಲ್ಲೋ ಸತ್ತ, ಇನ್ನೊಬ್ಬ ಮುಖ್ಯಮಂತ್ರಿ ತಿರುಮಲ ಶ್ರೀನಿವಾಸನನ್ನು ಹೀಯಾಳಿಸಿ ತಿರುಮಲ ಬೆಟ್ಟದಲ್ಲಿ ಚರ್ಚ್ ಸ್ಥಾಪಿಸಲು ಸಾಧ್ಯವಾಗದೆ ಎಲ್ಲೋ ಕಾಡಿನಲ್ಲಿ ಸುಟ್ಟು ಕರಕಲಾಗಿ ಹೋದ. ಇನ್ನು ಕೆಲ ವಿಕೃತ ಮನಸ್ಕ ವಿದೇಶಿಯರು ಹಿಂದೂ ದೇವರುಗಳನ್ನು ಒಳ ಉಡುಪುಗಳ ಮೇಲೆ, ಕಾಲಿನ ಬೂಟ್ಸುಗಳ ಮೇಲೆ ಚಿತ್ರಿಸುತ್ತಿದ್ದರೆ, ಇನ್ನು ನಮ್ಮವರೇ ಕೆಲವರು ಹಿಂದೂ ದೇವರನಾಮಗಳನ್ನು, ಕೀರ್ತನೆಗಳನ್ನು, ಶ್ಲೋಕಗಳನ್ನು ಸಿನೆಮಾಗಳಲ್ಲಿ ತಿರುಚಿ ರೀಮಿಕ್ಸ್ ಮಾಡಿ ಅದಕ್ಕೆ ಪಾಶ್ಚಾತ್ಯ ಸಂಗೀತವನ್ನು ಸೇರಿಸಿ ಅವಮಾನ ಮಾಡುತ್ತಿದ್ದಾರೆ. ಇದಲ್ಲೆಕ್ಕೂ ಹೊಸದಾದ ಸೇರ್ಪಡೆ ಎಂದರೆ ಇತ್ತೀಚಿಗೆ ಸತ್ತ "ಮಾಂತ್ರಿಕ" ಬಾಬಾ ಒಬ್ಬನ ರಹಸ್ಯಗಳು ಒಂದೊಂದಾಗಿ ಹೊರಬರುತ್ತಿದೆ. ಅದರಲ್ಲಿ ಆತ ಧರಿಸುತ್ತಿದ್ದ ಪಾದುಕೆ ಒಂದು ಗಮನ ಸೆಳೆಯುವಂತದ್ದು. ಆತನ ಚಿನ್ನದ ಪಾದುಕೆಗಳಲ್ಲಿ ಹಿಂದೂ ದೇವತೆಗಳಾದ ಅಷ್ಟ ಲಕ್ಷ್ಮಿಯರನ್ನು ಚಿತ್ರಿಸಿದ್ದಾರೆ. ಆ ಪಾದುಕೆಗಳನ್ನು ಯಾವ ವಿಕೃತ ವ್ಯಕ್ತಿ ದಾನ ಕೊಟ್ಟನೋ ಅಥವಾ ಈತನೇ ಮಾಡಿಸಿಕೊಂಡಿದ್ದನೋ ಗೊತ್ತಿಲ್ಲ . ಹಿಂದೂ ಗಳ ಪಾಲಿಗೆ ಸಕಲ ಐಶ್ವರ್ಯ ಧನ ಧಾನ್ಯ ಸಂಪತ್ತು ವಿಜಯ ಸಂತಾನ ಧೈರ್ಯ ಎಲ್ಲವನ್ನೂ ಕರುಣಿಸೋ ಅಷ್ಟ ಲಕ್ಷ್ಮಿಯರನ್ನು ತನ್ನ ಕಾಲಿನಡಿಯ ಪಾದುಕೆಯಲ್ಲಿ ಧರಿಸುತ್ತಿದ್ದ ಆ "ಡೋಂಗಿ" ಬಾಬಾನ ಮನಸು ಇನ್ನೆಷ್ಟು ವಿಕೃತವಾದದ್ದು.

ಯಾಕೆ ಹಿಂದೂ ದೇವರುಗಳೆಂದರೆ ಈ ರೀತಿಯ ಅವಮಾನ ಮಾಡುತ್ತಾರೆ?

ಹಿಂದೂಗಳ ಮನದ ಭಾವನೆಗಳ ಜೊತೆ ಆಟ ಆಡುವ ಈ ವಿಕೃತ ಮನೋಭಾವ ಎಂದು ನಿಲ್ಲುವುದು?
Rating
No votes yet

Comments