ಹೀಗೇಕೆ ನಾನಾದೆ

ಹೀಗೇಕೆ ನಾನಾದೆ

"ಇದ್ಯಾಕೆ ಇಷ್ಟೊಂದು ಖರ್ಚು ಮಾಡಿ ಬುಕ್ಸ್ ತಂದಿದೀಯಾ.ನಿಂಗೇ ಯಾಕೆ ಈ ಪುಸ್ಕಕಾ ಎಲ್ಲಾ ಓದೋ ಮನಸಾಯ್ತು? ಇಷ್ಟು ಬೇಗ ಈ ವಯಸ್ಸಲ್ಲಿ"
ಅಮ್ಮ ರೇಗಿಸ್ತಿದ್ದರು
"ಎಲ್ಲಾ ನಿಂಗೆ ತಂದಿದ್ದೂ" ಅದು ಸುಳ್ಳು ಅಂತ ನಂಗೆ ಗೊತ್ತಿತ್ತು
ನೆನ್ನೆ ಅವೆನ್ಯೂ ರೊಡ್‌ನಲ್ಲ್ ಒಂದಷ್ಟು ಕಂಪ್ಯೂಟರ್ ಪುಸ್ತಕ ಕೊಳ್ಳುವುದಿತ್ತು.
ಅಲ್ಲಿಗೆ ಹೋಗಿ ತೆಗೆದುಕೊಳ್ಳುವಾಗಲೆ ಕಾಮತ್ ಹೋಟೆಲ್ ಎದುರಿರುವ ಪುಸ್ತಕದ ಅಂಗಡಿಯೊಂದರಲ್ಲಿ ಕೆಲವು ಪುಸ್ತಕಗಳು ಕಾಣಿಸಿದವು
ಅವು
ಸರಿ ಪುಸ್ತಕ ಖರೀದಿಗೆ ಇಳಿದೇ ಬಿಟ್ಟೆ
ಸುಮಾರು ಇಪ್ಪತ್ತು ಪುಸ್ತಕ ತೆಗೆದುಕೊಂಡೆ
ಅವುಗಳ ಟೈಟಲ್ಸ್ ಹೀಗಿವೆ
ಸಂಪೂರ್ಣ ಮಹಾಭಾರತ ಹದಿನೆಂಟು ಪರ್ವಗಳು
ಆ ಹದಿನೆಂಟು ದಿನಗಳು
ವಾಲ್ಮೀಕಿ ರಾಮಾಯಣ ಎರೆಡೂ ಭಾಗಗಳು
ಧರ್ಮ ಸಿಂಧು
ಹೋರಾ ಶಾಸ್ತ್ರ ಪರಾಶರ ವಿರಚಿತ
ಆದಿ ಪುರಾಣ
ದಶಾವತಾರ
ದೇವ ಸ್ಥುತಿ
ಇನ್ನೂ ಅನೇಕವು
ಈಗಾಗಲೇ ಆ ಹದಿನೆಂಟು ದಿನಗಳು ಓದಿದೆ ತುಂಬಾ ಚೆನ್ನಾಗಿವೆ.ಓದುತ್ತಿದ್ದಂತೆ ಆ ದೃಶ್ಯಗಳು ಪಾತ್ರಗಳು ಕಣ್ಣ ಮುಂದೆ ಬಂದು ನಿಲ್ಲುತ್ತಿವೆ
ಅಸಹಾಯಕ ಸ್ಥಿತಿಯಲ್ಲೂ ದುರ್ಯೋದನದ ವೀರ ಮಾತುಗಳು ತುಂಬಾ ಹಿಡಿಸಿದವು
ನನ್ನನ್ನು ಕಾಡಿದ ಎರೆಡು ಪಾತ್ರಗಳು
ಒಂದು ಗಾಂಧಾರಿಯದು ಮತ್ತೊಂದು ಭಾನುಮತಿಯದು
ಇಬ್ಬರ ವ್ಯಕ್ತಿತ್ವ ಅದೆಷ್ಟು ಭಿನ್ನ
ಗಂಡನ ದಾರಿಯನ್ನೇ ತುಳಿದು ತಾನು ಕುರುಡಾದ ಗಾಂಧಾರಿ ಎಲ್ಲಿ
ಗಂಡನ ಹತ್ಯೆ ಮೋಸದಿಂದಾದುದು ಎಂದು ತಿಳಿದ ನಂತರವೂ ಅವನ ಸಾವಿಗೆ ಮರುಗದ ಭಾನುಮತಿ ಎಲ್ಲಿ .
ನೀನಾದರೂ ದುರ್ಯೋದನನಿಗೆ ಬುದ್ದಿ ಹೇಳಬಾರದಿತ್ತೆ ಎಂದು ಕೃಷ್ಣ ಕೇಳಿದಾಗ
"ನಿನಗೆ ತಿಳಿಯದ್ದೇನಿದೆ. ನಮ್ಮ ದೇಶದಲ್ಲಿ ಹೆಣ್ನಿನ ಮಾತಿಗೆ ಬೆಲೆ ಎಲ್ಲಿದೆ "ಎಂದು ನಿಟ್ಟುಸಿರುಡುತ್ತಾಳೆ
ಅವಳ ಪಾತ್ರ ಖಂಡಿತಾ ಒಂದು ಆದರ್ಶವಾಗಿವೆ
ಅಯ್ಯೋ ಮಾತು ಎಲ್ಲಿಂದಲೋ ಎಲ್ಲೋ ಹೋಗುತ್ತಿವೆ.
ನಾನ್ಯಾಕೆ ಹೀಗೆ ಆಧ್ಯಾತ್ಮಿಕ ಆಲೋಚನೆ ಮಾಡುತ್ತಿದ್ದೇನೆ
ಏನೋ ತಿಳೀತಿಲ್ಲ

Rating
No votes yet

Comments