ಹೀಗೊಂದು ಮದುವೆ ಮಾತುಕತೆ!-ಎಲ್ಲರ ಕನ್ನಡದಲ್ಲಿ

ಹೀಗೊಂದು ಮದುವೆ ಮಾತುಕತೆ!-ಎಲ್ಲರ ಕನ್ನಡದಲ್ಲಿ

ವರ್ಷದ ಹಿಂದೆ ಗೆಳೆಯ ಹನುಮಂತನ ಜೊತೆ ಅವನ ಮನೆಗೆ ಹೋಗಿದ್ದೆ, ಆಗ ಹನುಮಂತ್ ಮತ್ತು ಅವರ ತಂದೆ ನಡುವೆ ನಡೆದ ಮಾತುಕತೆ.(ಹನುಮಂತನ ತಂಗಿಯ ಮದುವೆ ಕುರಿತು)

***********************************************************************

ಶ್ರೀಮಂತಪ್ಪ:-ಹುಡುಗ ಬಿ ಎ ಓದಿದ್ದಾನೆ, ಮನೆಗೆ ಒಬ್ನೇ ಮಗಾ, ೨೦ ಎಕರೆ ಹೊಲ ಇದೆ, ರಾಧಾನ ಸಲುವಾಗಿ ಕೇಳುತಿದ್ದಾರೆ, ಏನ್ ಮಾಡೋದು?
ಹನುಮಂತ್ :- ವರದಕ್ಷಿಣೆ ಎಷ್ಟು ಕೇಳುತಿದ್ದಾನೆ?
ಶ್ರೀಮಂತಪ್ಪ:- ವರದಕ್ಷಿಣೆ ಏನು ಬೇಡವಂತೆ, ಬರಿ ಮಾಡುವೆ ಮಾಡಿಕೊಟ್ರೆ ಸಾಕಂತೆ,
ಹನುಮಂತ್ :- ಮೊನ್ನೆ ಬೀದರ್ ನಿಂದ ನೋಡಕ್ಕೆ ಬಂದಿದ್ದರಲ್ಲ, ಏನಾಯ್ತು?
ಶ್ರೀಮಂತಪ್ಪ:- ಆ ಹುಡುಗ ಇಂಜಿನಿಯರ್ ಅದಾನಂತ, ಕಮ್ಮಿ ಅಂದ್ರು ಅದೇನೋ ೧ ಸಿ ಟಿ ಸಿ ಬೇಕಂತ, ಸಿ ಟಿ ಸಿ ಅಂದ್ರೆ ಏನೋ? ನನಗೆ ತಿಳಿಲಿಲ್ಲ, ಅದಕ್ಕ ನಿನಗೆ ಕೇಳೋಣ ಅಂತ ಸುಮ್ಮನಾದೆ ನೋಡು,
ಹನುಮಂತ್ :- ೬ ತಿಂಗಳ ಹಿಂದೆ ಹುಡುಗಿ ನೋಡೋಕಿಂತಾ ಮೊದ್ಲು ವರದಕ್ಷಿಣೆ ಬೇಡ ಅಂತ ಹೇಳಿದ್ನಲ್ಲ, ಇಗೆನಾಯಿತು ಅವ್ನಿಗೆ?
ಶ್ರೀಮಂತಪ್ಪ:- ಆಗ ಕೆಲಸ ಇದ್ದಿಲ್ಲಾ, ಈಗ ಇಂಜಿನಿಯರ್ ಆಗಿದ್ದನಂತೆ, ಅದಕ್ಕೆ ೧ ಸಿ ಟಿ ಸಿ ಬೇಕಂತೆ. ಹಂಗಂದ್ರೆ ಎಸ್ಟೋ?
ಹನುಮಂತ್:- ಅವನ ಸಂಬಳ ಎಸ್ಟಂತೆ?
ಶ್ರೀಮಂತಪ್ಪ:- ತಿಂಗಳಿಗಿ ಮೂವತ್ತು ಸಾವಿರ ಅದಾ ಅಂತಾ ನೋಡು?
ಹನುಮಂತ್:- ಅವ್ನಿಗಿ ೪ ಲಕ್ಷ ಬೇಕಂತ, ೧ ಸಿ ಟಿ ಸಿ ಅಂದ್ರೆ ೪ ಲಕ್ಷ ಆಗ್ತಾವ.ಹೋಗ್ಲಿ ಮತ್ತೆ ಈ ಬಿ ಎ ಮಾಡಿನ ಹುಡುಗನಿಗೆ ನೋಡೋಣ ಏನಂತೀರಿ?
ಶ್ರೀಮಂತಪ್ಪ:- ವರದಕ್ಷಿಣೆ ಬೇಡಾ ಅನ್ತಿದ್ದನಲ್ವ, ಹುಡುಗನಲ್ಲಿ ಏನಾದ್ರು ಸಮಸ್ಯೆ ಇರಬಹುದೇನೋ?
ಹನುಮಂತ್:- ಹಂಗೇನು ಇರಲ್ಲ, ಹುಡುಗಿ ಹಿಡ್ಸಿರಬೇಕು, ಅದಕ್ಕೆ ವರದಕ್ಷಿಣೆ ಬೇಡಾ ಅಂತಿದ್ದಾನೆ, ಆದರು ನೀ ವಿಚಾರ ಮಾಡು, ನಿ ಏನ್ ಹೇಳ್ತಿಯೋ ಅದನ್ನೇ ಮಾಡೋಣ.
ಶ್ರೀಮಂತಪ್ಪ:- ನೀವೆಲ್ಲಾ ಸರಿ ಅಂದ್ರೆ ನನಗು ಓಕೆ ಕಣಪ್ಪ.
************************************************************************

ಮೊನ್ನೆ ಹನುಮಂತನ ಮದುವೆಗೆ ಹೋಗಿದ್ದೆ, ಆಗ ಯಾರೋ (ಹುಡುಗಿ ಕಡೆಯವರೇ ಇರ್ಬೇಕು )ಮಾತಾಡ್ತಾ ಇದ್ದದ್ದು ಕೇಳಿಸಿಕೊಂಡೆ,

ಇಲ್ಲ್ರಿ ಮೊದ್ಲು ಬಿದರನ ಹುಡುಗನ್ನ (ಮೊದಲು ರಾಧಾನ ಸಲುವಾಗಿ ನೋಡಿದ ಗಂಡು)ನೋಡಿದ್ದೆವು, ಅದೇನೋ ಇಂಜಿನಿಯರ್ ಇದ್ದ ಅಂತ, ೪ ಲಕ್ಷ ಕೇಳಿದ್ದ, ಆಯ್ತು ಅಂದಿದ್ದೆವು, ಆದ್ರೆ ಅವನಿಗೆ ಕೆಲಸದಿಂದ ತೆಗ್ದಿದ್ದಾರೆ ಅಂತ , ಈಗ ಅವ್ನು ಇಂಜಿನಿಯರ್ ಇಲ್ಲಾ ಅಂತೆ, ಅದಕ್ಕೆ ಇವ್ನಿಗಿ ನೋಡಿದ್ವಿ,
ಹುಡುಗ ಪೂನಾದಲ್ಲಿ ಇಂಜಿನಿಯರ್ ಇದ್ದಾನೆ.೫ ಲಕ್ಷ ವರದಕ್ಷಿಣೆ ಕೊಟ್ಟಿದ್ದಿವಿ.

***********************************************************************

ಶಶಿ ಬಿರ್ಗೆ

Rating
No votes yet

Comments