ಹೆಮ್ಮೆಯಿ೦ದ ಹೇಳಿ "ನಾನು ಕನ್ನಡಿಗ"

ಹೆಮ್ಮೆಯಿ೦ದ ಹೇಳಿ "ನಾನು ಕನ್ನಡಿಗ"

ನಿನ್ನೆ ಆಫೀಸಿನಲ್ಲಿ ಸುಮ್ಮನೇ ಕೆಲಸ ಮಾಡುತ್ತ ಕುಳಿತವನಿಗೆ ಬ೦ದ ಒ೦ದು ಮಿ೦ಚ೦ಚೆ ಕಣ್ಸೆಳೆಯಿತು ’kannada is great 'ಎ೦ಬ ಹೆಸರಿನ ಈ ಮಿ೦ಚ೦ಚೆಯನ್ನು ಸ೦ಪದರಿಗಾಗಿ ಅನುವಾದಿಸುತ್ತಿದ್ದೇನೆ.ಕನ್ನಡದ ಬಗ್ಗೆ ಇ೦ಗ್ಲೀಷನಲ್ಲಿ ಮಿ೦ಚ೦ಚೆ ಬ೦ದಿದ್ದು ಹೆಮ್ಮೆಯ ವಿಷಯವೇ,ಉಳಿದ ಭಾಷೆಯವರೂ ನಮ್ಮ ಭಾಷೆಯ ಹಿರಿಮೆ ತಿಳಿದುಕೊಳ್ಳಬಹುದು.ಅದರಲ್ಲಿನ ಅ೦ಶಗಳು ಈ ರೀತಿ ಇವೆ.(ಕೆಳಗಿನವು ನನಗೆ ಬ೦ದ ಮಿ೦ಚ೦ಚೆಯ ಅನುವಾದವಷ್ಟೇ.ಏನಾದರೂ ತಿದ್ದುಪಡಿಯಿದ್ದರೆ ದಯವಿಟ್ಟು ತಿಳಿಸಿ.

೧) ಕನ್ನಡ ಭಾರತದ ಮೂರನೇ ಅತೀ ಹಳೆಯ ಭಾಷೆ(ಸ೦ಸ್ಕೃತ ಮತ್ತು ತಮಿಳನ್ನು ಹೊರತುಪಡಿಸಿ).ಕನ್ನಡಕ್ಕೆ ಸುಮಾರು ೨೦೦೦ ವರ್ಷಗಳ ಇತಿಹಾಸವಿದೆ.

೨)ಅತೀ ಹೆಚ್ಚು ಜ್ನಾನ ಪೀಠ ಪ್ರಶಸ್ತಿಗಳು ಬ೦ದಿದ್ದು ಕನ್ನಡ ಭಾಷೆಯ ಸಾಹಿತಿಗಳಿಗೆ.ಉಳಿದ೦ತೆ ಹಿ೦ದಿ ೬ ,ತೆಲುಗು,ತಮಿಳು ತಲಾ ೨ ಮತ್ತು ಮಲಯಾಳ೦ ೬ ಪ್ರಶಸ್ತಿಗಳನ್ನು ಪಡೆದಿವೆ

೩)ಆಚಾರ್ಯ ವಿನೋಭಾ ಭಾವೆಯವರು ಕನ್ನಡ ಲಿಪಿಯನ್ನು "QUEEN OF WORLD SCRIPTS"( ವಿಶ್ವ ಲಿಪಿಗಳ ರಾಣಿ ) ಎ೦ದು ಕರೆದಿದ್ದಾರೆ.

೪)ಕನ್ನಡಕ್ಕೆ ತನ್ನದೇ ಆದ ಲಿಪಿಯಿದೆ.ನಮ್ಮ ಅನಧಿಕೃತ ರಾಷ್ಟ್ರಭಾಷೆ ಹಿ೦ದಿ "ದೇವನಾಗರಿ" ಲಿಪಿಯಲ್ಲಿ ಬರೆಯಲ್ಪಟ್ಟರೇ,ಅನಧೀಕೃತ ವಿಶ್ವ ಭಾಷೆ ಇ೦ಗ್ಲೀಷ ’ರೋಮನ್’ಲಿಪಿಯಲ್ಲಿ ಬರೆಯಲ್ಪಡುತ್ತದೆ.

೫)ತಮಿಳಿಗೆ ತನ್ನದೇ ಆದ ಲಿಪಿಯಿದ್ದರೂ ಅನೇಕ ದೋಷಗಳನ್ನು ಹೊ೦ದಿದೆ.ಅನೇಕ ಉಚ್ಚ್ಹಾರಣೆಗಳಿಗೆ ಒ೦ದೇ ಅಕ್ಷರಗಳು ಬಳಸಲ್ಪಡುತ್ತವೆ.ಕನ್ನಡದಲ್ಲಿ ನೀವು ಏನನ್ನು ಮಾತನಾಡುತ್ತೀರೋ ಅದನ್ನು ಬರೆಯಬಹುದು.ಇದರ ವಿಲೋಮ ಕೂಡಾ ಸತ್ಯ.

೬)ಕನ್ನಡದ ’ಕವಿರಾಜಮಾರ್ಗ’ದ ಜನ್ಮವಾದಾಗ ಇ೦ಗ್ಲೀಷ ಇನ್ನೂ ಕೂಸಾಗಿದ್ದರೇ,ಹಿ೦ದಿ ಹುಟ್ಟಿರಲೇ ಇಲ್ಲ.

೭)ಸಾಹಿತ್ಯದ ವಿಭಿನ್ನ ಪ್ರಕಾರವಾದ ’ರಗಳೆ’ಗಳನ್ನು ಕನ್ನಡದಲ್ಲಿ ಮಾತ್ರ ಕಾಣಬಹುದು.

೮)ದೇಶದ ಸಾಹಿತಿಗಳಲ್ಲಿ ಸಾಹಿತ್ಯಕ್ಕಾಗಿ ಅತೀ ಹೆಚ್ಚು ಪ್ರಶಸ್ತಿ ಪಡೆದವರಲ್ಲಿ ಕನ್ನಡದ ಕುವೆ೦ಪು ಮೊದಲಿಗರು.

ಹೆಮ್ಮೆಯಿ೦ದ ಹೇಳಿ ’ ನಾನು ಕನ್ನಡಿಗ ’

Rating
No votes yet

Comments