ಹೊಸ ಹುಡುಗಿಯ ಹುಡುಕಾಟದಲ್ಲಿ …. !

ಹೊಸ ಹುಡುಗಿಯ ಹುಡುಕಾಟದಲ್ಲಿ …. !


ಹಾಯ್ ಸ್ನೇಹಿತರೆ.

Recession ಟೈಮ್ ಆಗಿರೋದ್ರಿಂದ ನಾನೂ ನನ್ನ ಹಳೆಯ ಗರ್ಲ್ ಫ್ರೆಂಡ್ ನ ಬಿಟ್ಟಿದ್ದೇನೆ. (ಅವಳು ಸ್ವಲ್ಪ costly ಎಂಬ ಕಾರಣಕ್ಕೆ.) ಹಾಗಾಗಿ ನಾನೀಗ ಹೊಸ ಹುಡುಗಿಯನ್ನ ನನ್ನ ಗರ್ಲ್ ಫ್ರೆಂಡ್ ಆಗಿ appoint ಮಾಡಿಕೊಳ್ತಾ ಇದ್ದೇನೆ. ನಿಮಗೆ ಯಾರಾದ್ರು ಗೆಳತಿಯರಿದ್ರೆ ಈ ಆಫರ್ ನ ಅವರಿಗೆ ಕಳುಹಿಸಿ.

 ಉದ್ಯೋಗ ಅವಕಾಶ ಇರೋದು ಈ ಕೆಳಗಿನ ಪೋಸ್ಟ್ ಗೆ. ಸಂಬಳ ಮತ್ತು ಭತ್ಯೆ ಬಗ್ಗೆ ಈ ಕೆಳಗೆ ತಿಳಿಸಲಾಗಿದೆ.

 ಹುದ್ದೆ: Junior girl friend (ತರಭೇತಿ)

ಅನುಭವ: ಕನಿಷ್ಠ ಇಬ್ಬರು ಹುಡುಗರಿಗೆ ಕೈ ಕೊಟ್ಟಿರಬೇಕು (ಸುಂದರವಾದ freshers ಸಹ apply ಮಾಡಬಹುದು)

ಇತರೆ : ಬೀದಿಗಳಲ್ಲಿ ನಿಂತು ಚೌಕಾಸಿ ಮಾಡೋಕೆ ಬರಬೇಕು. ಬೇಕೆನಿಸಿದರೆ ಜಗಳ ಆಡಲು ತಯಾರಿರಬೇಕು.

 ವಯೋಮಿತಿ: 18-23 (ಏಕಾಂಗಿಯಾಗಿರುವ ಸುಂದರವಾದ ಯುವತಿಯರು ವಯೋಮಿತಿ ಮೀರಿದ್ದರೂ ಪ್ರಯತ್ನಿಸಬಹುದು. ಅಂತಹವರಿಗೆ ವಿಶೇಷ ಆದ್ಯತೆ ಇದೆ. )

ಎತ್ತರ, ತೂಕ, ಬಣ್ಣದ ಬಗ್ಗೆ ನಿರ್ದಿಷ್ಟ ಸೂಚನೆಗಳಿಲ್ಲ. ನೀವು ನಿಮಗೆ ಚೆನ್ನಾಗಿದ್ದೀನಿ ಅನ್ಸಿದ್ರೆ ಅಪ್ಲೈ ಮಾಡಬಹುದು.

ಸಂಬಳ ಮತ್ತು ಭತ್ಯೆಗಳು: ಒಟ್ಟು (ತಿಂಗಳಿಗೆ) :

• 1000 ರುಪಾಯಿ ಮೌಲ್ಯ ಮೀರದ 2 ಗಿಫ್ಟ್ ಗಳು./-

• ಬೈಕ್ ನಲ್ಲಿ ಪ್ರತಿ ಮೀಟಿಂಗ್ ನಲ್ಲೂ ಒಂದು ಗಂಟೆ ಸುತ್ತಾಟ.

• ನ್ಯಾಷನಲ್ ಹೈ ವೇಗೆ ಟ್ರಿಪ್ ಗಳು.

• ಹನುಮಂತ ಮಂದಿರ ಹಾಗು ಸಿದ್ದಿ ವಿನಾಯಕ ದೇವಸ್ತಾನಕ್ಕೆ ಎರಡು ಭೇಟಿ.

• ಪ್ರತಿ 3 ದಿನಕ್ಕೊಮ್ಮೆ ಚಾಕಲೇಟ್ ಹಾಗು ಐಸ್ ಕ್ರೀಮ್.

• ಪ್ರತಿ ದಿನ 10 ರುಪಾಯಿ ಮೌಲ್ಯದ ಬೆಲ್ ಪುರಿ, ಪಾನಿ ಪುರಿ ಅಥವಾ ಸಮೋಸ.

• ತಿಂಗಳಿಗೆ 2 ಸಲ ಫಿಲಂ ಗೆ ( ವಾರಾಂತ್ಯಹೊರತು ಪಡಿಸಿ) .

• ನಿಮ್ಮದೇ ಖರ್ಚಿನಲ್ಲಿ ಪ್ರತಿ ವಾರಕ್ಕೊಮ್ಮೆ ಬರಿಸ್ತಾ, ಕಾಫಿ ಡೇ ಅಥವಾ ಮ್ಯಾಕ್ ಡಿ.

ಯಾವುದಾದರೂ ವಿಶೇಷ ಸಂಧರ್ಭದಲ್ಲಿ ಒಂದು ಜೊತೆ ಜೀನ್ಸ್, ಹಾಗು ಟಿ ಶರ್ಟ್ , .

 ಸಂಬಳದಲ್ಲಿ ಕಡಿತಗಳು. (ಪ್ರತಿ ತಿಂಗಳು): ಆಯ್ಕೆಯಾದಲ್ಲಿ ಇದರ ಬಗ್ಗೆ ತಿಳಿಸಲಾಗುವುದು.

6 ತಿಂಗಳವರೆಗೆ probationary , ಅದರ ನಂತರ ಇಷ್ಟವಾದಲ್ಲಿ ಜೀವನ ಪೂರ್ತಿ ಗರ್ಲ್ ಫ್ರೆಂಡ್ ಆಗಿ ಬಡ್ತಿ.

ನೆನಪಿರಲಿ:

 1. ಕೇವಲ ಹುಡುಗಿಯರಿಗೆ

2. 2 ತಿಂಗಳನಿಂದೀಚೆಗೆ ಯಾವುದೇ ಹುಡುಗನಿಗೆ ಕೈ ಕೊಟ್ಟವರಿಗೆ ಅವಕಾಶವಿಲ್ಲ. .

 3. Ex-girlfriends ಸಹ ಅಪ್ಲೈ ಮಾಡಬಹುದು( ಮೇಲಿನ ಎಲ್ಲ conditions ಗೆ ಹೊಂದಿಕೊಳ್ಳುವುದಾದರೆ). .

ಇನ್ನೂ ಇದೆ:

ಈ ಮೇಲ್ಕಂಡ ನಿಬಂದನೆಗಳನ್ನು ಒಪ್ಪದ ಹುಡುಗಿಯರು ತಮ್ಮ ಗೆಳತಿಯರನ್ನು ಪರಿಚಯಿಸಬಹುದು. ಪ್ರತಿ refferal ಗೆ ಒಂದು ಕ್ಯಾಂಡಲ್ ಲೈಟ್ ಡಿನ್ನರ್ ಉಚಿತ.( ಅಭ್ಯರ್ಥಿ ಆಯ್ಕೆಯಾಗದಿದ್ದರೂ ಸಹ)

ಹುಡುಕಾಟ ಎಂದಿಗೂ ಮುಗಿಯದು.!!

ಗರ್ಲ್ ಫ್ರೆಂಡ್ ಆಗಲು ಇಚ್ಚಿಸುವವರು resume ಕಳುಹಿಸಬಹುದು.

 ಕಡ್ಡಾಯವಾಗಿ ಇದನ್ನು ತಿಳಿಸಲೇ ಬೇಕು: ಹೆಸರು/ಅನುಭವ/ವಯಸ್ಸು .

 ಕಡ್ಡಾಯವಾಗಿ ಫೋಟೋ ಕಳುಹಿಸಲೇ ಬೇಕು.

ಸೂಚನೆ: ಫೋಟೋ ಇಲ್ಲದ ಅಪ್ಲಿಕೇಶನ್ ತಿರಸ್ಕೃತವಾಗುವುದು.

 

ಕೃಪೆ :ಮಿಂಚಂಚೆ

Rating
No votes yet

Comments