’ಲಿನಕ್ಸ್ ಹಬ್ಬ’ - ಲಿನಕ್ಸ್ ವ್ರತಕಥಾರ್ಥವು.
’ಲಿನಕ್ಸ್ ಹಬ್ಬ’
ಈ ಹಬ್ಬಸಾಲಿನಲ್ಲಿ ಬರಲಿರುವ ’ಲಿನಕ್ಸ್ ವ್ರತ ಕಥಾರ್ಥವು..
ಗಣಕ ಪುರಾಣಿಕರು ಹೇಳುತ್ತಾರೆ, ಎಲೈ ಮಹಾರಾಜನೇಕೇಳು "ವೈಶಾಖ ಶುದ್ಧ ಪೂರ್ಣಿಮೆಯಂದು ಯಾರು ಅರುಣೋದಯಕ್ಕೆದ್ದು ಅಭ್ಯಂಜನಗೈದು ಭಕ್ತಿಯಿಂದ ಲಿನಕ್ಸ್ ತಂತ್ರಾಂಶವನ್ನು ತಮ್ಮ ಗಣಕಯಂತ್ರಕ್ಕಳವಡಿಸಿ ತಮ್ಮ ಬಂಧು ಮಿತ್ರರೊಂದಿಗೆ ಅದನ್ನು ಉಪಯೋಗಿಸುತ್ತಲೂ, ಅದರ ಮಹಿಮೆಗಳನ್ನು ವರ್ಣಿಸುತ್ತಲೂ ಅದನ್ನು ಕಲಿಯಬೇಕು. ನಂತರ ಚಿನ್ನದಿಂದಾಗಲೀ, ಬೆಳ್ಳಿಯಿಂದಾಗಲೀ ಅಥವಾ ಕಡೇಪಕ್ಶ ಇನ್ನಾವುದಾದರೂ ಲೋಹದಿಂದಾಗಲೀ ತಯಾರಿಸಿದ ಲಿನಕ್ಸ್ ತಂತ್ರಾಂಶವನ್ನಳವಡಿಸಿದ ಸಾಂದ್ರ ತಟ್ಟೆ (ಸಿ.ಡಿ) ಯನ್ನು ತಮ್ಮ ಶಕ್ತ್ಯಾನುಸಾರ ಧಾನ ಮಾಡಿದ್ದೇ ಆದರೆ ಅವರು ಸಕಲಲೋಕಗಳಲ್ಲೂ ಲಿನಕ್ಸ್ ಪರಿಣಿತರೆಂದು ಕರೆಸಿಕೊಳ್ಳುವರು. ಆದಿನ ಇನ್ಯಾವುದೇ ತಂತ್ರಾಂಶವನ್ನೇ ಉಪಯೋಗಿಸುವುದಾಗಲೀ ತಿಳಿಯುವುದಾಗಲೀ ಮಾಡಿದರೆ ಅವರಿಗೆ ಅಪಕೀರ್ತಿಯು ತಪ್ಪದು"
ಸಂಪದ ಪುರಾಣದಲ್ಲಿ ಬರುವ ಲಿನಕ್ಸ್ ವ್ರತ ಕಥಾರ್ಥವು ಸಂಪೂರ್ಣವಾದುದು. :-)
(ಸಮಂತಕೋಪಾಖ್ಯಾನ ಕರ್ತೃಗಳ ಕ್ಷಮೆಕೋರಿ)
Rating
Comments
ಉ: ’ಲಿನಕ್ಸ್ ಹಬ್ಬ’ - ಲಿನಕ್ಸ್ ವ್ರತಕಥಾರ್ಥವು.
In reply to ಉ: ’ಲಿನಕ್ಸ್ ಹಬ್ಬ’ - ಲಿನಕ್ಸ್ ವ್ರತಕಥಾರ್ಥವು. by hamsanandi
ಉ: ’ಲಿನಕ್ಸ್ ಹಬ್ಬ’ - ಲಿನಕ್ಸ್ ವ್ರತಕಥಾರ್ಥವು.