“ .......? ” ಪ್ರೀತಿಯಿಂದ ಪ್ರೀತಿಗಾಗಿ ...... ಜಿ.ವಿಜಯ್ ಹೆಮ್ಮರಗಾಲ..
“ ಪ್ರೀತಿ ”
ಪ್ರೀತಿಯ...""
“ ಪ್ರೀತಿ ”
ಪ್ರೀತಿಯಿಂದ
ಪ್ರೀತಿಗಾಗಿ...
ಪ್ರೀತಿಗೋಸ್ಕರ...
ಪ್ರೀತಿಯನ್ನು...
ಪ್ರೀತಿಯಿಂದ ,
ಪ್ರೀತಿಸುತ್ತಾ ಹೊದಂತೆಲ್ಲಾ....
ಬಿರುಗಾಳಿಗೆ ಸಿಕ್ಕ ಎಲೆಯಂತಾಗಿದ್ದೇನೆ..
ಕಣ್ಣೀರು ಬತ್ತುವಷ್ಟು ಅತ್ತು
ಈ ಭೂಮಿ ಬಾಯ್ತೇರೆದು ನುಂಗಬಾರದೆನಿಸಿದೆ.
ನನ್ನ ಕನಸುಗಳಿಗೆ ನಿನ್ನೊಡನೆ ಕಳೆದ ಸಮಯಗಳನ್ನು
ಕಥೆಗಳನ್ನಾಗಿ ಹೇಳಿ ತಟ್ಟಿ ಮಲಗಿಸುತ್ತೇನೆ...!
ನನ್ನ ಜ್ವರದ ಬಾಧೆಗಳನ್ನು ನೀಗಿಸಿಕೊಳ್ಳುತ್ತೇನೆ....
ಕಹಿ ಕಶಾಯವನ್ನು ಕುಡಿಸಿ ಅದುವೇ;
ಕವಿತೆ- ಕವನಗಳ ಮೊಲಕ
ಬೆರಗಾಗಿ ಹೋದೆ, ನನ್ನ ಬದುಕು
ಸಡಿಲಗೊಳ್ಳುತ್ತಿದೆ, ಎಷ್ಟೇ ಹೆಣೆದರೂ....
ಜೇಡನಂತೆ...!
ಕಾಯುತ್ತಾ....
ಕೊರಗುತ್ತಿರುವೆ...
ಹೂವೂ ಅರಳುವುದನ್ನ,
ಸೂರ್ಯ ನಗುವುದನ್ನ,
ಹಾಲ್ದಿಂಗಳ ಚಂದಿರನ ತಂಪನ್ನ ಸೇರಲೂ...
ಕಾಯುತ್ತಾ.... ಕಾತರಿಸುತ್ತಾ...
ನಿನ್ನೀ ಪ್ರೀತಿಗೆ....
ಪ್ರೀತಿಯಿಂದ...ಪ್ರೀತಿಗಾಗಿ...
ಪ್ರೀತಿಯನ್ನು.. ಪ್ರೀತಿಸುತ್ತಾ ಹೋದಂತೆಲ್ಲಾ...
ನಿನ್ನ ಈ ನೆನಪಿನಲಿ ಅಳ್ತ್ತುತ್ತಾ....
ಕುಳಿತಿರುತ್ತೇನೆ...ಕತ್ತಲೆಯೊಳಗೆ...
ನಿನೊಳಗಿನ ಕವಿತೆಗಳನ್ನ ಹಿಡಿದು...
ಪ್ರೀತಿಯಿಂದ ಪ್ರೀತಿಗಾಗಿ
ಜಿ.ವಿಜಯ್ ಹೆಮ್ಮರಗಾಲ..