IT - ಸಿಂಪ್ಟಮ್ಸ

IT - ಸಿಂಪ್ಟಮ್ಸ

ನೀವು ಈ IT ಇಂಡಸ್ಟ್ರಿ ನಲ್ಲಿ ತುಂಬ ದಿನಗಳಿಂದ ಇದ್ರೆ ... ಈ ಕೆಳಗಿನವು ನಿಮ್ಮ ಸಿಂಪ್ಟಮ್ಸ ಆಗಿರ್ತವೆ.

1. ನಿಮ್ಮ ಮನರಂಜನೆಯ ಮುಖ್ಯ ಮೂಲ , ಮುಖ ಪರಿಚಯವೂ ಮರೆತು ಹೋಗಿರುವಅಂತ?! ವ್ಯಕ್ತಿಗಳ forwards.. (ಮತ್ತು ಇಲ್ಲಿನವರಿಗೆ ಸಂಪದದ ಚರ್ಚೆ/ ಬ್ಲಾಗುಗಳು :) )











2. ನೀವು ನೀರಿಗಿಂತ ಹೆಚ್ಚಾಗಿ ಕಾಫಿ ಅತ್ವ ಟೀ ಕುಡಿಯುತ್ತೀರಿ.











3. ನಿಮ್ಮ ಮನೆ ಕಂಪ್ಯೂಟರ್ ಅನ್ನು Ctrl+Alt+Del (ಆಫೀಸ್ ಕಂಪ್ಯೂಟರ್ಗಳನ್ನು ಲಾಕ್ ಮಾಡುವಂತೆ ! ) ಒತ್ತಿ ಆಫ್ ಮಾಡಲು ಯತ್ನಿಸುತ್ತೀರಿ.











4. ಮನೇಲಿ ಮೊಬೈಲ್ ರಿಂಗ್ ಆದ್ರೆ ಫೋನ್ ರಿಸೀವ್ ಮಾಡಕ್ಕೆ ಮನೆಯಿಂದ ಹೊರಗೆ ಹೋಗ್ತೀರಿ!











5. ಮನೆ ಲ್ಯಾಂಡ್ ಲೈನ್ ನಿಂದ ಫೋನ್ ಮಾಡಬೇಕಾದಾಗ ಕೆಲವೊಮ್ಮೆ 0 (ಸೊನ್ನೆ) ಒತ್ತಿ ಹೊರಗಿನ ಫೋನ್ ನಂಬರ್ ಒತ್ತುತ್ತೀರಿ!











6. ನೀವು ನಿಜವಾದ ಕಾರ್ಡ್ ಗಳಲ್ಲಿ Solitaire ಆಡದೆ ವರ್ಷಗಳೇ ಆಯ್ತು!











7. ನಿಮ್ಮ ಹಿಂದಿನ ಆಕರ್ಷಣೆ ( crush ) HR ಟೀಮ್ ನ ಒಬ್ಳು ಹುಡುಗಿ ಆಗಿದ್ಲು. ನಿಮ್ಮ ಈಗಿನ ಆಕರ್ಷಣೆ ಕೂಡ HR ಟೀಮಿನ ಹೊಸ ಹುಡುಗಿ. ಅಷ್ಟೆ ಅಲ್ಲ ನಿಮ್ಮ ಮುಂದಿನ ಆಕರ್ಷಣೆ ಗಳೂ HR ಟೀಮಿನ ನ ಹುಡುಗಿಯರೇ ಆಗಿರುತ್ತಾರೆ.












8. ನೀವು ನಿಮ್ಮ ಇಡೀ ದಿನವನ್ನು ಅವ್ರು ಇವ್ರು ಕಳಿಸಿರುವ ಮೇಲ್ ಫಾರ್ವರ್ಡುಗಳನ್ನ ಓದೋದ್ರಲ್ಲಿ, ಸಿಗರೇಟ್ ಸೇದೊದ್ರಲ್ಲಿ, ಕಾಫಿ /ಟೀ ಕುಡಿಯೋದ್ರಲ್ಲಿ, TT ಆಡೋದ್ರಲ್ಲಿ ( ಅತ್ವ ಸಂಪದದಲ್ಲಿ :) ) ಕಲೀತಿರಿ.












9. ನಿಮ್ಮ ‘important meeting’ ಗಳಲ್ಲಿ , ಸಾಮಾನ್ಯವಾಗಿ ಎರಡು ಅತ್ವ ಮೂರು ಜನ ( ನಿಮ್ಮನ್ನೂ ಸೇರಿಸಿಕೊಂಡು ) ಇರ್ತಾರೆ.












10. ನಿಮ್ಮ PL ಅನ್ನು ಎಕ್ಷಾಂ ಸೆಂಟರಿನಲ್ಲಿ ನೋಡೋಕ್ಕೊಸ್ಕೊರವೇನೋ :) ಎನ್ನುವಂತೆ, ನೀವು ತುಂಬ ‘ಸೀಕ್ರೆಟ್’ ಆಗಿ CAT ಪರೀಕ್ಷೆಗೆ ತಯಾರಿ ನಡೆಸುತ್ತ ಇರುತ್ತೀರಿ.!.












11. ನಿಮ್ಮ ಜಿಮೇಲ್ ಇಂದ ಮೇಲ್ ಯಾಕೆ ಹೋಗಿಲ್ಲ ಅಂತ Ctrl+Enter ಒತ್ತುತ್ತಾನೆ ಇರ್ತೀರಿ!












13. ನಿಮ್ಮ ಪಕ್ಕದಲ್ಲೇ ಕೂತುಕೊಂಡು ಕೆಲಸ ಮಾಡೋ ಸ್ನೇಹಿತನಿಗೆ / ಸ್ನೇಹಿತೆಗೆ (ಊಟಕ್ಕೋ / ಕಾಫಿಗೋ ಕರಿಯಕ್ಕೆ ) ಮೇಲ್ ಕಳುಸ್ತೀರಿ!












14. ಇದನ್ನು ಓದುತ್ತ ಓದುತ್ತ ಯಾರಿಗಾದರೂ ಫಾರ್ವರ್ಡ್ ಮಾಡಬೇಕು ಅಂತನೋ ಅತ್ವ ಒಂದು ಕಾಮೆಂಟು ಬರೀಬೇಕು ಅಂತಾನೋ ಅನ್ನಿಸ್ತ ಇದೆ.











15. ನೀವು ಅದೆಷ್ಟು ಬ್ಯುಸಿ ಅಂದ್ರೆ ಹನ್ನೆರಡನೇ ಪಾಯಿಂಟು ಬಿಟ್ಟು ಹೋಗಿರೋದು ಗುರ್ತುಸೋಕೂ ಟೈಮಿಲ್ಲ.











16. ಇದರ ಬಗ್ಗೆ ನಿಮೆಗೀನೆ ಗ್ಯಾರಂಟೀ ಇಲ್ಲ. ಅದಕ್ಕೆ scroll back ಮಾಡಿ ನೋಡ್ತೀರಿ!.











17. ೧೭.ಈಗ ನೀವು ಮುಗುಳ್ನಗ್ತಾ ಇದೀರಿ! :)











ನೀವು ೧೫ ರಿಂದ ೧೭ ರವರೆಗಿನ ಸ್ಟೆಪ್ಸ್ ಮಾಡಿರೋದನ್ತೋಓ ನಿಜ .. ಏನಂತೀರಿ! :)

Rating
No votes yet

Comments