ಪುಸ್ತಕ ಪರಿಚಯ
ಲೇಖಕರು: raguks
December 27, 2017

ಭಾರತೀಯ ರಂಗಭೂಮಿಯೊಂದರ ವ್ಯವಸ್ಥೆ ಮತ್ತು ಅವಸ್ಥೆಯ ವಿಮರ್ಶೆಗೊಂದು ಕೈಪಿಡಿ
ಭಾರತೀಯ ಸಾಂಪ್ರದಾಯಿಕ ರಂಗಭೂಮಿಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳಲು ಕಾಲ ಅವಕ್ಕೆ ಒಡ್ಡಿರುವ ಹೊಸ ಸಮಸ್ಯೆಗಳನ್ನು ಅಧ್ಯಯನ ಮಾಡುವ ಮೂಲಕ ಸಾಧ್ಯ ಎನ್ನುವುದು ನಿಜ ಹೌದು. ಹೊಸ ವಿಷಯ ವಸ್ತುಗಳನ್ನು ಹೇಗೆ ಬಳಸಬೇಕು ಬಳಸಬೇಡವೇ, ರಂಗ ಮಾಧ್ಯಮದ ಚೌಕಟ್ಟೇನು ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುವಲ್ಲಿ ರಂಗಭೂಮಿಯ ರೂಪ ಎದ್ದು ನಿಲ್ಲುತ್ತದೆ. ಹೀಗೆ ಯಕ್ಷಗಾನ ಬಯಲಾಟದ ಸ್ವರೂಪ ಆಗುತ್ತಿರುವ ಬದಲಾವಣೆ ಹಾಗೂ ಸಂಬಂಧಿಸಿದ…
ಲೇಖಕರು: addoor
July 11, 2017

“ಗುಡ್ ಅರ್ತ್” ನೋಬಲ್ ಪ್ರಶಸ್ತಿ ಪುರಸ್ಕೃತ ಚೀನೀ ಕಾದಂಬರಿ. ವಾಂಗ್ ಲುಂಗ್ ಎಂಬ ಒಬ್ಬ ರೈತ, ಜಮೀನಿನ ಮಾಲೀಕನಾಗ ಬೇಕೆಂಬ ತನ್ನ ಕನಸನ್ನು ನನಸಾಗಿಸಿಕೊಂಡ ಕತೆ ಇದು. ಇದರಲ್ಲಿ ಅವನ ಪತ್ನಿ ಓಲನ್ ಅವಳದ್ದೂ ಪ್ರಧಾನ ಪಾತ್ರ. ವಾಂಗ್ ಲುಂಗನ ಮುದಿ ತಂದೆಯಿಂದ ತೊಡಗಿ ಅವನ ಮೊಮ್ಮಕ್ಕಳ ತನಕ ನಾಲ್ಕು ತಲೆಮಾರುಗಳ ಬದುಕಿನ ಕತೆಯೇ ಈ ಕಾದಂಬರಿ.
ರೈತ ವಾಂಗ್ ಲುಂಗನ ಬಾಲ್ಯ ಮತ್ತು ಯೌವನ ಬಡತನದಲ್ಲೇ ಕಳೆಯಿತು. ಓಲನ್‌ಲನ್ನು ವಿವಾಹವಾದ ಬಳಿಕ, ಅವಳೊಂದಿಗೆ ವಾಂಗ್ ಲುಂಗ್ ತನ್ನ ತುಂಡು ಜಮೀನಿನಲ್ಲಿ ಶಕ್ತಿ…
ಲೇಖಕರು: Na. Karantha Peraje
June 17, 2017

ಅಡುಗೆ ಪುಸ್ತಕಗಳಿಗೆ ಸುಗ್ಗಿ! ಹೊಸದಾಗಿ ಅಡುಗೆ ಆರಂಭಿಸುವವರಿಗೆ ಪುಸ್ತಕ ಆಪ್ತ ಸಂಗಾತಿ. ಮಾರುಕಟ್ಟೆಯಲ್ಲಿ ವೈವಿಧ್ಯ ಅಡುಗೆಯ ಪುಸ್ತಕಗಳು ಲಭ್ಯ. ಜಾಲತಾಣಗಳಲ್ಲೂ ರಾಶಿರಾಶಿ ಪುಟಗಳು. ವಾಹಿನಿಗಳ ಅಡುಗೆ ಕಾರ್ಯಕ್ರಮಗಳಂತೂ ರಂಗುರಂಗು.
ಈಚೆಗೆ ಮುಳಿಯ ಶಾಲೆಯಲ್ಲಿ ಜರುಗಿದ ‘ಕಾಡು ಮಾವಿನ ಮೆಲುಕು’ ಕಾರ್ಯಕ್ರಮದಲ್ಲಿ ಪಾತನಡ್ಕದ ಸುಶೀಲಾ ಎಸ್.ಎನ್.ಭಟ್ಟರ ಕಾಡು ಮಾವಿನ ಪಾಕೇತನಗಳ ಪುಸ್ತಕ ಬಿಡುಗಡೆಗೊಂಡಿತು. ಅಲ್ಲಿಂದಿಲ್ಲಿಂದ ಹೆಕ್ಕಿದ ಮಾಹಿತಿ ಇದರಲ್ಲಿಲ್ಲ. ತಮ್ಮ ಅಡುಗೆ ಮನೆಯಲ್ಲಿ ಮಾಡಿ,…
ಲೇಖಕರು: Na. Karantha Peraje
May 19, 2017

“ಜಮಖಂಡಿಯ ಅರಮನೆಯ ಹಿಂಭಾಗದ ಗುಡ್ಡದಂಚಿಗೆ ಒಂದು ಕೆರೆಯಿದೆ. ಜಮಖಂಡಿ ಸಂಸ್ಥಾನ ನೂತನ ಅರಮನೆ ಕಟ್ಟುವ ಕಾಲಕ್ಕೆ ನೀರಿಗೆಂದು ನಿರ್ಮಿಸಿದ ರಚನೆಯಿದು. ಒಮ್ಮೆ ಮಳೆ ಸುರಿದರೆ ಇಳಿಜಾರಿಗೆ ಹರಿಯುವ ನೀರು ಕೆರೆಯಲ್ಲಿ ಸುರಕ್ಷಿತವಾಗಿ ನಿಲ್ಲುತ್ತದೆ. ಎರಡು ವರ್ಷದ ಹಿಂದೆ ಎಪ್ರಿಲ್ ತಿಂಗಳ ಉರಿಬಿಸಿಲಿನಲ್ಲಿ ಕೆರೆಯ ಚಿತ್ರ ತೆಗೆಯುತ್ತಿದ್ದೆ. ಆಗ ಮುಕ್ಕಾಲು ಭಾಗ ನೀರು ತುಂಬಿತ್ತು. ಕೆರೆಯ ಸುತ್ತ ಈಗಲೂ ಇದ್ದದ್ದು ಕಲ್ಲುಗುಡ್ಡ, ಕಳ್ಳಿಗಿಡಗಳ ಪ್ರದೇಶ! ಪಕ್ಕದಲ್ಲಿ ಕುರಿ ಮೇಯಿಸುತ್ತಿದ್ದವರು ಇದು…
ಲೇಖಕರು: addoor
May 02, 2017

ಕನ್ನಡದ ನುಡಿಚಿತ್ರ ಬರಹಗಾರರು ಎನ್ನುವಾಗ ತಟ್ಟನೆ ನೆನಪಾಗುವ ಹೆಸರು ನಿರಂಜನ ವಾನಳ್ಳಿ. ೧೯೮೦ರ ದಶಕದಲ್ಲಿ ನುಡಿಚಿತ್ರಗಳನ್ನು ಬರೆಯಲಾರಂಭಿಸಿದ ಡಾ. ನಿರಂಜನ ವಾನಳ್ಳಿ, ಅಧ್ಯಾಪನ ವೃತ್ತಿಯಲ್ಲಿ ಮುಂದುವರಿಯುತ್ತಾ ಇಂದಿಗೂ ನುಡಿಚಿತ್ರಗಳನ್ನು ಬರೆಯುತ್ತಲೇ ಇದ್ದಾರೆ. ಈ ನಿಟ್ಟಿನಲ್ಲಿ, ಪತ್ರಿಕೋದ್ಯಮದ ಪಾಠ ಮಾಡುತ್ತಿದ್ದರೂ ವರುಷಕ್ಕೊಂದು ಬರಹವನ್ನೂ ಬರೆಯದಿರುವ ಪತ್ರಿಕೋದ್ಯಮದ ಹಲವಾರು ಪ್ರಾಧ್ಯಾಪಕರಿಗಿಂತ ಇವರು ಭಿನ್ನ.
ತಮ್ಮ ಎಂ.ಎ. ಶಿಕ್ಷಣ ಮುಗಿಸಿದೊಡನೆ, ಉಜಿರೆಯ ಶ್ರೀ ಧರ್ಮಸ್ಥಳ…
ಲೇಖಕರು: VEDA ATHAVALE
April 11, 2017

‘Don’t say my child is mild’ - The issue is development of self
[ ಆಪ್ತ ಸಮಾಲೋಚಕನ ಅನುಭವಕಥನ ಸಂಕಲನ]
ಈ ಪುಸ್ತಕ ಬೆಂಗಳೂರಿನ ಸ್ವಪ್ನಾ ಬುಕ್ ಹೌಸ್ ಮತ್ತು ಸಾಧನಾ ಪ್ರಕಾಶನ, ಬೆಂಗಳೂರು ಇಲ್ಲಿ ಲಭ್ಯವಿದೆ . ಫೋನ್ - 8197731986
ಚಂದದ ಪುಟಾಣಿಯೊಂದು ತುಂಟನಗೆ ಬೀರುತ್ತಾ ನಿಂತಿದ್ದ ಮುಖಪುಟ ಹೊತ್ತ ‘Don’t say my child is mild’ ಪುಸ್ತಕವನ್ನು ಕೈಗೆತ್ತಿಕೊಂಡು ಓದುತ್ತಿದ್ದಂತೆಯೇ ಸಮಯ…