ಪುಸ್ತಕ ಪರಿಚಯ

ಲೇಖಕರು: partha1059
November 02, 2012
ಕೆಲವು ಸಣ್ಣ ಕತೆಗಳು, ನಾಟಕಗಳು ಒಮ್ಮೆ ಓದಿದರು ಜೀವನ ಪೂರ್ತಿ ನೆನಪಿರುತ್ತವೆ ! . ಅಂತಹ ಒಂದು ನಾಟಕ, ಕತೆ , ಮಂಕೀಸ್ ಪಾ. ಅದು ಸುಮಾರು ೧೯೭೬-೭೭ ನಾನಾಗ ತುಮಕೂರಿನಲ್ಲಿ ಪದವಿಪೂರ್ವವನ್ನು ಸಿದ್ದಗಂಗ ಕಾಲೇಜಿನಲ್ಲಿ ಓದುತ್ತಿದ್ದ ಸಮಯ. ಅಂಗ್ಲ ಬಾಷೆ ಓದಿಗಾಗಿ 'ಮಾಡ್ರನ್ ಒನ್ ಆಕ್ಟ್ ಪ್ಲೇ ಶೀರ್ಷಿಕೆಯಲ್ಲಿ ಇದ್ದ ಪ್ರಸಿದ್ದ ನಾಟಕ ಮಂಕೀಸ್ ಪಾ. ಕಾಲೇಜಿನಲ್ಲಿ ಆಗ ಧ್ರುವಕುಮಾರ್ ಎಂಬ ಅಂಗ್ಲ ಉಪನ್ಯಾಸಕರಿದ್ದರು. ವಿಶಿಷ್ಟ ವ್ಯಕ್ತಿತ್ವ ಅವರದು, ಅವರ ಮಾತು, ನಡೆ ನುಡು ಎಲ್ಲ ನಮಗೊಂದು ಕುತೂಹಲ…
13
ಲೇಖಕರು: partha1059
October 27, 2012
ಡಾ| ಕೆ. ಶಿವರಾಮ ಕಾರಂತರ ಮೂಕಜ್ಜಿಯ ಕನಸು ನಾನು ಹೈಸ್ಕೂಲಿನ ದಿನಗಳಿಂದ ಇಲ್ಲಿಯವರೆಗು ಹಲವು ಸಾರಿ ಓದಿರಬಹುದೇನೊ.ಪ್ರತಿಬಾರಿ ಓದುವಾಗಲು ಜೀವನದ ಹಲವು ಮಜಲುಗಳ, ದರ್ಶನವನ್ನು ಮಾಡಿಸುವ ಕಾದಂಬರಿ ಇದು. ಇಲ್ಲಿ ಕನಸು ಅನ್ನುವದಕ್ಕಿಂತ ದರ್ಶನ ಅನ್ನುವುದು ಹೆಚ್ಚು ಸೂಕ್ತವೇನೊ ಅನ್ನಿಸುತ್ತೆ. ಮಲೆನಾಡಿನ ಕೊಲ್ಲೂರಿನ ಸಮೀಪದ ಮೂಡೂರು ಎಂಬ ಹಳ್ಳಿಯಲ್ಲಿ ನೆಲೆಸಿರುವ ಸಾದಾ ಸೀದ ಜೀವನ ಪ್ರವೃತ್ತಿಯ ವ್ಯಕ್ತಿ ಸುಬ್ಬರಾಯರದು. ಇವರ ಅಜ್ಜಿಯೆ ಮೂಕಜ್ಜಿ, ಅಜ್ಜಿ ಎಂದರೆ ತಾತನ ಅಂದರೆ ತಂದೆಯ ತಂದೆಯ…
5
ಲೇಖಕರು: gopaljsr
October 24, 2012
ಕನ್ನಡ ಸಾಹಿತ್ಯದಲ್ಲಿ ಒಂದು ಜನಪ್ರಿಯ ಪ್ರಕಾರ ಹರಟೆ. ಕನ್ನಡ ಸಾಹಿತ್ಯ-ಲೋಕದ ಅನೇಕ ಉದ್ಧಾಮ ಸಾಹಿತಿಗಳು ಈ ಸಾಹಿತ್ಯ ಪ್ರಕಾರವನ್ನು ತುಂಬಾ ಸೊಗಸಾಗಿ ದುಡಿಸಿಕೊಂಡಿದ್ದಾರೆ. ಕಲೆತರಂತೂ ಹರೆಟೆಗೊಂದು ವಿಭಿನ್ನ, ವಿಶಿಷ್ಟ ಆಯಾಮವನ್ನು ದೊರಕಿಸಿಕೊಟ್ಟಿದ್ದಾರೆ. ಹರಟೆ ಹಾಲು ಹರೆತೆಯಗದಂತೆ ಜಾಗ್ರತಿ ಮೂಡಿಸಿದ್ದಾರೆ ....ಎಂಬ ಹಿನ್ನುಡಿ ಇರುವ ಒಂದು ಒಳ್ಳೆಯ ಪುಸ್ತಕ. ಸಕತ್ ನಗೆಗಡಲಿನಲ್ಲಿ ತೇಲಿಸುವ ಹನ್ನೆರಡು ಹರಟೆಗಳ ಸಂಗ್ರಹ. ಅವರ ಒಂದು ಲೇಖನದ ಲಿಂಕ್ ಕೆಳಗೆ ಇದೆ. ನಗುವುದು ಅಷ್ಟೇ ಅಲ್ಲದೆ…
ಲೇಖಕರು: partha1059
October 13, 2012
ಕೆ.ವಿ.ಅಯ್ಯರ್ ಕನ್ನಡದಲ್ಲಿ ಚಿರಸ್ಥಾಯಿ ಪ್ರಣಯ ತ್ಯಾಗದ ಕಾದಂಬರಿ ಶಾಂತಲ. ಅದೆಷ್ಟು ಬಾರಿ ಮುದ್ರಣವಾಗಿದೆಯೊ ನನಗೆ ತಿಳಿಯದು. ನನ್ನಲ್ಲಿರುವ ಹಳೆಯ ಪ್ರತಿಯೆ ಹತ್ತನೆಯ ಮುದ್ರಣ!. ಕನ್ನಡದ ಹೋಯ್ಸಳರ ರಾಣಿ ಶಾಂತಲೆಯ ಜೀವನವದ ವರ್ಣಚಿತ್ರ ಈ ಕಾದಂಬರಿ. ಹೋಯ್ಸಳರ ದೊರೆ ಜೈನ ಬಿಟ್ಟಿದೇವ ನಂತರದಲ್ಲಿ ಶ್ರೀ ವೈಷ್ಣವನಾದ ವಿಷ್ಣುವರ್ದನ ಹಾಗು ಅವನ ಪತ್ನಿ ಶಾಂತಲೆ ಹಾಗು ಲಕ್ಷ್ಮೀಯರ ಜೀವನ ಚಿತ್ರಣ. ಈ ಮೂವರ ನಡುವಿನ ಒಲವಿನಿ ಕೊಂಡಿ ಕುವರವಿಷ್ಣು,ಮಹಾರಾಜ ವಿಷ್ಣುವರ್ದನರ ತಾಯಿ ಮಹಾದೇವಿಯವರ ಸಾಕುಮಗ,…
2
ಲೇಖಕರು: spr03bt
October 10, 2012
ಇತ್ತೀಚೆಗೆ ಪ್ರಜವಾಣಿ ಪತ್ರಿಕೆಯಲ್ಲಿ ಡಾ. ಕೆ.ಎನ್. ಗಣೇಶಯ್ಯನವರ ಹೊಸ ಕಾದ೦ಬರಿ "ಮೂಕ ಧಾತು" ಬಿಡುಗಡೆಯಾದ ಸುದ್ದಿ ಓದಿ ನನಗೆ ತು೦ಬಾ ಖುಶಿಯಾಗಿತ್ತು. ಕನ್ನಡದಲ್ಲಿ ಅವರ ವಿಶಿಷ್ಟ ಹಾಗು ಹೊಸ ಬರವಣಿಗೆ ಶೈಲಿಗೆ ಮರುಳಾದವರಲ್ಲಿ ನಾನೂ ಒಬ್ಬ. ಇವರ ಬಗ್ಗೆ ತಿಳಿದ ಸ್ವಲ್ಪವೇ ಸಮಯದಲ್ಲಿ ಇವರ ಎಲ್ಲಾ ಹತ್ತು ಪುಸ್ತಕಗಳನ್ನು ಓದಿ ಮುಗಿಸಿರುವೆ ಎ೦ದರೆ ಇವರ ಬರವಣಿಗೆಗಿರುವ ಸೆಳತ ಅರ್ಥವಾಗಬಹುದು. ವೃತ್ತಿಯಲ್ಲಿ ಕೃಷಿ ವಿಜ್ಞಾನಿಯಾದ ಇವರ ಬರವಣಿಗೆಯಲ್ಲಿ ಹೆಚ್ಚಾಗಿ ಕಾಣುವುದು ಇತಿಹಾಸಕ್ಕೆ…
ಲೇಖಕರು: siddharam
November 26, 2011
ಭಾರತ ಹೇಗೆ ಕೃಷಿ ಪ್ರಧಾನವಾದ ದೇಶವೋ ಚೀನಾ ದೇಶವೂ ಕೃಷಿ ಪ್ರಧಾನವಾದ ದೇಶವೇ. ಇಂದು ಚೀನ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿದ್ದರೂ ಅದರ ಅಂತರಾಳದಲ್ಲಿ ಹರಿಯುತ್ತಿರುವುದು ಕೃಷಿಯ ಬೆವರೇ. ಅಮೆರಿಕನ್ ಲೇಖಕಿ ಪರ್ಲ್.ಎಸ್.ಬಕ್ ಚೀನಾ ದೇಶದಲ್ಲಿ ೫ ವರ್ಷಗಳವರೆಗೆ ಇದ್ದು, ಅಲ್ಲಿನವರಿಗೆ ಕೃಷಿಯ ಬಗೆಗಿರುವ ಒಲವು, ಅಲ್ಲಿನ ಬದುಕಿನ ಬವಣೆಗಳು, ಲಿಂಗ ತಾರತಮ್ಯ, ಮೇಲ್ವರ್ಗದವರ ಶೋಷಣೆ, ಭೂಮಿಯ ಬಗೆಗೆ ಕೃಷಿಕರಿಗಿರುವ ಪ್ರೀತಿ ಎಲ್ಲವನ್ನೂ ತಮ್ಮ ಗುಡ್ ಅರ್ತ್ ಕಾದಂಬರಿಯಲ್ಲಿ ಹಿಡಿದಿಟ್ಟಿದ್ದಾರೆ.…