ಪುಸ್ತಕ ಪರಿಚಯ

ಲೇಖಕರು: ಮಮತಾ ಕಾಪು
January 13, 2013
ಬದುಕಿ ತೋರಿಸ್ತೀನಿ ನೋಡೋ, ದೇವರನ್ನು ದಿಕ್ಕರಿಸಿ ಬದುಕ್ತೀನಿ. -ರಂಗನಾಥ. ಇಂದಿಗೂ ಜೀವಂತವಾಗಿರುವ ಜಾತಿ ವ್ಯವಸ್ಥೆ , ದೇವರ ಬಗೆಗಿನ ಆಸ್ತಿಕ ಹಾಗೂ ನಾಸ್ತಿಕ ವಿಚಾರಗಳ ಎರಡು ಮನಸ್ಸಿನ ಗೊಂದಲಗಳು, ನಂಬಿಕೆ, ಸಮಾಜದ ವ್ಯವಸ್ಥೆಗಳನ್ನು ಒಪ್ಪಿಕೊಳ್ಳಲೂ ಆಗದೆ, ಇತ್ತ ಒಪ್ಪದೆ ಇರಲೂ ಆಗದಂತಹ ಇಕ್ಕಟ್ಟಿನ ಸ್ಥಿತಿಯಲ್ಲಿ ಏಕಾಂಗಿಯಾಗಿ ಹೋರಾಡುತ್ತಿರುವ ಎರಡು ಮನಸ್ಸುಗಳ ಕಥೆಯೇ ದೇವರ ಹುಚ್ಚು.  ರಂಗನಾಥ ಹಾಗೂ ರಾಜಶೇಖರ ಈ ಕಾದಂಬರಿಯ ಕೇಂದ್ರ ಬಿಂದುಗಳು. ಈ ಎರಡು ಪಾತ್ರಧಾರಿಗಳ ಸುತ್ತ ಲೇಖಕರು ತಮ್ಮ…
ಲೇಖಕರು: spr03bt
January 08, 2013
ತೇಜಸ್ವಿ ಅಥವಾ ಪೂರ್ಣಚ೦ದ್ರ ತೇಜಸ್ವಿ ಅ೦ದ ತಕ್ಷಣ ಕನ್ನಡ ಓದುಗ ಪ್ರಪ೦ಚದ ಕಣ್ಣುಗಳಲ್ಲಿ ಒ೦ದು ವಿಶಿಷ್ಟವಾದ೦ಥ ತೇಜಸ್ಸು ಮೂಡುತ್ತದೆ. ೨೦ ನೇ ಶತಮಾನದಲ್ಲಿ ತೇಜಸ್ವಿ, ತಮ್ಮ ಬರಹಗಳು, ವಿಶಿಷ್ಟ ಹವ್ಯಾಸಗಳು ಹಾಗು ರೈತಪರ ಚಳುವಳಿಗಳ ಮೂಲಕ ಜನಸಮಾನ್ಯರ ಮನಗೆದ್ದ೦ಥವರು. ಬಹುಪಾಲು ಜನಕ್ಕೆ ತಿಳಿದ೦ತೆ, ತೇಜಸ್ವಿಯವರದು ಪ್ರೇಮ ವಿವಾಹ ಅದರಲ್ಲೂ, ಅ೦ತರ್ಜಾತಿಯ ವಿವಾಹ. ಆಗಿನ ಕಾಲದಲ್ಲಿ ಇವೇ ಒ೦ಥರಾ ಹುಬ್ಬೇರಿಸುವ ಘಟನೆಗಳಾಗಿದ್ದರೆ, ಇವರು ವಿವಾಹವಾದ "ಮ೦ತ್ರ ಮಾ೦ಗಲ್ಯ೦" ಪದ್ದತಿ ಕೂಡ ಹೊಸತು. ಇದು…
ಲೇಖಕರು: ಮಮತಾ ಕಾಪು
January 04, 2013
ಪರಿಸರ ಪತ್ರಕರ್ತ ಹಾಗೂ ವಿಜ್ಞಾನ ಅಂಕಣಕಾರ ನಾಗೇಶ ಹೆಗಡೆಯವರ ಈ ಕೃತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನಿತ ಕೃತಿ. ೨೦ನೇ ಶತಮಾನದ ಸರ್ವಶ್ರೇಷ್ಠ ಮಕ್ಕಳ ಕತೆಗಳ ಸಾಲಿಗೆ ಸೇರ್ಪಡೆಯಾಗಿದೆ. ಮನುಷ್ಯರಿಗೆ ಕೊಳವೆಬಾವಿಗಳು ಪರಿಚಿತವಾಗುವುದಕ್ಕಿಂತ ಮುಂಚೆ ಕೆರೆಗಳೇ ನೀರಿನಾಧಾರವಾಗಿದ್ದವು. ಜೀವನ ಶೈಲಿ ಬದಲಾಗುತ್ತಿದ್ದಂತೆ ಮನುಷ್ಯರು ಮಾಡುವ ಪರಿಸರ ಮಾಲಿನ್ಯಗಳು ಹೆಚ್ಚಾದುವು. ತೊಂಡೂರಿನ ಜನರ ಜೀವನಾಧಾರವಾಗಿದ್ದ ಹಾಗೂ ಕೆರೆಯಲ್ಲಿ ವಾಸಿಸುತ್ತಿದ್ದ ಅಸಂಖ್ಯಾತ ಜೀವಿಗಳ ವಾಸಸ್ಥಾನವಾದ ತೊಂಡೂರಿನ…
ಲೇಖಕರು: ಮಮತಾ ಕಾಪು
January 01, 2013
ಯಾರೂ ನಮಗೆ ಸೇರಿದವರಲ್ಲ, ಯಾರನ್ನಾದರೂ ಹುಡುಕಲು ಹೊರಟರೆ ನಮಗೆ ನಾವೇ ವೃತ್ತದ ಕೇಂದ್ರವೆನ್ನುವ ಭ್ರಮೆಯಲ್ಲಿ ಬೀಳುತ್ತೇವೆ. ಕಥಾ ನಾಯಕ ಸಣ್ಣವನಿದ್ದಾಗಲೇ ತನ್ನಿಂದ ದೂರಾದ ತಮ್ಮನನ್ನು ಹುಡುಕಹೊರಟು ಭಾವಾವೇಶಕ್ಕೆ ಒಳಗಾಗಿ ತನ್ನ ಸಹೋದ್ಯೋಗಿಯ ಕಣ್ಣುಗಳಲ್ಲಿ ಆತನ ಬಿಂಬವನ್ನು ಕಂಡು ಭ್ರಮಾಲೋಕಕ್ಕೆ ಹೋಗುತ್ತಾನೆ. ನಂತರ ತನ್ನ ತಮ್ಮನಂತೆಯೇ ಆತನನ್ನು ಕಾಣುತ್ತಾನೆ. ಅದಕ್ಕೆ ತಾಳೆಯಾಗುವಂತೆ ಛಾಯಾಚಿತ್ರಕಾರನೊಬ್ಬ ತನ್ನ ಚಿತ್ರಗಳಲ್ಲಿ"ಎಲ್ಲೋ ದೂರದ ದ್ವೀಪವ ಬಯಸಿ" ಏನನ್ನೋ ಹುಡುಕ ಹೊರಟ ಚಿತ್ರಣ.…
ಲೇಖಕರು: ಮಮತಾ ಕಾಪು
December 25, 2012
ಕನ್ನಡದ ನುಡಿಚಿತ್ರಕಾರರಲ್ಲಿ ನಿರಂಜನ ವಾನಳ್ಳಿಯವರದ್ದು ಗಮನಾರ್ಹ ಹೆಸರು. ಇವರ ಎಲ್ಲಾ ನುಡಿಚಿತ್ರಗಳಲ್ಲಿಯೂ ಜೀವನ ಪ್ರೀತಿ, ಮಾನವೀಯ ಅನುಕಂಪಗಳು ಎದ್ದು ಕಾಣುತ್ತವೆ. ಅವರ ಸುಸಂಸ್ಕೃತ ಮನಸ್ಸು ಹಾಗೂ ಕುತೂಹಲದ ಮನೋಭಾವ ಹಾಗೂ ಚಿಕಿತ್ಸಕ ದೃಷ್ಟಿಗಳು ಎಲ್ಲಾ ವರ್ಗದ ಓದುಗರನ್ನು ತಮ್ಮೆಡೆಗೆ ಸೆಳೆಯುತ್ತವೆ. ಕಾಬಾಳೆ ಮತ್ತು ಪ್ರೀತಿ ಅವರ ಆಯ್ದ ನುಡಿಚಿತ್ರಗಳ ಸಂಗ್ರಹ- ಪುಸ್ತಕ. 2009 ರಲ್ಲಿ ಪ್ರಕಟಗೊಂಡ ಈ ಪುಸ್ತಕದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಬೇರೆ ಬೇರೆ ಕಡೆಗಳಲ್ಲಿ ಪ್ರಕಟಗೊಂಡ ಆಯ್ದ…
1
ಲೇಖಕರು: ಮಮತಾ ಕಾಪು
December 24, 2012
ನಮ್ಮ ಎಲ್ಲಾ ಕೆಲಸಗಳ ಉದ್ದೇಶವೂ ಅಂತಿಮವಾಗಿ ಸಾರ್ಥಕತೆ, ಸಂತಸ, ಉಲ್ಲಾಸವೇ ಆಗಿದ್ದರೂ ಆ ಉದ್ದೇಶ ಈಡೇರಿದೆಯೋ ಇಲ್ಲವೋ ಎಂಬುದನ್ನು ನೋಡಲು ನಮಗೆ ಬಿಡುವಿಲ್ಲ. ಅಂದರೆ ನಿಜ ಜೀವನದ ಹಲವಾರು ಒತ್ತಡಗಳಲ್ಲಿ ನಮ್ಮ ಬಗ್ಗೆ ಒಂದೈದು ನಿಮಿಷ ಚಿಂತಿಸಲು ಸಮಯ ಇಲ್ಲದಾಗುತ್ತದೆ. ಮನೋವಿಜ್ಞಾನದ ಪ್ರಕಾರ ವ್ಯಕ್ತಿ ಅದೆಷ್ಟೇ ಶ್ರೀಮಂತನಾಗಿದ್ದರೂ ತನಗಿಂತ ಶ್ರೀಮಂತರನ್ನು ಕಂಡಾಗ ಆತನದಲ್ಲಿದ್ದ ಉತ್ಸಾಹ, ತೃಪ್ತಿ, ಸಂತೋಷ ಕಡಿಮೆಯಾಗುತ್ತದೆ. ಲೇಖಕ ನಾಗೇಶ ಹೆಗಡೆಯವರ "ಮತ್ತೆ ಮತ್ತೆ ಕೂಗು ಮಾರಿ" ಪುಸ್ತಕದ '…
2