ಪುಸ್ತಕ ಪರಿಚಯ
ಲೇಖಕರು: payanigasatya
February 06, 2010

’ಸುಂಕ’ ಎಂಬ ಕವನದ ಸಾಲುಗಳು
ಹಳೇ ಸಂಕ ಲಡ್ಡಾಗಿದೆ
ಅದರ ಮೇಲೆ ಬರೇ ತಂಗಾಳಿಯ ಪದಯಾತ್ರೆ
ಪಕ್ಕದಲ್ಲೇ ಹೊಸ ಸೇತುವೆ ವಾಹನಗಳಿಗೆ
ಈ ಸಾಲುಗಳು ಕಟ್ಟಿಕೊಡುವ ಚಿತ್ರವನ್ನು ನೋಡೋಣ, ಒಂದು ಹಳೆಯ ಸಂಕ; (ಸಂಕ ಅಂದರೆ ಸಣ್ಣ ಹೊಳೆಗೆ ಕಟ್ಟಿರುವ ಸೇತುವೆ, ಮರದ ದಿಮ್ಮಿಯನ್ನೋ, ಅಡಿಕೆ ಮರವನ್ನೋ ಅಡ್ಡಹಾಕಿ ಮಾಡಿರುತ್ತಾರೆ, ಕರಾವಳಿ/ಮಲೆನಾಡಿನ ಕಡೆ ಕಾಣಬಹುದು), ಅದರ ಪಕ್ಕದಲ್ಲಿ ಹೊಸದಾಗಿ ವಾಹನ ಸಂಚಾರಕ್ಕಾಗಿ ನಿರ್ಮಿಸಿರುವ ಹೊಸ ಸೇತುವೆ, ಹೊಸ ಸೇತುವೆ ತೆರೆದಿದ್ದರೂ ಹಳೆಯ ಸಂಕ ಇನ್ನೂ ಇದೆ,…
ಲೇಖಕರು: inchara
June 23, 2009

ನಾನು ಕೂಡಾ ಎಲ್ಲಾ ಪುಸ್ತಕ ಪ್ರೇಮಿಗಳಂತೆ! ಓದಿದ್ದಕ್ಕಿಂತ ಹೆಚ್ಚಾಗಿ ಆ ಪುಸ್ತಕ ಓದಬೇಕು, ಈ ಪುಸ್ತಕ ಓದಬೇಕು ಎನ್ನುವ ಪಟ್ಟಿಯೇ ದೊಡ್ಡದು! ಜೊತೆಗೆ ಒಮ್ಮೆ ಓದಲು ಕುಳಿತರೆ, ಆ ಪುಸ್ತಕ ಪೂರ್ತಿ ಮುಗಿಯುವ ತನಕ ಕುಳಿತಲ್ಲಿಂದ ಏಳಲು ಮನಸ್ಸೇ ಬಾರದು. ಹಾಗಾಗಿ ದೊಡ್ಡ ಪುಸ್ತಕಗಳನ್ನು ಓದುವ ಸಾಹಸವೇ ಮಾಡುವುದಿಲ್ಲ. ಮಾಡಿದರೂ ಅದೆಲ್ಲಾ ರಜವಿರುವಾಗ ಮಾತ್ರ. ಏನಿದ್ದರೂ ಸಣ್ಣ ಕಥೆಗಳು, ಚುಟುಕಗಳು, ಪ್ರಬಂಧಗಳು. ಅದರಲ್ಲೂ ಈ ಲಘು ಹರಟೆಗಳೆಂದರೆ ಬಲು ಪ್ರೀತಿ. ಸಮಯ ಸಿಕ್ಕಾಗಲೆಲ್ಲಾ…
ಲೇಖಕರು: ramaswamy
June 10, 2009
ದೇಸೀತನದ ಘಮಲಿಗೆ ಆಧುನಿಕತೆಯ ಬಡಿವಾರ ಚ. ಹ. ರಘುನಾಥರ ಬಿಡಿ ಬರಹಗಳನ್ನು ಓದಿದಾಗೆಲ್ಲಾ ಅವರೊಬ್ಬ ಸಾಹಿತ್ಯದ ವಿನಮ್ರ ವಿದ್ಯಾರ್ಥಿಯೆಂದು ಮತ್ತೆ ಮತ್ತೆ ಮನದಟ್ಟಾಗುತ್ತದೆ. ಸೂಕ್ಷ್ಮ ಮನಸ್ಸಿನ ಅಂತರ್ಮುಖೀ ವ್ಯಕ್ತಿತ್ವವೊಂದು ಸುತ್ತಣ ವಿವರಗಳನ್ನು, ಘಟನೆಗಳನ್ನು ಗಮನಿಸಿದ, ಗ್ರಹಿಸಿದ ಮತ್ತವುಗಳನ್ನು ಅತಿ ವಿಶಿಷ್ಟತೆಯಿಂದ ಬರಹಗಳನ್ನಾಗಿಸುವ ಕಲೆ ಅವರಿಗೆ ಸಿದ್ಧಿಸಿದೆ. ಈಗಾಗಲೇ ಕವಿಯಾಗಿ, ಕಥೆಗಾರನಾಗಿ ಹೊಸ ಪೀಳಿಗೆಯ ಲೇಖಕರ ನಡುವೆ ತಮ್ಮದೇ ಛಾಪನ್ನಿರಿಸಿಕೊಂಡಿರುವ ರಘುನಾಥರ ಪ್ರಬಂಧ…
ಲೇಖಕರು: rupamanjunath
May 25, 2009
'ಬೆಳಗೆರೆ ಕೃಷ್ಣಶಾಸ್ತ್ರಿ'ಗಳು ಬರೆದಿರುವ ಅವರ ಸ್ವಾನುಭವದ ಒಂದು ಕಥನ- 'ಯೇಗ್ದಾಗೆಲ್ಲಾ ಐತೆ'. 'ಮುಕುಂದೂರು ಸ್ವಾಮಿ'ಗಳ ನಿತ್ಯ ಜೀವನದ ತಂತುಗಳನ್ನು ತಮ್ಮ ಅನುಭವಗಳೊಂದಿಗೆ ಹೇಳುತ್ತಾ ಹೋಗುವ ರೀತಿ ನಿಜಕ್ಕೂ ಅಪ್ಯಾಯಮಾನವಾದುದು. ಕನ್ನಡ ಆಧ್ಯಾತ್ಮಿಕ ರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಹೊಂದಿರುವ ಕೃಷ್ಣಶಾಸ್ತ್ರಿಗಳು ಪ್ರಸ್ತುತ ಬರಹದಲ್ಲಿ ಯಾವುದೋ ಒಂದು ಅರಿಯದ ಲೋಕಕ್ಕೆ ನಮ್ಮನ್ನು ಕರೆದುಕೊಂಡುಹೋಗುತ್ತಾರೆ. ಈ ಅನುಭವವನ್ನು ಪಡೆಯಲೋಸುಗವಾದರೂ ಪ್ರತಿಯೊಬ್ಬರೂ ಇದನ್ನು…
ಲೇಖಕರು: rupamanjunath
April 25, 2009

ನಾನು ಈ ಮುಂಚೆ ಭೈರಪ್ಪನವರ ಕಾದಂಬರಿಗಳನ್ನು ಯಾಕೋ ಹೆಚ್ಚು ಓದಿಯೇ ಇಲ್ಲ. ಅದರಿಂದ ನಾನು ಎಂತಹ ತಪ್ಪು ಮಾಡಿದ್ದೆನೆಂದು ನನಗೆ ಇತ್ತೀಚೆಗೆ ತಿಳಿಯಹತ್ತಿತ್ತು. ಅವರ ಆವರಣ,ದಾಟು,ಗೃಹಭಂಗ ಕಾದಂಬರಿಗಳನ್ನು ಅವು ದೊರೆತಾಗಿನಿಂದ ಒಂದೇ ಉಸಿರಿಗೆ ಓದಿ ಮುಗಿಸಿದ್ದೆ. ಆದರೆ ಭೈರಪ್ಪನವರ 'ಪರ್ವ' ಕಾದಂಬರಿ ಮನೆಯಲ್ಲೆ ಇದ್ದರೂ ಆಮೇಲೆ ಓದಿದರಾಯ್ತೆಂಬ ಉದಾಸೀನ. ಅವರ ಕಾದಂಬರಿಗಳ ಮೇಲೆ ಒಲವು ಬೆಳೆದಿದ್ದರೂ,ಇದು ಮಹಾಭಾರತದ ಕಥೆಯಲ್ಲವೇ ಓದೋಣ ಎಂಬ ಮುಂದೂಡುವಿಕೆಯ ನಂತರ ಕಳೆದ ವಾರ ಅದನ್ನು ಕೈಗೆ…
ಲೇಖಕರು: aniljoshi
February 28, 2009

ಪೌಲೋ ಕೊಯ್ಲೋನ ಅಲ್ಕೆಮಿಸ್ಟ್ ಕಥೆ ಓದಿದೆ. ಸರಳವಾದ ಕಥೆ ಓದುತ್ತಿದ್ದಂತೆ ನಮ್ಮದೇ ನೆಲದ ಹಲವು ಕಥೆಗಳನ್ನು ನೆನಪಿಸಿತು. ಡೆಸ್ಟಿನಿ ಅಥವಾ ನಿಜವಾದ ನೆಲೆಯನ್ನು ಹುಡುಕುವವರು ದಾರಿಯಲ್ಲಿ ಬರುವ ಎಡರುಗಳಿಗೆ ಹೆದರುವದಿಲ್ಲ, ಅವರ ಆತ್ಮ ಸ್ಥೈರ್ಯ ದೊಡ್ಡದು, ಎಂತಹ ಪರೀಕ್ಷೆಯ ಗಳಿಗೆಯಲ್ಲೂ ಅವರು ಕಂಗೆಡುವದಿಲ್ಲ. ಹುಡುಕಾಟದ ಹಾದಿಯ ಶಕುನಗಳನ್ನು ಗ್ರಹಿಸುತ್ತಾರೆ. ತಮ್ಮ ಎದೆಯಾಳದ ಧ್ವನಿಯನ್ನು ಯಾವಾಗಲೂ ಕೇಳುತ್ತಾರೆ, ಅದರಂತೆ ನಡೆಯುತ್ತಾರೆ. ತಮ್ಮ ಹತ್ತಿರ ಭವಿಷ್ಯದೊಳಗೆ ಇಣುಕುವ ಯಂತ್ರವಿದ್ದರೂ…