ಶಾಂತಲ

ಶಾಂತಲ

ಪುಸ್ತಕದ ಲೇಖಕ/ಕವಿಯ ಹೆಸರು
ಕೆ.ವಿ.ಅಯ್ಯರ್
ಪ್ರಕಾಶಕರು
ರಾಜಲಕ್ಷ್ಮಿ ಪ್ರಕಾಶನ ಬಳೇಪೇಟೆ ಚೌಕ ಬೆಂಗಳೂರು ೫೬೦೦೫೩
ಪುಸ್ತಕದ ಬೆಲೆ
ರೂ ೩೫/ (೧೯೮೬ ರ ಮುದ್ರಣ)

ಕೆ.ವಿ.ಅಯ್ಯರ್ ಕನ್ನಡದಲ್ಲಿ ಚಿರಸ್ಥಾಯಿ ಪ್ರಣಯ ತ್ಯಾಗದ ಕಾದಂಬರಿ ಶಾಂತಲ. ಅದೆಷ್ಟು ಬಾರಿ ಮುದ್ರಣವಾಗಿದೆಯೊ ನನಗೆ ತಿಳಿಯದು. ನನ್ನಲ್ಲಿರುವ ಹಳೆಯ ಪ್ರತಿಯೆ ಹತ್ತನೆಯ ಮುದ್ರಣ!. ಕನ್ನಡದ ಹೋಯ್ಸಳರ ರಾಣಿ ಶಾಂತಲೆಯ ಜೀವನವದ ವರ್ಣಚಿತ್ರ ಈ ಕಾದಂಬರಿ. ಹೋಯ್ಸಳರ ದೊರೆ ಜೈನ ಬಿಟ್ಟಿದೇವ ನಂತರದಲ್ಲಿ ಶ್ರೀ ವೈಷ್ಣವನಾದ ವಿಷ್ಣುವರ್ದನ ಹಾಗು ಅವನ ಪತ್ನಿ ಶಾಂತಲೆ ಹಾಗು ಲಕ್ಷ್ಮೀಯರ ಜೀವನ ಚಿತ್ರಣ. ಈ ಮೂವರ ನಡುವಿನ ಒಲವಿನಿ ಕೊಂಡಿ ಕುವರವಿಷ್ಣು,ಮಹಾರಾಜ ವಿಷ್ಣುವರ್ದನರ ತಾಯಿ ಮಹಾದೇವಿಯವರ ಸಾಕುಮಗ, ಚೆನ್ನಮ ದಂಡಾದೀಶರ ಮಗ. ವಿಷ್ಣುವರ್ದನರು ಅವನನ್ನು ಮಗನೆಂದೆ ಭಾವಿಸಿದ್ದರು.

ಈ ನಾಲ್ವರ ನಡುವಿನ ಒಲುಮೆಯ ಪ್ರೀತಿಯ ಹರಿವೆ ಕಾದಂಬರಿಯ ವಸ್ತು. ಹಾಗೆ ಜೈನಧರ್ಮ, ವೈಷ್ಣವ ದರ್ಮ, ಶೈವದರ್ಮ ಮೂರು ದರ್ಮಗಳು ಕಾದಂಬರಿಯ ಉದ್ದಕ್ಕು ಹದವಾಗಿ ಬೆರೆತಿದೆ. ಕುವರವಿಷ್ಣುವಿನ ಉಪನಯದದೊಂದಿಗೆ ಪ್ರಾರಂಬವಾಗುವ ಮೊದಲ ಬಾಗ, ಆ ಸಂದರ್ಭದಲ್ಲಿ ಶಾರದೆಯ ಉಪಾಸಕಿ , ರಾಜ್ಯದ ಡಣಾಯಕ ಮಾರಸಿಂಗಯ್ಯ ಹಾಗು ಮಾಚಿಕಬ್ಬೆ ಇವರ ಮಗಳು ಶಾಂತಲೆ ಹಾಗು ಅವಳ ಗೆಳತಿ ಪಂಡಿತ ಪೆರುಮಾಳುವರವರ ಮಗಳು ಲಕ್ಷ್ಮೀ ಜೊತೆಗೆ ಮಹಾರಾಜ ವಿಷ್ಣುವರ್ದನರ ಬೇಟಿಯಾಗಿ, ತಾಯಿ ಮಹಾದೇವಿಯವರ ಅಣತಿ ಹಾಗು ಇಚ್ಚೆಯಂತೆ ಇಬ್ಬರನ್ನು ವರಿಸುತ್ತಾರೆ. ಉಪನಯನ ಹಾಗು ಮದುವೆಯ ವೈಬವದ ವಿವರಣೆಗಳು ಮೊದಲ ಬಾಗದಲ್ಲಿದೆ. ತನ್ನ ಗೆಳತಿಯನ್ನು ಬಿಟ್ಟು ತಾನು ಮದುವೆಯಾಗಿ ಅರಮನೆಗೆ ಹೋಗಲೊಪ್ಪದೆ , ಅವಳನ್ನು ಮಹಾರಾಜ ಮದುವೆಯಾಗುವಂತೆ ಮಾಡಿ ಅವಳನ್ನು ತನ್ನ ಜೊತೆಗೆ ಕರೆದೊಯ್ಯುವ ಶಾಂತಲ ಲಕ್ಷ್ಮೀಯರ ಪ್ರೇಮ ಬಂದನ, ಪಂಡಿತ ಪೆರುಮಾಳರು ಇವರೆಲ್ಲರಪ್ರೀತಿಯನ್ನು ಕಂಡು ತಾವು ಶ್ರೀವೈಷ್ಣವ ಬ್ರಾಹ್ಮಣರಾಗಿದ್ದು ಸಹ ಮಹಾರಾಜನ ಜೊತೆ ಅವಳ ಮದುವೆಗೆ ಒಪ್ಪಿಗೆ ನೀಡುವ ವಿವರಗಳ ಮನ ಸೆಳೆಯುತ್ತವೆ. ಎರಡನೆ ಬಾಗದಲ್ಲಿ ಕೇತಮಲ್ಲನೆಂಬ ವ್ಯಾಪಾರಿಯು ತಲವನಪುರದಿಂದ ಹೋಯ್ಸಳ ರಾಜ್ಯಕ್ಕೆ ಬಂದು ನೆಲೆಸಿದನು , ವೇಲಾಪುರ ಈಗಿನ ಬೇಲುರಿನಲ್ಲಿ ವಿಜಯನಾರಾಯಣ ಹಾಗು ಸೌಮ್ಯ ಕೇಶವ ದೇವಾಲಯಗಳನ್ನು ನಿರ್ಮಿಸಿದ, ವಿಷ್ಣುವರ್ದನ ಮಹಾರಾಜನು ದೇವಾಲಯ ದೇಶಕ್ಕೆ ಸಮರ್ಪಿಸಿದನು, ದೇವಾಲಯದ ಉದ್ಘಾಟನೆಯ ಸಮಯದಲ್ಲಿ ಶಾಂತಲೆ ಆನಂದ ನರ್ತನ ಮಾಡಲು ಆಕೆಯ ಬಂಗಿಗಳಿಂದ ಸ್ಪೂರ್ತಿಗೊಂಡ ಶಿಲ್ಪಿಗಳ್ಳು ಶಿಲಾಬಾಲಿಕೆಯರನ್ನು ನಿರ್ಮಿಸಿ ದೇವಾಲಯದಲ್ಲಿ ಸ್ಥಾಪಿಸಿದರು. ಹಳೆಯಬೀಡು ಅಥವ ಆಗಿನ ದ್ವಾರಸಮುದ್ರದಲ್ಲಿ ಕೇತಮಲ್ಲನಾಯಕ ಒಳಗಿನ ಈಶ್ವರದೇವಾಲಯ ನಿರ್ಮಿಸಿದನು, ಎರಡು ಗರ್ಭಗುಡಿಗಳನ್ನು ಒಂದೆ ಪ್ರಾಂಗಣ, ದ್ವಾರಗಳಿಂದ ನಿರ್ಮಿಸಿದ ಅದನ್ನು ಶಾಂತಲೇಶ್ವರ ಹಾಗು ಹೋಯ್ಸಳೇಶ್ವರ ಎಂದು ಕರೆದರು. ಇಬ್ಬರು ಎರಡು ದೇಹ ಒಂದು ಆತ್ಮ ಎಂಬ ಭಾವನೆಯಂತೆ ನಿರ್ಮಿಸಲಾಯಿತು.

ನಂತರ ಹೊರಗಿನ ವಿಶಾಲ ದೇಗುಲವನ್ನು, ವಿಷ್ಣುವರ್ದನ ಮಹಾರಾಜರೆ ನಿರ್ಮಿಸಿದರು. ಅಲ್ಲಿರುವ ಎರಡು ಬೃಹುತ್ ಕಲ್ಲಿನ ಬಸವ, ಮೂಲೆಯಲ್ಲಿನ ನೃತ್ಯ ಗಣಪತಿ ಎಲ್ಲವು ಅದ್ಭುತಗಳಾದವು, ಅಲ್ಲಿನ ಬಸವಗಳನ್ನು ಶಟಕಗಳಲ್ಲಿ ತರಲಾರದೆ ಕೈ ಚಲ್ಲಿದ್ದಾಗ,ಸ್ವಯ ಶಿವನೆ ಕನಸಿನಲ್ಲಿ ಬಂದು, ಬಸವಗಳನ್ನು ತರುವುದು ನನ್ನ ಜವಾಬ್ದಾರಿಎಂದು ನುಡಿದು, ಪ್ರತಿಷ್ಟಾಪನೆ ಮಹೂರ್ತಕ್ಕೆ ಅವುಗಳನ್ನು ಸ್ವಯಂ ಬಾಹುಬಲಿ ಸ್ವಾಮಿಯೆ ಜೀವಂತ ನಡೆಸಿತಂದನೆಂದು , ಆ ಬಸವಗಳು ಅಲ್ಲಿ ನಿಂತು ಕಲ್ಲಾದವೆಂದು ಪ್ರತೀತಿ, ಅದನ್ನು ಶಾಲೆಗಳಲ್ಲಿ 'ಕುವರವಿಷ್ಣುವಿನ ಕನಸು' ಎಂದು ಇದೆ ಶಾಂತಲ ಪುಸ್ತಕದ ಬಾಗವನ್ನು ಓದಿದ್ದ ನೆನೆಪು. ನಂತರ ಕುವರ ವಿಷ್ಣುವಿನ ವಿವಾಹ. ಎಲ್ಲವು ಶುಭವಾಗಿದ್ದಾಗಲೆ, ಆಪತ್ತು, ಶಾಂತಲೆಗೆ ಮಕ್ಕಳಾಗುವ ಯೋಗವಿಲ್ಲ, ಲಕ್ಷ್ಮೀಯ ಮಕ್ಕಳು ಆಕೆ ಪಟ್ಟಮಹಿಷಿಯಲ್ಲದ ಕಾರಣ ರಾಜ್ಯವಾಳಲಾರರು, ಅನ್ನುವಾಗ ಕುವರವಿಷ್ಣುವಿಗೆ ರಾಜಪಟ್ಟಕಟ್ಟಲು ಮಹಾರಾಜ ಬಯಸಿದ್ದ, ಆದರೆ ಇದರ ಅರಿವಿಲ್ಲದ ಕುವರವಿಷ್ಣು, ಮಹಾರಾಜನ ಸಾವಿನ ಜೊತೆ ತಾನು ಸಾಯುವ ಪಣದ 'ಗರುಡ' ಪಟ್ಟದ ಕಾಲ್ತೋಡನ್ನು ಕಟ್ಟಿದ್ದ. ತನ್ನ ಸಾವಿನಿಂದ ಮಾತ್ರ ಪರಿಹಾರವೆಂದು, ನಂತರ ಲಕ್ಷ್ಮೀ ಪಟ್ಟಮಹಿಷಿಯಾದರೆ ಅವಳ ಮಕ್ಕಳು ರಾಜ್ಯ್ವವಾಳಲೆಂಬ ಭಾವದಲ್ಲಿ ಶಾಂತಲೆ, ಶಿವಗಂಗೆಗೆ ಕುವರವಿಷ್ಣುವಿನ ಜೊತೆ ಸಾಗಿ ತನ್ನದೇಹ ಅರ್ಪಿಸಿದಳು. ಆದರೆ ಶಾಂತಲೆಯ ಸಾವನ್ನು ಅರಿಗಿಸಿಕೊಳ್ಳಲಾರದ ಕುವರವಿಷ್ಣು ತಾನು ಸಹ ಅವಳ ಹಿಂದೆಯೆ, ಶಿವಗಂಗೆಯ ಬೆಟ್ಟದ ತುದಿಯಿಂದಿ ಜಿಗಿದು ಪ್ರಾಣ ಅರ್ಪಿಸಿದ. ನಂತರ ಮಹಾರಾಜ ವಿಷ್ಣುವರ್ದನನ ದುಖಃವನ್ನು ನೋಡಲಾರದ ಶಾಂತಲೆಯ ಆತ್ಮ ಲಕ್ಷ್ಮೀಯ ಮೇಲೆ ಆವರಿಸಿ, ನಂತರ ಶಾಂತಲೆ ಹಾಗು ಲಕ್ಷ್ಮೀ ಇಬ್ಬರು ಒಬ್ಬರೆ ಆಗಿ ನೆಲೆಸಿದರು. ಹೋಯ್ಸಳ ವಿಷ್ಣುವರ್ದನನಿಗೆ ಸಂತಾನವಾಯಿತು ಎನ್ನುತ ಶಾಂತಲೆಯ ಕತೆ ಮುಗಿಯುತ್ತದೆ. ಕತೆಯ ಉದ್ದಕ್ಕು ಬರುವ ಹಲವು ಪಾತ್ರಗಳು ಬಹಳ ಕಾಲ ಮನದಲ್ಲಿ ಉಳಿಯುತ್ತದೆ. ಕುವರವಿಷ್ಣುವಿನ ಕನಸಿನ ಬಾಗ, ಉಪನಯನದ ಸಮಯದಲ್ಲಿ ಊರಿನ ಸುವಾಸಿನಿಯೊಬ್ಬಳು ಮಹಾರಾಜನಿಗೆ, 'ಪ್ರಭು ತಲೆಯಿತ್ತಿ ಕುಂಕುಮ ಇಡಿಸಿಕೊಳ್ಳೀ' ಎನ್ನುವಾಗಿನ ಸಂದರ್ಭ. ಕಡೆಯಲ್ಲಿ ಶಾಂತಲೆ ಮೇಲಿನಿಂದ ಜಿಗಿದು ಜೀವ ತೆತ್ತ ನಂತರ ಕುವರವಿಷ್ಣು ಸಹ 'ತನ್ನ ಅಕ್ಕನಿಗಾಗಿಯೆ ' ಜಿಗಿಯುವ ಪರಿ ಓದುಗರ ಕಣ್ಣಲ್ಲಿ ಹಲವು ಬಾರಿ ಕಣ್ಣಿರು ತರಿಸುತ್ತದೆ ಕನ್ನಡದಲ್ಲಿ ನಿಲ್ಲುವ ಶಾಶ್ವತ ಕಾದಂಬರಿ 'ಶಾಂತಲ'