ಉಡುಪಿಯ ಬಳಿಯ, ' ಟರ್ಟಲ್ ಬೇ ರೆಸಾರ್ಟ್' !

Submitted by venkatesh on Sun, 02/07/2010 - 05:23
ಬರಹ

ಸೂರ್ಯ ಮುಳುಗುವ ದೃಷ್ಯ ಎಲ್ಲೆಡೆಯೂ ಸುಂದರವೇ. ಆದರೆ ಕಡಲಿನ ನೀರಿನ ಮೇಲೆ ಅದೆಷ್ಟು ರಮ್ಯ !

ಸಮುದ್ರದ ಬಳಿಯ ಕಲ್ಲಿನ ಚಿಕ್ಕ ಏರು ತಾಣ !

ಚಿಕ್ಕ ಪಕ್ಷಿಗಳ ಸಂಭ್ರಮಮಕ್ಕೆ ಕೊನೆಯುಂಟೇ !

ತೆಂಗಿನ ಮರಗಳು ಅಲ್ಲಿ, ಇಲ್ಲಿ ಎಲ್ಲೆಲ್ಲೂ  !

ದಕ್ಷಿಣ ಕನ್ನಡದ ಉಡುಪಿಯ ಬಳಿಯ, ' ಟರ್ಟಲ್ ಬೇ ರೆಸಾರ್ಟ್' ನ ಬಳಿಯ ಸಮುದ್ರದ ದಂಡೆಯ ಮೇಲೆ ನಾವು ಸೆರೆಹಿಡಿದ ಹಲವು ಸುಂದರ ಚಿತ್ರಗಳು ಮರೆಯಲಾರದ ನೆನೆಪನ್ನು ಮೆಲುಕುಹಾಕಲು ಸಹಾಯ ಮಾಡುತ್ತವೆ.

ಅದೇನು ನಿಸರ್ಗ ಸೌಂದರ್ಯ ! ೨೪ ಗಂಟೆಯೂ ಭೋರ್ಗರೆದು ತನ್ನ ಅಲೆಗಳನ್ನು ನಿರಂತರವಾಗಿ ದಡಕ್ಕೆ ಅಪ್ಪಳಿಸುವ ನೊರೆಹಾಲಿನ ರೀತಿಯಲ್ಲಿ ಸಂಭ್ರಮಿಸುವ ಅಲೆಗಳು,  ಕವಿಗಳಿಗೆ ಪ್ರೋತ್ಸಾಹ ನೀಡಿ ಕವಿತೆಗಳು ಹುಟ್ಟಿಯಾವು ! ನಮ್ಮಂತಹ ಸಾಮಾನ್ಯರ  ಬಾಯಿನಲ್ಲೂ  ಆ ಸಮಯದಲ್ಲಿ ಅಲ್ಲಿದ್ದಾಗ ಕೆಲವು ನವಿರಾದ ಕವಿತೆಗಳ ಸಾಲುಗಳು ನಮಗರಿವಿಲ್ಲದೆಯೇ ಹೊರಗೆ ಬಂದವು !

 

 

-ಚಿತ್ರಗಳು : ವೆಂಕಟೇಶ್.

 

 

 

 

ಲೇಖನ ವರ್ಗ (Category)