ಎಲ್ಲ ಪುಟಗಳು

ಲೇಖಕರು: venkatesh
ವಿಧ: Basic page
March 19, 2006
ಕನ್ನಡ ವಿಕಿಪೀಡಿಯ ಕೂಟ ಈ ಬಾರಿ ಬೆಂಗಳೂರಿನಲ್ಲಿ! ಪತ್ರಿಕಾ ಸಂಪರ್ಕ ಸ್ತಳ : ನಯನ ಸಭಾಂಗಣ, ಕನ್ನಡ ಭವನ (ರವೀಂದ್ರ ಕಲಾಕ್ಷೇತ್ರದ ಪಕ್ಕ) ದಿನ : ಏಪ್ರಿಲ್ ೨ನೆ ತಾರೀಖು, ಭಾನುವಾರ. ಕಾಲ : ಸಂಜೆ ೬ ರಿಂದ ೮ ರ ವರೆಗೆ. ಪ್ರವೇಶ : ಉಚಿತ. ಆದರೆ ಮೊದಲೇ ನಿಮ್ಮ ಹೆಸರನ್ನು ನೊಂದಾಯಿಸಿ, ಮತ್ತು ನಿಮಗೆ ಸೌಕರ್ಯಗಳನ್ನು ಕಲ್ಪಿಸುವಲ್ಲಿ ನಮಗೆ ನೆರವಾಗಿ. ವಿಕಿಪೀಡಿಯ ಅವರು ನಿಯೋಜಿಸುತ್ತಿರುವ ಪತ್ರಿಕಾ ಸಂಪರ್ಕ ಕೂಟಕ್ಕೆ ನಿಮಗೆಲ್ಲಾ ಸ್ವಾಗತ. ಮುಂದಿನ ತಿಂಗಳು…
ಲೇಖಕರು: tvsrinivas41
ವಿಧ: Basic page
March 19, 2006
ನಾನೊಂದು ಪುಟ್ಟ ಜಂತು ನಿಮ್ಮ ಕಣ್ಣ ಮುಂದೆ ನೂರಾರು ಕಾರ್ಮಿಕರು ನನ್ನ ಹಿಂದೆ ಹಿಂದೆ ಹುಟ್ಟಿದ್ದು ಬೆಳೆದದ್ದು ಒಂದು ಗೂಡಿನೊಳಗೆ ನನ್ನ ಕಾಣಿಕೆಯೆಲ್ಲ ನನ್ನ ಲೋಕದ ಹೊರಗೆ ನನ್ನ ಸಲಹಿದಾತ ಕೊಡುವ ಹಿಪ್ಪುನೇರಳೆಯ ದಂಡೆ ತಿಂದು ತಿಂದು ತುಂಬಿಸುತಿಹೆ ಜೊಲ್ಲಿನ ಹಂಡೆ ಹೊಟ್ಟೆ ತುಂಬಿ ಬಿರಿಯುತಿರಲು ಎಂಥ ಸುಖದ ನಿದ್ದೆ ಆಗ ತಿಳಿಯದಂತೆ ಆ ಮನುಜನ ಬಲೆಗೆ ಬಿದ್ದೆ ಕಷ್ಟಪಟ್ಟು ಕಟ್ಟಿದೆ ನನಗಾಗಿ ಒಂದು ಗೂಡು ಅಣ್ಣ ತಮ್ಮ ಅಕ್ಕ ತಂಗಿಯರೂ ಹಿಡಿದರು ಅದೇ ಜಾಡು ಸಲಹಿದಾತ ಬಂದು ಸುರಿದ ನಮ್ಮನೆಲ್ಲ ಕುದಿವ…
ಲೇಖಕರು: suchara
ವಿಧ: Basic page
March 18, 2006
ಕಾಮನ್ ವೆಲ್ತ್ ಕ್ರೀಡಾಕೂಟದ ಸುದ್ದಿ : ಗುಂಡು ಹಾಕುವುದರಲ್ಲಿ ಭಾರತಕ್ಕೆ ನಾಲ್ಕು ಚಿನ್ನ ! ನಮ್ಮ ಕ್ರೀಡಾಪಟುಗಳು ಈ ತರಹದ ಸಾಂಪ್ರದಾಯಿಕ ಕ್ರೀಡೆಗಳಲ್ಲಿ ಮೇಲುಗೈ ಉಳಿಸಿಕೊಂಡಿರುವುದು ಸ್ವಾಗತಾರ್ಹ. ಆದರೆ ಪದಕ ವಿಜೇತ ಪಟ್ಟಿಯಲ್ಲಿ ನಮ್ಮ ಯೆಂಡ್ಕುಡುಕ ರತ್ನನ ಹೆಸರೇಕೊ ಕಾಣಿಸಲಿಲ್ಲ. - ಸುಚರಾ
ಲೇಖಕರು: venkatesh
ವಿಧ: Basic page
March 18, 2006
"ಬೀಜ ಮಸೂದೆ," ರೈತರ ಹಕ್ಕಿಗೆ ಮುಳುವಾಗಿದೆಯೇ? ಈಗಾಗಲೆ ಭಾರತೀಯ ಕೃಷಿ ರಂಗದಲ್ಲಿ ರೈತರು ಸಾಕಷ್ಟು ಸಂಕಷ್ಟ, ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕರ್ನಾಟಕ ಸರ್ಕಾರದ ಬೀಜ ಮಸೂದೆ, ಸರ್ಕಾರದ ರೈತ ವಿರೋಧಿ ಧೋರಣೆಯ ಪ್ರತೀಕವೆಂದೇ ಹೇಳಬಹುದು. ರೈತರು ತಾವೇ ಉಳಿಸಿದ ಬೀಜಗಳನ್ನು ತಾವೇ ಸ್ವಂತ ಉಪಯೋಗಕ್ಕೆ ತರುವ ಮೊದಲು ಬೀಜ ಪ್ರಮಾಣ ಸಂಸ್ಥೆಗಳಲ್ಲಿ ಪರೀಕ್ಷೆಗೆ ಒಳಪಡಿಸಬೇಕೆಂಬುವ ಮಾತಿನಿಂದ ರೈತರು ನೊಂದಿದ್ದಾರೆ. ಬೀಜ ಪರೀಕ್ಷೆಯ ಖರ್ಚು ರೈತನೇ ಹೊರಬೇಕಾಗುತ್ತದೆ. ತಲೆ ತಲಾಂತರಗಳಿಂದ…
ಲೇಖಕರು: suchara
ವಿಧ: ಚರ್ಚೆಯ ವಿಷಯ
March 18, 2006
ಹೊಸದಾಗಿ ಕುಮಾರವ್ಯಾಸ ಭಾರತ ಓದಲು ಪ್ರಾರಂಭ ಮಾಡಿದ್ದೇನೆ. ಪೀಠಿಕಾಸಂಧಿಯ ಕೊನೆಯ ಪದ್ಯದ ಅರ್ಥ ಸ್ಪಷ್ಟವಾಗಲಿಲ್ಲ. ಯಾರಾದರು ತಿಳಿಸಿಕೊಟ್ಟರೆ ಉಪಯೋಗವಾಗುತ್ತದೆ. ======= ೨೩==================== ವೇದ ಪುರುಷನ ಸುತನ ಸುತನ ಸ ಹೋದರನ ಹೆಮ್ಮಗನ ಮಗನ ತ ಳೋದರಿಯ ಮಾತುಳನ ರೂಪನನತುಳ ಭುಜಬಲದಿ ಕಾದಿ ಗೆಲಿದನಣ್ಣನವ್ವೆಯ ನಾದಿನಿಯ ಜಠರದಲಿ ಜನಿಸಿದ ನಾದಿ ಮೂರುತಿ ಸಲಹೋ ಗದುಗಿನ ವೀರನಾರಯಣ ================================= ಧನ್ಯವಾದಗಳೊಂದಿಗೆ -ಸುಚರಾ
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
March 18, 2006
ನಾನು ಆ ಕಛೇರಿಯ ಆಡಳಿತಾಧಿಕಾರಿಯಾಗಿ ಹೊಸದಾಗಿ ಬಂದಿರುವೆ. ಸರ್‍‍ಪ್ರೈಸ್ ಚೆಕ್ ಮಾಡಲೆಂದು ಮೊದಲನೆಯ ದಿನವೇ ಅಲ್ಲಿಯ ಕೇರ್‍‍ಟೇಕರ್ ಬಳಿಗೆ ಬೆಳಗಿನ ೭ ಘಂಟೆಗೆ ಬಂದಿದ್ದೇನೆ. ಸೀದಾ ಬಂದವನೇ ನಾನು ಅಲ್ಲಿದ್ದ ಒಂದು ಕುರ್ಚಿಯ ಮೇಲೆ ಕುಳಿತೆ. ಕೇರ್‍‍ಟೇಕರ್ ಅಲ್ಲಿದ್ದ ಎಲೆಕ್ಟ್ರೀಷಿಯನ್ನಿಗೆ ಏನೋ ಸಾಮಾನನ್ನು ಕೊಡುತ್ತಿದ್ದ. ನನ್ನ ಕಡೆ ತಲೆ ಎತ್ತಿ ಕೂಡಾ ನೋಡಲಿಲ್ಲ. ಕಸ ಗುಡಿಸುವ ಹೆಂಗಸರು ಎಲೆ ಅಡಿಕೆ ಹೊಗೆಸೊಪ್ಪು ಜಗಿಯುತ್ತಾ ಅಲ್ಲಿಯೇ ಮೂಲೆಯಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು.…
ಲೇಖಕರು: pratap
ವಿಧ: ಚರ್ಚೆಯ ವಿಷಯ
March 18, 2006
ನಮಸ್ಕಾರ ಗೆಳೆಯರೆ ನನ್ನ ಬಳಿ ಕೆಲವು ಕನ್ನಡ ಧಾರಾವಾಹಿಗಳ ಶೀರ್ಷಿಕೆ ಗೀತೆಗಳಿವೆ. ಅವು ಗರ್ವ, ಮಾಯಾಮೃಗ, ಮನ್ವಂತರ ಹಾಗು ಮುಕ್ತ. ನಿಮಗೆ ಈ ಗೀತೆಗಳು ಇಷ್ಟವಿದ್ದಲ್ಲಿ ನೀವು ಇಲ್ಲಿಂದ 'ಡೌನ್ಲೋಡ್' ಮಾಡಿಕೊಳ್ಳಬಹುದು. http://pratapa.blogspot.com/2006/02/kannada-serial-title-songs.html ಧನ್ಯವಾದಗಳು. ಪ್ರತಾಪ (ಈ ವಿಷಯ ಈ ಫೊರಮ್ನಲ್ಲಿ ಸೂಕ್ತವಲ್ಲದಿದ್ದರೆ ದಯವಿಟ್ಟು ಬೇರೆಲ್ಲಿಗಾದರೂ ವರ್ಗಾಯಿಸಿ)
ಲೇಖಕರು: pavanaja
ವಿಧ: Basic page
March 17, 2006
ಇದೊಂದು ತುಂಬ ಹಳೆಯ ಒಗಟು. ನಾನು ಶಾಲೆಯಲ್ಲಿ ಕೇಳಿದ್ದು. ಒಂದಾನೊಂದು ಕಾಲದಲ್ಲಿ, ನಾನು ತೈವಾನಿನಲ್ಲಿ ಇದ್ದಾಗ, soc.culture.indian.karnataka ಎಂಬ newsgroupನಲ್ಲಿ ನಾನು ಇದನ್ನು ಪೋಸ್ಟಿಸಿದ್ದೆ. ------------ ಈರಾರು ತಾರೆಯ ತಾಯಿಯ ತಮ್ಮನ ಇರಿದನ ಅಣ್ಣನ ಅಯ್ಯನ ವಾಹನವೇ ಹೋ ಹೋ ಎಂದನು. ------------ ಏನಿದು? ಸಿಗೋಣ, ಪವನಜ [http://www.vishvakannada.com/Blog|ನನ್ನ ಬ್ಲಾಗ್]
ಲೇಖಕರು: shreekant.mishrikoti
ವಿಧ: Basic page
March 17, 2006
(ಬೇಕೆಂತಲೇ ಹೆಚ್ಚು ವಿವರಣೆ ಕೊಡುತ್ತಿಲ್ಲ; ಮೆದುಳಿಗೆ ಮೇವಾಗಿರಲಿ ಅಂತ!) ೩೧. ಆಳ ನೋಡಿ ಹಾರು . ೩೨. ಆಳುದ್ದದ ಬಾವಿ ಮುಚ್ಚಬಹುದು , ಗೇಣುದ್ದದ ಹೊಟ್ಟೆ ಮುಚ್ಚಲಾಗದು. ೩೩. ಆಳೋರಿಲ್ಲದೆ ನಾಡು ಕೆಟ್ಟಿತು. ೩೪. ಇಕ್ಕಟ್ಟಾದರೂ ತನ್ನ ಮನೆಯೇ ಚೆಂದ . ೩೫. ಇಕ್ಕುವವಳು ನಮ್ಮವಳಾದರೆ ಕೊಟ್ಟಿಗೆಯಲ್ಲಾದರೂ ಉಂಡೇನು. ೩೬. ಇಟ್ಟರೆ ತೊಟ್ಟರೆ ಪುಟ್ಟಕ್ಕನೂ ಚೆಂದ. (--ಬಟ್ಟೆ ,ಒಡವೆ ) ೩೭. ಇತ್ತತ್ತ ಬಾ ಅಂದರೆ ಹೆಗಲೇರಿ ಕೂತ . ೩೮. ಇದ್ದ ಮಕ್ಕಳಿಗೇ ಕೂಳಿಲ್ಲ ; ಮತ್ತೊಂದು ಕೊಡೋ ಶಿವರಾಯ ಅಂದರಂತೆ…
ಲೇಖಕರು: pavanaja
ವಿಧ: ಬ್ಲಾಗ್ ಬರಹ
March 17, 2006
ವಿಂಡೋಸ್ ಎಕ್ಸ್‌ಪಿ ಬಳಸುವವರಿಗೆ ಈಗ ಕನ್ನಡ LIP ಲಭ್ಯವಿದೆ. ವಿಂಡೋಸ್ ಎಕ್ಸ್‌ಪಿಯ ಸರ್ವಿಸ್ ಪ್ಯಾಕ್-2 ಇದ್ದವರು ಮಾತ್ರ ಇದನ್ನು ಅಂತರಜಾಲದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇನ್ನೂ ಒಂದು ನಿಯಮವಿದೆ. ಕಾನೂನುಬದ್ಧವಾಗಿ ವಿಂಡೋಸ್ ಎಕ್ಸ್‌ಪಿ ತಂತ್ರಾಂಶವುಳ್ಳವರು ಮಾತ್ರ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಕೆಲವು ಸ್ಕ್ರೀನ್‌ಶಾಟ್‌ಗಳನ್ನು [http://vishvakannada.com/node/199|ನನ್ನ ತಾಣದಲ್ಲಿ] ನೋಡಬಹುದು. ಸಿಗೋಣ, ಪವನಜ