"ಬೀಜ ಮಸೂದೆ," ರೈತರ ಹಕ್ಕಿಗೆ ಮುಳುವಾಗಿದೆಯೇ?

"ಬೀಜ ಮಸೂದೆ," ರೈತರ ಹಕ್ಕಿಗೆ ಮುಳುವಾಗಿದೆಯೇ?

ಬರಹ

"ಬೀಜ ಮಸೂದೆ," ರೈತರ ಹಕ್ಕಿಗೆ ಮುಳುವಾಗಿದೆಯೇ?

ಈಗಾಗಲೆ ಭಾರತೀಯ ಕೃಷಿ ರಂಗದಲ್ಲಿ ರೈತರು ಸಾಕಷ್ಟು ಸಂಕಷ್ಟ, ಸಮಸ್ಯೆಗಳನ್ನು
ಎದುರಿಸುತ್ತಿದ್ದಾರೆ. ಕರ್ನಾಟಕ ಸರ್ಕಾರದ ಬೀಜ ಮಸೂದೆ, ಸರ್ಕಾರದ ರೈತ ವಿರೋಧಿ ಧೋರಣೆಯ
ಪ್ರತೀಕವೆಂದೇ ಹೇಳಬಹುದು. ರೈತರು ತಾವೇ ಉಳಿಸಿದ ಬೀಜಗಳನ್ನು ತಾವೇ ಸ್ವಂತ ಉಪಯೋಗಕ್ಕೆ ತರುವ ಮೊದಲು
ಬೀಜ ಪ್ರಮಾಣ ಸಂಸ್ಥೆಗಳಲ್ಲಿ ಪರೀಕ್ಷೆಗೆ ಒಳಪಡಿಸಬೇಕೆಂಬುವ ಮಾತಿನಿಂದ ರೈತರು ನೊಂದಿದ್ದಾರೆ. ಬೀಜ ಪರೀಕ್ಷೆಯ ಖರ್ಚು ರೈತನೇ ಹೊರಬೇಕಾಗುತ್ತದೆ.
ತಲೆ ತಲಾಂತರಗಳಿಂದ ರೈತರು ಬೀಜ ಕಾಪಾಡುವ ಪದ್ಧತಿಯನ್ನು ರೂಢಿಸಿಕೊಂಡು ಬಂದಿದ್ದರು.
ಹಾಗಾಗಿ ಕೃಷಿಕರು ತಮ್ಮ ಹಕ್ಕನ್ನು ಕಳೆದುಕೊಂಡಂತೆ ಭಾವಿಸುತ್ತಿದ್ದಾರೆ.!
ಮನನೊಂದ ರೈತರಿಗೆ ಸರ್ಕಾರದ ನಿಲುವು ಅರ್ಥವಾಗುತ್ತಿಲ್ಲ. ಸರ್ಕಾರವು ಬಹುರಾಷ್ಟ್ರೀಯ ಕಂಪನಿಗಳ
'ಏಜೆಂಟ್' ಆಗಿರಬಹುದೇ? ಎಂದು ವಾದಿಸುವವರ ಸಂಖ್ಯೆಗೂ ಕಡಿಮೆಯಿಲ್ಲ.
ಒಂದು ಆಶಾಕಿರಣ ವೆಂದರೆ, ಕರ್ನಾಟಕದ ಉಪಮುಖ್ಯಮಂತ್ರಿಗಳು ಬೀಜ ಮಸೂದೆಯ ಜಾರಿಯ ಬಗ್ಗೆ
ಪ್ರತಿಭಟಿಸಿ ಹೋರಾಡಲು ಮಾಡಿದ ಭಾಷಣ ಸಮಯೋಚಿತವೆಂದೇ ಹೇಳಬಹುದು.(ಪ್ರ.ವಾಣಿ, ಮಾರ್ಚ್ ೯ )
'ರೈತಪರ'ವೆಂದೇ ಪದೇ ಪದೇ ಹೇಳುವ ಕರ್ನಾಟಕ ಸರ್ಕಾರ, ಬೀಜ ಮಸೂದೆಯ ಬಗ್ಗೆ, ಇತರ ರಾಜ್ಯಗಳ
ಮನಒಲಿಸಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಬಹುದು.
ಸರ್ಕಾರದ ನೀತಿ ರೈತರ ಏಳಿಗೆ ಎಂಬುದಾದರೆ, ಈ ಮಸೂದೆಯಿಂದ ರೈತರ ಅನುಕೂಲಗಳನ್ನು ಗಮನಕ್ಕೆ
ತೆಗೆದುಕೊಡಂತೆ ಎಂಬುದಾದರೆ, ರೈತಸಮುದಾಯಕ್ಕೆ ಇದರ ಮನವರಿಕೆ ಮಾಡುವುದು ಅತಿ ಅಗತ್ಯವಾಗಿದೆ.