ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: Basic page
March 17, 2006
೪೭. ಅಹಾರವನ್ನು ಪಚನವಾದ ಮೇಲೆ, ಹೆಂಡತಿಯನ್ನು ಯೌವನ ಕಳೆದ ಮೇಲೆ , ಶೂರನನ್ನು ರಣರಂಗದಿಂದ ಮರಳಿ ಬಂದ ಮೇಲೆ , ಬೆಳೆಯನ್ನು ಕೈಗೆ ಬಂದ ಮೇಲೆ ಹೊಗಳಬೇಕು. ಜೀರ್ಣಮನ್ನಂ ಪ್ರಶಂಸೀಯಾತ್ ಭಾರ್ಯಾಂ ಚ ಗತಯೌವನಾಂ | ರಣಾತ್ ಪ್ರತ್ಯಾಗತಂ ಶೂರಂ ಸಸ್ಯಂ ಚ ಗೃಹಮಾಗತಂ || ೪೮. ಪುಸ್ತಕದಲ್ಲಿನ ವಿದ್ಯೆ , ಇನ್ನೊಬ್ಬರ ಕೈಗೆ ಹೋದ ಹಣ ಇವೆರಡೂ ಅಗತ್ಯ ಬಿದ್ದಾಗ ಲಭ್ಯವಾಗದಿದ್ದರೆ ಅವುಗಳಿಂದ ಏನು ಪ್ರಯೋಜನ? ಪುಸ್ತಕಸ್ಥಾತು ಯಾ ವಿದ್ಯಾ ಪರಹಸ್ತಗತಂ ಧನಂ | ಕಾರ್ಯಕಾಲೇ ಸಮುತ್ಪನ್ನೇ ನ ಸಾ ವಿದ್ಯಾ ನ…
ಲೇಖಕರು: honnung
ವಿಧ: ಚರ್ಚೆಯ ವಿಷಯ
March 17, 2006
ಇದೀಗ ಗೊತ್ತಾಯಿತು ಈ [http://www.deccanherald.com/deccanherald/Feb72006/spectrum104717200626.asp|ಸುದ್ದಿ]. ಕನ್ನಡದಲ್ಲಿ ಹೊಸ ಕೀಲಿಮಣೆ ಬಂದಿದೆಯಂತೆ. ಇದನ್ನು ಹೆಲ್ವೆಟ್ ಪ್ಯಾಕರ್ಡ್ ಕಂಪನಿಯವರು ತಯಾರಿಸಿದ್ದಾರೆ. ಇದರ ವಿಶೇಷವೆಂದರೆ ಇದರಲ್ಲಿ ಪೆನ್ ಬಳಕೆ ಇದೆಯಂತೆ. ವ್ಯಂಜನಗಳಿಗಾಗಿ ಬಟನ್ ಗಳು ಇದ್ದು, ಪೆನ್ ಬಳಸಿ ಅವನ್ನು ಕಾಗುಣಿತ ಮಾಡಬಹುದಂತೆ. ಹೇಗೋ ಗೊತ್ತಿಲ್ಲ. ನಾವು ಎರಡೂ ಕೈಯಿಂದ ಕುಟ್ಟುತ್ತಿದ್ದರೆ ಪೆನ್ ಹೇಗೆ ಸಮಂಜಸವಾಗಿ ಬಳಸಬಹುದು? ಇಲ್ಲವೆ ಬರೀ ಒಂದೇ…
ಲೇಖಕರು: sinchanabhat
ವಿಧ: Basic page
March 17, 2006
ಮಂಜು ಮುಸುಕಿದ ಮುಂಜಾವಿನಲಿ ಪಟ ಪಟನೇ ಪುಟಿಯುತ್ತಿದ್ದ ಮಂಜಹನಿ.ಪಶ್ಚಿಮಘಟ್ಟಗಳ ಸೌಂದರ್ಯ ಆಗಸದಲ್ಲಿ ಮರೆಮಾಚಿದಂತಿತ್ತು. ಅದು ಸೌಂದರ್ಯದ ಮರೆಮಾಚುವಿಕೆಯಲ್ಲ ಅಸ್ಪಷ್ಟತೆಯಲ್ಲ ವಿಭಿನ್ನತೆ,ಸೌಂದರ್ಯದ ಸೊಬಗಿನ ಜೀವಲತೆ. ಸೌಂದರ್ಯವೆಂದರೇನು? ಓ ಪ್ರಕೃತಿಯೆ ನೀನೇನಾ? ಜಂಭಪಡಬೇಡ,ಅದು ನೀನಾಗಿರಲಿಕ್ಕಿಲ್ಲ.ನನ್ನ ಕಂಗಳ ನಿರ್ಮಲ ನೋಟವಿರಬೇಕು.ಮನದಾಳದ ಆರಾಧನೆ ಇರಬೇಕು.ಕಾಲದ ಕವನಕ್ಕೆ ಭಾವ ತುಂಬುವವರು ನಾವು ,ಹುಟ್ಟಿದ ಮಾತುಗಳಲಿ ಅರ್ಥ ಹುಡುಕುವವರು ನಾವು.ಮತ್ತೆ ಪ್ರಶ್ನೆ, ಹಾಗದರೆ ಅಷ್ಟಕ್ಕೂ…
ಲೇಖಕರು: tvsrinivas41
ವಿಧ: Basic page
March 17, 2006
ನನ್ನ ಸ್ನೇಹಿತರೊಬ್ಬರು 'ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ಯಾಕೆ ಕವನದಲ್ಲಿ ಬರೆದೇ ಇಲ್ಲ' ಅಂತ ಕೇಳಿದ್ರು - ಅದಕ್ಕೆ ಸ್ವಲ್ಪ ಯೋಚನೆ ಮಾಡಬೇಕಾಯ್ತು. ಇಷ್ಟು ದಿನಗಳು ಇದರ ಬಗ್ಗೆ ಯೊಚಿಸಿರಲೇ ಇಲ್ಲ. ಕೆಲಸಕ್ಕೆ ಸೇರಿ ೨೪ ವರುಷಗಳಾದ್ರೂ ಒಂದು ಪೈಸೆ ಕೂಡಿಸಿಟ್ಟಿಲ್ವಲ್ಲ ಅಂತ. ಯಾಕೆ ಹೀಗಾಯ್ತು? ನನ್ನ ಚಿಂತನೆಯ ಫಲವನ್ನು ಕವನವಾಗಿ ನಿಮ್ಮ ಮುಂದಿರಿಸುತ್ತಿರುವೆ. ಹೇಗಿದೆ ನೋಡಿ. ನಾನೊಬ್ಬ ಏದುಸಿರು ಬಿಡುತಿಹ ಕಲ್ಲಿದ್ದಲು ಉಗಿಬಂಡಿ ನನ್ನ ಬಳಿ ಎಂದಿಗೂ ಸುಳಿಯಲಿಲ್ಲ ಬಂಗಾರದ ಗಿಂಡಿ…
ಲೇಖಕರು: vpkotian
ವಿಧ: ಚರ್ಚೆಯ ವಿಷಯ
March 17, 2006
Need help here. I have installed all the libraries needed. scim-m17n etc. Now I can see Kannada fonts on my gedit. They are also displayed properly on the firefox title bar. But on the body of firefox, display is still broken of Kannada letters. I use redhat linux. I have also added Nudi fonts and Kedage. Please help.
ಲೇಖಕರು: shreekant.mishrikoti
ವಿಧ: Basic page
March 16, 2006
೨೧. ಇಷ್ಟಾದರೂ ಕಂಡ್ರಾ ಕೃಷ್ಣಭಟ್ರೇ ಅಂದ್ರೆ ಮುಪ್ಪಿನ ಕಾಲಕ್ಕೆ ಮೂರೇ ಹೆಂಡ್ರು ಅಂದ್ರಂತೆ! ೨೨. ಅಶ್ವತ್ಥ ಕಟ್ಟೆ ಸುತ್ತಿ ಹೊಟ್ಟೆ ಮುಟ್ಟಿ ನೋಡಿಕೊಂಡಳಂತೆ! ೨೩. ಆಕಾಶ ನೋಡಲು ನೂಕು ನುಗ್ಗಲೇ? ೨೪. ಆಗೋ ಪೂಜೆ ಆಗುತ್ತಿರಲಿ , ಊದೋ ಶಂಖ ಊದಿಬಿಡೋಣ ೨೫. ಆಡಿ ತಪ್ಪಬೇಡ , ಓಡಿ ಸಿಕ್ಕಬೇಡ . ೨೬. ಅಳಿಯನ ಕುರುಡು ಬಯಲಾದಾಗ ( ನಾ. ಕಸ್ತೂರಿಯವರ ಪ್ರಕಾರ -ಅಳಿಯನ ಬರುಡು ಬಯಲಾದಾಗ!) ೨೭. ಮನೆ ತಿನ್ನೋನಿಗೆ ಬಾಗಿಲು ಹಪ್ಪಳ-ಸಂಡಿಗೆ. ೨೮. ಆನೆ ಮೆಟ್ಟಿದ್ದೇ ಹಾದಿ, ಶೆಟ್ಟಿ ಬಿಟ್ಟಲ್ಲೇ ಪಟ್ಟಣ.…
ಲೇಖಕರು: shreekant.mishrikoti
ವಿಧ: Basic page
March 16, 2006
೪೩. ತನ್ನ ಸಂಪತ್ತು ಹಾಳಾದದ್ದು , ಮಾನಸಿಕ ವ್ಯಥೆ , ಮನೆಯಲ್ಲಿಯ ಕೆಟ್ಟ ನಡತೆ , ಮೋಸ ಹೋದದ್ದು , ಅವಮಾನ ಇವುಗಳನ್ನು ಬುದ್ಧಿವಂತರು ಇನ್ನೊಬ್ಬರ ಮುಂದೆ ಹೇಳಬಾರದು . ಅರ್ಥನಾಶಂ ಮನಸ್ತಾಪಂ ಗೃಹೇ ದುಶ್ಚರಿಚರಿತಾನಿ ಚ | ವಂಚನಂ ಚಾಪಮಾನಂ ಚ ಮತಿಮಾನ್ ನ ಪ್ರಕಾಶಯೇತ್ || ೪೪. ದೂರದಲ್ಲಿರುವವನನ್ನು , ನೀರಿನಲ್ಲಿರುವವನನ್ನು , ಓಡುತ್ತಿರುವವನನ್ನು , ಸಂಪತ್ತಿನಿಂದ ಗರ್ವಿಷ್ಠನಾದವನನ್ನು ಸಿಟ್ಟಿಗೆದ್ದವನನ್ನು ಸೊಕ್ಕಿನಿಂದಿರುವವನನ್ನು ನಮಸ್ಕರಿಸಬಾರದು. ದೂರಸ್ಥಂ ಜಲಮಧ್ಯಸ್ಥಂ…
ಲೇಖಕರು: ismail
ವಿಧ: ಬ್ಲಾಗ್ ಬರಹ
March 15, 2006
ಲೈಂಗಿಕತೆಯ ಅವಶ್ಯಕತೆಯೇ ಇಲ್ಲದೇ ಮಣ್ಣು ಜೀವಿಗಳನ್ನು ಹುಟ್ಟಿಸುತ್ತದೆ ಎಂದು ಪ್ರಾಚೀನ ಭಾರತೀಯರು, ಗ್ರೀಕರು ನಂಬಿದ್ದರು. ತಾಪದ ಪ್ರಭಾವದಿಂದ ಮಣ್ಣು ಜೀವಿಗಳನ್ನು ಹುಟ್ಟಿಸುತ್ತದೆ ಎಂದು ಗ್ರೀಕ್‌ ಚಿಂತಕ, ಗುರು ತೇಲ್ಸ್‌ ತನ್ನ ವಿದ್ಯಾರ್ಥಿಗಳಿಗೆ ಹೇಳಿದ್ದ. ಮಣ್ಣು ಯಾವ ಬಾಹ್ಯ ನೆರವೂ ಇಲ್ಲದೆ ಸೃಷ್ಟಿಸುವ ಶಕ್ತಿ ಹೊಂದಿದೆ ಎಂಬ ವಾದವನ್ನು ತತ್ವಜ್ಞಾನಿ ಅರಿಸ್ಟಾಟಲ್‌ ಮಂಡಿಸಿದ್ದ. ಮಣ್ಣಿನ ಶಕ್ತಿಯ ಕುರಿತ ಇಂಥ ಪರಿಕಲ್ಪನೆಗಳು ದಾಖಲಾಗುವುದಕ್ಕೆ ಸಾವಿರಾರು ವರ್ಷಗಳ ಮೊದಲೇ ಕೃಷಿ…
ಲೇಖಕರು: tvsrinivas41
ವಿಧ: Basic page
March 15, 2006
ಈ ಸಂದರ್ಭದಲ್ಲಿ ನನಗೆ ಶಾಂತಾರಾಮ್ ರವರ ಹಿಂದಿಯ ನವರಂಗ್ ಚಿತ್ರದ ಸಂಧ್ಯಾರವರ ನೃತ್ಯ ಜ್ಞಾಪಕ ಬರುತ್ತಿದೆ. ಆದರೆ ಅಂದಿನ ಹೋಲಿ ಎಲ್ಲಿ, ಇಂದಿನ ಹೋಲಿ ಎಲ್ಲಿ? ಸಾಮ್ಯತೆ ಇದೆಯೇ? ಈಗೀಗ ಹೋಲಿ ಆಚರಣೆಯಲ್ಲಿ ಮಾದಕತೆ ತುಂಬಿದೆ ಕುಡಿಯಲು ಭಾಂಗ್ (ಮತ್ತೇರಿಸುವ ಪೇಯ) ಬೇಕೇ ಬೇಕು. ಪ್ರಾಪ್ತ ವಯಸ್ಕ ಗಂಡು ಹೆಣ್ಣುಗಳು ಬೀದಿ ಬೀದಿಯಲ್ಲಿ ರಂಗು ರಂಗಿನ ನೀರಿನಲ್ಲಿ ತೊಯ್ದು ತೊಪ್ಪೆಯಾಗಿ ಚೆಲ್ಲಾಟವಾಡಿ ನೋಡುಗರನ್ನೂ ಉತ್ತೇಜಿಸುವ ನೋಟ ಸಾಮಾನ್ಯ. ಈ ವರ್ತನೆ ನಿಜವಾಗಲೂ ಈ ಹಬ್ಬದ ದ್ಯೋತಕವೇ? ಹಬ್ಬ ಬರಲು…
ಲೇಖಕರು: sinchanabhat
ವಿಧ: Basic page
March 15, 2006
ಕೆಲಸ ಕಾರ್ಯಗಳನು ನಾಳೆಗೆ ಮುಂದೂಡಿ ಕುಳಿತು ಇಂದಿನಾ ದಿನವನ್ನು ಮುಗಿಸುವ ನಾವುಗಳೇ ಹೀಗೆ ದಿನವನ್ನು ಕಳೆಯುತ್ತೇವೆ ಬೆಲೆ ನೀಡುವುದಿಲ್ಲ. ತಿರುಳಿಲ್ಲದ ಘಟನೆಗಳನು ಬಹು ಸೃಷ್ಟಿಮಾಡಿ ಹುರುಳಿಲ್ಲದೆಯೆ ನೆನೆದು ದುಃಖಿಸುವ ನಾವುಗಳೇ ಹೀಗೆ ಹಿಂದಿನದ ತಿರುಚುತ್ತೇವೆ ಹೊಸದ ಸೃಷ್ಟಿಸುವುದಿಲ್ಲ ಮುಂದಿನಾಬದುಕಿಗೆ ಕನಸಗೋಪುರವನ್ನು ಮನಸಲ್ಲೇ ಕಟ್ಟುತ್ತಾ ನಿದ್ರಿಸುವ ನಾವುಗಳೇ ಹೀಗೆ ಭ್ರಮೆಯ ಲೋಕದಲಿ ಸಾಗುತ್ತೇವೆ ಗುರಿ ತಲುಪುವುದೇ ಇಲ್ಲ.