ಎಲ್ಲ ಪುಟಗಳು

ಲೇಖಕರು: ಉಉನಾಶೆ
ವಿಧ: ಬ್ಲಾಗ್ ಬರಹ
July 09, 2006
ಹೆಸರು ಉಮೇಶ. ಸಾಮಾನ್ಯವಾಗಿ, 'ಯು‌ಎನ್‌ಶೆಟ್ಟಿ' ಅನ್ನೋ ಹೆಸರಲ್ಲಿ ವ್ಯವಹಾರ. ಹೊಸ ವ್ಯವಹಾರಗಳನ್ನು ಆದಷ್ಟು ಕನ್ನಡದಲ್ಲೇ ಮಾಡೋಣ ಅಂತ "ಉಉನಾಶೆ" ಅಂತ ಇಲ್ಲಿ ಉಪಯೋಗಿಸ್ತಾ ಇದ್ದೀನಿ. "ಉಉನಾಶೆ" ಅಂದ್ರೆ ನಮ್ಮ ಮನೆತನ, ಅಪ್ಪ, ಜಾತಿ ಎಲ್ಲಕ್ಕೂ ಜಾಗ ಕೊಟ್ಟ ಹಾಗೆ ಆಗುತ್ತೆ, ಅಷ್ಟೆ. ಈ ಹೆಸರನ್ನ ಪ್ರೌಢಶಾಲೆ ಹಂತದಲ್ಲೇ ಉಪಯೋಗಿಸ್ತಾ ಇದ್ದೆ, ಅಪರೂಪಕ್ಕೆ. ಊರು ಉಡುಪಿ ತಾಲೂಕಿನ ಪರ್ಕಳ. ಮಣಿಪಾಲದ ಹತ್ತಿರ. ಓದಿಗಾಗಿ ದಾವಣಗೆರೆ, ಉದ್ಯೋಗಕ್ಕಾಗಿ ಬೆಂಗಳೂರಿನಲ್ಲಿ ಕೆಲ ವರ್ಷ ಕಾಲ…
ಲೇಖಕರು: vnag
ವಿಧ: ಬ್ಲಾಗ್ ಬರಹ
July 08, 2006
ಶ್ಯಾಮರಾಯರು ಬಹಳ ದಿನಗಳಿ೦ದ ನರಳುತ್ತಿದ್ದು, ವೈದ್ಯರಿಗೆ ಸಾಕಷ್ಟು ಹಣ ತೆತ್ತು ಬಳಲಿದ್ದಾರೆ.  ರೋಗ ಮಾತ್ರ ಗುಣವಾಗಿಲ್ಲ.  ವೈದ್ಯರು ಹೇಳುತ್ತಾರೆ: ರಾಯರೇ, ನನಗೆ ಕಾಸೇ ಸಿಕ್ತಾ ಇಲ್ಲ. ನೀವು ಇನ್ನೂ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊ೦ಡು ಬನ್ನಿ.  ರ್‍ಆಯರ ಕೋಪ ನೆತ್ತಿಗೇರುತ್ತದೆ. "ಏನ್ರೀ ಡಾಕ್ಟ್ರೇ, ನಿಮಗೇನೂ ಮನುಷ್ಯತ್ವನೇ ಇಲ್ಲವೇ? ನಾನೂ ಇದುವರಗೆ ಸಾವಿರಾರು ರೂಪಾಯಿ ಸುರಿದಿದ್ದೇನೆ.  ಆದರೂ ಕಾಸೇ ಸಿಕ್ತಿಲ್ಲ ಅ೦ತೀರಲ್ಲರೀ?  ನೀವೇನು ಮನುಷ್ಯರೋ ಅಥವಾ ಧನಪಿಶಾಚಿನೋ?"  ವೈದ್ಯರು…
ಲೇಖಕರು: ahoratra
ವಿಧ: ಬ್ಲಾಗ್ ಬರಹ
July 07, 2006
ನಮ್ಮದೇಹದಲ್ಲೊಂದುಎರಡು ತಲೆಯ ಹಾವಿದೆ,ಎರಡು ಕಡೆಯು ಹೆಡೆಯಿದೆ,ಹೆಡೆಗಳಲ್ಲಿ ವಿಷವಿದೆ.ಎಲ್ಲಿದೆ? ಹೇಗಿದೆ?ತಿಳಿಯಬೇಕಾಗಿದೆ.ಇಂದ್ರೀಯಗಳ ಕೊರೆದು ಕೊರೆದು ಹುತ್ತ ಮಾಡಿಕೊಂಡಿದೆ,ವಿಷಯಗಳನು ನುಂಗಿ ನುಂಗಿ ವಿಷವಬೆಳೆಸಿಕೊಂಡಿದೆ,ಪ್ರೀತಿ ಕ್ಷಮಾ ಕರುಣೆಗಳನು ಮೂಟೆಕಟ್ಟಿ ಕುಳಿತಿದೆ,ಎಷ್ಟುಸಲ ಸುಟ್ಟರೂ ಮತ್ತೆ ಹುಟ್ಟಿ ಬರುತಿದೆ.ಏನಿದು? ಯಾಕಿದು?ಅರಿಯಬೇಕಾಗಿದೆ.ರೋಷವೆಂಬ ವೇಷ ತೊಟ್ಟು,ದ್ವೇಷವೆಂಬ ವಿಷದಿಂದ,ನಾಶಮಾಡೊ ಪಾಶವೀಯನೋವು ಕೊಡುವ ಹಾವಿದು.ಕಣ್ಣೆಲ್ಲ ಕಾಮವಾಗಿ,ಕ್ರೋಧ ಕೋರೆಹಲ್ಲುಗಳ,ಲೋಭವೆಂಬ…
ಲೇಖಕರು: kiran bhat
ವಿಧ: Basic page
July 07, 2006
ಗ್ರಾಮೀಣ ರಂಗಭೂಮಿ ಹಾಗೆ ನೋಡಿದರೆ ಗ್ರ್ರಾಮೀಣ ರಂಗಭೂಮಿಯ ಮುಖ್ಯ ಹರಿವು ಜಾನಪದ ರಂಗಭೂಮಿಯೇ. ಈ ರಂಗಭೂಮಿ ಆಚರಣಾ ರಂಗಭೂಮಿಯಾಗಿ ಹುಟ್ಟಿ ಮುಂದೆ ಆಚರಣೆಯ ಕೊಂಡಿಗಳನ್ನು ಒಂದೊಂದಾಗಿ ಕಳಚಿಕೊಳ್ಳ್ಳುತ್ತ, ನಿಧಾನವಾಗಿ ಮನರಂಜನಾಪ್ರಧಾನವಾದದ್ದು ಮತ್ತು ನಂತರ ಸ್ವತಂತ್ರ ಅಸ್ಠಿತ್ವ ಪಡೆದದ್ದು ಈಗ ಇತಿಹಾಸ. ಮುಂದೆ ಕನ್ನಡದ ಸಂದರ್ಭದಲ್ಲಿ ನಾಟಕ ರಂಗಭೂಮಿಗೆ ತಾಂತ್ರಿಕವಾಗಿ ಮೂಲದ್ರವ್ಯ ಒದಗಿಸಿದ್ದು ಈ ಜನಪದ ರಂಗಭೂಮಿಯೇ. ಇಂಥ ಮಹತ್ವದ ಜಾನಪದ ರಂಗಭೂಮಿಯ ಆಳ,ಹರಿವು, ವಿಸ್ತಾರ ಅಗಾಧವಾದದ್ದು.…
ಲೇಖಕರು: shreeharsha4u
ವಿಧ: Basic page
July 07, 2006
ಮೊನ್ನೆ ಪತ್ರಿಕೆಯಲ್ಲಿ ಹೆಲ್ಮೆಟ್‌ ಕಡ್ಡಾಯದ ಬಗ್ಗೆ ವರದಿಗಳನ್ನ ಓದುತ್ತಿದ್ದೆ. ಈ ಹೆಲ್ಮೆಟ್ ಕಡ್ಡಾಯ ಎನ್ನುವುದು ಒಂದು ರೀತಿಯ ಕಣ್ಣಾಮುಚ್ಚಾಲೆ. ಪ್ರತೀ ವರ್ಷವೂ ತಪ್ಪದೆ ನಡೆಯುವ, ಪ್ರತೀ ಹೊಸ ಸರ್ಕಾರ ಬಂದಾಗಲೂ ಜೀವ ಪಡೆಯುವ ಹೆಲ್ಮೆಟ್ ಆಟ ಸ್ವಲ ದಿನ ಪತ್ರಿಕೆಗಳಿಗೆ ಆಹಾರವಾಗಿ, ಹರಟುವ ಬಾಯಿಗಳಿಗೆ ಸ್ನ್ಯಾಕ್‌ ಆಗಿ ನಿಧಾನವಾಗಿ ಮೊದಲ ಪುಟದಿಂದ ಮೂರನೆ ಪುಟಕ್ಕೆ, ನಂತರ ಸಣ್ಣ ಸುದ್ದಿಯಾಗಿ ಕಾಣಿಸಿಕೊಂಡು ಕ್ರಮೇಣ ಕಣ್ಮರೆಯಾಗುತ್ತದೆ. ಹೆಲ್ಮೆಟ್ ಕಡ್ಡಾಯ ಬೇಕೇ ಬೇಡವೇ ಎಂಬ ತೀರ್ಮಾನ…
ಲೇಖಕರು: ritershivaram
ವಿಧ: ಬ್ಲಾಗ್ ಬರಹ
July 04, 2006
ಪಪ್ಪಾ ಅಯ್ಯಪ್ಪ ಸಾಮಿ ಗುಡಿಗೆ ಹೆಂಗಸರು ಹೋಗೋ ಹಾಗಿಲ್ವಂತೆ...? ಹೌದು ಮಗು ಮತ್ತೇ ಸಿನಿಮಾ ತಾರೆಯರು ಹೋಗಿದ್ದರಂತೆ... ಹೌದು ಮಗು ಹಾಗೆ ಹೋಗಿದ್ದು ತಪ್ಪಲ್ವಾ... ಹೌದು ಮಗು, ತಪ್ಪಾಗಿದೇಂತ ಒಬ್ಬ ನಟಿ ಬರೆದೂ ಕೊಟ್ಟಿದಾರೆ ಪಪ್ಪಾ, ಅವರ್ ನೆಲ್ಲಾ ಯಾರು ಒಳಗ್ ಬಿಟ್ಟಿದ್ದೂ ಆ ದೇವಸ್ಥಾನದವರೇ ಮಗು... ಪಪ್ಪಾ, ಅದ್ಹೇಗೆ ಬಿಟ್ರೂ ಆ ಹೆಂಗಸ್ರನೆಲ್ಲ ಅವರೆಲ್ಲ ಸ್ಟಾರ್ ಗಳೂ ತುಂಬಾ ಫೇಮಸ್ಸೂ ಅದಕ್ಕೇ.... ಪಪ್ಪಾ....... ಮತ್ತೇ...... ಮತ್ತೇ........ ಹೇಳು ಮಗೂ.... ಮತ್ತೇ.. ನನ್ನಮ್ಮಾನೂ…
ಲೇಖಕರು: ahoratra
ವಿಧ: Basic page
July 04, 2006
ಮಾಧವನ ಜನನದಿಂದಭುವನ ಬೃಂದಾವನ./೧/. ಕೇಶವನಾಗಮನದಿಂದಚಂದನಂದನವನ./೨/. ಕಂಸಜರಾಸಂಧರಿಂದಕಂಪಿಸಿರಲು ಅವನಿ ಜನ./೩/. ಧರೆಯನುಳಿಸಲೆಂದು ಬಂದದೇವಕೀನಂದನ./೪/. ಅಶರೀರವಾಣಿಯಿಂದಕದಡಿರಲು ಕಂಸ ಮನ./೫/. ಕ್ರೋಧಾವೇಷದಿಂದವಸುದೇವಕಿ ಬಂದನ./೬/. ಆರ್ಬಟಿಸುವ ಕಂಸನಿಂದಹಸುಳೆಯರ ನಿಧನ./೭/. ದೇವಕಿಯ ಗರ್ಭದಿಂದದೇವಹರಿಯ ಜನನ./೮/. ಕಂಸನಾ ಸೆರೆಯಿಂದಗೋಕುಲಕೆ ಪಯಣ./೯/. ಯಶೋದಾನಂದರಿಂದಗೋಪಾಲನ ಪಾಲನ./೧೦/. ಹಾಲಾಹಲದಿಂದಪೂತನಿಯ ಮರಣ./೧೧/. ರಾಕ್ಷಸರ ಮಾಯೆಯಿಂದವ್ಯರ್ಥವಾದ ಪ್ರಯತ್ನ./೧೨/. ಬೆಳೆಯುತಿರುವ…
ಲೇಖಕರು: ಭರದ್ವಾಜ
ವಿಧ: ಬ್ಲಾಗ್ ಬರಹ
July 04, 2006
೧) ತುತ್ತಿಗೊ೦ದಕ್ಷರವ ಕಲಿಸಿದರೆ ಸಾಕು ನಾಡಮಕ್ಕಳ ಭವಿತವ್ಯಕಿನ್ನೇನು ಬೇಕು? ಬಿಸಿಯೂಟಕೆ೦ದು ತ೦ದಿಟ್ಟ ಸರಕು ಹುಳಿತು ಕೊಳೆಯದೇ ಚಿಣ್ಣರು೦ಡು ಬದುಕುವ೦ತಿದ್ದರೆ ಸಾಕು  ೨) ಅಕ್ಷರದ ದಾಸೋಹ ನಡೆದಿಹುದು ನಾಡಲ್ಲಿ, ಭಿಕ್ಷೆಯ೦ದದಿ ತಟ್ಟೆಗಳ ಚಾಚಬೇಕು ಸಾಲಿನಲಿ ಕಲಿಸುವುದ ಕಡೆಗೆಣಿಸಿ, ಗುರುಗಳೇ ಭಟ್ಟರಾಗಿ, ಶಿಸ್ತಿನಾ ಭಟರಾಗಿ ನೋಡಬೇಕಿದೆ ಅಕ್ಕಿ ಬೇಳೆಗಳ ಸರಿಯಾಗಿ ತೂಗಿ!!    ೩) ಬಿಸಿಯೂಟದ ಬೇಗೆ ಹಸು ಮಕ್ಕಳ ಬಾಯಿಗೆ, ಎಲ್ಲೆಡೆ ಆಯ್ತು ಕಳಪೆ ಧಾನ್ಯಗಳ ಪೂರೈಕೆ ಪೂರಾ ತಿ೦ದವರ ಎಳೆದೊಯ್ಯಿತು…
ಲೇಖಕರು: ahoratra
ವಿಧ: ಬ್ಲಾಗ್ ಬರಹ
July 04, 2006
ಆರು ವೈರಿಗಳು. ಕಾಮ ಕ್ರೋಧ ಲೋಭಗಳುಮೊದಲ ಮೂರು ವೈರಿಗಳುಇದನು ಗೆದ್ದ ನಂತರಮೋಹ ಮದ ಮತ್ಸರ ಆಶೆಯೆಂಬ ಬೀಜವುಕಾಮಗಿಡದ ಮೂಲವುಗಿಡದ ನಾಶಕಿಂತಲೂಮೂಲನಾಶ ಶ್ರೇಷ್ಠವು ಕಾಮ ಫಲಿಸದಾಗ ಬರುವವೈರಿಯೇ ಕ್ರೋಧವುಕ್ರೋಧವೂ ನಡೆಯದಾಗಲೋಭ ಪ್ರ-ವೇಶವು. ಆಶೆ ಕೊಂದ ವ್ಯಕ್ತಿಗೇಭಕ್ತಿ ಕೊಡುವ ಶಕ್ತಿಯಿಂದಕಾಮ ಕ್ರೋಧ ಲೋಭವೆಂಬಶತೃ ನಾಶ ಸುಲಭವು ನಾಲ್ಕನೆಯ ಶತೃವುಮಾಯಾಮೋಹಪಾಶವುಮೋಹ ನಾಶ ಶಸ್ತ್ರಗಳುಸ್ನೇಹ ಪ್ರೇಮ ಕರುಣೆಗಳು ಕಂಸ ಜರಾಸಂಧರುಮದಕೆ ದಾಸರಾದರುಮಾಧವನಾ ದೆಸೆಯಿಂದಜೀವ ಕಳೆದುಕೊಂಡರು ಕೊನೆಯ ವೈರಿ…
ಲೇಖಕರು: ರಾಮಕುಮಾರ್
ವಿಧ: Basic page
July 03, 2006
೧. ಸಾಲ ಮಾಡಿದವನು ತೀರಿಸಿ ಸಾಯಲ್ಲಿಲ್ಲ, ಮೂಲ ಮಾಡಿದವನು ತಿಂದು ಸಾಯಲ್ಲಿಲ್ಲ. ೨. ಹುಟ್ಟಿದ ಲಾಗಾಯ್ತೂ ಯಜ್ಞಕಾರ್ಯ ಮಾಡದಿದ್ದವನು ಗಡ್ಡಕ್ಕೆ ಬೆಂಕಿ ಹಚ್ಚಿಕೊಂಡನಂತೆ. ೩. ಬಳಸದೇ ಬಾವಿ ಕೆಟ್ಟಿತು, ಹೋಗದೇ ನೆಂಟಸ್ತನ ಕೆಟ್ಟಿತು. ೪. ಮನೆಗೊಬ್ಬ ಅಜ್ಜಿ, ಒಲೆಗೊಂದು ಕುಂಟೆ. ೫. ಚೇಳಿನ ಮಂತ್ರವೂ ಗೊತ್ತಿಲ್ಲ, ಹಾವಿನ ಬುಟ್ಟಿಗೆ ಕೈ ಹಾಕಿದಂತೆ. ೬. ಲಂಕೆ ಸುಟ್ಟರೂ ಹನುಮಂತ ಹೊರಗೆ. ೭. ತಲೆ ಬೋಳಿಸಿದರೆ ಸುಳಿ ಹೋಗುತ್ತದೆಯೆ? ೮. ದಿವಾಳಿ ತೆಗೆಯುವವನ ವ್ಯಾಪಾರ ಹೆಚ್ಚಂತೆ, ಆಚಾರ ಕೆಟ್ಟವನ ಪೂಜೆ…