ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: Basic page
March 24, 2006
ಕಿತಾಗಾಕಿ ಗುರುವನ್ನು ಭೆಟ್ಟಿಯಾಗಲು ಬಂದ . ಆಗ ಅವನು ಕ್ಯೋಟೊ ಪ್ರಾಂತದ ರಾಜ್ಯಪಾಲನಾಗಿದ್ದ . ತನ್ನ ಗುರುತಿನ ಚೀಟಿಯನ್ನು ಗುರುವಿನ ಸಹಾಯಕನ ಮೂಲಕ ಕೊಟ್ಟು ಕಳಿಸಿದ . ಆ ಚೀಟಿಯಲ್ಲಿ ಹೀಗೆ ಬರೆದಿತ್ತು - " ಕಿತಾಗಾಕಿ , ಕ್ಯೋಟೊದ ಗವರ್ನರ್ ". ಗುರು ಅದನ್ನು ನೋಡಿ ಹೇಳಿದ - " ಗವರ್ನರ್ ಜತೆಗೆ ನನಗೆ ಏನು ಕೆಲಸ ? ಅವನಿಗೆ ಹೋಗಲು ಹೇಳಿ " . ಸಹಾಯಕ ವಿಷಾದ ಸೂಚಿಸುತ್ತ ಆ ಚೀಟಿಯನ್ನು ಹೊರಗೆ ಕಾದು ನಿಂತಿದ್ದ ಕಿತಾಗಾಕಿಗೆ ಮರಳಿಸಿದ . "ನನ್ನದೇ ತಪ್ಪು " ಎಂದ ರಾಜ್ಯಪಾಲ…
ಲೇಖಕರು: hpn
ವಿಧ: Basic page
March 24, 2006
ಹೆಚ್ಚಿನ ವಿವರಗಳಿಗಾಗಿ [:http://kn.wikipedia.org/wiki/WP:PM] ನೋಡಿ. ಕಾರ್ಯಕ್ರಮಕ್ಕೆ ಇಂದೇ [:http://hpnadig.net/Kannada-Wikipedia-Meet|ನೋಂದಾಯಿಸಿಕೊಳ್ಳಿ!]
ಲೇಖಕರು: hpn
ವಿಧ: Basic page
March 24, 2006
ಆಸೆ ನಾನು ಶಾಲೆಯಲ್ಲಿದ್ದಾಗ ಅಪ್ಪ ಒಮ್ಮೆ ಮೊಬೈಲ್ ಕೊಂಡುಕೊಂಡಿದ್ದರು. ರಾಜ್ಯವಿಡೀ ನಮಗಾಗ ಇದ್ದದ್ದು ಒಂದೇ ಒಂದು ಸರ್ವೀಸ್ - 'spice'ಟೆಲಿಕಾಮ್. ಎಲ್ಲೋ ಕೆಲವರು ಹೊತ್ತುಕೊಂಡು ತಿರುಗಾಡುತ್ತಿದ್ದ ಭಾರವಾದ ಮೊಬೈಲ್ ಫೋನುಗಳು ಆಗ ಆಭರಣಗಳಂತೆ. ನೋಕಿಯ ಇದ್ದವರಂತೂ ಸಾಕ್ಷಾತ್ 'ಯಜಮಾನ'ರೇ. ಆಗ incoming callsಗೂ ದುಡ್ಡು! ಅಪ್ಪನ ಬಳಿ ಇದ್ದ ಮೊಬೈಲ್ ನೋಡಿ ನನಗೂ ಒಂದು ಮೊಬೈಲ್ ಬೇಕೆಂದೆನಿಸಿತ್ತು. ನಮ್ಮ ಕೈಗೆ ಮೊಬೈಲ್ ಸಿಕ್ಕಾಗಲೆಲ್ಲ ಅದರ ಗುಂಡಿಗಳನ್ನು ಅದುಮಿ ಅದನ್ನ explore ಮಾಡುವುದು,…
ಲೇಖಕರು: ರಘುನಂದನ
ವಿಧ: ಬ್ಲಾಗ್ ಬರಹ
March 24, 2006
ನಮ್ಮೂರು ಹರಿಹರ. ಒಂದ್ಸಲ ಹೀಗಾಯ್ತು. "ಮನ್ಯಾಗಿದ್ರ ನಿಂದು ಪಿರಿಪಿರಿ ಜಾಸ್ತಿ, ಅದಕ್ಕs ನದೀಗೆ ಹೋಗಿ ಒಂದು ಸ್ವಲುಪು ಹೊತ್ತು ಈಜಾಡಿ ಬಾ ನಡಿ" ಎಂದು ನಮ್ಮಮ್ಮ ಕಳಿಸಿದ್ರು. ನಾನು ಕೆಲವು ಸ್ನೇಹಿತರೊಡಗೂಡಿ ತುಂಗಭದ್ರೆಯಲ್ಲಿ ಈಜಲು ಹೋದೆ. ಪಶ್ಚಿಮದಿಂದ ಪೂರ್ವಕ್ಕೆ ಹರಿದು, ಮತ್ತೆ ಉತ್ತರ ವಾಹಿನಿಯಾಗುವ ಜಾಗೆಯಲ್ಲಿ ನಾವು ಸಾಮಾನ್ಯವಾಗಿ ಈಜಾಡುವುದು ರೂಢಿಯಲ್ಲಿತ್ತು. ಮಧ್ಯ ಒಂದು ಮೊನಚಾದ ತುದಿಯ ಬಂಡೆಯೊಂದು ಎದ್ದು ನಿಂತಿತ್ತು. ಇದಕ್ಕೆ "ಶಿವ್ರಾತ್ರಿಬಂಡಿ" (ಶಿವರಾತ್ರಿ ಬಂಡೆ) ಎಂಬ…
ಲೇಖಕರು: Satyaprakash.H.K.
ವಿಧ: ಚರ್ಚೆಯ ವಿಷಯ
March 23, 2006
೨೩-೩-೨೦೦೬ - ಗುರುವಾರ - ಸಂಜೆ ೦೭-೩೦ ಗಂಟೆ ಆತ್ಮೀಯ ಸಂಪದದವರ ಗಮನಕ್ಕೆ, ದಯವಿಟ್ಟು ಎಲ್ಲಾ ಸಂಪದ ಖಾತೆಯುಳ್ಳವರಿಗೆ ಎಲ್ಲಾ ಸದಸ್ಯರ ಪಟ್ಟಿಯನ್ನು ಒದಗಿಸಿದರೆ ಅನುಕೂಲವಾಗುವುದು. ಅವರುಗಳೆಲ್ಲರನ್ನೂ ಆಗಾಗ್ಗೆ ಸಂಪರ್ಕಿಸಬಹುದು. ಇದಲ್ಲದೆ ಹೊರಗಿನ ನಮ್ಮ ಸ್ನೇಹಿತರನ್ನು ಸಂಪದಕ್ಕೆ ಸೇರಲು ಆಹ್ವಾನಿಸುವುದಕ್ಕೆ (ಸ್ನೇಹಿತರನ್ನು ಆಹ್ವಾನಿಸಿ ಎಂದು) ಒಂದು ಕಾಲಂ ಅನ್ನು ಒದಗಿಸಿದರೆ ಬಹಳ ಅನುಕೂಲವಾಗುವುದು. ಈ ವಿಷಯಗಳನ್ನು ನೆರವೇರಿಸುವಿರೆಂದು ನಂಬಿದ್ದೇನೆ. ಇಂತೀ ನಮಸ್ಕಾರಗಳು ಸತ್ಯಪ್ರಕಾಶ್.…
ಲೇಖಕರು: Satyaprakash.H.K.
ವಿಧ: ಬ್ಲಾಗ್ ಬರಹ
March 23, 2006
ಆತ್ಮೀಯ ಸ್ನೇಹಿತರೇ, ಕೆಳಗಡೆ ಕೊಟ್ಟಿರುವ ವಿಳಾಸದಲ್ಲಿ ತುಂಬಾ ಚೆನ್ನಾಗಿರುವ ಪಾಲೀಶೇ ಮಾಡದಿರುವ ಕೆಂಪು ಅಕ್ಕಿ(ಕಜ್ಜಾಯ ಅಕ್ಕಿ ಅಥವಾ ಮುಂಡಗ ಅಕ್ಕಿ)ಸಿಕ್ಕುತ್ತಿದೆ. ದಯವಿಟ್ಟು ನನ್ನ ಗುರುತು ಹೇಳಿ ಆ ಅಕ್ಕಿಯನ್ನು ಎಲ್ಲರೂ ತೆಗೆದುಕೊಳ್ಳುವುದು. ಶ್ರೀ ಸುಧಾಕರ್ ಶರ್ಮ ಟಾಸ್ಕ್ ಮಾಸ್ಟರ್ಸ್(ಇಕೋಗಾರ್ಡ್ಸ್), ನಂ: ೧೫, 'ಸಂದೇಶ್', ಮೌಂಟ್ ಜಾಯ್ ರಸ್ತೆ, ಹನುಮಂತನಗರ, ಬೆಂಗಳೂರು-೫೬೦ ೦೫೦. ಫೋನ್ : ೨೬೫೨ ೧೯೫೦ ಇದನ್ನು ಕಳುಹಿಸಿದವರು : ಸತ್ಯಪ್ರಕಾಶ್.ಹೆಚ್.ಕೆ.…
ಲೇಖಕರು: shreekant.mishrikoti
ವಿಧ: Basic page
March 23, 2006
ಜು‌ಇಗನ್ ಎಂಬ ಒಬ್ಬ ಭಿಕ್ಷು ಪ್ರತಿನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಮತ್ತೆಲ್ಲಕ್ಕಿಂತ ಮುಂಚೆ ತನಗೆ ತಾನೇ ಪ್ರಶ್ನೋತ್ತರ ನಡೆಸಿಕೊಳ್ಳುತ್ತಿದ್ದ . ಇಬ್ಬರ ಮಧ್ಯೆ ಅನ್ನುವ ಹಾಗೆ ಪ್ರಶ್ನೆ ಕೇಳಿಕೊಂಡು ಅದಕ್ಕೆ ತಾನೇ ಉತ್ತರ ಕೊಟ್ಟುಕೊಳ್ಳುತ್ತಿದ್ದ. ಹೀಗೆ- 'ಗುರುವೇ , ಇದ್ದೀರಿ ಅಲ್ಲವೇ ?' 'ಹೌದು ಸ್ವಾಮಿ , ಇದ್ದೇನೆ.' 'ಸರಿ , ಜಾಗೃತನಾಗಿರಬೇಕು, ಕಂಡೆಯ ?' 'ಆಗಲಿ ಸ್ವಾಮಿ , ಜಾಗೃತನಾಗಿರುತ್ತೇನೆ.' 'ಸದಾ ಹುಷಾರಾಗಿ ನೋಡಿಕೊಳ್ಳುತ್ತಿರಬೇಕು, ಯಾರೂ ವಂಚಿಸದ ಹಾಗೆ ' 'ಇಲ್ಲ, ಇಲ್ಲ.…
ಲೇಖಕರು: shreekant.mishrikoti
ವಿಧ: Basic page
March 23, 2006
ಶಿಷ್ಯ ಪ್ರತಿದಿನ ಗುರುವಿನ ಹತ್ತಿರ ಬರುತ್ತಿದ್ದ. ಒಂದು ದಿನ ರಾತ್ರಿ ಹೊತ್ತಾಗಿಬಿಟ್ಟಿತು . 'ಇನ್ನು ಮಲಗಲು ಹೋಗಬಹುದಲ್ಲ?' ಎಂದ ಗುರು. ಶಿಷ್ಯ ಗುರುವಿಗೆ ನಮಸ್ಕರಿಸಿ ಎದ್ದು ತೆರೆ ಸರಿಸಿ ಹೊರ ನೋಡಿದ . 'ತುಂಬ ಕತ್ತಲಾಗಿದೆ' ಎಂದ. 'ತಗೊ, ಈ ಮೇಣದಬತ್ತಿ ತೆಗೆದುಕೊ' ಎಂದು ಗುರು ಅದನ್ನು ಹೊತ್ತಿಸಿಕೊಟ್ಟ . ಶಿಷ್ಯ ಕೈ ನೀಡಿ ಅದನ್ನು ತೆಗೆದುಕೊಂಡ . ಗುರು ಮುಂದಕ್ಕೆ ಬಾಗಿ ಮೇಣದಬತ್ತಿ ಊದಿ ಆರಿಸಿದ.
ಲೇಖಕರು: ಶ್ರೀಶಕಾರಂತ
ವಿಧ: ಬ್ಲಾಗ್ ಬರಹ
March 23, 2006
ಅವನಳಿವ ಕೆಲವರು, ಪೂಜಿಪರನೇಕರು. ಸೋತು ತೆಗಳುವರು, ಭಜಿಸುವರು ಜಯದಿ | ನನ್ನೆ ನಾ ತಿಳಿದಿಲ್ಲ ಸವೆಸಿಷ್ಟು ಬಾಳ, ನಾ ಏನ ಹೇಳಲಿ ದೇವನ ಪಂಡಿತಪುತ್ರ || -- ದೇವರ ಇರುವಿಕೆಯ ಬಗ್ಗೆ..ಸಮಾಜದಲ್ಲಿ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ...ಕೆಲವರು ಅವನಿಲ್ಲವೆಂದೂ....ಕೆಲವರು ಇದ್ದಾನೆಂದೂ..ವಾದಿಸುತ್ತಾರೆ...ಅವರಿಗೆಲ್ಲಾ ನಾ ಹೇಳುವುದಿಷ್ತ್ಟೆ..ನಾ ಯಾರೆಂಬುದೇ ಇನ್ನೂ ನಾ ಅರಿತಿಲ್ಲಾ..ದೇವರನ್ನು ಏನೆಂದು ಹೇಳಲಿ....ಇನ್ನೊಂದು ರೀತಿಯಲ್ಲಿ....ನಾನು ಯಾರೆಂದು ತಿಳಿದರೆ ದೇವನಾರೆಂದು ತಿಳಿದಂತೆಯೇ…
ಲೇಖಕರು: venkatesh
ವಿಧ: Basic page
March 23, 2006
ಮುಕ್ತ- ಸುಂದರ ಧಾರವಾಹಿ ಈ ಧಾರಾವಾಹಿಯ 'ಕೋರ್ಟ್' ದೃಶ್ಯ ನಿಜವಾಗಿಯೂ ವಿಕ್ರಮವನ್ನು ಸೃಷ್ಟಿಸಿದೆ. ಹಲವಾರು ಕೋನಗಳಿಂದ ಸೀರಿಯಲ್ ಬಹಳ ಪ್ರಭಾವಶಾಲಿಯಾಗಿದೆ. ಆದರೆ ಕೆಲವು ಹಣವಂತ ತಯಾರಕರುಗಳು ಮನರಂಜಯನೆಯ ಹೆಸರಿನಲ್ಲಿ, ಕೀಳು ದರ್ಜೆಯ, ಕಳಪೆ ಸಂಭಾಷಣೆ ಗಳಿಂದ ಕೂಡಿದ, ಗಾಡಿ ಸೆಟ್ ಗಳಿಂದ ವಿಜ್ರಂಭಿಸುತ್ತಿರುವ ಹೊಲಸು ಕಥೆಗಳನ್ನು ಕನ್ನಡದಲ್ಲೂ ತರುತ್ತಿರುವುದು ಶೋಚನೀಯ. ಸೀತಾರಾಮ್ ರವರಿಗೆ ಒಂದು ಸಲಹೆ: ಚರ್ವಿತ, ಚರ್ವಿತ, ಚರ್ವಣ ಯಾವಾಗಲೂ ರುಚಿಸೋದಿಲ್ಲ, ಅದ್ದರಿಂದ ಕೇಸನ್ನು ಎಳೆಯದೇ…