ಎಲ್ಲ ಪುಟಗಳು

ಲೇಖಕರು: tvsrinivas41
ವಿಧ: Basic page
March 29, 2006
ವಿನಾಯಕನಿಗರ್ಪಿಸುವ ಪಂಚಕಜ್ಜಾಯ ನಂಬಿದವರಿಗೆಂದಿಗೂ ಅವನದೇ ದಯಾ ಧರ್ಮ ನಂಬಿದವಗೆಂದಿಗೂ ಜಯ ರಿಪುಗಳಿಗಷ್ಟೇ ಕಾದಿಹುದು ಪರಾಜಯ ಹೊಸ ವರುಷ ಹೇಳುತಿದೆ ತಾನು ವ್ಯಯ ನಿರೀಕ್ಷಿಸುತಿದೆ ಎಲ್ಲರಿಂದ ಅಪವ್ಯಯ ಸುಳ್ಳು ಮಾಡಲಾಗಲಿ, ಎಲ್ಲರಿಂದ ಮಿತವ್ಯಯ ಜೀವ ದೀಪ ಪ್ರಜ್ವಲಿಸಿ ಸೂಸುತಿದೆ ಆಶಯ ತೋರಿದರೇನು ತಳೆದರೇನು ಅಸಹ್ಯ ಬಾಳ ಬಂಡಿ ಸಾಗಲಿ, ತೋರಲಿ ನಿರ್ಭಯ ತ್ರಿಲಿಂಗಗಳಲೂ ಅಲುಗಾಡದ ಅವ್ಯಯ * ವಿಚಲಿತವಾಗದೇ ಭದ್ರವಾಗಲಿ ಅಡಿಪಾಯ ಕಾದಿಹುದು ಸೇವಿಸಲು ಬೇವು ಬೆಲ್ಲ ಕಹಿಯ ಅರಿತವಗೆ ಹಿರಿದಾಗುವುದು ಬೆಲ್ಲ…
ಲೇಖಕರು: ಸ್ಮಿತಾ
ವಿಧ: ಬ್ಲಾಗ್ ಬರಹ
March 29, 2006
ಸಾಮಾನ್ಯವಾಗಿ ಎಲ್ಲಾ  ರಾಷ್ಟೀಯ ನ್ಯೂಸ್ ಚಾನೆಲ್ ಗಳು ದಕ್ಷಿಣ ಭಾರತವನ್ನು ಅಲಕ್ಷ್ಯಿಸುತ್ತಿವೆ ಎಂದು ನಾವು ಕೊರಗುತ್ತಿರುವಾಗ, ರಾಜ್ ದೀಪ್ ರವರ ಈ ಲೇಖನ ಓದಿ ಸ್ವಲ್ಪ ಸಮಾಧಾನವಾಯಿತು..        --ಸ್ಮಿತಾ 
ಲೇಖಕರು: shreekant.mishrikoti
ವಿಧ: Basic page
March 28, 2006
ಹೋಗದ ಊರಿಗೆ ದಾರಿ ಕೇಳಿದ ಹಾಗೆ ಹೋಗು ಅನ್ನಲಾರದೆ ಹೊಗೆ ಹಾಕಿದರಂತೆ ತೀಟೆ ತೀರಿದ ಮೇಲೆ ಲೌಡಿ ಸಂಗವೇನು? ಹೊತ್ತಿರುವಾಗಲೇ ಗೊತ್ತು ಸೇರಬೇಕು ಹುಲ್ಲಿನ ಉರಿ , ಕನಸಿನ ಸಿರಿ ( ಬೇಗನೆ ಮುಗಿದು ಹೋಗುತ್ತವೆ) ಹುಲಿ ಬಡವಾದರೆ ಹುಲ್ಲು ಮೇಯುವದಿಲ್ಲ. ಹುತ್ತ ಬಡಿದೊಡೆ ಹಾವು ಸಾಯುವುದೇ ? ಹುಣ್ಣು ಮಾದರೂ ಕಲೆ ಹೋಗಲಿಲ್ಲ ಹಾಲು ಎಟುಕದಿರುವಾಗ ಬೆಕ್ಕೂ ಪ್ರಾಮಾಣಿಕ . ಹಸನ್ಮುಖೀ ಸದಾ ಸುಖೀ
ಲೇಖಕರು: Satyaprakash.H.K.
ವಿಧ: ಚರ್ಚೆಯ ವಿಷಯ
March 28, 2006
೨೮-೩-೦೬ - ಮಂಗಳವಾರ - ೧೨-೧೫ ಗಂಟೆ ಆತ್ಮೀಯ ಸ್ನೇಹಿತರೇ, ನಿಮಗೂ, ನಿಮ್ಮ ಮನೆಯವರಿಗೂ ಮತ್ತು ಸಂಪದದ ಸ್ನೇಹಿತರೆಲ್ಲರಿಗೂ ನನ್ನ ಹೊಸ ವರುಷದ ಯುಗಾದಿ ಹಬ್ಬದ ಶುಭಾಶಯಗಳು. ಸತ್ಯಪ್ರಕಾಶ್.ಹೆಚ್.ಕೆ. ೯೮೮೬೩ ೩೪೬೬೭ arogyasathya@yahoo.co.in satyaprakash.hk@gmail.com satya.prakash@rhm.co.in
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
March 28, 2006
'ಕಸ್ತೂರಿ' ಮಾಸಪತ್ರಿಕೆಯ ಎಪ್ರಿಲ್ ೨೦೦೬ರ ಸಂಚಿಕೆ ಯುಗಾದಿ ವಿಶೇಷಾಂಕವಾಗಿ ೩೨೦ ಪುಟ (ಬೆಲೆ ೧೨ ರೂ) ಹೊಂದಿ ಬಂದಿದೆ. ಶ್ರೀ ರಾಮಚಂದ್ರನಿಗೆ ಚಿಕ್ಕವನಿದ್ದಾಗ ತೀರ್ಥಯಾತ್ರೆ ಹೋದಾಗ ವೈರಾಗ್ಯ ಉಂಟಾಗುತ್ತದೆ . ಆಗ ವಸಿಷ್ಠ ಮುನಿಗಳು ಅವನಿಗೆ ಮಾಡಿದ ಉಪದೇಶವೇ ಯೋಗವಾಸಿಷ್ಠ. ಇದಕ್ಕೆ ವಾಸಿಷ್ಠ ರಾಮಾಯಣ ಎಂಬ ಇನ್ನೊಂದು ಹೆಸರೂ ಇದೆ. ಈ ಬಗ್ಗೆ ಒಂದು ಲೇಖನ ಇದೆ. ಆಧ್ಯಾತ್ಮದಲ್ಲಿ ಆಸಕ್ತಿ ಹೊಂದಿದವರು ಇದನ್ನು ನೋಡಬಹುದು. ಮೊಘಲ್ ರಾಜಕುಮಾರ ಅನೇಕ ಉಪನಿಷತ್ತುಗಳ ಜತೆ ಇದನ್ನೂ ಪರ್ಶಿಯನ್…
ಲೇಖಕರು: venkatesh
ವಿಧ: Basic page
March 28, 2006
ಮಹತ್ವಾಕಾಂಕ್ಷೆ ,ಜೀವನಕ್ಕೆ ಒಂದು ಅರ್ಥ ಕೊಡುವ ಹಾಗಿದ್ದಲ್ಲಿ ಉಪಯುಕ್ತ ವಾಗುತ್ತದೆ. ಏಲ್ಲರೂ ಆಶಿಸುವುದು ಅದನ್ನೆ !ಏನನ್ನಾದರೂ ಸಾಧಿಸಲೇ ಬೇಕು. ಆದರೆ ಅತಿ ಮಹತ್ವಾಕಾಂಕ್ಷೆ ತರವೆ? ವಿಚಾರಮಾಡಿ. ಇಂದಿನ ಕೆಲವು ತಂದೆ ತಾಯಿಗಳು ಮಾಡುತ್ತಿರುವುದು ಇದನ್ನೆ. ತಮ್ಮ ಮಕ್ಕಳನ್ನು ಅರ್ಹ ವಯಸ್ಸಿಗೆ ಮೊದಲೇ ಶಾಲೆಗಳಿಗೆ ಸೇರಿಸಿ, ತಲೆಗೆ ಹಿಡಿಸಲಾರದಷ್ಟು ವಿದ್ಯಗಳನ್ನು, ಕೌಶಲಗಳನ್ನು ತುರುಕಿ, ಬಾಲ ಪ್ರತಿಭೆಗಳು ಹೆಣಗಾಡಿ ನರಳುವಂತೆ ಮಾಡುತ್ತಾರೆ. ತಾವು ಸಾಧಿಸಲಾಗದ್ದಿದ್ದ ಕ್ಷೇತ್ರಗಳಲ್ಲಿ ತಮ್ಮ…
ಲೇಖಕರು: muralihr
ವಿಧ: Basic page
March 27, 2006
ಐ.ಟಿ. ಬಿ.ಟಿ. ಬಿಟ್ಟು ಬಾರ ಮೂರ್ತಿ ಮುಷ್ಟಿ ಬಿಟ್ಟು ಬಾರ. ಸ್ಪೂರ್ತಿ ಬಾಳ ನಡೆಸು ಬಾರ. ಮಿಥ್ಯ ಲೋಕ ದಾಟಿ ಬಾರ. ಸತ್ಯ ಲೋಕ ಕಾಣ ಬಾರ. ಒ೦ದೇ ಬಾಳು ಬೇಡ ಬಾರ. ಮು೦ದೆ ಗೋಳು ಕ೦ಡು ಹಾರಾ.. ಸಾಕು ಬಾರ, ಬೇಗ ಬಾರ. ಆಳಾಗದೆ ನಿನ್ನಾತ್ಮವ ಆಳು ಬಾರ. ಐ.ಟಿ. ಬಿ.ಟಿ. ಬಿಟ್ಟು ಬಾರ *************** ಅರ್ಪಣೆ ನಾರಾಯಣ ಮೂರ್ತಿಗಳಿಗೆ.
ಲೇಖಕರು: venkatesh
ವಿಧ: Basic page
March 27, 2006
"ವಿವಾಹಕ್ಕೆ ಮೊದಲು "ಎಚ್.ಐ.ವಿ ಪರೀಕ್ಷಣಾ ಪತ್ರ" ಲಗತ್ತಿಸ ಬೇಕೆಂಬ ಕಾನೂನು ಮಾಡುವುದು ಒಳ್ಳೆಯದು." ಗೋವೆಯ ಆರೋಗ್ಯ ಮಂತ್ರಿ, ಶ್ರಿ.ಡಿ. ನಾರ್ವೇಕರ್ ಘೋಷಿಸಿದರು. ಈಗ ಇದೇ ಒಂದು ಬಿಸಿ ಸುದ್ದಿ, ಗೋವೆ ಯಲ್ಲಿ ಚರ್ಚೆಗೆ ಒಳಗಾಗಿದೆ. ಸದ್ಯದಲ್ಲೇ ಅವರ ಅಸೆಂಬ್ಲಿಯಲ್ಲಿ ಜಾರಿಗೆ ಬರಲೂ ಸಾದ್ಯ ! ಹಂತ ಹಂತ ವಾಗಿ ಕಳೆದ 2 ದಶಕ ಗಳಿಂದ ವಿಶ್ವದಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬಿದ ಎಚ್.ಐ.ವಿ. ಪಿಡಿಗಿನ ಅಲೆಗಳು ನಮ್ಮ ಮನೆಗಳ ಹತ್ತಿರಕ್ಕೂ ಬಂದ್ದಿದ್ದು ಕರೆಗಂಟೆಯನ್ನು ಒತ್ತುವ ಸಿದ್ದತೆಯಲ್ಲಿವೆ. '…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
March 27, 2006
ಪತ್ರಿಕೆಗಳನ್ನೇ ಜನ ಹೆಚ್ಚಾಗಿ ಓದುವದು . ಪತ್ರಿಕೆಗಳಲ್ಲಿಯೇ ಭಾಷೆಯ ಬರಹ ಹೆಚ್ಚಾಗಿರುವದು . ಹೀಗಾಗಿ ಪತ್ರಿಕೆಗಳು ಭಾಷೆಯನ್ನು ರೂಪಿಸುವಲ್ಲಿ ಹೊಸಹೊಸ ಪದಗಳನ್ನು ಚಲಾವಣೆಗೆ ತರುವಲ್ಲಿ ಮುಖ್ಯ ಪಾತ್ರ ರೂಪಿಸುತ್ತವೆ. ಪತ್ರಿಕೆಗಳ ಭಾಷೆಯನ್ನು ಗಮನಿಸುತ್ತಿದ್ದರೆ. ಎಷ್ಟೋ ಕುತೂಹಲಕರ ವಿಷಯಗಳು ನಮ್ಮ ಲಕ್ಷ್ಯಕ್ಕೆ ಬರುತ್ತವೆ. ಉದಾಹರಣೆಗೆ - ಒಂದೊಮ್ಮೆ ಕೆಳಜಾತಿಯವರು ಹೊಲೆಯರೆಂದು ಕರೆಯಲ್ಪಡುತ್ತಿದ್ದರು ನಂತರ 'ಅಸ್ಪ್ರಶ್ಯ'ರಾಗಿ 'ಹರಿಜನ'ರಾದರು , ನಂತರ 'ಪರಿಶಿಷ್ಟ' ರಾದರು. ಮೊದಲು…
ಲೇಖಕರು: shreekant.mishrikoti
ವಿಧ: Basic page
March 27, 2006
ಸೀನಿ ಸನ್ಯಾಸಿಯಾದುದು - ಜಿ. ಪಿ. ರಾಜರತ್ನಂ ಅವರ ಕತೆ . ಆಕಾಶವು ಇದ್ದಕ್ಕಿದ್ದಂತೆ ಬರಸಿಡಿಲನ್ನು ಕಕ್ಕಿತು ! ಸೀನಿ ಸನ್ಯಾಸಿಯಾದ ! ಸುಖ ಸಂತೋಷಗಳ ಸಾಗರದಲ್ಲಿ ಹುಟ್ಟಿ ಬೆಳೆದ ಸೀನಿ ಸನ್ಯಾಸಿಯಾದ! ಲೋಕ ಬೆರಗಾಯ್ತು ! ಫೆಬ್ರುವರಿ ೪ ನೇ ತಾರೀಖು ಬೆಳಗ್ಗೆ ಹತ್ತು ಘಂಟೆಗೆ ಸೀನಿ ಅಸ್ವಸ್ಥನಾದ ತನ್ನ ಮಿತ್ರನನ್ನು ಆಸ್ಪತ್ರೆಗೆ ಕರೆದುಕೊಂದು ಹೋದ . " ಡಾಕ್ಟರ್, ಇವರನ್ನು ಇನ್ ಪೇಷಂಟಾಗಿ ಸೇರಿಸಿಕೊಳ್ಳಬೇಕು . " " ಯಾರು , ಇವರು ನಮ್ಮ ನಾರಾಯಣಪ್ಪ ಅಲ್ಲವೆ!" "ಹೌದು , ಅವರೇ ... ಬಂದೆ ,…