ವಿಧ: ಚರ್ಚೆಯ ವಿಷಯ
July 28, 2006
ಕಳೆದ ಹಲವಾರು ದಿನಗಳಿಂದ ಸಂಪದ ಪುಟಗಳನ್ನು ಓದುತ್ತಿದ್ದೇನೆ. ಸ್ವಾರಸ್ಯಕರವಾದ ಅನೇಕ ಬರಹಗಳನ್ನು ಓದಿದೆ. ನನಗೆ ಸಾಹಿತ್ಯದಲ್ಲಿ ಆಸಕ್ತಿ ಇದೆಯಾದ್ದರಿಂದ ಆ ಕುರಿತ ಬ್ಲಾಗ್ ಗಳು, ಲೇಖನಗಳು ಇಷ್ಟವಾದವು. ವಿಶೇಷವಾಗಿ, ಓಎಲ್ ನಾ ಸ್ವಾಮಿ ಹಾಗೂ ಅನಂತಮೂರ್ತಿಯವರ ಪುಟಗಳು. ಪರಾಗ ಎಂಬ ಬೇಂದ್ರೆ ಕವನದ ವಿಶ್ಲೇಷಣೆ (ಸ್ವಾಮಿ) ತುಂಬ ಚೆನ್ನಾಗಿದೆ.
ಪುಟಗಳನ್ನು ಓದುತ್ತ ನನಗೆ ಯಾಕೆ ಇಷ್ಟೆಲ್ಲ ಜನ ಕನ್ನಡ ಭಾಷೆಯ ಕುರಿತು ಆತಂಕಿತರಾಗಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಭಾಷೆ ಬಡವಾಗುತ್ತಿದೆ, ಇನ್ನೇನು…
ವಿಧ: ಬ್ಲಾಗ್ ಬರಹ
July 27, 2006
ನಮ್ಮ ಓದು ಹೆಚ್ಚಿದಂತೆ , ನಮ್ಮ ತಿಳಿವಳಿಕೆಯೂ , ಅದರಿಂದ ಸಿಗುವ ಸಂತೋಷವೂ ಹೆಚ್ಚುತ್ತದೆ. ಇಲ್ಲದಿದ್ದರೆ ನಮಗೆ ಎಷ್ಟೋ ವಿಷಯಗಳು ತಿಳಿಯದೇ ಹೋಗುವವು.
ಒಂದು ನನ್ನ ಕಾಲೇಜಿನ ದಿನಗಳ ಉದಾಹರಣೆ . ಆಗ ಕಾನೂನು ಕಲಿಯುತ್ತಿದ್ದೆ. ಕಮರ್ಶಿಯಲ್ ಲಾ ದ ಕ್ಲಾಸು ನಡೆಯುತ್ತಿತ್ತು . ಹುಂಡಿ , ಚೆಕ್ಕು ಮುಂತಾದವುಗಳ ಸಂಬಂಧ ಸ್ಯಾನ್ಸ್ ರಿಕೋರ್ಸ್ ಎಂಬ ಪದ ಬಂದಿತು. ಕಾನೂನಿನಲ್ಲಿ ನಿಮಗೆ ಗೊತ್ತಿರುವ ಹಾಗೆ ಲ್ಯಾಟಿನ್ , ಗ್ರೀಕ್ ಶಬ್ದಗಳು ಬಹಳ. ಕಲಿಸುವವರಿಗೆ ಅದೇನು ನೆನಪಾಯಿತೋ…
ವಿಧ: ಬ್ಲಾಗ್ ಬರಹ
July 27, 2006
ಅಭಿವೃದ್ಧಿ ಪತ್ರಿಕೋದ್ಯಮ
(ಮುಂದುವರಿದ ಭಾಗ)
ನಮ್ಮ ಮಾಧ್ಯಮದಲ್ಲಿನ ವರದಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಇವು ನಗರದ ಗಡಿ ಬಿಟ್ಟು ಆಚೆಗೆ ಹೋಗುತ್ತಿರುವಂತೆ ಕಾಣುವುದಿಲ್ಲ.
ಈಗಾಗಲೇ ಪ್ರಶಸ್ತಿ ಪಡೆದವರನ್ನೇ, ಹಣವಿದ್ದವರನ್ನೇ ಮತ್ತೆ ಮತ್ತೆ ಪ್ರಶಸ್ತಿಗೆ ಆಯ್ಕೆ ಮಾಡುವುದು ರೂಢಿ. ವರ್ಷ ವರ್ಷವೂ ಹನುಮನ ಬಾಲದಂತೆ ಬೆಳೆಯುವ ನಮ್ಮ ರಾಜ್ಯೋತ್ಸವ ಪ್ರಶಸ್ತಿಯೇ ಇದಕ್ಕೆ ಉತ್ತಮ ಉದಾಹರಣೆ.
ಅದರೆ ಗ್ರಾಮೀಣ ಪ್ರದೇಶದಲ್ಲಿ ಎಲೆ ಮರೆಯ ಕಾಯಿಯಂತೆ ಇದ್ದು, ತಮ್ಮ ನಿಯಮಿತ ಸಂಪನ್ಮೂಲದಲ್ಲೇ…
ವಿಧ: Basic page
July 27, 2006
ಸಂಚಿಕೆ-2 (ಮೊದಲ ಸಂಚಿಕೆಗೆ ನನ್ನ ಬ್ಕಾಗ್ ನೋಡಿ)
ಜಗತ್ತಿನಲ್ಲಿ ತನ್ನ ಕಥೆಯಿಂದಲೆ ಸುಪ್ರಸಿದ್ಧನಾಗಿರುವ ದೇವರೆಂದರೆ ಶ್ರೀರಾಮ. ಹಾಗೆಯೆ ಜಗತ್ತಿನಲ್ಲಿ ತನ್ನ ದರ್ಶನವಾಗುತ್ತಿದ್ದಂತೆಯೆ ಅತಿ ಹೆಚ್ಚು ಜನರಿಂದ ಕೈಮುಗಿಸಿಕೊಳ್ಳುತ್ತಿರುವ ಸುಪ್ರಸಿದ್ಧ ದೇವರೆಂದರೆ ತಿರುಮಲೇಶ ಶ್ರೀ ವೆಂಕಟೇಶ್ವರನೇ. ದಶವತಾರಗಳಲ್ಲಿ ಶ್ರೀರಾಮನದೂ ಒಂದು ಅವತಾರವೆ. ಶ್ರೀನಿವಾಸ, ವೆಂಕಟೇಶ್ವರನೆಂದು ಕರೆಸಿಕೊಳ್ಳುವ ಈ ಕಲಿಯುಗದ ಸಪ್ತಗಿರಿಯೊಡೆಯ ಜನರಿಗೆ ಅವತಾರ ಸ್ವರೂಪಿಯೆ. ಈ ಸಪ್ತಗಿರಿಯಲ್ಲಿ ಪ್ರತಿದಿನವೂ…
ವಿಧ: ಬ್ಲಾಗ್ ಬರಹ
July 26, 2006
ನನ್ನ ಹೆಸರು ಅಶ್ವಿನ್. ಮೂಲ ಬೆಂಗಳೂರು, ಮಾತೃ ಭಾಷೆ ಕನ್ನಡ. ಓದು ಬರಹ ಎಲ್ಲ ಬೆಂಗಳೂರಿನಲ್ಲಿ. ಈಗ ಸಿಂಗಾಪುರದಲ್ಲಿ ಓದು ಮುಂದುವರಿಸುತ್ತಿದ್ದೀನಿ.
ನನ್ನ ಕನ್ನಡ ಬ್ಲಾಗ್ ಇಲ್ಲಿದೆ:
yodha-kn.livejournal.com
ನನ್ನ ಆಂಗ್ಲ ಬ್ಲಾಗ್ ಇಲ್ಲಿದೆ:
yodha.livejournal.com
~ಆಶ್
ವಿಧ: ಬ್ಲಾಗ್ ಬರಹ
July 26, 2006
'ನುಡಿ' ತಂತ್ರಾಂಶವು ಪದಪರೀಕ್ಷಕವನ್ನು ಒಳಗೊಂಡಿದೆ. ಅದರಲ್ಲಿ ಎರಡು ಶಬ್ದಕೋಶಗಳ ಕಡತಗಳಿವೆ .
nudimain.dct ನುಡಿ ಜತೆಗೆ ಬರುವಂಥದು . ಸುಮಾರು ೪೦೦೦೦ ಶಬ್ದಗಳಿವೆ .
nudiuser.dct ಕಡತ ಬಳಕೆದಾರರು ಹೊಸದಾಗಿ ಸೇರಿಸುವ ಶಬ್ದಗಳನ್ನು ಸಂಗ್ರಹಿಸುವದು . ನಾನು ಅದರಲ್ಲಿ ಒಂದು ಲಕ್ಷ ಶಬ್ದಗಳನ್ನು ಸಂಗ್ರಹಿಸಿದೆ .
ಈಗ ನಾನು ಎರದೂ ಕಡತಗಳನ್ನು ಸೇರಿಸಿ ಒಂದು ಹೊಸ nudimain.dct ಮಾಡಿದ್ದೇನೆ. ಅದರಲ್ಲಿ ಮೇಲಿನ ಎರಡೂ ಕಡತಗಳ ಶಬ್ದಗಳು ಸೇರಿ ಸುಮಾರು ೧,೪೦,೦೦೦ ಶಬ್ದಗಳು…
ವಿಧ: ಬ್ಲಾಗ್ ಬರಹ
July 26, 2006
೧. ಕನ್ನಡ ಸಾಹಿತಿಗಳಿಂದ ಶಿಕ್ಷಣದಲ್ಲಿ ಇಂಗ್ಲೀಷ್ ಕಡ್ಡಾಯಕ್ಕೆ ಒತ್ತಾಯ. 'ಇಂಗ್ಲೀಷ್ ಕಲಿಸಿ , ಕನ್ನಡ ಉಳಿಸಿ' ಘೋಷಣೆ.
೨. ಯುನೆಸ್ಕೊ ತನ್ನ ಪಠ್ಯಕ್ರಮದಲ್ಲಿ ಪುಣ್ಯಕೋಟಿಯ ಕಥೆಯನ್ನು ಅಳವಡಿಸಲಿದೆ . (ಆರ್ಗನೈಸರ್ ವರದಿ)
೩. ಗುಲ್ಬರ್ಗ ಮೂಲದ ನೀರಜ್ ಪಾಟೀಲ್ ಲಂಡನ್ನಿನ ಕೌನ್ಸಿಲ್ ಮೆಂಬರ್ ಆಗಿ ಅಯ್ಕೆಯಾಗಿದ್ದು ಬೆಂಗಳೂರಿಗೆ ಬಂದಿದ್ದರು . ಅವರ ಸಂದರ್ಶನ ಪ್ರಕಟವಾಗಿದೆ.
ಗಮನಿಸಿದ ಅಂಶಗಳು .
ಲಂಡನ್ನಿನಲ್ಲಿ
೧. ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಬಯಸುವವರಿಗೆ ಅಲ್ಲಿ…
ವಿಧ: ಚರ್ಚೆಯ ವಿಷಯ
July 26, 2006
ಮೊನ್ನೆ ಜೀ ಕನ್ನಡ ನೋಡ್ತಾ ಇದ್ದೆ, ಅದರ ಸುಮಾರು ಕಾರ್ಯಕ್ರಮಗಳು ಉತ್ತರಭಾರತದ ಭಾಷಾಶೈಲಿಯಲ್ಲಿದ್ದವು. ನಮ್ಮ ನಾಡಿನಲ್ಲಿದ್ದುಕೊಂಡು ಕನ್ನಡ ಭಾಷಾಸಂಸ್ಕೃತಿಯ ಕಾರ್ಯಕ್ರಮವನ್ನು ನೋಡುವ ಹಾಗಿಲ್ಲಾ. ಎಂತಾ ವಿಪರ್ಯಾಸ! ಇದು ಇತ್ತೀಚೆಗಷ್ಟೇ ಪ್ರಾರಂಭವಾದ ವಾಹಿನಿ.
ವಿಧ: ಬ್ಲಾಗ್ ಬರಹ
July 26, 2006
ದಶಕಗಳ ಕಾಲ ಮಹಾರಾಷ್ಟ್ರ ತನ್ನ ರಾಜಕೀಯ ಬಲದಿಂದ ಗಡಿಯಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ ಎಸಗುತ್ತ ಬಂದಿದ್ದರೂ(ಗಡಿ ಭಾಗವನ್ನು ಭೇಟಿ ಮಾಡಿದ ಯಾರಿಗೂ ಇದು ಅರ್ಥವಾಗುತ್ತದೆ), ಇದಕ್ಕೆ ತದ್ವಿರುದ್ಧ ಹೇಳಿಕೆಯನ್ನು ಕೇಂದ್ರ ಸರಕಾರದ ಮುಂದೆ ಮಂಡಿಸಿ ಹೊರಬರುತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‍ರಾವ್ ದೇಶ್‍ಮುಖ್‍ರ ಈ ಭಂಗಿಯಲ್ಲಿ ವಿಶಾದದ ಮುಖಭಾವ ಕಪಟತನದಿಂದ ಕೂಡಿರುವುದು ಎದ್ದು ಕಾಣುತ್ತದೆ.
ವಿಧ: ಬ್ಲಾಗ್ ಬರಹ
July 25, 2006
The recent issue of Desha Kaala, a kannada literary magazine, there is a debate on Politics. Shive Vishwanathan, GPD, G.S. Sadananda, et al have contributed to this debate. beginning with the concept note, all opine that there is some kind of degeneration in Politics today. They see this basically in the context of globalization and the decreasing authority of the nation-state, the power of the…