ವಿಧ: ಬ್ಲಾಗ್ ಬರಹ
July 25, 2006
ವರ್ಷ: ೧೯೮೮. ಊರು: ಮೈಸೂರು. ಸ್ಥಳ: ಸರಸ್ವತಿಪುರಮ. ಮನೆ: ರಾಮಸ್ವಾಮಿಯವರ ಮನೆಯ ಹೊರ ಕೊಠಡಿ. ಪಾತ್ರಗಳು: ನಾನು, ಶಿವು, ರಾಮು ಹಾಗೂ ಓ. ಎಲ್. ನಾಗಭೂಷಣಸ್ವಾಮಿ. ಹಿನ್ನೆಲೆ: ಯೇಟ್ಸ್ ನ Prayer for my daughterನ ಚರ್ಚೆ. ಈ ಪ್ರಖ್ಯಾತ ಪದ್ಯ ಆಗ ನಮಗೆ ಬಿ.ಎ. ಪಠ್ಯದಲ್ಲಿತ್ತು. ರಾಮು ಮನೆಗೆ ಬಂದಿದ್ದ OLN ಅದು ಹೇಗೋ ಆ ಪದ್ಯವನ್ನು ನಮಗೆ ಕಲಿಸಲು ತೊಡಗಿದ್ದರು. ಅವರಾಗ ಶಿವಮೊಗ್ಗದಲ್ಲಿದ್ದರು ಅಂತ ನನ್ನ ನೆನಪು. ಅವರು ರಾಮುರ ಮಿತ್ರರು. ನಾವು ರಾಮುರ ಬಳಿ ಹೋಗಲು ಕಾರಣ ನಮ್ಮಲ್ಲಿ…
ವಿಧ: Basic page
July 25, 2006
2
ಫಿನ್ಲೆಂಡ್ ಬಗ್ಗೆ ಒಂದು ಜೋಕ್ ಇದೆ. ಫಿನ್ಲೆಂಡ್ ಜನರನ್ನು 'ಫಿನ್ನಿಶ್' ಎಂದು ಕರೆಯಲಾಗಿರುವುದರಿಂದ ಇದು ಫಿನ್ನಿಶ್ ಜೋಕ್ ಕೂಡ. ಇದನ್ನು ಏಕೆ ಹೇಳುತ್ತಿದ್ದೇನೆಂದು ಈ ಜೋಕ್ ಫಿನಿಶ್ ಆದ
ನಂತರ ತಿಳಿಸುವೆ. ಈ ಜೋಕ್‌ನ ವಿಶೇಷವೇನೆಂದರೆ ಇದರಲ್ಲಿ ಶೇಕಡ ಐವತ್ತರಷ್ಟು ಭಾಗದ ಕ್ರೆಡಿಟ್ ನನಗೆ ಸಲ್ಲುತ್ತದೆ.
ಫಿನ್ಲೆಂಡ್ ನಲ್ಲಿ ಒಬ್ಬ ವ್ಯಕ್ತಿ ಪರಿಚಿತನಾಗಿ ನಂತರ ಆ 'ವ್ಯಕ್ತಿ' ಹೋಗಿ 'ಸ್ನೇಹಿತ'ನಾದ. (ಈ ಜೋಕ್ ಓದುವ ಮುನ್ನ ಅಥವ ಓದುವಾಗ ಇಂಗ್ಲೀಷ್ ಭಾಷೆಯಲ್ಲಿ ಫ್ರೆಂಡ್ ಎಂದರೆ ಗಂಡೂ…
ವಿಧ: ಬ್ಲಾಗ್ ಬರಹ
July 25, 2006
ದೇವನೂರು ಮಹಾದೇವರ ಕುಸುಮಬಾಲೆ ಕಾದಂಬರಿಯಲ್ಲಿ, ಇಂಗ್ಲಿಷ್ ಬರದ ಕುಸುಮ "I want to go home" ಅನ್ನುವ ಒಂದು ದೃಶ್ಯ ಬರುತ್ತದೆ. ನನ್ನೆಣಿಸಿಕೆಯಲ್ಲಿ ಇದರ ಮಹತ್ವವನ್ನು ಹೆಚ್ಚಾಗಿ ಯಾರೂ ಚರ್ಚಿಸಿಲ್ಲ. ನನ್ನ ಪ್ರಶ್ನೆಗಳು ಎರಡು: ೧. ಕುಸುಮ ಇಂಗ್ಲಿಷಲ್ಲಿ ಯಾಕೆ ಹೇಳುತ್ತಾಳೆ? ೨. ಮಹಾದೇವ್ ಇಲ್ಲಿ ಇಂಗ್ಲೀಷ ಯಾಕೆ ಉಪಯೋಗಿಸುತ್ತಾರೆ?
ವಿಧ: ಬ್ಲಾಗ್ ಬರಹ
July 25, 2006
ಇಲ್ಲಿನ ( ಮುಂಬೈನ) ಸಾಹಿತ್ಯ ಅಕ್ಯಾಡೆಮಿಯಿಂದ ಇಪ್ಪತ್ತು ಪುಸ್ತಕಗಳನ್ನು ತಂದಿದ್ದೆನಲ್ಲ , ಅವು ಪೆಂಡಿಂಗ್ ಆಗಿ ಕೂತಿದ್ದವು.
ಅವುಗಳಲ್ಲಿ ಹಾವಿನ ಡೊಂಕು ಎಂಬುದೊಂದು ಸ್ವೀಡಿಶ್ ಕಾದಂಬರಿಯ ಅನುವಾದ . ಹಿಂದೆ ಮಯೂರದಲ್ಲಿ ಅದರ ಬಗ್ಗೆ ಬರೆದಿದ್ದರು . ಅವರ ದೈವಭಕ್ತಿ , ನಂಬುಗೆಗಳನ್ನೇ ಶೋಷಣೆಗೆ ಆಧಾರ ಮಾಡಲಾಗುತ್ತಿದೆ. ದೇವರಲ್ಲಿ ಅಚಲ ವಿಶ್ವಾಸ ಹೊಂದಿದ ಜನರನ್ನು ಶೋಷಿಸಲಾಗುತ್ತಿದೆ. ಅವರಿಗಾಗಲಿರುವ ತೀವ್ರ ಅನ್ಯಾಯವನ್ನು ತಪ್ಪಿಸಲು ದೇವರು ಹಸ್ತಕ್ಷೇಪ ಮಾಡುವನೇ ? ದೇವರು ಅವರ…
ವಿಧ: ಬ್ಲಾಗ್ ಬರಹ
July 25, 2006
ಸಂಗೀತದ ಮಾಧುರ್ಯ
ಸಂಗೀತ ಕೇಳಲು ಎಲ್ಲರಿಗೂ ಆಸಕ್ತಿ. ಜಾನಪದ, ಶಾಸ್ತ್ರೀಯ ಸಂಗೀತ, ಭಾವಗೀತೆ, ಸಿನಿಮಾ ಸಂಗೀತ ಹೀಗೆ ಹಲವು ಸಂಗೀತ ಕೇಳಲು ಜನರು ಇಷ್ಟ ಪಡುತ್ತಾರೆ. ಈಗಿನ ಕಾಲದ ಯುವಕರು ಧ್ಯಾನ ಮಾಡುವ ವೇಳೆಯಲ್ಲಿ ಶಾಸ್ತ್ರೀಯ ಸಂಗೀತ ಕೇಳುತ್ತಾರೆ. ಪಂ ಹರಿಪ್ರಸಾದ್ ಚೌರಾಸಿಯಾ, ಪಂ. ಭೀಮಸೇನ ಜೋಶಿ, ಪಂ. ರವಿಶಂಕರ್ ಹಾಗು ಪಂ. ಜಸ್ ರಾಜ್ ಅವರ ಧ್ವನಿ ಮುದ್ರಕೆಗಳನ್ನು ಹೆಚ್ಚಾಗಿ ಕೇಳ ಬಯಸುತ್ತಾರೆ. ಇತ್ತೀಚೆಗೆ ನಾನು ಕೇಳಿ ಆನಂದಿಸಿದ ಧ್ವನಿ ಮುದ್ರಿಕೆ ಬಗ್ಗೆ ನಿಮ್ಮೊಡನೆ ಹಂಚಿಕೊಳ್ಳು…
ವಿಧ: ಬ್ಲಾಗ್ ಬರಹ
July 25, 2006
ಈ ಕಡೆಯ ಬ್ರಾಹ್ಮಣರು ಮರಾಠೀ ಪತ್ರಿಕೆಗಳನ್ನೇ ಓದುತ್ತಿದ್ದರೆಂದು ಹೇಳಿದೆಯಷ್ಟೆ . ಪ್ರಾಯಶ: ಕನ್ನಡವನ್ನು ಆ ಕಾಲದಲ್ಲಿ ಉಳಿಸಿದವರು ವೀರಶೈವರು. ಅವರು ನಡೆಸುತ್ತಿದ್ದ ಪ್ರತಿಯೊಂದು ಮಠವೂ ಒಂದು ಕನ್ನಡ ಶಾಲೆಯೇ ಆಗಿತ್ತು . ೧೮೮೦ ರವರೆಗೆ ಪ್ರತಿಯೊಂದು ಹಳ್ಳಿಯಲ್ಲಿಯೂ ವೀರಶೈವರದೊಂದು ಶಾಲೆಯು ಕಣ್ಣಿಗೆ ಬೀಳುತ್ತಿತ್ತು.
ಉತ್ತರ ಕರ್ನಾಟಕದ ಶಾಲೆಗಳಲ್ಲಿ ಕನ್ನಡ ಮತ್ತು ಮರಾಠಿಗಳನ್ನು ಕಡ್ಡಾಯವಾಗಿ ಕಲಿಸಲಾಗುತ್ತಿತ್ತು .
ವಿಜಾಪುರದಲ್ಲಿ ಹೊರಟ ಮೊದಲ ಪತ್ರಿಕೆ ಮರಾಠಿಯದು . ೧೯೧೭ ರಲ್ಲಿ…
ವಿಧ: ಚರ್ಚೆಯ ವಿಷಯ
July 25, 2006
ಬರುವ ಭಾನುವಾರದಿಂದ ಪ್ರಾರಂಭಿಸಿ [:http://planet.sampada.net|ಪ್ಲಾನೆಟ್ ಕನ್ನಡದಲ್ಲಿ] ಅನಾಮಿಕರು ಬರೆಯುವ ಬ್ಲಾಗುಗಳನ್ನು ತೆಗೆದುಹಾಕಲಾಗುವುದು.
ಅಂತರಜಾಲದಲ್ಲಿ ನಿಮ್ಮದೊಂದು ಬ್ಲಾಗ್ ಇದ್ದು ಅದನ್ನು ಪ್ಲಾನೆಟ್ ಕನ್ನಡದಲ್ಲಿ ಸೇರಿಸಬೇಕೆಂದು ನಿಮಗನಿಸಿದರೆ [:http://sampada.net/feedback|ನಮಗೆ ಸಂದೇಶ ಕಳುಹಿಸಿ]. ಸೇರಿಸಲಾಗುವುದು.
ವಿಧ: Basic page
July 25, 2006
'ಅಯ್ಯೊ ಮತ್ತೆ ಬಂತೆ, ಜುಲೈ, ಮೆರೆಸಿತೆ, ದುರ್ದಶೆಯ ತಾಂಡವ ನೃತ್ಯವ' ! ಇಂದು ೨೬, ನೆಯ ಜುಲೈ, ೨೦೦೬, ಒಂದು ವರ್ಷದ ನಂತರದ ಅನುಭವದ ಮಧ್ಯೆಯೂ ಸ್ವಲ್ಪ ಅಧೀರತೆಯನ್ನು ತರುತ್ತೆ ! ೨೦೦೫ ರಂದು, ಇದೇ ದಿನದ ದಾರುಣ 'ವ್ಯಥೆಯ ಕಥೆ', ಕೆಟ್ಟ 'ಕರಾಳ ರಾತ್ರಿ'ಯ ಕಹಿ ನೆನೆಪಿನ ಅನುಭವ ಗಳನ್ನು ಅನುಭವಿಸಿದವರೆಗೆ ಮಾತ್ರ ಗೊತ್ತು ! 'ದೈವ ಬಗೆದದ್ದೇ ಇದನ್ನ' ಎಂದಾಗ ನಾವು ಹೇಳುವದಾದರೂ ಯಾರಿಗೆ ? ನಮ್ಮ ಕೈಲೇನಿದೆ ? ನಮ್ಮವರೇ ಆದ ಮನುಕುಲದ ದಿಗ್ಗಜರೇ ಹೀಗೆ ಮಾಡಿದ್ದಾರೆ. ಒಳ್ಳೆಯದನ್ನು ಮಾಡಲು…
ವಿಧ: ಬ್ಲಾಗ್ ಬರಹ
July 25, 2006
(ಹುಚ್ಚು ಕನಸಿನ ತುಣುಕು) ಕವನದ ಭಾಗ
ಬಿಲ್ಲೆ ಮೇಲಿನ ಮೊಹರು ಕತ್ತಿ ಅಲುಗಿನ ಸೃಷ್ಟಿ
ರಕ್ತಚಿತ್ರಗಳ ರಹದಾರಿ ತಂದಿತಿಲ್ಲಿಗೆ ದಿಲ್ಲಿ
ಕ್ರೂರ ಮಹಾಮತಿ ತನ್ನ ಹೊಸ ತರ್ಕ ಹೆಣೆದಂತೆ
ಹುಟ್ಟಿತಿಲ್ಲಿ ಮಸಣರೂಪದ ಅವನ ರಾಜಧಾನಿ
ತಾರೆಸಂಕುಲ ತಂದು ಸಾಮ್ರಾಜ್ಯ ಸಿಂಗರಿಸಿ
ಇತಿಹಾಸದಲಿ ನೆಲೆಸಿರುವ ರಮ್ಯ ಬಿಂದು
ಮುಠ್ಠಾಳ ತುಘ್‌ಲಕ್‌ನ ಅತಿಬುದ್ದಿಯ ಕಥೆ
ಹುಚ್ಚು ಕನಸಿನ ತುಣುಕು ದೌಲತಾಬಾದು
ವಿಧ: ಚರ್ಚೆಯ ವಿಷಯ
July 25, 2006
ಸಾಧಿಸಿದ್ದಾದರೂ ಏನು? ಕಳೆದುಕೊಂಡದ್ದು ಎಷ್ಟೊಂದು? ನಷ್ಟ ಯಾರಿಗೆ? ಇದೆಲ್ಲ ಯಾರ ಒಳಿತಿಗಾಗಿ? ಇವೆಲ್ಲ ಪ್ರಾರಂಭವಾದದ್ದು ಹೇಗೆ ಯಾರಿಂದ?
ಕಳೆದ ವಾರ ಮುಂಬಯಿ ಲೋಕಲ್ ಟ್ರೈನ್‍ಗಳಲ್ಲಿ ೭ ಕಡೆಗಳಲ್ಲಿ ಸರಣಿ ಬಾಂಬ್ ಸ್ಫೋಟವಾಗಿದ್ದು ಇಡೀ ಜಗತ್ತಿಗೇ ತಿಳಿದಿದೆ. ಇದರ ಬಗ್ಗೆ ರಾಜಕೀಯ ವ್ಯಕ್ತಿಗಳು ತಮ್ಮ ತಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಿದ್ದಾರೆ. ಕೆಲವು ಇವರದಲ್ಲ ಎಂದರೆ ಇನ್ನು ಕೆಲವರು ಇವರದೇ ಕೃತ್ಯ ಎಂದು ಹೇಳುತ್ತಿದ್ದಾರೆ. ಒಬ್ಬರಿಗೊಬ್ಬರು ಬೆರಳು ತೋರುತ್ತಾ ಕಿತ್ತಾಡುವುದರಲ್ಲಿ…