ವಿಧ: Basic page
July 30, 2006
ಧಿಡೀರ್ ಸುದ್ದಿ (ನಮ್ಮ ವಿಶೇಷ ಬಾತ್ಮಿದಾರರಿ೦ದ)ಮಧ್ಯರಾತ್ರಿ ೦ ಘ೦ಟೆ, ಪ೦ಚತಾರಾ ಹೊಟೆಲ್ ಪಾದರಕ್ಷಾ ತ೦ಗುದಾಣ, ಕನ್ನಡದ ಖ್ಯಾತ ಸಾಹಿತಿಯೋರ್ವರು ಕನ್ನಡಕ್ಕಾಗಿ ದುಡಿಯದ, ಮಿಡಿಯದ, ಸೇವೆ ಸಲ್ಲಿಸದ ರಾಜಕಾರಣಿಗಳನ್ನು ಚಪ್ಪಲಿಯಲ್ಲಿ ಥಳಿಸಬೇಕೆ೦ದು ಆಗ್ರಹ ಪಡಿಸಿರುವ ಹಿನ್ನೆಲೆಯಲ್ಲಿ, ಅಖಿಲ ಕರ್ನಾಟಕ ಪಾದರಕ್ಷೆಗಳ ಒಕ್ಕೂಟವು ಒ೦ದು ತುರ್ತು ಅಧಿವೇಶನವನ್ನು ಕರೆದಿತ್ತು. ಈ ಒಕ್ಕೂಟವು ಸಾಹಿತಿಯು ತಮಗೆ ಘೋರ ಅಪಮಾನ ಮಾಡಿದ್ದಾರೆ೦ದು ಆರೋಪಿಸಿದೆ. ತಮ್ಮ೦ತಹ ಸೇವಾ ಪ್ರವೃತ್ತಿಯುಳ್ಳ, ಸದಾ…
ವಿಧ: Basic page
July 30, 2006
ಪ್ರೇಮ ಮತ್ತು ಪ್ರೀತಿ ಎರಡೂ ಒಂದೇ ಎಂದು ತಪ್ಪಾಗಿ ಭಾವಿಸಿರುವವರಿದ್ದಾರೆ. ಒಂದೇ ಮಾತಿನಲ್ಲಿ ಹೇಳ ಬೇಕೆಂದರೆ,ಹೆಂಡತಿ ಸತ್ತರೆ ಮರಳಿ ತರಬಹುದು. ಜನ್ಮಕೊಟ್ಟ ತಾಯಿಯನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಆಕೆಯ ಮನಸ್ಸನ್ನು ನೋಯಿಸಿ ಜಗತ್ತನ್ನೇ ಜಯಿಸಿದರೇನು ಫಲ?... ಒಂಭತ್ತು ತಿಂಗಳು ಹೆತ್ತು ಹೊತ್ತು ಕೈತುತ್ತ ತಿನಿಸಿ ಸಾಕಿದ ಮಮತೆಯ ತಾಯಿ, ಕೈಹಿಡಿದು ನಡೆಸಿ, ವಿದ್ಯೆ ಕಲಿಸಿ, ಬದುಕಿಗೆ ಮಾರ್ಗದರ್ಶನ ಮಾಡಿದ ಪ್ರೇಮದ ತಂದೆ, ಕೆಲವರೇ ಆದರೂ ಪ್ರೀತಿಯ ತೋರುವ ಬಂಧುಗಳು, ಇವರೆಲ್ಲರನ್ನೂ ಬಿಟ್ಟು…
ವಿಧ: ಚರ್ಚೆಯ ವಿಷಯ
July 30, 2006
ಟೈಮ್ ಇದ್ದಾಗ್ ನೋಡ್ರಿ!
http://kaalachakra.blogspot.com/
ವಿಧ: Basic page
July 29, 2006
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಜಾನಪದ ಗಾರುಡಿಗ, ನಾಡೋಜ, ಕಲಾ ತಪಸ್ವಿ, ಹಿರಿಯ ಗಾಂಧೀವಾದಿ ಡಾ ಎಸ್.ಕೆ. ಕರೀಂಖಾನ್ ಇಹಲೋಕಕ್ಕೆ ವಿದಾಯ ಹೇಳಿದ್ದಾರೆ. ಇದರೊಂದಿಗೆ ನಾಡಿನ ಹಳೆಯ ತಲೆಮಾರಿನ ಜಾನಪದ ಮತ್ತು ಸಾಂಸ್ಕೃತಿಕ ಪರಂಪರೆಯ ಕೊಂಡಿಯೊಂದು ಕಳಚಿಕೊಂಡಂತಾಗಿದೆ. ತೊಂಬತ್ತೆಂಟು ವರ್ಷಗಳ ಸಾರ್ಥಕ ಬಾಳುವೆ ನಡೆಸಿದ ಈ ಬ್ರಹ್ಮಚಾರಿ ಇಂದು(ಜುಲೈ 29) ಬೆಳಿಗ್ಗೆ 11.50 ರ ಸುಮಾರಿಗೆ ಚಿರನಿದ್ರೆಗೆ ಜಾರಿದರು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಜೂನ್ 10ರಂದು ಬೌರಿಂಗ್…
ವಿಧ: Basic page
July 29, 2006
೧೯೩೫ ರಲ್ಲಿ ನಮ್ಮ ತಾಯಿಯವರು ಬರೆದಿಟ್ಟ, ಅವರು ಹೇಳುತ್ತಿದ್ದ ಹಾಡುಗಳ ಸಂಗ್ರಹದಿಂದ :
ಅವರು ನೂರಾರು ಹಾಡುಗಳನ್ನು ಪುಸ್ತಕ ನೋಡದೆ, ಬಾಯಿನಲ್ಲೇ ಹೇಳುತ್ತಿದ್ದರು. ಒಂದು ಉದಾಹರಣೆ ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇನೆ. ಇದು 'ನಳಚರಿತ್ರೆ'ಯ ಪ್ರಸಂಗ.
ಲೆತ್ತವಾಡಿ ಕೌರವರಿಗೆ ರಾಜ್ಯ ಸೋತು ಧರ್ಮಜ, ತನ್ನ ಪತ್ನಿ 'ದ್ರೌಪದಿ' ಮತ್ತು ತಮ್ಮಂದಿರೊಡನೆ ವನದಲ್ಲಿ ಜೀವಿಸುತ್ತಿದ್ದಾಗ, 'ಬೃಹದಶ್ವ' ಎಂಬ ಮುನಿವರ್ಯರು ಅವರ ಕುಟೀರಕ್ಕೆ ಬರುತ್ತಾರೆ. ದ್ರೌಪದಿ ಅತಿ ಸಂತಾಪದಿಂದ ಅವರ ಹತ್ತಿರ 'ಮುಂದೇನು…
ವಿಧ: ಬ್ಲಾಗ್ ಬರಹ
July 29, 2006
ಇದು ನಾನು ಕೇಳಿದ್ದು. ಪೂನಾದಲ್ಲಿ ಒಂದು ದಂಪತಿ. ಮೂಲ ಊರು ಬೆಳಗಾಂವ. ಪೂನಾದಲ್ಲಿ ಬಹಳ ವರ್ಷಗಳಿಂದ ವಸತಿ. ಇಬ್ಬರೂ ಕನ್ನಡ ಹಾಗೂ ಮರಾಠಿ ಮಾತಾಡುತ್ತಾರೆ. ಆದರೆ, ಗಂಡನಿಗೆ ಮರಾಠಿ ಓದಲು, ಬರೆಯಲು ಅಷ್ಟೇನೂ ಚೆನ್ನಾಗಿ ಬರದು. ಹೆಂಡತಿಗೆ ಕನ್ನಡ ಓದಲು, ಬರೆಯಲು ಅಷ್ಟಾಗಿ ಬರದು. ಗಂಡ ಕನ್ನಡ ಓದಿ ಅವಳಿಗೂ, ಹೆಂಡತಿ ಮರಾಠಿ ಓದಿ ಅವನಿಗೂ ಹೇಳುತ್ತಾರೆ. ಹೀಗೆ ಇಬ್ಬರೂ ಎರಡೂ ಭಾಷೆಯ ಸಾಹಿತ್ಯವನ್ನು ಬಲುವಾಗಿ ಓದಿಕೊಂಡಿದ್ದಾರೆ.ಆಷ್ಟೇ ಅಲ್ಲ. ಗಂಡ ಮರಾಠಿಯಿಂದ ಕನ್ನಡಕ್ಕೆ, ಹೆಂಡತಿ ಕನ್ನಡದಿಂದ…
ವಿಧ: ಚರ್ಚೆಯ ವಿಷಯ
July 28, 2006
ಎಲ್ಲರಿಗೂ ನಮಸ್ಕಾರ,
ದಯವಿಟ್ಟು ಯಾರಾದರೂ ಚಿದಂಬರ ರಹಸ್ಯ ಎನ್ನುವ ಪದದ ವಿವಪಣೆಯನ್ನು ಕೊಡುವಿರಾ?
ಧನ್ಯವಾದಗಳೊಂದಿಗೆ,
ವಿಧ: Basic page
July 28, 2006
ನೀವು ಭಾರತೀಯರಾಗಿದ್ದರೆ ಈಗ ಮತ್ತೊಂದು ಅಸಾಧ್ಯ ಕಲ್ಪನೆಗೆ ಮುಂದಾಗಿ. ಹೀಗೆ ಹೇಳಿದನೆಂದು ಸಿಟ್ಟಾಗದಿರಿ. ಕನ್ನಡ ಓದಿಯೂ ಭಾರತೀಯನಲ್ಲದವರಾಗಿದ್ದರೆ ನೀವು ಎನ್.ಆರ್.ಐಗಳೇ ಇರಬೇಕು. ಅಂತಹವರಿಗೆ ಘಟ್ಟವೇಕೆ, ಬೆಂಗಳೂರು, ಮೈಸೂರೂ ಮಜ ಎನ್ನಿಸುತ್ತದೆ-ಏಕೆಂದರೆ, ತಾವು ಎಂದಿದ್ದರೂ ಯುರೋಪ್, ಯು.ಎಸ್.ಆಫ್ ಎಗೆ ಹಿಂದಿರುಗುತ್ತೇವೆ ಎಂಬ ನಂಬಿಕೆಯಿಂದಾಗಿ.
ಈಗ ಉಲ್ಟಾ ಎನ್‌ಆರ್‌ಐಗಳನ್ನು ಕಲ್ಪಿಸಿಕೊಳ್ಳಿ. ಸ್ವಲ್ಪಕ್ಕಿಂತಲೂ ಸ್ವಲ್ಪ ಹೆಚ್ಚು ಕಷ್ಟವಿದು. ಆ ಚಾರ್ಮಾಡಿ ಘಟ್ಟದವರೇ ಮತ್ತೂ ಜನನಿಭಿಡ…
ವಿಧ: ಬ್ಲಾಗ್ ಬರಹ
July 28, 2006
ನಮ್ಮ ಓದು ಹೆಚ್ಚಿದಂತೆ , ನಮ್ಮ ತಿಳಿವಳಿಕೆಯೂ , ಅದರಿಂದ ಸಿಗುವ ಸಂತೋಷವೂ ಹೆಚ್ಚುತ್ತದೆ. ಬಹುಶ್ರುತರಾಗುವುದರ ಲಾಭ ಅದು . ( ನಾನು ಈ ಭಾಷೆಯ ಚಿತ್ರ ನೋಡುವದಿಲ್ಲ , ಈ ಕುರಿತು ತಿಳಿದುಕೊಳ್ಳಲೊಲ್ಲೆ ಎಂದರೆ ನಷ್ಟ ಯಾರಿಗೆ ? ನಮಗೇ ತಾನೆ?)
ಇತ್ತೀಚೆಗೆ ಒಂದು ಲೇಖನ ನೋಡಿದೆ . ಬಹಳ ಚೆನ್ನಾಗಿದೆ. ಮತ್ತು ಈ ವಿಷಯವನ್ನು ಸ್ಪಷ್ಟಪಡಿಸುತ್ತದೆ. ಅದರ ಕೆಲ ಭಾಗ ಇಲ್ಲಿದೆ.
" ನಮ್ಮೂರ ಜನ ಬಹಿರ್ದೆಸೆಗಾಗಿಹೊಳೆಯ ತೀರದಲ್ಲಿ ದಾಂಗುಡಿ ಇಡಲು ನಡುಹಾದಿಯಲ್ಲೇ ಪಂಚೆ ಎತ್ತಿಕಟ್ಟುವದು ದೇವದೇವತೆಗಳು…
ವಿಧ: ಚರ್ಚೆಯ ವಿಷಯ
July 28, 2006
ಕಳೆದ ಹಲವಾರು ದಿನಗಳಿಂದ ಸಂಪದ ಪುಟಗಳನ್ನು ಓದುತ್ತಿದ್ದೇನೆ. ಸ್ವಾರಸ್ಯಕರವಾದ ಅನೇಕ ಬರಹಗಳನ್ನು ಓದಿದೆ. ನನಗೆ ಸಾಹಿತ್ಯದಲ್ಲಿ ಆಸಕ್ತಿ ಇದೆಯಾದ್ದರಿಂದ ಆ ಕುರಿತ ಬ್ಲಾಗ್ ಗಳು, ಲೇಖನಗಳು ಇಷ್ಟವಾದವು. ವಿಶೇಷವಾಗಿ, ಓಎಲ್ ನಾ ಸ್ವಾಮಿ ಹಾಗೂ ಅನಂತಮೂರ್ತಿಯವರ ಪುಟಗಳು. ಪರಾಗ ಎಂಬ ಬೇಂದ್ರೆ ಕವನದ ವಿಶ್ಲೇಷಣೆ (ಸ್ವಾಮಿ) ತುಂಬ ಚೆನ್ನಾಗಿದೆ.
ಪುಟಗಳನ್ನು ಓದುತ್ತ ನನಗೆ ಯಾಕೆ ಇಷ್ಟೆಲ್ಲ ಜನ ಕನ್ನಡ ಭಾಷೆಯ ಕುರಿತು ಆತಂಕಿತರಾಗಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಭಾಷೆ ಬಡವಾಗುತ್ತಿದೆ, ಇನ್ನೇನು…