ಇನ್ನಷ್ಟು ಅಪರೂಪದ ಗಾದೆಮಾತುಗಳು

ಇನ್ನಷ್ಟು ಅಪರೂಪದ ಗಾದೆಮಾತುಗಳು

ಬರಹ

ಗಂಡನಿಗೆ ಹೊರಸು ಆಗದು , ಹೆಂಡತಿಗೆ ನೆಲ ಆಗದು!
ಕೊಡುವವರದು ಕೊಟ್ಟರೆ ನನಗೇನು ಉಳಿಯಿತು ಅಂದನಂತೆ.
ಕೋಳೀ ಕಾಲಿಗೆ ಗೆಜ್ಜೆ ಕಟ್ಟಿದರೆ ತಿಪ್ಪೆ ಕೆದರೋದು ಬಿಟ್ಟೀತೆ?
ಕತ್ತೆಯ ಕಾಲು ಮುರಿದರೇನು ? ನಾಯಿಯ ಹಲ್ಲು ಮುರಿದರೇನು?
ಕಟ್ಟಿದ ಗೂಟ , ಹಾಕಿದ ಹಲ್ಲು.
ಉಂಡರೆ ಉಬ್ಬಸ, ಹಸಿದರೆ ಸಂಕಟ .
ಜೋಡಿದ್ದರೆ ನಾಡು ತಿರುಗಬಹುದು.
ಆಕಾಶ ಹರಿದು ಬೀಳುವಾಗ ಕೈ ಅಡ್ಡ ಹಿಡಿಯಬಹುದೇ ?
ಆಗ-ಭೋಗ ಸೂಳೆ ಪಾಲು , ಗೂರಲು ಉಬ್ಬಸ ಹೆಂಡತಿ ಪಾಲು.
ಅಳಿಲು ಏರಿದರೆ ಅರಳಿಮರ ಅಲ್ಲಾಡೀತೆ ?
ನಾವೂ ನೀವೂ ನೆಂಟರು , ಗಂತಿಗೆ ಮಾತ್ರ ಕೈ ಹಚ್ಚಬೇಡಿ.
ನಾಯಿಯನ್ನು ಹೊಡೆಯಲು ಬಣ್ಣದ ಕೋಲೇ ?