ಇಂದು ವರಸಿದ್ಧಿವಿನಾಯಕನ ವ್ರತ : ತಾ.೨೭-೮-೨೦೦೬ ಭಾನುವಾರ.
ಭಾದ್ರಪದ ಶುಕ್ಲ ಚತುರ್ಥೀ ಮಧ್ಯಾಹ್ನ ವ್ಯಾಪಿನಿ ಮತ್ತು ಯಾಮದ್ವಯ ವ್ಯಾಪಿನಿಯಿರುವ ದಿನ ಆಚರಿಸತಕ್ಕ ವ್ರತ. ಬೆಳ್ಳಿ ಅಥವ ಮಣ್ಣಿನಿಂದ ಮಾಡಿದ ಗಣಪತಿಯನ್ನು ಪ್ರಾಣಪ್ರತಿಷ್ಠಾಪನಾ ಪುರಸ್ಸರ ಪೂಜಿಸಿ ಮೊದಕವನ್ನು ನೈವೇದ್ಯಮಾಡಿ , ಸ್ಯಮಂತಕೊಪಾಖ್ಯಾನ ಕಥೆಯನ್ನು ಶ್ರವಣಮಾಡಬೇಕು. ಸಕಲ ಕಾರ್ಯಗಳೂ ನಿರ್ವಿಘ್ನವಾಗಿ ನೆರವೇರಲೂ, ವಿದ್ಯಾಪ್ರಾಪ್ತಿಗಾಗಿಯೂ, ಇಷ್ಟಾರ್ಥ ಸಿದ್ಧಿಗೂ ಈ ವ್ರತ ಪ್ರಸಿದ್ಧವಾಗಿದೆ. ಕರ್ನಾಟಕದಲ್ಲಿ ಸಾಮಾನ್ಯವಾಗಿ…