ವಿಧ: ಬ್ಲಾಗ್ ಬರಹ
August 06, 2006
ಕೆಲವು ಕರ್ಡಿಶ್ ಕವಿತೆಗಳು(ಓಮಿದ್ ವರಜಾನ್ದೆಯವರ ಇಂಗ್ಲೀಷ ಅನುವಾದದಿಂದ)
ಘನತೆ (ಬರೋಜ್ ಅಕ್ರಾಯಿ)
ಧೂಳು ಹಾಗೂ ಮಂಜಿನ ನಡುವೆಬೂದುಬಣ್ಣದ ಟ್ರಕ್ಕೊಂದು ಬರುತ್ತದೆ
ಮೂವರು ಮಹಿಳೆಯರು ಕಾಯುತ್ತಿದ್ದಾರೆಸೈನ್ಯದ ಕೋಟೆ ಗೋಡೆಗೆ ಆನಿಸಿ
ಒಬ್ಬಳು ಅಳುತ್ತಿದ್ದಾಳೆಇನ್ನಿಬ್ಬರು ನಗುತ್ತಿದ್ದಾರೆ
ಟ್ರಕ್ಕಿನೊಳಗೆ ಇಬ್ಬರು ಯುವಕರುಈಸುತ್ತಿದ್ದಾರೆ ತಮ್ಮ ರಕ್ತದ ಮಡುವಲ್ಲಿ
ಟ್ರಕ್ಕಿನೊಳಗಿದ್ದ ಮೂರನೆಯವತನ್ನ ಮೀಸೆ ತೀಡಿಕೊಳ್ಳುತ್ತಲಿದ್ದಾನೆ.
ಬಲಿದಾನ (ಜಲಾಲ್ ಮಾಲಾಷಾ)
ಬಿಳಿ ಪಾರಿವಾಳವೊಂದು…
ವಿಧ: ಬ್ಲಾಗ್ ಬರಹ
August 06, 2006
"ಕತ್ತಲೆಗೂ, ದುಃಖಕ್ಕೂ ನಿಗೂಢ ಸಂಬಂಧವಿದೆ. ಸುತ್ತಲಿನ ವಾಸ್ತವದ ಉಪರೋಧದ ಚಿತ್ರಣ, ಪರಕೀಯತೆ, ಮಾನವ ಅಸ್ತಿತ್ವದ ಗೂಢ - ಇದೆಲ್ಲ ನಗರ ಸಂಸ್ಕೃತಿಯೊಂದಿಗೆ ತಳಕು ಹಾಕುವ ಪ್ರವೃತ್ತಿಗಳು. ನೇಮಾಡೆ ಇದೆಲ್ಲವನ್ನೂ ನೀಡುತ್ತಲೇ ಅದಕ್ಕೊಂದು ಪರ್ಯಾಯ ಸೂಚಿಸುತ್ತಾರೆ. ನೇಮಾಡೆಯ ಕವಿತೆಗಳು ಮಾನವ ಅಸ್ತಿತ್ವದ ಹಿಡಿರುವ ರಚನಾತ್ಮಕ ಮತ್ತು ಶ್ರೇಯಸ್ಕರ ಪ್ರವೃತ್ತಿಗೆ ವಿಶೇಷ ಮಹತ್ವ ನೀಡುತ್ತವೆ." ಹೀಗೆ ಮರಾಠಿಯ ಬಹುಮಾನ್ಯ ಕವಿ ಭಾಲಚಂದ್ರ ನೇಮಾಡೆಯವರನ್ನು ಪರಿಚಯಿಸುವ ಚಂದ್ರಕಾಂತ ಫೋಕಳೆಯವರು ಇತ್ತೀಚೆ…
ವಿಧ: ಬ್ಲಾಗ್ ಬರಹ
August 06, 2006
[ ನನ್ನ ಬ್ಲಾಗಿನಿಂದ ಮರುಪ್ರಕಟನೆ - ವೆಂ. ]
ಭೋಜರಾಜ ಚಾರಿತ್ರಿಕ ವ್ಯಕ್ತಿ, ಸುಮಾರು ೧೧ನೆಯ ಶತಮಾನದವನು. ಆದರೂ ೫-೬ನೆಯ ಶತಮಾನದ ಕಾಳಿದಾಸನ ಹೆಸರಿನೊಂದಿಗೆ ಭೋಜನ ಹೆಸರು ಜೋತುಬಿದ್ದಿದೆ. ಚಾರಿತ್ರಿಕ ಭೋಜನಂತೆಯೆ ಕಾಳಿದಾಸನ ಭೋಜನೂ ಕವಿತಾಪಕ್ಷಪಾತಿ. ಆಗಾಗ ಕವಿಗಳನ್ನು ತನ್ನಲ್ಲಿಗೆ ಕರೆಸಿಕೊಂಡು ಗೋಷ್ಟಿಗಳನ್ನು ನಡೆಸಿ ಬಹುಮಾನಮಾಡಿ ಕಳಿಸುತ್ತಿದ್ದನು. ಆಗಾಗ ಕವಿತೆ ಕಟ್ಟುವ ಯಾರಿಗೂ ತನ್ನ ಆಸ್ಥಾನದ ಬಾಗಿಲುಗಳನ್ನು ತೆರೆದು ಅಕ್ಷರಲಕ್ಷವನ್ನು ನಡೆಸುತ್ತಿದ್ದನು. ಅಕ್ಷರಲಕ್ಷವೆಂದರೆ ಕವಿತೆಯ…
ವಿಧ: ಬ್ಲಾಗ್ ಬರಹ
August 05, 2006
ಚಂಚಲ ಮನಸ್ಸನ್ನು ಸ್ಥಿಮಿತಕ್ಕೆ ತರುವುದು ಯಾವುದು? ಆತ್ಮಶಕ್ತಿಯೆ. ಧ್ಯಾನದಲ್ಲಿ ನಿರತರಾಗಿರಿ, ಆಗ ದೇಹಾತೀತವಾಗಿ ಗೋಚರವಾಗುವುದು ಯಾವುದು? ಆ ಪರಿಯ ಅರಿವು, ಜ್ಞಾನ ಉಂಟಾಗುವುದಾದರೂ ಎಲ್ಲಿಂದ? ಕೇವಲ ದೈಹಿಕ ಮಿದುಳಿನ ಗ್ರಂಥಿಗಳಿಂದ ಎನ್ನಲಾಗದು. ಆದರೆ, ಎಲ್ಲವನ್ನೂ ವೈಜ್ಞಾನಿಕ ದೃಷ್ಟಿಯಿಂದ ನೋಡುತ್ತೇನೆಂದು ನಿರ್ಭಾವುಕ ಯಂತ್ರವಾಗುವುದು, ಯಂತ್ರದಂತೆ ವರ್ತಿಸುವುದು, ಕೇವಲ ಸುಖೋಪಭೋಗಗಳಲ್ಲಿ ಮಾತ್ರ ತಾನೊಂದು “ಬುದ್ಧಿವಂತ ಪ್ರಾಣಿ” ತನಗೆ ಯಾವುದು ಖುಷಿ ಕೊಡುವುದೋ ಅದನ್ನೇ ಅರಸುವುದು,…
ವಿಧ: ಬ್ಲಾಗ್ ಬರಹ
August 05, 2006
"ಮುಂಬಯಿ ಯಿಲಾಖೆಯೊಳಗೆ ಇರುವ ಕನ್ನಡು ಮಾತಾಡುವ ಜನರೊಳಗೆ ಇಂಗ್ರಜ ಭಾಷೆಯನ್ನು ಕಲಿತವರು ಅನೇಕರು ಇಲ್ಲ . ಅದರೆ ಮಹಾರಾಷ್ಟ್ರ ಮತ್ತು ಗುಜರಾಥಿ ಮಾತಾಡುವವರೊಳಗೆ ನೋಡಲಿಕ್ಕೆ ಕೂತರೆ ಯಷ್ಟೋ ಜನರು ಇಂಗ್ರಜ ಭಾಷೆಯ ಅಭ್ಯಾಸ ಚೆನ್ನಾಗಿ ಮಾಡಿ ತಂಮ ಸ್ವಭಾಷೆಯೊಳಗೆ ಉಪಯುಕ್ತವಾದ ವಿಷಯಗಳ ಮೇಲೆ ಅನೇಕ ಗ್ರಂಥಗಳನ್ನು ಬರಿದವರು ಇದ್ದಾರೆ. ಆದರೆ ಇನ್ನುವರೆಗೂ ಕನ್ನಡು ಮಾತನಾಡುವ ಜನರೊಳಗೆ ಹೇಳಿಸಿಕೊಂಬುವಷ್ಟು ಶ್ಯಾಹಣಿರು ಯಾರು ಆಗಿಲ್ಲ . ಮತ್ತು ಇದೇ ಕಾರಣದಿಂದಲೆ ಇನ್ನೂ ತನಕ ಕನ್ನಡು ಭಾಷೆಯೊಳಗೆ ಬಹಳ…
ವಿಧ: ಬ್ಲಾಗ್ ಬರಹ
August 05, 2006
ಇದು ಸಖೀಗೀತದ ಎರಡನೆಯ ಭಾಗವನ್ನು ಕುರಿತು.
೧
ಮಾಂದಳಿರ ತೋರಣ ಹೂಮಿಡಿ ಗುಡಿಗಟ್ಟಿ
ಮಧುಮಾಸ ಹೊರಟಿತ್ತು ನಿಬ್ಬಣಕೆ
ಚಂದಿರದೇವನಮುಗಿಲ ಮಂದಿರದಲ್ಲಿ
ಕಣ್ಣಿದಿರು ಕೌಮುದಿ ಕುಣಿಯುತಿರೆ
ಮಾವಿನ ಹೊಸ ಚಿಗುರು, ಹೊಸ ಹೂ, ಇವುಗಳ ಬಾವುಟ ಹಿಡಿದು (ಗುಡಿಗಟ್ಟಿ), ಮಧುಮಾಸದ ನಿಬ್ಬಣ ಹೊರಟಿದೆ. ಚಂದ್ರದೇವನಿಗೆ ಸೇರಿದ ಮೋಡಗಳ ಮಂದಿರದಲ್ಲಿ ಕೌಮುದಿಯ ನರ್ತನ ಸಾಗಿದೆ. ಸ್ವಲ್ಪ ಗಮನಿಸಿದರೆ ಈ ಸ್ಟಾಂಜಾದಲ್ಲಿ ಋತು ವೈಭವ, ಶೃಂಗಾರ ಮತ್ತು ದೈವೀಭಾವಗಳೆಲ್ಲ ಮೇಳೈಸಿರುವುದು ತಿಳಿಯುತ್ತದೆ. ಚಂದ್ರದೇವ, ಮಂದಿರ…
ವಿಧ: ಕಾರ್ಯಕ್ರಮ
August 04, 2006
ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಶೇಷಾದ್ರಿಪುರಂ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಆಚರಿಸುತ್ತಿರುವ ಕನ್ನಡಸಾಹಿತ್ಯ.ಕಾಂ ನ ಐದನೇ ವಾರ್ಷಿಕೋತ್ಸವ, ಸಂಪೂರ್ಣ CMS ಮತ್ತು ಕನ್ನಡ ಪದ ಪರೀಕ್ಷಕ ತಂತ್ರಾಂಶಗಳ ಬಿಡುಗಡೆ ಸಮಾರಂಭಕ್ಕೆ ತಮ್ಮನ್ನು ಪ್ರೀತಿಯಿಂದ ಆಹ್ವಾನಿಸುತ್ತದೆ.
ಸಮಾರಂಭದ ವಿವರಗಳುದಿನಾಂಕ: ಆಗಸ್ಟ್ ೬, ೨೦೦೬ ಸಮಯ: ಬೆಳಿಗ್ಗೆ ೧೦.೩೦ ಕ್ಕೆಸ್ಥಳ: ಶೇಷಾದ್ರಿಪುರಂ ವಿದ್ಯಾಲಯ ಸಭಾಂಗಣಶೇಷಾದ್ರಿಪುರಂ ವಿದ್ಯಾಲಯ (ಕಾಲೇಜು), ಬೆಂಗಳೂರು.
ಉದ್ಘಾಟನೆ ಹಾಗು…
ವಿಧ: ಬ್ಲಾಗ್ ಬರಹ
August 04, 2006
ಈ ವಾರದ ಸುಧಾದಲ್ಲಿ ಡಾ.ಕೆ. ಎನ್. ಗಣೇಶಯ್ಯರವರಿಂದ ಒಂದು ಹೊಸ ಧಾರಾವಾಹಿ ಆರಂಭವಾಗಿದೆ. ವಿಜಯನಗರದ ಪತನಾನಂತರ ಅಲ್ಲಿನ ಸಂಪತ್ತು ಏನಾಯಿತು ? ಯಾರಿಗೆ ದಕ್ಕಿತು? ಅಥವಾ ಅಲ್ಲೇ ಇನ್ನೂ ಆಡಗಿದೆಯೋ ? ಎಂಬ ಬಗ್ಗೆ ಅನೇಕ ಐತಿಹಾಸಿಕ ಅಂಶಗಳನ್ನು ಆಧರಿಸಿ 'ಕರಿಸಿರಿಯಾನ' ಎಂಬ ಕುತೂಹಲಕರ ರಹಸ್ಯಮಯ ಕತೆಯನ್ನು ಹೆಣೆದಿದ್ದಾರೆ. ಓದಲು ಮರೆಯದಿರಿ.
( ಕಳೆದ ವರುಷವಷ್ಟೇ ಅವರ ಕನಕಮುಸುಕು ಧಾರಾವಾಹಿ ಓದಿದ್ದು ನಿಮಗೆ ನೆನಪಿರಬಹುದು. ಅದರಲ್ಲಿ ಮೌರ್ಯ ಚಂದ್ರಗುಪ್ತನು ಗೋವಿನ ಜೋಳದ ತೆನೆಯ ರೂಪದಲ್ಲಿ…
ವಿಧ: ಬ್ಲಾಗ್ ಬರಹ
August 03, 2006
ಬೇಂದ್ರೆಯವರ ಸಖೀ ಗೀತ ಕನ್ನಡದ ಅತ್ಯುತ್ತಮ ಕವಿತೆಗಳಲ್ಲಿ ಒಂದು. ಇದರಲ್ಲಿ ನಲವತ್ತು ಭಾಗಗಳಿವೆ. ಒಂದೊಂದು ಭಾಗದಲ್ಲೂ ಆರು ಸ್ಟಾಂಜಾಗಳಿವೆ. ಗಂಭೀರವಾದ ಕಾವ್ಯಾಸಕ್ತರಿಗೆ ಇಷ್ಟವಾಗಬಹುದೆಂದು ಇತ್ತೀಚೆಗೆ ಅದನ್ನು ನಾನು ಓದಿಕೊಂಡ ರೀತಿಯನ್ನು ವಿವರಿಸುವ ಪ್ರಯತ್ನ ಮಾಡಿದ್ದೇನೆ. ಇಲ್ಲಿ ಮೊದಲನೆಯ ಭಾಗ ಕುರಿತ ವ್ಯಾಖ್ಯಾನ ಇದೆ. ನಿಮ್ಮ ಮನಸ್ಸಿನ ನುಡಿಗಳು ಉಳಿದ ಭಾಗವನ್ನೂ ಹೀಗೇ ಬರೆಯುವುದಕ್ಕೆ ಅವಕಾಶ ಮಾಡಿಕೊಟ್ಟಾವು.
೧
೧೯೩೬
ಸಖಿ! ನಮ್ಮ ಸಖ್ಯದ ಆಖ್ಯಾನ ಕಟು-ಮಧುರ
ವ್ಯಾಖ್ಯಾನದೊಡಗೂಡಿ…
ವಿಧ: ಬ್ಲಾಗ್ ಬರಹ
August 03, 2006
ದಕ್ಷಿಣದ ಪದ-ಉತ್ತರದ ಪದ, ಇಲ್ಲಿ ನನ್ನ ಅಳತೆಗೆ ಸಿಕ್ಕ ಕೆಲವೇ ಕೆಲವು ಪದಗಳನ್ನು ಪಟ್ಟಿ ಮಾಡಿದ್ದೇನೆ, ಇದು ವ್ಯತ್ಯಾಸವನ್ನು ಎತ್ತಿ ತೋರಲಿಕ್ಕೆ ಅಲ್ಲ, ಎರಡೂ ಪದಗಳು ಕನ್ನಡದ್ದೇ ಆಗಿರಬಹುದು, ಅಥವ ಅಲ್ಲದಿರಬಹುದು, ಆದರೆ ಉತ್ತರದ ಹೆಚ್ಚಿನ ಪದಗಳು ಕನ್ನಡ ಮೂಲದವು. ಮೊದಲ ಪದ ದಕ್ಷಿಣದಲ್ಲಿ ಬಳಸುವ ಪದ, ಎರಡನೆಯದು ಉತ್ತರದಲ್ಲಿ ಬಳಸುವ ಪದ.
ದೇವಸ್ಠಾನ-ಗುಡಿ
ನದಿ-ಹೊಳೆ
ಆಹಾರ-ಖೂಳು(ಸಿಟ್ಟಿನಿಂದ ಊಟಕ್ಕೆ ಕರೆವಾಗ)
ಭೂತ-ದೆವ್ವ
ಬೆಟ್ಟ-ಗುಡ್ಡ
ಪೆನ್ಚಿಲ್-ಸೀಸ
ರೀಫಿಲ್-ಕಡ್ಡಿ…