ವಿಧ: Basic page
September 05, 2006
ನಾ ಬರೆಯ ಹೊರಟೆ
ಹಳೆಯ ಹಾಳೆಯ ಮೇಲೆ ಕವನ!
ಯಾರೆಲ್ಲ ಬರೆದಿದ್ದಾರೆ, ನೀನೂ ಬರೆಯುತ್ತಿ, ಬರೆಯುತ್ತಲೇ ಇರುವೆ
ಅದರಲ್ಲೇನು ಅಂತಹ ವಿಶೇಷ, ಅನ್ನುವಿರಿ ತಾನೆ!
ನಾ ಬರೆಯ ಹೊರಟಿದ್ದು ಹಳೆಯ, ಹರಿದ, ರದ್ದಿಯಾದ ಕಾಗದದ ಮೇಲೆ!
ಸರಿ ಮಾರಾಯ ನೀನೂ ಬರಿ...
ಎಲ್ಲ ಕವಿಗಳು ಹೀಗೇ ಬರೆದಿದ್ದು ತಾನೇ
ರಸಭರಿತ ಕಾವ್ಯ, ಕವನವ ಹೊರ ಹೊಮ್ಮಿಸಿದ್ದು
ಇಂತಹ ರದ್ದಿ ಕಾಗದದಲ್ಲೇ ಅಲ್ಲವೆ!?
ಹೌದೂ, ನಾನು ಬರೆಯ ಹೊರಟಿದ್ದು ಅದೇ ಹಳೆಯ ಕಾಗದದ ಮೇಲೇನೇ!
ಆ ಹಾಳೆ ಹಾಳಾಗಿ ಕಸದ ಬುಟ್ಟಿ ಸೇರಿದ ಗೋಳಿನ ಕಥೆಯ ಬಣ್ಣಿಪ ಕವನ…
ವಿಧ: Basic page
September 05, 2006
"ಗಣಪತಿ ಬಂದ, ಕಾಯ್ಕಡುಬು ತಿಂದ", ಎಂದು ಸಡಗರಿಸುವ ಹೊತ್ತಿಗೆ, ಆಗಲೇ ವಿಘ್ನೇಶ್ವರನಿಗೆ ವಿದಾಯ ಸಲ್ಲಿಸುವ ಸಮಯ ಹತ್ತಿರವಾಗುತ್ತಿದೆ ! ನಾವು ಈಗ ಹೇಳಬೇಕಾದದ್ದು ಮುಂದಿನ ವರ್ಷ ಬೇಗ ಬಂದು ನಮ್ಮನ್ನು ಹರಸು ಎಂದು ಮಾತ್ರ !
ಮಹಾರಾಷ್ಟ್ರದ ವಿಶೇಷತೆ ಎಲ್ಲರಿಗು ತಿಳಿದದ್ದೆ ! ಅದರ ಸಾರ್ವಜನಿಕ ಲಕ್ಷಣ. ಎಲ್ಲರೂ ಒಟ್ಟಿಗೆ ಕೂಡಿ ಪೂಜೆ ಮಾಡೊಣ, ಕೂಡಿ ನಲಿಯೋಣ ಎಂಬ ಸಿದ್ಧಾಂತ !
ಈಗ ಮುಂಬೈ ನಲ್ಲಿ ಒಟ್ಟು ೮,೦೦೦ ಸಾರ್ವಜನಿಕ ಗಣೇಶೊತ್ಸವ ಮಂಡಳ ಗಳಿವೆ.ಅದರಲ್ಲಿ ೫೦% ಮಾತ್ರ 'ಚ್ಯಾರಿಟೀ ಕಮೀಶನರ್'…
ವಿಧ: Basic page
September 05, 2006
ನನಗೆ ಇದ್ದಕ್ಕೆ ಇದ್ದಹಾಗೆ, ಸಿಂಗಪುರದ ಬಗ್ಗೆ ಮತ್ತೊಮ್ಮೆ ಬರೆಯೋಣ ಅಂತ ಅನ್ನಿಸಿತು. ಮತ್ತೊಮ್ಮೆ ಅಂದರೆ ಈಗಾಗಲೇ ನಾನು ಸಿಂಗಪುರದ ಬಗ್ಗೆ ಬರೆದಿದ್ದೇನೆ ಅಂತ ಖಂಡಿತ ಅಲ್ಲ. ಈಗಾಗಲೇ ಇಂಟರ್-ನೆಟ್, ಟಿ.ವಿ., ಪೇಪರ್-ಗಳಲ್ಲಿ ಸಿಂಗಪುರದ ಬಗ್ಗೆ ಬಂದಿರೋ ನೂರಾರು ಲೇಖನಗಳಲ್ಲಿ ನೀವು ಒಂದೆರಡನ್ನಾದರೂ ಓದಿರುತ್ತೀರಿ ಅಂತ ನನಗೆ ಗೊತ್ತು. ಆದರೆ ಅವೆಲ್ಲ ಲೇಖನಗಳು ಅಲ್ಲಿಗೆ ೧-೨ ವಾರಗಳ ಮಟ್ಟಿಗೆ ಹೋಗಿಬಂದ ಪ್ರವಾಸಿಗಳದ್ದೋ ಅಥವ ಅಲ್ಲಿಯ ಪ್ರವಾಸೋದ್ಯಮ ಇಲಾಖೆಯವರು sponsor ಮಾಡಿ ಬರೆಸಿದ ಲೇಖನಗಳೋ…
ವಿಧ: ಬ್ಲಾಗ್ ಬರಹ
September 05, 2006
ಕನ್ನಡದಲ್ಲಿ 'ಇಸು' ವಿನ ಬಳಕೆ ಹೀಗಿದೆ, ನನಗೆ ಇದು ಮರೆತು ಹೋಗಿತ್ತು, ಮಹೇಶ್ ಬೋಗಾದಿ ನೆನಪು ಮಾಡಿದರು.
ಮಾಡು - ನಾನು ಮಾಡುವುದು.
ಮಾಡಿಸು - ಎರಡನೆಯವರು ಮಾಡುವಂತೆ ಮಾಡುವುದು.
ಮಾಡಿಸಿಸು - ಎರಡನೆಯವರು ಮೂರನೆಯವರಿಂದ ಮಾಡಿಸುವಂತೆ ಮಾಡುವುದು.
ಇದರಿಂದ ನಮಗೆ ಮೂರು ಹೆಸರುಪದಳು ಸಿಗುತ್ತವೆ. ಮಾಡುವಿಕೆ,ಮಾಡಿಸುವಿಕೆ,ಮಾಡಿಸಿಸುವಿಕೆ.
ಹಾಗೆಯೇ,
ಕೇಳು - ಮೊದಲ ಪುರುಸ ಕೇಳುವುದು. ಮಾದರಿ: ನಾನು ಗುರುಗಳನ್ನು ಕೇಳಿದೆನು
ಕೇಳಿಸು - ಎರಡನೆಯವರು ಕೇಳುವಂತೆ ಮಾಡುವುದು ;ನಾನು ರವಿಯ ಕಡೆಯಿಂದ…
ವಿಧ: ಬ್ಲಾಗ್ ಬರಹ
September 05, 2006
~~~~~~~~~ಹೃದಯ ಗೀತ~~~~~~~~~~~
ಕೇಳೆ ಸಖಿ ನನ್ನ ಮಾತ,
ಒಮ್ಮೆ ನಿಲ್ಲು ಅಲ್ಲಿಯೇ,
ತಿರುಗಿ ಕೂಡ ನೋಡದೇನೆ,
ಹೋಗಬೇಡ ಹಾಗೆಯೆ..
ನನ್ನದೇನೆ ತಪ್ಪು ಗೆಳತಿ,
ಮನದ ಮಾತು ಕೇಳಿದೆ..
ನೀನೆ ನನ್ನ ಬಾಳಬೆಳಕು,
ಮನವದುವನೆ ಹೇಳಿದೆ..
ನೀನು ಕೂಡ ನನ್ನ ಹಾಗೆ
ಸತ್ಯ ಹೇಳಬಾರದೆ?
ಹೃದಯದೊಳಗೆ ನನ್ನ ಬಿಂಬ
ಒಮ್ಮೆ ನೋಡಬಾರದೆ..
ಹೊರಟೆಯೇನೆ ನನ್ನ ಬಿಟ್ಟು,
ಒಂಟಿ ಬಾಳ ಪಯಣಕೆ..
ಹೋಗೋ ಮುನ್ನ,
ಕೇಳೇ ಇಲ್ಲಿ ನನ್ನ ಸಣ್ಣ ಕೋರಿಕೆ..
ಒಮ್ಮೆ ನಿಂತು ಅಲ್ಲೆ ನಕ್ಕು,
ಮತ್ತೆ ಹೋಗಬಾರದೆ?
ನಿನ್ನ ನಗುವೆ ಜೀವಜಲವು,…
ವಿಧ: ಬ್ಲಾಗ್ ಬರಹ
September 02, 2006
ಬೆರಗಿನ ಡೋಲು ನನ್ನೊಳಗೆ ಬಡಿಯುತಿದೆನದಿಯೊಳಗೆ ಮೀನು ಕುಣಿಯುತಿವೆನೆಲದ ಮೇಲೆ ಗಂಡಸರು ಹೆಂಗಸರು ಕುಣಿಯುತಾರೆನನ್ನ ಡೋಲಿನ ತಾಲಕ್ಕೆ
ಆದರೆ, ಮರಗಳ ಹಿಂದೆ ನಿಂತುನಡುವಲ್ಲಿ ಎಲೆಗಳ ಧರಿಸಿಅವಳು ಮುಗುಳ್ನಕ್ಕಳಷ್ಟೇ, ತಲೆಯಾಡಿಸಿ
ಆದರೂ, ನನ್ನ ಡೋಲು ಬಡಿಯುತ್ತಿತ್ತುಗಾಳಿ ತರಂಗಗಳೆಬ್ಬಿಸಿ, ತನ್ನ ತೀವ್ರಗತಿಯಿಂದ, ಜೀವಿತರನ್ನು, ಮೃತರನ್ನುತಮ್ಮ ನೆರಳುಗಳೊಂದಿಗೆ ಹಾಡಿ ಕುಣಿಯಲುಉದ್ದೀಪಿಸುತ್ತ
ಆದರೆ, ಮರಗಳ ಹಿಂದೆ ನಿಂತುನಡುವಲ್ಲಿ ಎಲೆಗಳ ಧರಿಸಿಅವಳು ಮುಗುಳ್ನಕ್ಕಳಷ್ಟೇ, ತಲೆಯಾಡಿಸಿ
ಆಗ ಡೋಲು…
ವಿಧ: Basic page
September 02, 2006
ಸನ್ಯಾಸಿಗೆ ತೆಕ್ಕೆಬಿದ್ದರೆ ಮೈಎಲ್ಲ ಬೂದಿ
ಸನ್ಯಾಸಿಯ ಮದುವೆಗೆ ಜುಟ್ಟು-ಜನಿವಾರದಿಂದ ಸಿದ್ಧತೆ.
ಸಗಣಿಯಲ್ಲಿ ಸಾವಿರ ಹುಳ ಇದ್ದರೂ ಸಂಜೆ ಹೊತ್ತಿಗೆ ಮರಣ
ಸಟೆಗಾರನ ಮಾತು ದಿಟವಾದರೂ ನಂಬರು.
ಲಲಾಟದಲ್ಲಿಲ್ಲದ್ದು ಲಾಗ ಹಾಕಿದರೂ ಸಿಕ್ಕದು.
ಮೊದಲು ಹೊಟ್ಟೆಪ್ಪ , ಆಮೇಲೆ ಹೊಟ್ಟೆಪ್ಪ.
ಮುನ್ನೋಡಿ ಉಣ್ಣೋ ಮೂಳ ಎಂದರೆ , ಯಾವ ಹೊಲದ ಜೋಳ ಎಂದನಂತೆ.
ಮೀಸೆ ಬಂದವನಿಗೆ ದೇಶ ಕಾಣದು , ಎದೆ ಬಂದೋಳಿಗೆ ನೆಲ ಕಾಣದು.
ಮನೆ ದೀಪವೆಂದು ಮುದ್ದಿಡಬಹುದೆ?
ಮನೆ ತಿನ್ನೋರಿಗೆ ಕದ - ಹಪ್ಪಳ.
ಮಣ್ಣಿನ ದೇವರಿಗೆ…
ವಿಧ: ಬ್ಲಾಗ್ ಬರಹ
September 02, 2006
ಭಾಳ ದಿವಸದಿಂದ ಈ ಪುಸ್ತಕದ ಬಗ್ಗೆ ಬರೀಬೇಕು ಅಂದ್ಕೊಂಡಿದ್ದೆ. ಈಗ ವ್ಯಾಳ್ಯಾ ಕೂಡಿ ಬಂತು.
ಈ ಪುಸ್ತಕದ ಬಗ್ಗೆ ಹೀಂಗ ಬರದರs ಛಲೋದು. ಯಾಕಂದರ 'ಇಂಗ್ಲೀಷಿನ್ಯಾಗ BONEY M ಗ್ರುಪ್ಪಿಂದು ಒಂದು ಹಾಡದ. ಸಂದರ್ಭಾ ಹಿಂಗ ಅದ . ಕೈದಿಗಳನ್ನ ಒಂದು ದೇಶದಿಂದ ಇನ್ನೊಂದು ದೇಶಕ್ಕ ತಗೊಂಡು ಹೊಂಟಿರತಾರ. ಒಂದು ಕಡೆ ವಿಶ್ರಾಂತಿ ಅಂತ ನೆಳ್ಳಾಗ ಕೂತ್ಕೋತಾರ . ಕೈದಿಗಳಿಗೆ ಅವರನ್ನ ಹಿಡಕೊಂಡು ಹೊಂಟಾವರು ತಮ್ಮ ಮನರಂಜನಿಗಂತ 'ನಿಮ್ಮ ದೇವರ ಹಾಡು ಹಾಡ್ರಿ' ಅಂತ ಹೇಳ್ತಾರ . ಆವಾಗ ಈ ಕೈದಿಗಳಿಗೆ ಅನಿಸೋದು…
ವಿಧ: ಚರ್ಚೆಯ ವಿಷಯ
September 02, 2006
ನನ್ನ ಮೊದಲ ಪ್ರಯತ್ನ ಒಮ್ಮೆ ನೋಡಿ...ಒಂದಷ್ಟು ಕವನ,ಒಂದಷ್ಟು ಲೇಖನ...ಮತ್ತೊಂದಷ್ಟು ಕಾಲಹರಣ.....E-ಯುಗದ ಪರಿಚಯ
http://eyugada-parichaya.blogspot.com/
ವಿಧ: Basic page
September 01, 2006
ಹೆಲ್ಸಿಂಕಿಯಲ್ಲಿ ತೊಂಬತ್ತು ದಿನವಿದ್ದೆ. ಯುನೆಸ್ಕೋ-ಆಶ್‌ಬರ್ಗ್ ಸ್ಕಾಲರ್‌ಷಿಪ್‌ನ ನಿಯಮವದು. ಅದನ್ನು ಮುರಿಯದವರು ಇಲ್ಲವೇ ಇಲ್ಲವೆಂದು ಕೇಳಿ ತಿಳಿದಿದ್ದೆ. ನನ್ನ 'ಕೇರ್ ಟೇಕರ್' ಮಿನ್ನ ಹೆನ್ರಿಕ್‌ಸನ್ ಇಪ್ಪತ್ತೊಂಬತ್ತು ವರ್ಷದ ಚುರುಕು ಕಲಾವಿದೆ. ಅಲ್ಲಿನ ಕಲಾಶಾಲೆಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಳು. "ಬೇಜಾರಾಗುತ್ತಿದೆಯ? ಊರಿಗೆ ಹೋಗಬೇಕೆನಿಸುತ್ತಿದೆಯ? ಒಂಟಿ ಎನಿಸುತ್ತಿದೆಯ?" ಎಂದೆಲ್ಲ ಒಮ್ಮೆ ಕೇಳಿದಳು. ಪಾಪ ಎಂದುಕೊಂಡು ಬಿಯರ್ ಕೊಡಿಸಿದೆ. "ಹೀಗೆ ಹೇಳಿ ಊರಿನ ನೆನಪು…