ಎಲ್ಲ ಪುಟಗಳು

ಲೇಖಕರು: Kamalakar
ವಿಧ: ಬ್ಲಾಗ್ ಬರಹ
August 27, 2006
ಬಸವಣ್ಣನವರ ವಚನ:ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆಅಂಬುಜಕೆ ಭಾನುವಿನ ಉದಯದ ಚಿಂತೆಭ್ರಮರಂಗೆ ಪರಿಮಳದ ಬಂಡುಂಬ ಚಿಂತೆಎನಗೆ ನಮ್ಮ ಕೂಡಲಸಂಗಮದೇವನ ನೆನವುದೆ ಚಿಂತೆ(ಸ. ಸ. ಮಾಳವಾಡ, ಬಸವಣ್ಣನವರ ವಚನ ಸಂಗ್ರಹ, ೧೯೯೬) ಬಸವಣ್ಣನವರ ಈ ಪ್ರಖ್ಯಾತ ವಚನ ಓದುವಾಗ ಏಳುವ ಕೆಲವು ಸಮಸ್ಯಗಳನ್ನು ಚರ್ಚಿಸುವುದು ಇಲ್ಲಿ ನನ್ನ ಉದ್ದೇಶ. ಚೆ. ಎ. ಕವಲಿಯವರ ಕನ್ನಡ ಕಸ್ತೂರಿ ಕೋಶದ ಪ್ರಕಾರ ಚಕೋರವೆಂದರೆ ಬೆಳದಿಂಗಳನ್ನು ಸೇವಿಸಿ ಬದುಕುವ ಕಲ್ಪಿತ ಪಕ್ಷಿ. ಅಂಬುಜವೆಂದರೆ ಕಮಲ. ಬಂಡು ಎಂದರೆ ಮಧು. ಶೆಲ್ಡನ್…
ಲೇಖಕರು: venkatesh
ವಿಧ: Basic page
August 27, 2006
ಇಂದು ವರಸಿದ್ಧಿವಿನಾಯಕನ ವ್ರತ : ತಾ.೨೭-೮-೨೦೦೬ ಭಾನುವಾರ. ಭಾದ್ರಪದ ಶುಕ್ಲ ಚತುರ್ಥೀ ಮಧ್ಯಾಹ್ನ ವ್ಯಾಪಿನಿ ಮತ್ತು ಯಾಮದ್ವಯ ವ್ಯಾಪಿನಿಯಿರುವ ದಿನ ಆಚರಿಸತಕ್ಕ ವ್ರತ. ಬೆಳ್ಳಿ ಅಥವ ಮಣ್ಣಿನಿಂದ ಮಾಡಿದ ಗಣಪತಿಯನ್ನು ಪ್ರಾಣಪ್ರತಿಷ್ಠಾಪನಾ ಪುರಸ್ಸರ ಪೂಜಿಸಿ ಮೊದಕವನ್ನು ನೈವೇದ್ಯಮಾಡಿ , ಸ್ಯಮಂತಕೊಪಾಖ್ಯಾನ ಕಥೆಯನ್ನು ಶ್ರವಣಮಾಡಬೇಕು. ಸಕಲ ಕಾರ್ಯಗಳೂ ನಿರ್ವಿಘ್ನವಾಗಿ ನೆರವೇರಲೂ, ವಿದ್ಯಾಪ್ರಾಪ್ತಿಗಾಗಿಯೂ, ಇಷ್ಟಾರ್ಥ ಸಿದ್ಧಿಗೂ ಈ ವ್ರತ ಪ್ರಸಿದ್ಧವಾಗಿದೆ. ಕರ್ನಾಟಕದಲ್ಲಿ ಸಾಮಾನ್ಯವಾಗಿ…
ಲೇಖಕರು: ರಘುನಂದನ
ವಿಧ: Basic page
August 26, 2006
ಭಾಷೆಯ ಪ್ರಯೋಗವು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನರೂಪ ತಾಳುವುದನ್ನು ಎಲ್ಲರೂ ಗಮನಿಸಿಯೇ ಇದ್ದೇವೆ. ಹೀಗೆ ಆಯಾ ಪ್ರಾಂತ್ಯದಲ್ಲಿಯೂ ಮತ್ತೊಂದಿಷ್ಟು ಒಳವೈವಿಧ್ಯಗಳನ್ನು ಕಾಣಲಿಕ್ಕೆ ಸಾಧ್ಯ. ಜನಾಂಗೀಯ ಪ್ರಭೇದ ಎಂದರೂ ಆದೀತೇನೊ. ಕೆಲ ವರ್ಷಗಳ ಹಿಂದಿನವರೆಗೂ ಕೊಪ್ಪಳದಲ್ಲಿ ಸ್ಥಳೀಯ ಸಾರಿಗೆಗೆ ಕುದುರೆಗಾಡಿಗಳ ಉಪಯೋಗ ಹೆಚ್ಚು ರೂಢಿಯಲ್ಲಿತ್ತು. (ಈಗಲೂ ಕುದುರೆ ಗಾಡಿಗಳು ಇವೆಯಾದರೂ ಆಟೋರಿಕ್ಷಾಗಳ ಪ್ರಾಬಲ್ಯ ಜಾಸ್ತಿ) ಟಾಂಗಾ ಎಂದು ಇವುಗಳನ್ನು ಕರೆಯುತ್ತಾರೆ. ಇವುಗಳ ಮಾಲಿಕರು ಶೇಕಡಾ ೯೯…
ಲೇಖಕರು: Kamalakar
ವಿಧ: ಬ್ಲಾಗ್ ಬರಹ
August 26, 2006
ಗೆಳೆಯ ಆನಂದ ಥಾಕೂರ ಹಿಂದುಸ್ತಾನಿ ಗಾಯಕ ಮುಂಬೈಯಲ್ಲಿ. ಹಾಗೂ ಕವಿ, ಇಂಗ್ಲೀಷನಲ್ಲಿ ಬರೆಯುತ್ತಾನೆ. Waking in December ಅವನ ಮೊದಲ ಕವನ ಸಂಕಲನ. ಕಾವ್ಯ ಮತ್ತು ಶಬ್ದಮಳ್ಳರು ಒಂದು ನಮೂನೆ ಜನ. ಇವನೊಬ್ಬ. ನನಗಿಷ್ಟವಾದ ಅವನ ಗಝಲ್ ಎಂಬ ಕವನದ ಅನುವಾದ ಇಲ್ಲಿದೆ. ನನ್ನ ಕರಡು ಅನುವಾದಗಳನ್ನು ಈಗಾಗಲೇ ನಿಮ್ಮ ಮೇಲೆ ಹೇರಿದ್ದೇನೆ. ಸೈರಿಸಿಕೊಂಡು ಓದಿ ಬಿಡಿ. ಸುಮ್ಮನಿರಲೇ ಪ್ರಭು ಯಾ ಕರೆಯಲೇ ನಾನು ನಿನ್ನ?ತಡೆದುಕೊಳ್ಳಲೇ ನನ್ನನ್ನ ಯಾ ಮಾಡಲೇ ಜಗಳವನ್ನ? ಮಡಿದ ಗುರು ಮರಳಿದ, ಮಾತಲ್ಲಿ ಅವನ…
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
August 25, 2006
ಹಿಂದೊಮ್ಮೆ ಕರ್ಮವೀರ ವಾರಪತ್ರಿಕೆಯಾಗಿ ಹೊರಬರುತ್ತಿತ್ತು. ಒಮ್ಮಿಂದೊಮ್ಮೆಲೇ ಅದರ ಹೊರ ಪದರಲ್ಲಿ ಸತ್ತ ಕರುವಿನ ಚಿತ್ರವಿದ್ದು, ಇನ್ನು ಮುಂದೆ ಈ ಪತ್ರಿಕೆಯ ಹೊರಬರುವುದಿಲ್ಲವೆಂಬ ಅಂಕಣ ಪ್ರಕಟವಾಗಿತ್ತು. ಇಂದು ಆ ಚಿತ್ರ ನನ್ನ ಕಣ್ಮುಂದೆ ಬರುತ್ತಿದೆ. ಸೆಪ್ಟೆಂಬರ್ ೪ ರಂದು ನನ್ನ ಕೂಸು ಆಶ್ರಯಕ್ಕೆ ವಾರ್ಷಿಕೊತ್ಸವವನ್ನು ಆಚರಿಸುವುದೋ ಅಥವಾ ವರ್ಷಾಬ್ಧಿಕವನ್ನೋ ಎಂಬ ಜಿಜ್ಞಾಸೆ ೨-೩ ತಿಂಗಳುಗಳಿಂದ ಕಾಡುತ್ತಿದೆ. ಈ ಮಧ್ಯೆ ತಾಣವನ್ನು ನಡೆಸುವ, ನಡೆಸುವಾಗ ಎದುರಿಸುತ್ತಿರುವ ತರಲೆ…
ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
August 25, 2006
ಈ ಕೆಳಗಿನ ಇಚಾರವನ್ನು, ದಯಮಾಡಿ ಗಮನವಿಟ್ಟು ಓದಿರಿ, ಇದರಲ್ಲಿ ತಪ್ಪು ಕಂಡರೆ, ತಿಳಿಸಿ. ಕನ್ನಡದ ನಿಜ ಅಕ್ಕರಪಟ್ಟಿ :- ದನಿಗಳು :- ಅ,ಆ,ಇ,ಈ,ಉ,ಊ,ಎ,ಏ,ಐ,ಒ,ಓ,ಔ,ಅಂ ಬೆಂಜನಗಳು :- ಕ, ಗ, ಙ ಚ, ಜ, ಞ ಟ, ಡ, ಣ ತ, ದ, ನ ಪ, ಬ, ಮ ಯ, ರ, ಲ, ವ, ಸ, ಹ, ಳ ಕಟ್ಟಳೆಗಳು ಒತ್ತಕ್ಕರ ಕಟ್ಟಳೆ :- ಒತ್ತು+ಅಕ್ಕರ ( ಒತ್ತು ಅಕ್ಷರ ). ಅಂದರೆ ಕನ್ನಡದಲ್ಲಿ ಒಂದು ಅಕ್ಕರವನ್ನು ಒತ್ತಿ ಹೇಳುವದನ್ನು, ಬರೆಯುವಾಗ, ಆ ಅಕ್ಕರದ ಕೆಳಗೆ ಅದೇ ಅಕ್ಕರವನ್ನು ಬರೆಯಲಾಗುತ್ತದೆ. ಉದಾ: ಕಲ್ಲು, ಮುಳ್ಳು, ಸುಳ್ಳು,…
ಲೇಖಕರು: Kamalakar
ವಿಧ: ಬ್ಲಾಗ್ ಬರಹ
August 25, 2006
 ಮರಾಠಿ ಹಾಗೂ ಇಂಗ್ಲೀಷಲ್ಲಿ ಬರೆಯುತ್ತಿದ್ದ ಅರುಣ್ ಕೊಲ್ಹಾಟ್ಕರ್ ಶಬ್ದಪ್ರಯೋಗದಲ್ಲಿ ಎಷ್ಟು ಜಿಪುಣರೋ ಅಷ್ಟೇ ಜಾಣರು. ಅವರ ಹಲವು ಕವನಗಳು ಮಿನಿಮಲಿಸ್ಟ ಶೈಲಿಯಲ್ಲಿವೆ. ಸಣ್ಣಪುಟ್ಟ ವಸ್ತು ವಿಷಯವಾಗಿ ಬಂದು ಅವರ ಕವನಗಳಲ್ಲಿ ಶಬ್ದಗುಣವಾಗಿ ಕಾಣುತ್ತವೆ. ಇಲ್ಲಿ ಅವರ 'ದ ಬಟರ್ ಫ್ಲೈ' ಎಂಬ ಕವನವನ್ನು ಅನುವಾದಿಸಿದ್ದೇನೆ.  ಚಿಟ್ಟೆ ಇದರ ಹಿಂದುಗಡೆ ಕತೆಯಿಲ್ಲ.ಕ್ಷಣದಂತಿದು ಸೀಳಿಕೊಂಡಿದೆ.ಇದು ತನ್ನೊಳಗೆ ತಾನು ಸಂಧಿಸಿದೆ. ಇದಕ್ಕೆ ನಾಳೆಯಿಲ್ಲಯಾವ ನಿನ್ನೆಗೂ ಇದನ್ನು ಚುಚ್ಚಿಸಿಟ್ಟಿಲ್ಲಇದು…
ಲೇಖಕರು: vijayaraghavan
ವಿಧ: Basic page
August 24, 2006
ಜನವರಿ ಬಂತೆಂದರೆ ಯಾರು ಯಾರೋ ಡೈರಿ ತಂದು ಕೊಡುತ್ತಿದ್ದರು. ಅದರಲ್ಲಿ ಜಾಸ್ತಿ ಪುಟಗಳು, ಒಂದು ದಿನಕ್ಕೆ ಒಂದು ಪುಟ ಇರುವಂಥವು ಆಯ್ದು ಒಂದೋ ಎರಡೋ ನಾನು ಇಟ್ಟುಕೊಂಡು ಉಳಿದಿದ್ದನ್ನ ಯಾರು ಕೇಳಿದರೆ ಅವರಿಗೆ ಕೊಟ್ಟು ಬಿಡುತ್ತಿದ್ದೆ. ಸಾಮಾನ್ಯವಾಗಿ ನಾನು ಉಳಿಸಿಕೊಂಡವು ಕವಿತೆ ಬರೆಯಲು ಅಥವಾ ಮನಸ್ಸಿಗೆ ಹಿಂಸೆ ತಂದ ಘಟನೆಗಳನ್ನು ಕುರಿತು ಟಿಪ್ಪಣಿ ಬರೆಯಲು ಬಳಕೆಗೆ ಬರುತ್ತಿದ್ದವು. ಥಟ್ಟನೆ ಹೊಳೆದ ಒಂದೆರಡು ಸಾಲುಗಳು ಅಲ್ಲಿ ದಾಖಲಾಗುತ್ತಿದ್ದವು. ಕವಿತೆಯಾಗುವ ಭಾಗ್ಯವಿದ್ದವು ಆಗುತ್ತಿದ್ದವು…
ಲೇಖಕರು: Kamalakar
ವಿಧ: ಬ್ಲಾಗ್ ಬರಹ
August 24, 2006
 ಭಾರತದಲ್ಲಿ ಇಂಗ್ಲೀಷಿನಲ್ಲಿ ಬರೆಯುವ ಕವಿಗಳಲ್ಲಿ ನನಗೆ ಮೆಚ್ಚುಗೆಯಾಗುವ ಕವಿಗಳಲ್ಲಿ ಅರುಣ್ ಕೊಲ್ಹಾಟ್ಕರ್ ಒಬ್ಬರು. ಅವರ ಕವನಗಳಲ್ಲಿ ಸಮಕಾಲೀನ ಪ್ರಜ್ನೆ ಪರಂಪರೆಯೊಂದಿಗೆ ಮುಖಾಮುಖಿಯಾಗಿ ಅದನ್ನು ತೀವ್ರ ಪರೀಕ್ಷೆಗೆ ಒಡ್ಡುತ್ತಲೇ ಆಧುನಿಕ ಮನಸ್ಸನ್ನೂ ಕೂಡ ಪರೀಕ್ಷಿಸುವ ಹಾಗೂ ಕಾವ್ಯ ಮುಖೇನ ಅಂದನ್ನು ಇಂದಲ್ಲಿ ಒಂದಾಗಿಸಿಕೊಳ್ಳುತ್ತದೆ. ಹರಿತವಾದ ಕೊಂಚವೂ ಕೊಬ್ಬಿರದ ಸಪೂರ ದೇಹದ ಕವನಗಳನ್ನು ಬರೆದಿದ್ದಾರೆ. ಅವರ ಜೆಜುರಿ ಎಂಬ ಕವನಗುಚ್ಛವು ಬಹಳ ಹೊಗಳಿಕೆಯನ್ನೂ, ತೆಗಳಿಕೆಯನ್ನೂ ಗಳಿಸಿತು.…
ಲೇಖಕರು: hisushrutha
ವಿಧ: Basic page
August 24, 2006
ಚೌತಿ ಹತ್ತಿರಾಗುತ್ತಿದೆ. ಶಾಪಿಂಗ್ ಮಾಲ್‌ಗಳಲ್ಲಿ, ಸಣ್ಣಪುಟ್ಟ ಅಂಗಡಿಗಳಲ್ಲಿ, ಕೊನೆಗೆ ಫೂಟ್‌ಪಾತ್‌ನ ಮೇಲೂ ಸಾಲಾಗಿ ಇರಿಸಿರುವ ಗಣೇಶನ ಮೂರುತಿಗಳು! ದಾರಿಯ ಮೇಲೆ ಹೋಗುವ ಬರುವ ಮಂದಿಯೆಲ್ಲಾ ನೋಡಿಯೇ ನೋಡುತ್ತಾರೆ ಇವನ್ನು. ದೊಡ್ಡ ದೊಡ್ಡ ಮೂರ್ತಿಗಳು ಹಿಂದಿನ ಸಾಲಿನಲ್ಲಿ; ಸಣ್ಣವು ಮುಂದೆ. ಸಡನ್ನಾಗಿ ನೋಡಿದರೆ, ಶಾಲೆಯಲ್ಲಿ ಪಾಠ ಕೇಳಲು ಕುಳಿತ ಮಕ್ಕಳಂತೆ ಭಾಸವಾಗುತ್ತದೆ. ಅಥವಾ ಗ್ರೂಪ್ ಫೋಟೋ ತೆಗೆಯಲು ಕೂರಿಸಿದಂತೆ. ಖರೀದಿ ಮಾಡಲಿಕ್ಕೆಂದು ಹೋದ ಇವನು ಮೂಕವಿಸ್ಮಿತನಾಗಿ ನೋಡುತ್ತಾ…