ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 10, 2006
ನಿಮಗೆಲ್ಲ ಗೊತ್ತಿರುವಂತೆ ನಾನು ಈಗ ಕನ್ನಡಸಾಹಿತ್ಯ ಡಾಟ್ ಕಾಂ ನಲ್ಲಿರುವ ಕನ್ನಡ ಲೇಖನಗಳನ್ನು ತಿದ್ದುತ್ತಿದ್ದೇನೆ. ಜತೆಗೆ ಅಲ್ಲಿ ದೊರೆತ ಸರಿಯಾದ/ಬಳಕೆಯಲ್ಲಿರುವ ಕನ್ನಡಪದಗಳನ್ನು ಶಬ್ದಕೋಶಕ್ಕೆ ಸೇರಿಸುತ್ತಿದ್ದೇನೆ. ಸಂಪದದಲ್ಲಿ ನನ್ನ ಭಾಗವಹಿಸುವಿಕೆ ಸ್ವಲ್ಪ ಕಡಿಮೆಯಾಗಿರುವದಕ್ಕೆ ಇದು ಒಂದು ಕಾರಣ. ನುಡಿ ಸಾಫ್ಟ್‍ವೇರು ಸುಮಾರು ೪೦,೦೦೦ ಶಬ್ದಗಳ ಸಂಗ್ರಹವನ್ನು ಕೊಡುತ್ತದೆ . ಜತೆಗೆ ನಾವು ಇನ್ನೊಂದು ಶಬ್ದಕೋಶವನ್ನು ಉಪಯೋಗಿಸುವ ಸೌಲಭ್ಯವನ್ನು ಕೊಡುತ್ತದೆ. ಈ ಎರಡನೆ ಸಂಗ್ರಹಕ್ಕೇ ಈಗ…
ಲೇಖಕರು: ahoratra
ವಿಧ: Basic page
June 09, 2006
ಸುಂದರ ಮಾವಿನಲ್ಲಿ ಸವಿಯನಿಟ್ಟ ದೇವನೆಷ್ಟು ಸುಂದರ. ಇವನ ರುಚಿಯು ಮಾವಿಗಿಂತ ಬಹಳಪಟ್ಟು ಸುಮಧುರ.//ಪ//. ಪಾಕ ಶಾಖಕಾಗಿ ನಮಗೆ ಅಗ್ನಿಯನ್ನು ಉರಿಸಿದ, ದಾರಿ ದೀಪವಾಗಲೆಂದು ಬೆಳದಿಂಗಳ ಕಳುಹಿದ, ಸೂರ್ಯನಲ್ಲು ತನ್ನ ಅಂಶ ತುಂಬಿ ನಮ್ಮ ಬೆಳಗಿದ, ಇವನ ಹೊಳಪು ಅಗ್ನಿ ಚಂದ್ರ ಸೂರ್ಯರನ್ನು ಮೀರಿದೆ.//೧//. ಹೂವಿನಲ್ಲಿ ಅಂದವಿಟ್ಟ ಚಂದ ಚಮತ್ಕಾರಿಯು, ಹಾವಿನಲ್ಲಿ…
ಲೇಖಕರು: nmshyam
ವಿಧ: ಚರ್ಚೆಯ ವಿಷಯ
June 09, 2006
ನೀವು ಇದನ್ನು ಗಮನಿಸಿರುತ್ತೀರೋ ಇಲ್ಲವೋ ಗೊತ್ತಿಲ್ಲ. office ಗಳಲ್ಲಿ, ಅದರಲ್ಲೂ cosmopolitan ಆಗುತ್ತಿರುವ ಬೆಂಗಳೂರಿನಲ್ಲಂತೂ ಕನ್ನಡಕ್ಕೆ ಪ್ರಾಧಾನ್ಯತೆ ದೊರಕುತ್ತಿಲ್ಲ. ಮೊದಲನೆಯದಾಗಿ, ಇದು ಬೇರೆ ಯಾವುದೇ ಭಾಷೆಯ ಬಗ್ಗೆ ಹೇಳುವುದಕ್ಕಲ್ಲ. ಏನಿದ್ದರೂ ಕನ್ನಡ ಜನರ ಬಗ್ಗೆ. ನಾನು ಕೆಲಸ ಮಾಡುತ್ತಿರುವಲ್ಲಿ, ಭಾರತದ ಎಲ್ಲಾ ಕಡೆಗಳಿಂದ ಬಂದವರೂ ಇದ್ದಾರೆ. ಪಕ್ಕದ ಆಂಧ್ರ, ತಮಿಳುನಾಡಿನವರಿಂದ ದಿಲ್ಲಿಯವರೆಗೂ, ಕೇರಳದವರೆಗೂ ಇದ್ದಾರೆ. ನಾನು ನೋಡಿದ ಹಾಗೆ, ಕೆಲಸಕ್ಕೆ ಸೇರುವಾಗ ಸಾಮಾನ್ಯವಾಗಿ…
ಲೇಖಕರು: muralihr
ವಿಧ: Basic page
June 09, 2006
ಕರ್ಮಯೋಗ - ರಬೀ೦ದ್ರ ನಾಥ ಠಾಗೂರ್ - ಅನುವಾದ ಶ೦ಕರಾನ೦ದ ಸರಸ್ವತಿ (ಪುಸ್ತಕ ನಿಭ೦ಧಮಾಲ - ೧ , ಸಾಹಿತ್ಯ ಅಕಾಡಮಿ ಪ್ರಕಟನೆ) ******* ಈ ಪ್ರಬ೦ಧವನ್ನು ಓದಿ ನಿಮ್ಮೊಡನೆ ಹ೦ಚಿ ಕೊಳ್ಳುವ ಬಯಕೆಯಾಯಿತು. ಈ ಪುಸ್ತಕವನ್ನು ಕೊ೦ಡು ಓದಿ (ಬೆಲೆ - 120 /- ಮಾತ್ರ)   ಜಗತ್ತಿನಲ್ಲಿ ಆನ೦ದ ಯಜ್ನಕ್ಕೆ ಅವನ ಕರೆಯನ್ನು ನಾವು ನಮ್ಮ ಬಾಳುವೆಯ ಸ೦ಗಡ ಸ೦ಗಡಲೇ ಡೆದಿದ್ದೇವಲ್ಲ ಅದನ್ನು ಅ೦ಗೀಕರಿಸಲು ನಮ್ಮಲ್ಲಿ ಒಬ್ಬೊಬ್ಬರು ಇಚ್ಛಿಸುವುದಿಲ್ಲಾ. ಅವರು ವಿಜ್ನಾನ ಶಾಸ್ತ್ರವನ್ನು ಓದಿದ್ದಾರೆ. ಅವರು…
ಲೇಖಕರು: venkatesh
ವಿಧ: Basic page
June 09, 2006
ವಿಶ್ವದ ಮಿಲಿಯಗಟ್ಟಲೆ ಕ್ರೀಡಾಪ್ರೇಮಿಗಳು ಕ್ಷಣಗಣತಿ ಮಾಡಿ ಕಾಯುತ್ತಿರುವ, "೧೮ ನೆ ವಿಶ್ವಫುಟ್ ಬಾಲ್ ಕಪ್ ಸಮರ" ಇಂದು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ ೯-೩೦ ಕ್ಕೆ ಸರಿಯಾಗಿ ತೆರೆ ಸರಿದು ಪ್ರದರ್ಶನ ಕಾಣಲಿದೆ ! ಮೊಟ್ಟಮೊದಲನೆಯದಾಗಿ 'ಎ' ಗ್ರೂಪಿನ ತಂಡಗಳು ಸೆಣಸಾಟಕ್ಕೆ ತಯಾರಿ ನಡೆಸಿವೆ.ಅತಿಥೇಯ ಜರ್ಮನಿ ವಿರುದ್ಧ ಕೋಸ್ಟರಿಕ ತಂಡ ಆಡುತ್ತಿದೆ.ಇದು ಮ್ಯುನಿಕ್ ನಲ್ಲಿ ನಡೆಯುತ್ತದೆ.'ಎ" ಗ್ರೂಪಿನ ಇನ್ನೊಂದು ತಂಡ ರಾತ್ರಿ ೧೨-೨೦ ಕ್ಕೆ ಪೋಲೆಂಡ್ ವಿರುದ್ಧ ಇಕ್ವೆಡಾರ್ ದೇಶದ ತಂಡ ಸೆಣೆಸಲಿದೆ…
ಲೇಖಕರು: nmshyam
ವಿಧ: ಚರ್ಚೆಯ ವಿಷಯ
June 08, 2006
ಈ ಪ್ರಶ್ನೆಯನ್ನು feedback section ನಲ್ಲಿ ಕೇಳಬೇಕೆಂದುಕೊಂಡೆ. ಆದರೆ, ಅದೇ ಪ್ರಶ್ನೆಯನ್ನು ಇಲ್ಲಿ ಕೇಳಿದರೆ ಎಲ್ಲ ಸದಸ್ಯರೂ ಭಾಗವಹಿಸುತ್ತಾರೇನೋ ಎಂದುಕೊಂಡು ಇಲ್ಲಿಡುತ್ತಿದ್ದೇನೆ. ಯಾವಾಗಲೂ ಸಂಪದ.ಕಾಮ್ ಗೆ ಬಂದು ಬ್ಲಾಗ್ ಅಥವಾ ಫೋರಮ್ ಗೆ ಉತ್ತರಿಸುವುದು ಈಗಿರುವ ವಿಧಾನ. ಆದರೆ, ನನಗನ್ನಿಸುವಂತೆ ಸಂಪದದ ಹೆಮ್ಮೆ ಎನಿಸುವಂತೆ ಇರುವ ೧೦೦೦ ಸದಸ್ಯರೆಲ್ಲರಿಗೂ ಮೈಲ್ ಫೆಸಿಲಿಟಿ ಇದ್ದರೆ ಹಾಗೂ ಸಂಪದ.ಕಾಮ್ ಗೆ ಬರುವ ಬದಲು ಮೈಲ್ ಮಾಡುವ ವಿಧಾನ ಒಂದಿದ್ದರೆ, ಇಲ್ಲಿ ಪ್ರಕಟವಾಗುವ ಲೇಖನಗಳು…
ಲೇಖಕರು: ahoratra
ವಿಧ: ಬ್ಲಾಗ್ ಬರಹ
June 08, 2006
ಕಂದಮ್ಮ ಅಳಬೇಡ ಕಂದಮ್ಮನಗುನಗುತಾ ಮಲಗಮ್ಮಕಣ್ಣ ಮುಚ್ಚು ಕಣ್ಣಮ್ಮಸುಖದ ಸ್ವಪ್ನ ಕಾಣಮ್ಮಚಂದಮಾಮ ಬರುವನುತಾರೆಗಳ ತೋರುವನುತಾರೆಗಳ ತೋಟದಲಿಬಾಲಕೃಷ್ಣನಿರುವನುನಿನ್ನೊಡನೆ ಆಡುವನುನಿನ್ನ ಹಾಡ ಕೇಳುವನುಮಾಧವನು ಹತ್ತಿರಮುರಳಿಗಾನ ಸುಮಧುರಆಡಿನಲಿದ ನಂತರಆಗುವುದು ಎಚ್ಚರ. ಅಹೋರಾತ್ರ.
ಲೇಖಕರು: nmshyam
ವಿಧ: ಬ್ಲಾಗ್ ಬರಹ
June 08, 2006
ಓದುವವರಿಗೆ ನಮಸ್ಕಾರ, ನಾನು ಸಂಪದಕ್ಕೆ join ಆಗಿ ಬಹಳ ದಿನಗಳಾಯಿತು. ಆದ್ರೆ, ವೆಬ್ ಪೇಜ್ ನಲ್ಲಿ type ಮಾಡಕ್ಕೆ ಆಗ್ದೆ, ಇಷ್ತು ದಿನ ಕಾಯಬೇಕಾಯ್ತು. ಆದ್ರು, ಕನ್ನಡದಲ್ಲಿ ಬ್ಲಾಗ್ ಬರೆಯಕ್ಕೆ ತುಂಬ ಸಂತೋಷ ಆಗ್ತಾ ಇದೆ. ನಾನು ಬೆಂಗಳೂರಿನವನು. ಬರಹ software ನ, ತುಂಬಾ ಮೊದಲಿಂದಾನೂ ಉಪಯೋಗಿಸಿದ್ದೇನೆ. ಒಂದೆರಡು ಇನ್ಫರ್ಮೇಷನ್ ಕೊಟ್ಟು bye ಹೇಳ್ತೀನಿ. ಕನ್ನಡ ವಿಜಯ ಕರ್ನಾಟಕ ಓದಲು ಈ ಲಿಂಕ್ ಗೆ ಹೋಗಿ: http://vijaykarnatakaepaper.com/login.php ಕನ್ನಡ dictionary ನೋಡಲು…
ಲೇಖಕರು: hpn
ವಿಧ: Basic page
June 07, 2006
ಶೇಖರ್ ಪೂರ್ಣರವರು ತಮ್ಮ ಸಂಪಾದಕೀಯದಲ್ಲಿ ಸಂಪದವನ್ನು blogspotಗೆ ಹೋಲಿಸಿ 'ಸಂಪದದ ದೌರ್ಬಲ್ಯಗಳ' ಬಗ್ಗೆ ಬರೆದಿರುವುದು ನನಗೆ ಅಚ್ಚರಿ ತಂದಿತು. ಕೆಲವು ವಿಚಾರಗಳು: ೧) ಸಂಪದವನ್ನು blogspotಗೆ ಹೋಲಿಸುವುದು ತೀರ ತಮಾಷೆಯ ಸಂಗತಿ, ಅಜ-ಗಜ ಹೋಲಿಕೆಯಂತೆ! ನೂರಾರು [w:Data center|Data center]ಗಳನ್ನಿಟ್ಟುಕೊಂಡು ನಡೆಸಲಾಗುವ blogspot ಎಲ್ಲಿ, ಇನ್ನೂ [w:Shared web hosting service|shared hostingನ] ಕೆಲವೇ ಕೆಲವು MB ಜಾಗದಲ್ಲಿ ಕೊಳೆಯುತ್ತಿರುವ ಸಂಪದ ಎಲ್ಲಿ! ೨) ಸಂಪದದಲ್ಲಿ…
ಲೇಖಕರು: shreekant.mishrikoti
ವಿಧ: Basic page
June 07, 2006
( ದಾಸನೆಂತಾಗುವೆನು ಧರೆಯೊಳಗೆ ನಾನು ಎಂಬಂತೆ) ಲೆಂಕನೆಂತಾಗುವೆನು ಕನ್ನಡಕೆ ನಾನು ಮಂಕುಮತಿ ನಾನು ಲೇಶ ಯೋಗ್ಯತೆ ಕಾಣೆ ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ ಕನ್ನಡದ ಕಲ್ಲೆನಗೆ ದೇವ ಸಾಲಿಗ್ರಾಮ ಕನ್ನಡದ ನೀರೆನಗೆ ಪಾಪನಾಶಿನಿ ಗಂಗೆ ಕನ್ನಡದ ನುಡಿಯೆನಗೆ ಗಾಯತ್ರಿ ಮಂತ್ರ ಹಳೆಗನ್ನಡವ ನಾನು ಕುಳಿತು ಓದಿದ್ದಿಲ್ಲ ಹಳ್ಳಿಗರೊಡನಾಡಿ ಬೆಳೆದದ್ದೂ ಇಲ್ಲ ಬಲ್ಲೆ ಸ್ವಲ್ಪ ದಾಸರ ನುಡಿಯ ಪಂಪ ರನ್ನ ಕುಮಾರವ್ಯಾಸರನು ಅರಿಯೆ ದೇಶವನು ತಿರುಗಿಲ್ಲ ಕೋಶವನು ಓದಿಲ್ಲ ಗುಂಪು ಸೇರಿಸಲಾರೆ ರಂಪ ಮಾಡಿಸಲಾರೆ…