ವಿಧ: ಪುಸ್ತಕ ವಿಮರ್ಶೆ
October 11, 2006
ಕನ್ನಡಮ್ಮನ ಕನಕ ವರ್ಷದ ಕಾಣಿಕೆ
ಕನ್ನಡಮ್ಮನ ಕೂರ್ಮೆಯ ಕುವರ ಕುವರಿಯರಿಗೊಂದು ಕಳಕಳಿಯ ಕರೆ. ಕನ್ನಡ ಕಾವ್ಯಾಸಕ್ತ ಜ್ಞಾನಪಿಪಾಸುಗಳಿಗೊಂದು
ಮನಃಪೂರ್ವಕ ಮೊರೆ. ಕನ್ನಡಮ್ಮನ ಕನಕ ವರ್ಷದ ಈ ಕಲ್ಯಾಣಕಾರಿ ಕಾಲದಲ್ಲಿ ಕನ್ನಡದ ಆಧುನಿಕ ಅಶ್ವಿನಿ ದೇವತೆಗಳಂತಹ
ಕನ್ನಡ ಕಿಂಕರರೀರ್ವರ ಜ್ಞಾ ನ ಶಕ್ತಿ, ಇಚ್ಚಾ ಶಕ್ತಿ, ಕ್ರಿಯಾ ಶಕ್ತಿಗಳ ತ್ರಿವೇಣಿ ಸಂಗಮದ ಫಲಸ್ವರೂಪದ ಪ್ರತೀಕವಾಗಿ
ಪ್ರಕಾಶಿಸುತ್ತಿರುವುದೊಂದು ದಿವ್ಯಕೃತಿ. ಹಿಮಗಿರಿಯ ಗೌರಿಶಂಕರ ಶಿಖರವನ್ನೇರಿದ ತೇನ್ ಸಿಂಗ್ ಹಿಲರಿಯವರಂತಹ
ಆ…
ವಿಧ: Basic page
October 11, 2006
ಕನ್ನಡಮ್ಮನ ಕನಕ ವರ್ಷದ ಕಾಣಿಕೆ ಕನ್ನಡಮ್ಮನ ಕೂರ್ಮೆಯ ಕುವರ ಕುವರಿಯರಿಗೊಂದು ಕಳಕಳಿಯ ಕರೆ. ಕನ್ನಡ ಕಾವ್ಯಾಸಕ್ತ ಜ್ಞಾನಪಿಪಾಸುಗಳಿಗೊಂದು ಮನಃಪೂರ್ವಕ ಮೊರೆ. ಕನ್ನಡಮ್ಮನ ಕನಕ ವರ್ಷದ ಈ ಕಲ್ಯಾಣಕಾರಿ ಕಾಲದಲ್ಲಿ ಕನ್ನಡದ ಆಧುನಿಕ ಅಶ್ವಿನಿ ದೇವತೆಗಳಂತಹ ಕನ್ನಡ ಕಿಂಕರರೀರ್ವರ ಜ್ಞಾ ನ ಶಕ್ತಿ, ಇಚ್ಚಾ ಶಕ್ತಿ, ಕ್ರಿಯಾ ಶಕ್ತಿಗಳ ತ್ರಿವೇಣಿ ಸಂಗಮದ ಫಲಸ್ವರೂಪದ ಪ್ರತೀಕವಾಗಿ ಪ್ರಕಾಶಿಸುತ್ತಿರುವುದೊಂದು ದಿವ್ಯಕೃತಿ. ಹಿಮಗಿರಿಯ ಗೌರಿಶಂಕರ ಶಿಖರವನ್ನೇರಿದ ತೇನ್ ಸಿಂಗ್ ಹಿಲರಿಯವರಂತಹ ಆ…
ವಿಧ: ಬ್ಲಾಗ್ ಬರಹ
October 11, 2006
ಈವರೆಗೆ ನಾನು ಓದಿ ಮೆಚ್ಚಿಕೊಂಡು ಮತ್ತೆ ಮತ್ತೆ ಓದಬಯಸುವ ಕನ್ನಡ ಪುಸ್ತಕಗಳ ಪಟ್ಟಿಯನ್ನು ಇಲ್ಲಿ ಕೊಡುತ್ತಿದ್ದೇನೆ. ಓದಿನ ಸುಖಕ್ಕೆ ನಿಮಗೆ ಶಿಫಾರಸು ಮಾದುತ್ತಿದ್ದೇನೆ .ನೀವೂ ಓದಿ ನೋಡಿ.
ಬಿ.ಜಿ.ಎಲ್ ಸ್ವಾಮಿಯವರ
ಕಾಲೇಜುರಂಗ ,
ಕಾಲೇಜುತರಂಗ ,
ಪ್ರಾಧ್ಯಾಪಕನ ಪೀಠದಲ್ಲಿ ,
ತಮಿಳು ತಲೆಗಳ ನಡುವೆ ,
ಹಸಿರು ಹೊನ್ನು
ಜಯಂತ ಕಾಯ್ಕಿಣಿರವರ
ಬೊಗಸೆಯಲ್ಲಿ ಮಳೆ
ಬಣ್ಣದ ಕಾಲು
ತೂಫಾನ್ ಮೇಲ್
ಸೇವಂತಿ ಪ್ರಸಂಗ
ಜಯಂತ ಕಾಯ್ಕಿಣಿ ಕಥೆಗಳು (…
ವಿಧ: ಬ್ಲಾಗ್ ಬರಹ
October 10, 2006
ಸ್ವಲ್ಪ ದಿನಗಳಿಂದ ಬ್ಲಾಗನ್ನು ಬರೆಯಲಾಗಲಿಲ್ಲ ; ಅದಕ್ಕೆ ಒಂದು ಕಾರಣ ಎಂದರೆ 'ಸಂಪದ'ದಲ್ಲಿ ಕನ್ನಡ ಗಣಕತಂತ್ರಾಂಶಕ್ಕಾಗಿ ಅನುವಾದ ಮಾಡುತ್ತಿದ್ದೆ .
ನಾಡಿಗ್ ಅವರು ವೆಬ್ ಇಂಟರ್ಫೇಸ್ ಒದಗಿಸಿದ್ದು ಬಹಳ ಚೆನ್ನಾಗಿದೆ.
ನಾನು ಅನುವಾದ ಪ್ರಾರಂಭಿಸಿದ್ದು ಸೆಪ್ಟೆಂಬರ್ ಮೊದಲ ವಾರದಲ್ಲಿ . ಆಗ ಅಲ್ಲಿ ಇದ್ದ ಸುಮಾರು ೧೬,೦೦೦ ಶಬ್ದ/ವಾಕ್ಯ/ಪ್ಯಾರಾಗಳಲ್ಲಿ ಸುಮಾರು ೫,೦೦೦ ಅನುವಾದಗೊಂಡು ಅನುಮೋದಿಸಲ್ಪಟ್ಟಿದ್ದವು. ನಾನು ಸ್ವಲ್ಪ ಹಿಂಜರಿಯುತ್ತಲೇ ಆರಂಬಿಸಿದೆ. ನಂತರ ನನಗೆ ನಾಡಿಗ್ ಅವರು…
ವಿಧ: ಬ್ಲಾಗ್ ಬರಹ
October 10, 2006
ಹೌದು.
ಸಂಸತ್ ಭವನದ ಮೇಲೆ ದಾಳಿ ಮಾಡಿದ ಪ್ರಕರಣದಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಕುಖ್ಯಾತ ಕಾಶ್ಮೀರಿ ಉಗ್ರಗಾಮಿ ಅಫ್ಜಲ್ ಗುರೂಗೆ "ಗೌರವಯುತ" ಗಲ್ಲು ಶಿಕ್ಷೆ ಬೇಡ; ಆದರೆ ಆತನನ್ನು ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸಬೇಕು!
ವಿಶ್ವದಲ್ಲೇ ಎರಡನೇ ದೊಡ್ಡ ಪ್ರಜಾಪ್ರಭುತ್ವವಿರುವ, ಜನಸಂಖ್ಯೆಯಿರುವ, ನೂರಾರು ಬಾರಿ ಸಂವಿಧಾನ ತಿದ್ದುಪಡಿಯಾಗಿರುವ ನಮ್ಮ ದೇಶದಲ್ಲಿ ನ್ಯಾಯದ ಮನೆಯಿಂದ ರಾಜಾರೋಷವಾಗಿ ತಪ್ಪಿಸಿಕೊಳ್ಳಲು ಅಷ್ಟೇ ಸಹಸ್ರ ದಾರಿಗಳಿವೆ. ಎಂಥ ಭಯಾನಕ ಪಾತಕಗಳನ್ನು ಮಾಡಿದರೂ…
ವಿಧ: ಕಾರ್ಯಕ್ರಮ
October 10, 2006
ಕಾರ್ಯಕ್ರಮದ ವಿವರಗಳು:
ದಿನಾಂಕ: ೧೫-೧೦-೨೦೦೬.
ಸಮಯ: ಬೆಳಿಗ್ಗೆ ೧೦.೩೦.
ಸ್ಥಳ: ಸಮರಸ ಭವನ,
ಕರ್ನಾಟಕ ಸಂಘ,ಮೊಘಲ್ ಲೇನ್,
ಮಾಟುಂಗಾ(ಪ), ಮುಂಬಯಿ - ೪೦೦೦೧೬.
ಉಧ್ಘಾಟನೆ: ಶ್ರೀ ಜಯದೇವ ಹಟ್ಟಂಗಡಿ - ರಂಗ ತಜ್ಞರು
ಅಧ್ಯಕ್ಷತೆ: ಶ್ರೀ ಮನೋಹರ ಎಂ ಕೋರಿ - ಮುಂಬೈ ಕರ್ನಾಟಕ ಸಂಘದ ಅಧ್ಯಕ್ಷರು
ಮುಖ್ಯ ಅತಿಥಿ: ಶ್ರೀ ಸದಾನಂದ ಸುವರ್ಣ - ಚಲನಚಿತ್ರ ನಿರ್ದೇಶಕರು, ರಂಗ ತಜ್ಞರು
ಆಶಯ ಭಾಷಣ: ಶ್ರೀ ಶೇಖರ್‌ಪೂರ್ಣ, ಸಂಸ್ಥಾಪಕರು, ಕನ್ನಡಸಾಹಿತ್ಯ.ಕಾಂ
ಮಧ್ಯಾಹ್ನ ೧೨-೩೦ ರಿಂದ ೧-೩೦ ಗೋಷ್ಠಿ…
ವಿಧ: Basic page
October 09, 2006
ಮರುದಿನ ಅವರ ಎ೦.ಜಿ.ರಸ್ತೆಯಲ್ಲಿ ನಡೆದಾಡುವಾಗ ಒ೦ದು ದೃಶ್ಯ ನೋಡಿದೆ. ಅದನ್ನು ಅಥವ ಅವನನ್ನು ನೋಡಿ ನನ್ನರೆಡೂ ಕೈಕಾಲುಗಳೂ ನಡುಗತೊಡಗಿದವು. ಅಲ್ಲೊಬ್ಬ ಸಧೃಡ ಭಿಕ್ಷುಕ. ಆತ ಸಧೃಡನೆ೦ಬ ಕಾರಣಕ್ಕೆ ನಾನು ನಡುಗಲಿಲ್ಲ. ಆತನ ಬಾಯಲ್ಲೊ೦ದು ಅ೦ಟಿಸಿದ ಸಿಗರೇಟು. ಅ೦ಟಿಸಲಾಗಿದ್ದ ಬೆ೦ಕಿ, ಗೋ೦ದಲ್ಲ. ಮಿಲಿಟರಿ ಸಮವಸ್ತ್ರಧಾರಿ. ಆತನಿಗೆ ಶಿರವಿತ್ತು, ಎದೆಯ ಭಾಗವಿತ್ತು. ಅಷ್ಟೇ. ಭಿಕ್ಷೆ ಬೇಡಲು ಮು೦ದೆ ಚಾಚಬೇಕಾದ ಭಾಗಗಳೇ ಇರಲಿಲ್ಲ. ಮೊಣಕೈವರೆಗೂ ಎರಡೂ ಕೈಗಳು, ಮೊಣಕಾಲಿನವರೆಗೂ ಎರಡೂ ಕಾಲ್ಗಳೂ…
ವಿಧ: Basic page
October 08, 2006
ಕ್ಲೋನೋ ಕ್ಲೋನೇ ಕ್ಲೋನು:
ಇಬ್ಬರು ಒ೦ದೇ ತರಹ ಇರುವುದು ಬೇರೆ, ಪರಸ್ಪರ ಹೋಲುವುದು ಬೇರೆ. "ಮಾರ್ಥರ೦ತೆಯೇ ಇರುವವರನ್ನು ಇನ್ನೂ ಐದು ಜನರನ್ನು ಬೇರೆ ಹುಡುಕಬೇಕೀಗ" ಎ೦ದುಕೊ೦ಡೆ. ಏಕೆ೦ದರೆ ಒಬ್ಬರ೦ತೆ ಒಟ್ಟು ಏಳು ಜನ ಈ ಜಗತ್ತಿನಲ್ಲಿರುತ್ತಾರ೦ತೆ. "ಅವರ೦ತೆಯೇ ಇರುವ ಉಳಿದವರು ಮಾ(ರ್ಥಾ)ರ್ಸ್ ಗ್ರಹದಲ್ಲಿ ಸಿಗುತ್ತಾರೆಯೆ?" ಎ೦ದು ಕೇಳಿ ಬಯ್ಸಿಕೊ೦ಡಿದ್ದೆ ಯಾರೋ ಒಬ್ಬರ ಹತ್ತಿರ. ಬಯ್ದವರು ಯಾರೆ೦ಬುದನ್ನು ಬೇಕೆ೦ದೇ ಮರೆತಿದ್ದೇನೆ. ಯಾರೇ ಇರಲಿ, ಅವರ೦ತಿರುವವರೆಲ್ಲ ಎಕ್ಕುಟ್ಟಿಹೋಗಲಿ--ಎ೦ದು ಆಗ,…
ವಿಧ: Basic page
October 07, 2006
ಮೋಟುಗಾಲಿನ ಹುಡುಗ,
ಕೊಳಲ ಮಾರುತಲಿದ್ದ,
ಆಲದಾ ಮರದ, ನೆರಳ ಕೆಳಗೆ
ನೀಳದಾರಿಯ ತಿರುವು,
ಉರಿಬಿಸಿಲ ಮಧ್ಯಾಹ್ನ
ಕಾಲಡಿಯ ನೆಲ, ಸುಡುತಿಹುದು
ಮರದಡಿಯ ನೆರಳೊಳಗೆ
ತಂಪಿನಾ ಅನುಭವವು,
ಬಣ್ಣ ಬಣ್ಣದ ಕೊಳಲು, ಸುತ್ತಲೆಲ್ಲ
ಊದತೊಡಗಿದ ಹುಡುಗ
ಕೊಳಲೊಂದ ತೆಗೆದು,
ಪಸರಿಸಿತು ಸುತ್ತೆಲ್ಲ ಮಧುರ ಸ್ವನವು
ಕೊಳಲ ದನಿ ಕೇಳಿತ್ತು
ಇಳಿಸಂಜೆಯಾವರೆಗೂ,
ಎತ್ತ ಹೋದನೋ ಹುಡುಗ,ತಿಳಿಯಲಿಲ್ಲ.
ಮುರುಳಿಯಾ ದನಿಯೊಳಗೆ
ಸಂತಸವು ತುಂಬಿತ್ತು
ಆತನ ಭಾವವ ಅರಿತವರಾರು!
ವಿಧ: ಬ್ಲಾಗ್ ಬರಹ
October 07, 2006
ಜಗತ್ತಿನ ಎಲ್ಲಕ್ಕಿಂತ ಬುದ್ದಿವಂತನ ಬಳಿಗೆ ಮಾರಾಟಗಾರನೊಬ್ಬ ತನ್ನ ಮಗನನ್ನು 'ಸಂತಸದಿಂದಿರುವ ಗುಟ್ಟು' ತಿಳಿದುಕೊಂಡು ಬರಲು ಕಳಿಸಿದನಂತೆ. ಆ ಹುಡುಗನು ಅವನನ್ನು ಹುಡುಕಿಕೊಂಡು ತಿಂಗಳಾನುಗಟ್ಟಲೆ ಅಲೆದ ಬಳಿಕ, ಒಂದು ದಿನ ಅವನ ಮನೆ ದೊರಕಿತಂತೆ. ಅಲ್ಲಿ ನೋಡಿದರೆ ಅದು ಎಲ್ಲ ಬಗೆಯ ಮೋಜುಗಳ ಮನೆಯಾಗಿತ್ತಂತೆ. ಅಲ್ಲಿ ಎಲ್ಲ ಬಗೆಯ ಮಾರಾಟಗಾರರೂ ಇದ್ದರು. ಅವರು ಆ ಬುದ್ದಿವಂತನೊಡನೆ ಮಾತಿಗೆ ತೊಡಗಿದ್ದರು. ಎಸೋ ತಾಸು ಕಾದ ಬಳಿಕ ಹುಡುಗನಿಗೆ ಅವಕಾಶ ದೊರಕಿತು. ಹುಡುಗ ಅವನನ್ನು ಸಂತಸದಿಂದಿರುವ…